• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಹಠಾತ್ ಬಿಪಿ ಏರಿಕೆಗೆ ಈ 4 ಅಭ್ಯಾಸಗಳೇ ಕಾರಣವಾಗಬಹುದು! ವೈದ್ಯರ ಎಚ್ಚರಿಕೆ

ಹಠಾತ್ ಬಿಪಿ ಏರಿಕೆಗೆ ಈ 4 ಅಭ್ಯಾಸಗಳೇ ಕಾರಣವಾಗಬಹುದು! ವೈದ್ಯರ ಎಚ್ಚರಿಕೆ

ಸ್ಟ್ರಾಂಗ್ ಕಾಫಿ, ಎನರ್ಜಿ ಡ್ರಿಂಕ್ಸ್‌ಗಳ ಅತಿಯಾದ ಸೇವನೆ, ಹೆಚ್ಚು ಉಪ್ಪಿರುವ ಚೈನೀಸ್ ಆಹಾರ ಹಾಗೂ ಆಗಾಗ್ಗೆ ಕೋಪಗೊಳ್ಳುವುದು ಮತ್ತು ಮಾನಸಿಕ ಒತ್ತಡದಿಂದ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಇವು ಹೃದಯ ಬಡಿತ ಮತ್ತು ದೇಹದ ನೀರಿನ ಸಮತೋಲನದ ಮೇಲೆ ಪರಿಣಾಮ ಬೀರಿ ಬಿಪಿ ಏರಿಕೆಗೆ ಕಾರಣವಾಗಬಹುದು.

Written ByPuttaraj K Alur
Published: Nov 01, 2026, 08:03 PM IST|Updated: Nov 01, 2026, 08:18 PM IST
joinshare
ಹಠಾತ್ ಬಿಪಿ ಏರಿಕೆಗೆ ಈ 4 ಅಭ್ಯಾಸಗಳೇ ಕಾರಣವಾಗಬಹುದು! ವೈದ್ಯರ ಎಚ್ಚರಿಕೆ
Image Credit: Blood Pressure

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಪಿಎಂ ಮೋದಿಗೆ ಪ್ರಲ್ಹಾದ್ ಜೋಶಿ ವಿಶೇಷ ಉಡುಗೊರೆ

ಪಿಎಂ ಮೋದಿಗೆ ಪ್ರಲ್ಹಾದ್ ಜೋಶಿ ವಿಶೇಷ ಉಡುಗೊರೆ

2

ಬೆಳ್ಳುಳ್ಳಿಯನ್ನು ಇದರೊಟ್ಟಿಗೆ ಬೆರೆಸಿ ಹಚ್ಚಿದರೆ ಒಂದೇ ವಾರದಲ್ಲಿ ಬೋಳು ತಲೆಯಲ್ಲಿ ಬೆಳೆಯುತ್ತ ದಟ್ಟ ಕಪ್ಪು ಕೂದಲು!

3

ಒಂದು ತೊಲಾ ಚಿನ್ನ ಆಭರಣ ಮಾಡಲು ಎಷ್ಟು ವೆಚ್ಚವಾಗುವುದು? ವೇಸ್ಟೇಜ್‌ ಬಿಟ್ಟು ಬಂಗಾರದ ಅಂಗಡಿಯವರಿಗೆ ಆಗೋ ಲಾಭ ಎಷ್ಟು?

4

ಮಲಗುವ ಮುನ್ನ ಈ ಪುಡಿ ತಿಂದರೆ ನಿದ್ರಾಹೀನತೆಗೆ ಸಿಗುತ್ತೆ ಪರಿಹಾರ!

