ತಿಂಡಿ, ಊಟ 5, 10 ನಿಮಿಷದಲ್ಲೇ ಮುಗಿಸ್ತಿದ್ದೀರಾ, ಹುಷಾರ್.. ಆಕಸ್ಮಿಕವಾಗಿಯೂ ಈ ತಪ್ಪು ಮಾಡಲೇಬೇಡಿ
ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವಲ್ಲಿ ಮಹಿಳೆರಿಗೆ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಅತಿ ಮುಖ್ಯವಾಗಿರುತ್ತದೆ. ಆದರೆ ಮಹಿಳೆಯರು ಇವುಗಳನ್ನೇ ಮರೆತು ಬಿಟ್ಟಿರುತ್ತಾರೆ. ಯಾವಾಗೋ ಶಾಲಾ ದಿನಗಳಲ್ಲಿ ಅವರು ಆಡಿರುವುದು ನೆನಪು ಮಾತ್ರ ಇರುತ್ತೆ.
ಈಗಿನ ಬ್ಯುಸಿ ಟೈಮ್ ಹೇಗಿದೆ ಎಂದರೆ ಜಸ್ಟ್ ಐದು, ಹತ್ತು ನಿಮಿಷದಲ್ಲಿ ತಿಂಡಿ, ಊಟ ಮಾಡುವುದು ಆಗಿದೆ. ಆದರೆ ಇದರಿಂದ ನಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ, ಏನೆಲ್ಲ ಆರೋಗ್ಯ ಸಮಸ್ಯೆಗಳು ಬರುತ್ತವೆ ಎನ್ನುವುದೇ ಗೊತ್ತೇ ಆಗಲ್ಲ. ಇದರಲ್ಲಿ ಮಹಿಳೆಯರು ಈಗಿನ ಆಹಾರದ ಶೈಲಿಯಲ್ಲಿ ತುಂಬಾ ಜಾಗರುಕತೆಯಿಂದ ಇರಬೇಕು. ಬ್ಯುಸಿ ಲೈಫ್‌ನಲ್ಲಿ ಮಹಿಳೆಯರಿಗೆ ದಣಿವು, ಹೊಟ್ಟೆ ಉಬ್ಬುವುದು ಅಥವಾ ಶಕ್ತಿ ಕಡಿಮೆ ಆಗುವುದು ಇತರೆ ಸಮಸ್ಯೆಗಳನ್ನು ಈಗ ಅನುಭವಿಸುತ್ತಿದ್ದಾರೆ. ಇದರಿಂದ ವಯಸ್ಸು ಆಗುತ್ತಿದೆ ಎಂದು ಭಾವಿಸಿ ಮಧ್ಯರಾತ್ರಿವರೆಗೆ ಕೆಲಸ, ದೈನಂದಿನ ಕೆಲಸ, ಯಾವಾಗಲೂ ಏನಾದರೂ ಒಂದು ಮಾಡುವ ಕಡೆಗೆ ಯೋಚನೆ ಮಾಡುತ್ತಿರುತ್ತಾರೆ. ಇದರಲ್ಲಿ ಆಯಾಸ ಮತ್ತು ಹೊಟ್ಟೆ ಉಬ್ಬರ ನಿತ್ಯ ಜೀವನದ ಭಾಗವೇ ಆದರೆ ಅದನ್ನು ಮಹಿಳೆಯರು ನಿರ್ಲಕ್ಷ್ಯ ಮಾಡಲೇಬೇಡಿ. ಇದಕ್ಕೆ ಮಹಿಳೆಯರು ಏನು ಮಾಡಬೇಕು ಎಂದರೆ ನಿಮ್ಮ ಆಹಾರ ಪದ್ಧತಿ, ನ್ಯೂಟ್ರಿಷನ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಗತ್ಯ.
