• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /2,000 ರೂ.ವರೆಗಿನ UPI ಪೇಮೆಂಟ್‌ ಮಾತ್ರ ಉಚಿತ.. ಕೇಂದ್ರ ಸರ್ಕಾರದಿಂದ ಹೊರಬಿತ್ತು ಮಹತ್ವದ ಮಾಹಿತಿ

2,000 ರೂ.ವರೆಗಿನ UPI ಪೇಮೆಂಟ್‌ ಮಾತ್ರ ಉಚಿತ.. ಕೇಂದ್ರ ಸರ್ಕಾರದಿಂದ ಹೊರಬಿತ್ತು ಮಹತ್ವದ ಮಾಹಿತಿ

ಇದು ಎಲ್ಲರಿಗೂ ಶಾಕ್ ನೀಡುವ ಸುದ್ದಿ. ಕೇಂದ್ರ ಸರ್ಕಾರದ ಹೊಸ ನಿಯಮದಿಂದ ಪ್ರತಿದಿನವೂ ಗ್ರಾಹಕರ ಜೇಬಿಗೆ ಕತ್ತರಿ ಬೀಳಬಹುದು. ಇದರಿಂದಾಗಿ ಇನ್ನು ಮುಂದಕ್ಕೆ ಡಿಜಿಟಲ್ ಪೇಮೆಂಟ್ ಮಾಡುವುದೇ ಕಷ್ಟವಾಗಬಹುದು. ಇಲ್ಲಿದೆ ಪೂರ್ತಿ ಮಾಹಿತಿ.

Written ByYashaswini V
Published: Sep 15, 2026, 03:13 PM IST|Updated: Sep 16, 2026, 11:33 AM IST
joinshare
2,000 ರೂ.ವರೆಗಿನ UPI ಪೇಮೆಂಟ್‌ ಮಾತ್ರ ಉಚಿತ.. ಕೇಂದ್ರ ಸರ್ಕಾರದಿಂದ ಹೊರಬಿತ್ತು ಮಹತ್ವದ ಮಾಹಿತಿ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸರ್ಕಾರಗಳು ಜನರ ಜೇಬಿನಿಂದ ದುಡ್ಡು ಕೀಳಲು ಹೊಸ ಹೊಸ ವರಸೆ ತೋರುತ್ತವೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಸೋಮವಾರ ಡಿಜಿಟಲ್ ಪೇಮೆಂಟ್ ವಿಷಯದಲ್ಲಿ ಹೊರಡಿಸಿರುವ ಆದೇಶ ಅಂಥದ್ದೇ ಇದ್ದಂತಿದೆ. ಹಣಕಾಸು ಇಲಾಖೆಯ ಆದೇಶದ ಪ್ರಕಾರ, ₹2,000ವರೆಗಿನ UPI ವಹಿವಾಟುಗಳು ಮತ್ತು RuPay ಡೆಬಿಟ್‌ ಕಾರ್ಡ್‌ ಪಾವತಿಗಳ ಮೇಲೆ ಬ್ಯಾಂಕ್‌ಗಳು ಹಾಗೂ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಹೇಳಿದೆ. ಅದರ ಅರ್ಥ ಏನೆಂದರೆ ಇನ್ನು ಮುಂದೆ ₹2,000 ಮೇಲ್ಪಟ್ಟ UPI ಪಾವತಿಗಳಿಗೆ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ವಿಧಿಸಾಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ ಎಂದರ್ಥ.