5

ಭಾರೀ ಮಳೆ ಹಿನ್ನೆಲೆ ಈ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಂಗಳವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Blood Pressure: ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವಾಗುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ನಮ್ಮ ದೈನಂದಿನ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಕೆಲವು ಅಭ್ಯಾಸಗಳು ಬಿಪಿ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ. ವಿಶೇಷವಾಗಿ ಸ್ಟ್ರಾಂಗ್ ಕಾಫಿ, ಎನರ್ಜಿ ಡ್ರಿಂಕ್ಸ್, ಹೆಚ್ಚು ಉಪ್ಪಿರುವ ಆಹಾರ ಮತ್ತು ಅತಿಯಾದ ಕೋಪ ಇವು ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಪುಣೆಯ ಇನಾಮದಾರ್ ಆಸ್ಪತ್ರೆಯ ಆಂತರಿಕ ಔಷಧ ತಜ್ಞೆ ಡಾ.ಶಾಲಿನಿ ಸಿಂಗ್ ಸಲುಂಖೆ ಅವರು ಹಠಾತ್ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದಾದ ಕೆಲವು ಅಂಶಗಳನ್ನ ವಿವರಿಸಿದ್ದಾರೆ. ನಮ್ಮ ದೈನಂದಿನ ಅಭ್ಯಾಸಗಳಲ್ಲಿ ಕಂಡುಬರುವ ಈ ನಾಲ್ಕು ಸಂಗತಿಗಳು ರಕ್ತದೊತ್ತಡದ ಮಟ್ಟದಲ್ಲಿ ಏರುಪೇರಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ. ಅವುಗಳು ಯಾವುವು ಎಂದು ತಿಳಿಯಿರಿ...

ಅತಿಯಾಗಿ ಸ್ಟ್ರಾಂಗ್ ಕಾಫಿ ಕುಡಿಯುವುದು

ಕಾಫಿ ಕುಡಿಯುವ ಅಭ್ಯಾಸ ಹಲವರಿಗಿದೆ. ಆದರೆ ಹೆಚ್ಚು ಸ್ಟ್ರಾಂಗ್ ಕಾಫಿ ಸೇವಿಸುವುದರಿಂದ ಕೆಲವರಲ್ಲಿ ರಕ್ತದೊತ್ತಡ ತಾತ್ಕಾಲಿಕವಾಗಿ ಹೆಚ್ಚಾಗಬಹುದು. ಕಾಫಿಯಲ್ಲಿರುವ ಕೆಫೀನ್ ನರಮಂಡಲವನ್ನ ಉತ್ತೇಜಿಸುವ ಗುಣ ಹೊಂದಿದೆ. ಇದರಿಂದ ಹೃದಯ ಬಡಿತದಲ್ಲಿ ಹೆಚ್ಚಳವಾಗುವುದರ ಜೊತೆಗೆ ರಕ್ತದೊತ್ತಡವೂ ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಹೆಚ್ಚು ಪ್ರಮಾಣದಲ್ಲಿ ಸ್ಟ್ರಾಂಗ್ ಕಾಫಿ ಸೇವಿಸುವ ಅಭ್ಯಾಸವಿದ್ದರೆ ಅದರ ಪರಿಣಾಮದ ಬಗ್ಗೆ ಗಮನಹರಿಸುವುದು ಅಗತ್ಯ. ಕೆಫೀನ್ ದೇಹದ ಮೇಲೆ ಬೀರುವ ಪರಿಣಾಮದಿಂದ ರಕ್ತದೊತ್ತಡದಲ್ಲಿ ತಾತ್ಕಾಲಿಕ ಬದಲಾವಣೆ ಉಂಟಾಗಬಹುದು ಎಂದು ವೈದ್ಯರು ವಿವರಿಸಿದ್ದಾರೆ.

ಎನರ್ಜಿ ಡ್ರಿಂಕ್ಸ್ ಸೇವನೆ

ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ ಎಂಬ ಕಾರಣಕ್ಕೆ ಕೆಲವರು ಶಕ್ತಿ ಪಾನೀಯಗಳನ್ನ ಸೇವಿಸುತ್ತಾರೆ. ಆದರೆ ಇವುಗಳ ಅತಿಯಾದ ಬಳಕೆ ರಕ್ತದೊತ್ತಡದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಎನರ್ಜಿ ಡ್ರಿಂಕ್ಸ್‌ಗಳಲ್ಲಿ ಕೆಫೀನ್ ಸೇರಿದಂತೆ ಹಲವು ಉತ್ತೇಜಕ ಅಂಶಗಳಿರುತ್ತವೆ. ಈ ಅಂಶಗಳು ಹೃದಯ ಬಡಿತವನ್ನ ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ರಕ್ತದೊತ್ತಡದಲ್ಲಿಯೂ ಏರಿಕೆ ಉಂಟಾಗಬಹುದು. ಹೀಗಾಗಿ ಶಕ್ತಿ ಪಾನೀಯಗಳನ್ನ ಅತಿಯಾಗಿ ಸೇವಿಸುವ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸಬೇಕಾದ ಸಂಗತಿಯಾಗಿದೆ ಎಂದು ಡಾ.ಶಾಲಿನಿ ಸಿಂಗ್ ತಿಳಿಸಿದ್ದಾರೆ.