ಮಹಿಳೆಯರು ತಮ್ಮ ದೈಹಿಕ ಮತ್ತು ಮಾನಸಿಕ ಅಸ್ವಸ್ಥೆಗೆಯನ್ನು ಅಥವಾ ಶಕ್ತಿಯ ಕುಸಿತವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಆಹಾರವನ್ನೇ ಅವರು ಕಡೆಗಣಿಸುತ್ತಾರೆ. ದೈಹಿಕ ಮತ್ತು ಮಾನಸಿಕ ಅಸ್ವಸ್ಥೆಯನ್ನು ನಿರ್ಧರಿಸುವಲ್ಲಿ ಆಹಾರವೂ ಅತ್ಯಂತ ಪ್ರಮುಖವಾಗಿರುತ್ತದೆ. ಆದರೆ ಇದು ಮಹಿಳೆಯರ ಗಮನಕ್ಕೆ ಬಂದರೂ ಅಂತಿಮವಾಗಿ ಕಡೆಗಣಿಸಿ ಬಿಡುತ್ತಾರೆ. ಆಯಾಸ ಮತ್ತು ಹೊಟ್ಟೆ ಉಬ್ಬರದ ಪ್ರಸಂಗವೂ ಪೌಷ್ಟಿಕಾಂಶದ ಕೊರತೆಯಿಂದಲೇ ಉಂಟಾಗುತ್ತದೆ. ಇದನ್ನು ಮೊದಲು ಮಹಿಳೆಯರು ತಿಳಿದುಕೊಳ್ಳಬೇಕು. ದೇಹದ ಶಕ್ತಿಯ ಮಟ್ಟಗಳು ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಹಲವು ವಿಭಿನ್ನ ಅಂಶಗಳು ಒಟ್ಟಾಗಿ ಪ್ರಭಾವ ಬೀರುತ್ತದೆ.
ಪ್ರಮುಖವಾಗಿ ಮಹಿಳೆಯರು ನಿರ್ಲಕ್ಷ್ಯ ಮಾಡುವುದು ಇವುಗಳನ್ನೇ
ಮಹಿಳೆಯರು ಕೆಲಸದ ಒತ್ತಡ, ಮನೆಯಲ್ಲಿ ಕುಟುಂಬ ನಿರ್ವಹಣೆ, ಅಡುಗೆ ಮಾಡುವುದು, ಗಂಡ, ಮಕ್ಕಳನ್ನು ಕಚೇರಿಗೆ, ಶಾಲೆಗೆ ಬೇಗ ಕಳುಹಿಸುಬೇಕು ಎನ್ನುವ ಗಡಿಬಿಡಿಯಲ್ಲಿ ತನ್ನ ಪೂರ್ಣ ಪ್ರಮಾಣದ ನಿದ್ರೆಯನ್ನೇ ನಿತ್ಯ ಮರೆತು ಬಿಟ್ಟಿರುತ್ತಾರೆ.
ಮನೆಯಲ್ಲಿ ಆರ್ಥಿಕ ಸ್ಥಿತಿಗತಿಗಳಿಂದ, ಮಕ್ಕಳಿಗೆ ಉದ್ಯೋಗ, ಮದುವೆ, ಮನೆಯವರಲ್ಲಿ ಯಾರಿಗಾದರೂ ಅನಾರೋಗ್ಯ ಕಾಡುತ್ತಿದ್ದರೇ ಮಹಿಯರು ಕುಸಿದು ಹೋಗಿರುತ್ತಾರೆ. ಇದರಿಂದ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗುತ್ತಾರೆ.
ಚಿಕ್ಕವರಿಂದಲೂ ಬೆಳೆಯುತ್ತಿದ್ದಂತೆ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತ ಸಾಗುತ್ತವೆ. ದೇಹದಲ್ಲಿ ಆಗು ಹಾರ್ಮೋನುಗಳ ಬದಲಾವಣೆಗಳು ಕೆಲವೊಮ್ಮೆ ಒತ್ತಡಕ್ಕೆ ಕಾರಣ ಆಗಬಹುದು.
ಆರೋಗ್ಯ ಸರಿಯಾಗಿ ಇಟ್ಟುಕೊಳ್ಳುವಲ್ಲಿ ಮಹಿಳೆರಿಗೆ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಅತಿ ಮುಖ್ಯವಾಗಿರುತ್ತದೆ. ಆದರೆ ಮಹಿಳೆಯರು ಇವುಗಳನ್ನೇ ಮರೆತು ಬಿಟ್ಟಿರುತ್ತಾರೆ. ಯಾವಾಗೋ ಶಾಲಾ ದಿನಗಳಲ್ಲಿ ಅವರು ಆಡಿರುವುದು ನೆನಪು ಮಾತ್ರ ಇರುತ್ತೆ.