ಪ್ರಸ್ತುತ, ದೇಶಾದ್ಯಂತ ಡಿಜಿಟಲ್‌ ಇಂಡಿಯಾ ಅಭಿಯಾನದ ಅಡಿಯಲ್ಲಿ ಎಲ್ಲೆಡೆ ನಗದು ವಹಿವಾಟಿಗಿಂತ ಕಿರಾಣಿ ಅಂಗಡಿಯಲ್ಲಿ ದಿನಸಿ ತುರುವುದರಿಂದ ಹಿಡಿದು ಹೂ, ತರಕಾರಿ ಖರೀದಿಯಿರಲಿ ಅಥವಾ ಇನ್ನಾವುದೇ ರೀತಿಯ ಶಾಪಿಂಗ್‌ ಮಾಡಲೂ ಸಹ ಜನ ಯುಪಿಐ ಪಾವತಿ ವ್ಯವಸ್ಥೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ತ್ವರಿತ ಸ್ಕ್ಯಾನ್‌ ಮೂಲಕ ಚಿಲ್ಲರೆ ತಲೆನೋವಿಲ್ಲದೆ ಮಾಡಬಹುದಾದ ಪಾವತಿ ವ್ಯವಸ್ಥೆ ಇದಾಗಿರುವುದರಿಂದ ಯುಪಿಐ ಪೇಮೆಂಟ್‌ ವಾಡಿಕೆ ಆಗಿಬಿಟ್ಟಿದೆ. ಇದೀಗ ಯುಪಿಐ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸೋಮವಾರ (ಸೆ. 14, 2026) ಮಹತ್ವದ ಕ್ರಮ ಕೈಗೊಂಡಿದ್ದು, ಒಗಟಿನ ಒಂದು ಪ್ರಮುಖ ಭಾಗವನ್ನು ಸ್ಪಷ್ಟಪಡಿಸಿದೆ. 2,000 ರೂ.ವರೆಗಿನ ಯುಪಿಐ ವಹಿವಾಟುಗಳಿಗೆ ಬ್ಯಾಂಕುಗಳು ಅಥವಾ ಪಾವತಿ ವ್ಯವಸ್ಥೆ ಪೂರೈಕೆದಾರರು ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ಹೇಳಿದೆ.

2,000 ರೂ.ವರೆಗಿನ UPI ಪೇಮೆಂಟ್‌ ಮಾತ್ರ ಉಚಿತ..
ಯುಪಿಐ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಸಂಬಂಧಸಿದಂತೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಇತ್ತೀಚಿನ ಆದೇಶದ ಪ್ರಕಾರ, ₹2,000ವರೆಗಿನ UPI ವಹಿವಾಟುಗಳು ಮತ್ತು RuPay ಡೆಬಿಟ್‌ ಕಾರ್ಡ್‌ ಪಾವತಿಗಳ ಮೇಲೆ ಬ್ಯಾಂಕ್‌ಗಳು ಹಾಗೂ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಯಾವುದೇ ಶುಲ್ಕ ವಿಧಿಸುವಂತಿಲ್ಲ ಎನ್ನುವುದಾದರೆ ಎಷ್ಟು ಡಿಜಿಟಲ್ ವ್ಯವಹಾರಗಳು ಅಥವಾ ಪಾವತಿಗಳು ₹2,000 ಒಳಗಿರುತ್ತವೆ? ಈಗ ಹೆಚ್ಚಿನ ಜನರು ₹2,000 ಮೇಲಿನ ಡಿಜಿಟಲ್ ವ್ಯವಹಾರಗಳು ಅಥವಾ ಪಾವತಿಗಳಿಗಳನ್ನೂ ಮಾಡುತ್ತಿದ್ದಾರೆ. ಅಂದರೆ ಇನ್ನು ಮುಂದೆ ಡಿಜಿಟಲ್ ವ್ಯವಹಾರ ಮಾಡುವ, UPI ವಹಿವಾಟು ಮಾಡುವ, RuPay ಡೆಬಿಟ್‌ ಕಾರ್ಡ್‌ ಬಳಸುವ ಬಹಳಷ್ಟು ಜನ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಕಟ್ಟಲೇಬೇಕು.

ಬ್ಯಾಂಕ್‌ಗಳಿಗೆ ಲಾಭ, ಗ್ರಾಹಕರಿಗೆ ನಷ್ಟ:
ಕೇಂದ್ರ ಸರ್ಕಾರ ₹2,000ವರೆಗಿನ UPI ವಹಿವಾಟುಗಳು ಮತ್ತು RuPay ಡೆಬಿಟ್‌ ಕಾರ್ಡ್‌ ಪಾವತಿಗಳ ಮೇಲೆ ಬ್ಯಾಂಕ್‌ಗಳು ಹಾಗೂ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಯಾವುದೇ ಶುಲ್ಕ ವಿಧಿಸುವಂತಿಲ್ಲ ಎನ್ನುವ ವಿನಾಯತಿ ನೀಡುತ್ತೇವೆ ಎಂದು ಹೇಳುತ್ತಿದೆ. ಆದರೆ ವಿನಾಯತಿ ಹೆಸರಿನಲ್ಲಿ ₹2,000 ಮೇಲಿನ ಡಿಜಿಟಲ್ ವ್ಯಾವಹಾರಗಳು ಅಥವಾ ಪಾವತಿಗಳಿಗೆ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ವಿಧಿಸಲು ಅವಕಾಶ  ಮಾಡಿಕೊಟ್ಟಿದೆ. ಇದರಿಂದ ಲಾಭವಾಗುವುದು ಬ್ಯಾಂಕುಗಳಿಗೆ, ನಷ್ಟವಾಗುವುದು ಗ್ರಾಹಕರಿಗೆ.

ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಎಂದರೆ ಏನು?
ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಎನ್ನುವುದನ್ನು ಸರಳವಾಗಿ ವ್ಯಾಪಾರಿಗಳಿಂದ ಬ್ಯಾಂಕ್‌ಗಳು ವಿಧಿಸುವ ವಹಿವಾಟು ಸಂಸ್ಕರಣೆ ಶುಲ್ಕ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಪಾವತಿಗಳ ಮೇಲೆ ಶೇಕಡಾ 1ರಿಂದ 3ರಷ್ಟು MDR ಚಾರ್ಜ್ ಮಾಡಲಾಗುತ್ತದೆ.

ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಅನ್ನು ಏಕೆ ವಿಧಿಸಲಾಗುತ್ತದೆ?
ಸರಳವಾಗಿ ಹೇಳಬೇಕೆಂದರೆ, ಬ್ಯಾಂಕುಗಳು ಗ್ರಾಹಕರ ಜೊತೆ ನಡೆಸುವ ವ್ಯವಹಾರದ ನಿರ್ವಹಣೆ, ವಹಿವಾತಿನ ಸಂಸ್ಕರಣೆ, ಹಣದ ವಸಾಹತು ಮತ್ತು ಪಾವತಿ ಮೂಲಸೌಕರ್ಯದ ವೆಚ್ಚಗಳನ್ನು ತುಂಬಿಕೊಳ್ಳಲು ಎಂಡಿಆರ್ ಅನ್ನು ಚಾರ್ಜ್ ಮಾಡಲಾಗುತ್ತದೆ. ಇದನ್ನು ಒಂದು ರೀತಿಯಲ್ಲಿ ಸರ್ವಿಸ್ ಚಾರ್ಜ್ ಎಂದು ಕೂಡ ಹೇಳಬಹುದು. ಆದರೆ ಬ್ಯಾಂಕುಗಳು ಹಾಗೆ ಹೇಳುವುದಿಲ್ಲ. ಅವು ಬೇರೆ ಬೇರೆ ವ್ಯವಹಾರಗಳಲ್ಲಿ ಸರ್ವಿಸ್ ಚಾರ್ಜ್ (ಸೇವಾ ಶುಲ್ಕ)ವನ್ನು ಪ್ರತ್ಯೇಕವಾಗಿ ವಿಧಿಸುತ್ತವೆ.

ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಅನ್ನು ಹೇಗೆ ವಿಧಿಸಲಾಗುತ್ತದೆ?
ಒಬ್ಬ ಗ್ರಾಹಕ ₹10,000 ಮೌಲ್ಯದ ವಸ್ತುವನ್ನು UPI ಮೂಲಕ ಖರೀದಿ ಮಾಡಿದರೆ ಆತನ ವ್ಯವಹಾರಕ್ಕೆ ಶೇ.0.4ರಷ್ಟು MDR ವಿಧಿಸಲಾಗುತ್ತದೆ. ಅಂದರೆ ₹40 ಶುಲ್ಕ ಆತನ ಪಾವತಿಯಿಂದ ಕಡಿತವಾಗಲಿದೆ.

ಹಿಂದೆ ಯಾವ ರೀತಿ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ವಿಧಿಸಲಾಗಿತ್ತು?
2025–26ರ ಸಾಲಿನ ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ವಹಿವಾಟನ್ನು ನೋಡಿದರೆ ಆ ಸಾಲಿನಲ್ಲಿ ವ್ಯಕ್ತಿಯಿಂದ ವ್ಯಾಪಾರಿಗೆ ನಡೆದ UPI ಪಾವತಿಗಳಲ್ಲಿ ಕೇವಲ ಶೇಕಡ 4ರಷ್ಟು ವಹಿವಾಟುಗಳು ಮಾತ್ರ  ₹2,000ಕ್ಕಿಂತ ಹೆಚ್ಚಿನ ಮೊತ್ತದ್ದಾಗಿದ್ದವು. ಆದರೆ ಇಲ್ಲೊಂದು ಮಹತ್ವದ ವಿಷಯವನ್ನು ಗಮನಿಸಬೇಕು. ಮೌಲ್ಯದ ಆಧಾರದಲ್ಲಿ UPI ಪಾವತಿಗಳ ಸುಮಾರು ಮೂರನೇ ಎರಡರಷ್ಟು ಪಾಲು ಈ ಶೇಕಡ 4ರಷ್ಟು ವಹಿವಾಟುಗಳದ್ದಾಗಿತ್ತು. ಅಂದರೆ ಒಟ್ಟಾರೆ ಈ ಅವಧಿಯಲ್ಲಿ ₹314 ಲಕ್ಷ ಕೋಟಿ ಮೌಲ್ಯದ 24,000 ಕೋಟಿಗೂ ಅಧಿಕ UPI ವಹಿವಾಟುಗಳು ನಡೆದಿದ್ದವು.