ಹೆಚ್ಚು ಉಪ್ಪಿರುವ ಚೈನೀಸ್ ಆಹಾರ

ನೂಡಲ್ಸ್, ಮಂಚೂರಿಯನ್ ಮತ್ತು ಚಿಲ್ಲಿ ಪನೀರ್‌ನಂತಹ ಚೈನೀಸ್ ಆಹಾರಗಳು ಅನೇಕರು ಇಷ್ಟಪಡುವ ತಿನಿಸುಗಳಾಗಿವೆ. ಆದರೆ ಇಂತಹ ಕೆಲವು ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರಬಹುದು. ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾದಾಗ ದೇಹದಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆಯಿದೆ. ದೇಹದಲ್ಲಿ ನೀರಿನ ಧಾರಣ ಹೆಚ್ಚಾದರೆ ರಕ್ತದೊತ್ತಡದ ಅಪಾಯವೂ ಹೆಚ್ಚಾಗಬಹುದು. ಆದ್ದರಿಂದ ಹೆಚ್ಚು ಉಪ್ಪಿರುವ ಆಹಾರವನ್ನ ಸೇವಿಸುವಾಗ ಎಚ್ಚರಿಕೆ ಅಗತ್ಯ. ವಿಶೇಷವಾಗಿ ಚೈನೀಸ್ ಆಹಾರಗಳಲ್ಲಿರುವ ಸೋಡಿಯಂ ಪ್ರಮಾಣದ ಬಗ್ಗೆ ಗಮನಹರಿಸುವುದು ಮುಖ್ಯವೆಂದು ವೈದ್ಯರು ಹೇಳಿದ್ದಾರೆ.

ಆಗಾಗ್ಗೆ ಕೋಪಗೊಳ್ಳುವುದು ಮತ್ತು ಒತ್ತಡ

ಕೋಪ ಮತ್ತು ಮಾನಸಿಕ ಒತ್ತಡ ಕೂಡ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಅಂಶಗಳಾಗಿವೆ. ವ್ಯಕ್ತಿ ಕೋಪಗೊಂಡಾಗ ದೇಹದಲ್ಲಿ ಅಡ್ರಿನಾಲಿನ್‌ನಂತಹ ಒತ್ತಡದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳ ಪರಿಣಾಮ ಹೃದಯ ಬಡಿತ ವೇಗಗೊಳ್ಳಬಹುದು. ಇದರೊಂದಿಗೆ ರಕ್ತದೊತ್ತಡವೂ ತಾತ್ಕಾಲಿಕವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಆಗಾಗ ಕೋಪಗೊಳ್ಳುವುದು ಮತ್ತು ಒತ್ತಡದ ಪರಿಸ್ಥಿತಿಗಳು ಎದುರಾಗುವುದು ರಕ್ತದೊತ್ತಡದಲ್ಲಿ ಹಠಾತ್ ಏರಿಕೆಗೆ ಕಾರಣವಾಗಬಹುದು ಎಂದು ತಜ್ಞರು ವಿವರಿಸಿದ್ದಾರೆ.

ಈ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ಅಗತ್ಯ

ಒಟ್ನಲ್ಲಿ ಸ್ಟ್ರಾಂಗ್ ಕಾಫಿ ಮತ್ತು ಎನರ್ಜಿ ಡ್ರಿಂಕ್ಸ್‌ಗಳ ಅತಿಯಾದ ಸೇವನೆ, ಹೆಚ್ಚು ಉಪ್ಪಿರುವ ಆಹಾರ ಹಾಗೂ ಆಗಾಗ ಕೋಪಗೊಳ್ಳುವ ಅಭ್ಯಾಸಗಳು ರಕ್ತದೊತ್ತಡದಲ್ಲಿ ಹಠಾತ್ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ. ನಮ್ಮ ದಿನನಿತ್ಯದ ಆಹಾರ ಮತ್ತು ಜೀವನಶೈಲಿಯಲ್ಲಿ ಇಂತಹ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯವೆಂದು ವೈದ್ಯರು ತಿಳಿಸಿದ್ದಾರೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

Add Zee News as a Preferred Source
TAGS:
Health Tips
Kannada News