ಮನೆಯಲ್ಲಿಯೇ ನಿರಂತರವಾಗಿ ಕೆಲಸ ಮಾಡುವುದರಿಂದ ಹೊರಗಡೆ ಹೋಗದೇ ಇರುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಾಡುತ್ತಿರುತ್ತದೆ.
ಒಬ್ಬ ಮಹಿಳೆ ದಿನ ಬೆಳಗ್ಗೆಯನ್ನು ಒಂದು ಕಪ್ ಕಾಫಿ ಅಥವಾ ಟೀಯಿಂದ ಆರಂಭಿಸುತ್ತಾಳೆ. ಸಮಯದ ಅಭಾವದಿಂದ ಆಕೆ ಬೆಳಗ್ಗೆ ತಿಂಡಿ ತಿನ್ನದೇ ಇರಬಹುದು ಅಥವಾ ತಿಂಡಿ ಬಿಟ್ಟು ಮಧ್ಯಾಹ್ನದ ಊಟವನ್ನು ಮಾಡಬಹುದು. ಅದು ಕೂಡ ಅವಸರದಲ್ಲಿ ತಿಂದರೆ ಊಟ ಸರಿಯಾಗಿ ಜೀರ್ಣವಾಗುವುದಿಲ್ಲ. ಅವಸರದಿಂದ ಊಟ ಮಾಡುವುದರಿಂದ ಆಯಾಸ ಆಗುತ್ತದೆ. ಇದಕ್ಕೆ ಪೂರಕ ಎಂದು ಹಿಸಿ ಅಥವಾ ಇತರೆ ಪದಾರ್ಥಗಳನ್ನು ತಿನ್ನಬಹುದು. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿದ್ದು ಎಂದರೆ ಮಹಿಳೆ ದಿನವಿಡೀ ಏನನ್ನಾದರೂ ತಿನ್ನುತ್ತಲೇ ಇದ್ದಾರೆ. ಆದರೆ ಮಹಿಳೆ ತಿನ್ನುವ ಆಹಾರದಲ್ಲಿ ದೇಹಕ್ಕೆ ಸಿಗಬೇಕಾದ ಪ್ರೋಟಿನ್, ನಾರಿನಂಶ, ಕಬ್ಬಿಣಾಂಶ ಮತ್ತು ಇತರೆ ಪೋಷಕಾಂಶಗಳ ಕೊರತೆ ಎದ್ದು ಕಾಣುತ್ತದೆ. ಇಂತಹ ಆಹಾರ ಪಾಲನೆಯೂ ಹೊಟ್ಟೆ ತುಂಬಿದೆ ಎನ್ನುವ ಅನುಭವ ನೀಡಬಹುದೇ ಹೊರತು ದೇಹಕ್ಕೆ ಅಗತ್ಯವಾದ ಪೋಷಣೆ ನೀಡಲು ಸಾಧ್ಯವಾಗುವುದಿಲ್ಲ.
ಮಹಿಳೆಯರಿಗೆ ಯಾವುದೇ ದೈಹಿಕ ಲಕ್ಷಣಗಳು ಕಂಡು ಬಂದ ಕೂಡಲೇ ಕಷ್ಟಕರವಾದ ಅಥವಾ ಬೇರೆ ನಿರ್ಬಂಧಿತ ಆಹಾರ ಕ್ರಮಗಳನ್ನು ಅನುಸರಿಸಬೇಡಿ. ನಿತ್ಯದ ಆಹಾರದ ಅಭ್ಯಾಸಗಳನ್ನು ಸ್ವಯಂ ಪರಿಶೀಲನೆ ಮಾಡಿಕೊಳ್ಳುವುದು ಹೆಚ್ಚು ಉಪಯುಕ್ತವಾಗಿರುತ್ತದೆ. ಆರೋಗ್ಯ ಸರಿಯಾಗಿ ಇರಬೇಕು ಎಂದರೆ ನಿಮ್ಮನ್ನು ನೀವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಏಕೆಂದರೆ ಇವು ನಿತ್ಯ ಪಾಲನೆ ಮಾಡುತ್ತಿದ್ದೀರಾ, ನಿಮ್ಮ ಆಹಾರದ ಸಮಯ ಹೇಗಿದೆ ಎಂಬುದು ಸೇರಿದಂತೆ ಎಲ್ಲದಕ್ಕೂ ಉತ್ತರ ಸಿಗುತ್ತದೆ.