ಎಲೆಕ್ಟ್ರಾನಿಕ್‌ ಪಾವತಿಗಳಿಗೆ ಬ್ಯಾಂಕ್‌ ಶುಲ್ಕ ವಿಧಿಸುವ ವಿನಾಯಿತಿ ಏಕೆ ಇರಲಿಲ್ಲ?
ಮೊದಲಿಗೆ ಡಿಜಿಟಲ್ ವ್ಯವಹಾರಗಳಲ್ಲಿ ಗ್ರಾಹಕರಿಗೆ ಬ್ಯಾಂಕುಗಳು ವಿನಾಯತಿ ನೀಡುತ್ತಿದ್ದವು. ಇದಕ್ಕೆ ಬ್ಯಾಂಕಿಂಗ್ ರೂಲ್ಸಗಳಲ್ಲೇ ಅವಕಾಶ ಇತ್ತು. ಆದರೆ ಈ ನಡುವೆ ಕಳೆದ ತಿಂಗಳು ಮಹತ್ವದ ಬೆಳವಣಿಗೆಯೊಂದು ಆಗಿದೆ. 2026ರ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ ಕಳೆದ ಸಂಸತ್ ಅಧಿವೇಶನದಲ್ಲಿ ಅಂಗೀಕಾರಗೊಂಡಿದೆ. ಇದರಿಂದಾಗಿ 2007ರ ಪಾವತಿ ಮತ್ತು ವಸಾಹತು ವ್ಯವಸ್ಥೆಗಳ ಕಾಯ್ದೆಯ ಸೆಕ್ಷನ್‌ 10Aಗೆ ತಿದ್ದುಪಡಿ ತರಲಾಗಿದೆ. ಹೊಸ ತಿದ್ದುಪಡಿಯಿಂದ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್‌ 269SU ಅಡಿಯಲ್ಲಿ ಎಲೆಕ್ಟ್ರಾನಿಕ್‌ ಪಾವತಿಗಳಿಗೆ ಈ ಮೊದಲು ವಿಧಿಸಲಾಗುತ್ತಿದ್ದ ಬ್ಯಾಂಕ್‌ ಶುಲ್ಕಕ್ಕೆ ಈಗ ವಿನಾಯಿತಿ ಇರುವುದಿಲ್ಲ.

ಸಂಸತ್ತಿನಲ್ಲಿ ಮೋಸ ತಿದ್ದುಪಡಿ ಆಗುವ ಮುನ್ನ RuPay ಡೆಬಿಟ್‌ ಕಾರ್ಡ್‌, BHIM-UPI ಮತ್ತು UPI-QR ಕೋಡ್‌ ಮೂಲಕ ನಡೆಯುವ ಪಾವತಿಗಳಿಗೆ ಬ್ಯಾಂಕ್‌ಗಳು ಅಥವಾ ಪಾವತಿ ವ್ಯವಸ್ಥೆ ಒದಗಿಸುವ ಸಂಸ್ಥೆಗಳು ಶುಲ್ಕ ವಿಧಿಸುವಂತಿರಲಿಲ್ಲ. ಆದರೆ ತಿದ್ದುಪಡಿಯ ಬಳಿಕ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ದೊಡ್ಡ ವ್ಯಾಪಾರಿಗಳಿಗೆ UPI ಮತ್ತು RuPay ಡೆಬಿಟ್‌ ಕಾರ್ಡ್‌ ಪಾವತಿಗಳ ಮೇಲೆ MDR ವಿಧಿಸಲು ಅವಕಾಶ ದೊರತಿದೆ. ಇದರಿಂದ ಇನ್ನು ಮುಂದಕ್ಕೆ  ₹2,000 ಗಿಂತ ಜಾಸ್ತಿ UPI ಪಾವತಿ ಮಾಡಿದರೆ ಗ್ರಾಹಕರು ಮರ್ಚೆಂಟ್‌ ಡಿಸ್ಕೌಂಟ್‌ ರೇಟ್‌ (MDR) ಪಾವತಿಸಬೇಕಾಗುತ್ತದೆ.
 

Add Zee News as a Preferred Source
TAGS:
Personal Finance