ನಿತ್ಯ ಒಂದಲ್ಲ ಒಂದು ಬಾರಿ ಊಟ ಮಾಡುತ್ತಿಲ್ವಾ?
ಬೆಳಗಿನ ಉಪಾಹಾರ ಮತ್ತು ಊಟದಲ್ಲಿ ಸೂಕ್ತವಾದ ಪ್ರೋಟಿನ್ ಇದೆಯಾ?
ಹಣ್ಣುಗಳನ್ನು ಮತ್ತು ತರಕಾರಿಗಳನ್ನು ತಿನ್ನುತ್ತಿದ್ದೀರಾ?
ದೇಹಕ್ಕೆ ಬೇಕಾದಷ್ಟು ನೀರನ್ನು ದಿನಲೂ ಕುಡಿಯುತ್ತಿದ್ದೀರಾ?
ಉಪವಾಸದಿಂದ ಟೀ, ಕಾಫಿ ಅತಿಯಾಗಿ ಕುಡಿಯುತ್ತೀದ್ದೀರಾ?
ಹೊಟ್ಟೆ ಉಬ್ಬುವುದು ಸಾಮಾನ್ಯವಾದ ಲಕ್ಷಣ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಆಹಾರಗಳನ್ನು ಕೆಟ್ಟ ಆಹಾರಗಳು ಎಂದು ಪ್ರಚಾರ ಮಾಡಲಾಗುತ್ತಿದೆ. ಇದರಿಂದ ಪ್ರಭಾವಿತರಾಗುವ ಜನರು ತಮ್ಮ ರೋಗ ಲಕ್ಷಣಗಳಿಗೆ ನಿಜವಾದ ಕಾರಣಗಳು ಏನೆಂದು ತಿಳಿಯುವ ಮೊದಲೇ ತಮ್ಮ ಆಹಾರದಲ್ಲಿ ಗುಟ್ಲನ್, ಡೈರಿ ಉತ್ಪನ್ನಗಳು ಅಥವಾ ಕಾರ್ಬೋಹೈಡ್ರೇಟ್ಸ್‌ಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿ ಬಿಡುತ್ತಾರೆ.
ಮಹಿಳೆಯರು ಸರಳವಾದ ಆಹಾರ ಕ್ರಮವನ್ನು ಅನುಸರಿಸಬೇಕು. ಆಹಾರ ಮತ್ತು ರೋಗದ ಲಕ್ಷಣಗಳ ದಿನಚರಿ ಮಾಡಿಕೊಳ್ಳುವುದು ನಿಮ್ಮ ಆರೋಗ್ಯ ತುಂಬಾ ಉತ್ತಮ. ಪ್ರತಿ ದಿನ ಏನು ತಿನ್ನಲಾಗುತ್ತದೆ. ಎಷ್ಟು ಬೇಗನೆ ಊಟ ತಿನ್ನಲಾಗುತ್ತಿದೆ, ಆಹಾರದಲ್ಲಿ ಪ್ರೋಟಿನ್ ಎಷ್ಟಿತ್ತು, ಹೊಟ್ಟೆ ಉಬ್ಬರ ಆಗಿದೆಯಾ ಎಂಬುದನ್ನು ಗಮನಿಸಿಕೊಳ್ಳಬೇಕು. ಹೊಟ್ಟೆ ಉಬ್ಬರ ಸಮಸ್ಯೆಯೂ ಕೇವಲ ಒಂದೇ ಆಹಾರದ್ದು ಆಗಿರದೇ ನೀವು ತಿನ್ನುವ ಒಟ್ಟಾರೆ ವಿಧಾನ ಅಥವಾ ಶೈಲಿಯೇ ಆಗಿರಬಹುದು.
ಇವುಗಳನ್ನು ನೀವು ತಿನ್ನಬೇಕು
ಮಹಿಳೆಯರು ಕಬ್ಬಿಣಾಂಶ ಮತ್ತು ಪ್ರೋಟಿನ್‌ಗೆ ಯಾಕೆ ಅದ್ಯತೆ ನೀಡಬೇಕು, ಇವುಗಳಿಂದ ಏನು ಪರಯೋಜನಾ ಇದೆ ಎನ್ನುವುದು ಈ ಮುಂದಿನಂತೆ ವಿವರಿಸಲಾಗಿದೆ. ಮುಟ್ಟಿನ ಅವಧಿಯಲ್ಲಿ ನಿಯಮಿತವಾಗಿ ರಕತದ ನಷ್ಟ ಆಗುವುದರಿಂದ ದೇಹದ ಕಬ್ಬಿಣದ ಅಗತ್ಯತೆ ಅಧಿಕವಾಗುತ್ತದೆ. ವಿಶೇಷವಾಗಿ ದೀರ್ಘಕಾಲದ ಮುಟ್ಟು ಇರುವ ಮಹಿಳೆಯರಿಗೆ ದೇಹದಲ್ಲಿ ಕಬ್ಬಿಣ ಅಂಶ ಇರುವಂತೆ ನೋಡಿಕೊಳ್ಳುವುದು ಚಾಲೆಂಜ್ ಆಗಿರುತ್ತದೆ. ಕಬ್ಬಿಣಾಂಶ ಇರುವ ಆಹಾರಗಳನ್ನು ತಿನ್ನುವುದದಿಂದ ಆರೋಗ್ಯ ಸುಧಾರಿಸಿಕೊಳ್ಳಬಹುದು. ಬೀನ್ಸ್, ಸೊಪ್ಪು, ಧಾನ್ಯಗಳು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡು ತಿನ್ನಬೇಕು. ನಿಂಬೆ ರಸ, ಟೊಮೆಟೊ, ನೆಲ್ಲಿಕಾಯಿ, ಪೇರಲದಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ತೆಗೆದುಕೊಳ್ಳುವುದು ಉತ್ತಮ.
ಜಿಮ್ ಮಾಡುವವರಿಗೆ ಅಥವಾ ಫಿಟ್‌ನೆಸ್ ಕಾಪಾಡಿಕೊಳ್ಳುವವರಿಗೆ ಪ್ರೋಟಿನ್ ಅಂಶ ಇರುವ ಆಹಾರ ತಿನ್ನಬೇಕು ಎಂದೇನು ಎಲ್ಲಿಯೂ ಇಲ್ಲ. ಪ್ರತಿ ಮಹಿಳೆಯೂ ಸಮತೋಲನದ ಆಹಾರ ಮಟ್ಟ ಕಾಪಾಡಿಕೊಳ್ಳಬೇಕು ಎಂದರೆ ಪ್ರೋಟಿನ್ ಅಂಶ ಇರುವ ಆಹಾರಗಳನ್ನು ತಿನ್ನಬೇಕು. ಸಸ್ಯಾಹಾರ, ಮಾಂಸಾಹಾರ ಅನುಗುಣವಾಗಿ ಮೊಟ್ಟೆ, ಡೈರಿ ಉತ್ಪನ್ನಗಳು, ಪನೀರ್, ದ್ವಿದಳ ಧಾನ್ಯಗಳು ಮತ್ತು ಮೀನುಗಳನ್ನು ನಿತ್ಯದ ಪ್ರೋಟಿನ್ ಆಗಿ ತೆಗೆದುಕೊಳ್ಳಬಹುದು. ಮಹಿಳೆಯರಲ್ಲಿ ಯಾರಿಗಾದರೂ ಆಯಾಸ, ಹೊಟ್ಟೆ ಉಬ್ಬರ ಅಥವಾ ಶಕ್ತಿ ಕಡಿಮೆ ಆಗುವುದು ಸತತವಾಗಿ ಇದ್ದರೇ ನಿರ್ಲಕ್ಷ್ಯ ಮಾಡಬೇಡಿ. ಇವುಗಳು ಜಾಸ್ತಿ ಆಗಿದ್ರೆ ಅರ್ಹ ವೈದ್ಯರನ್ನು ಸಂಪರ್ಕ ಮಾಡುವುದು ಉತ್ತಮ.