SOCIAL MEDIA

Newsletter

PARTNER SITES
Select Language Select State

ಕಡಿಮೆ ಬಜೆಟ್‌ನಲ್ಲಿ ಕರ್ನಾಟಕದಿಂದ ಪಾಂಡಿಚೇರಿ-ಮಹಾಬಲಿಪುರಂ ಟ್ರಿಪ್; ಬೀಚ್‌ ಸುತ್ತಾಡಿ ದೇವರ ದರ್ಶನ ಮಾಡಿ!

ಬೆಂಗಳೂರುದಿಂದ ಪಾಂಡಿಚೇರಿಗೆ ಪ್ರವಾಸ ಹೋಗಲು ಬಯಸುವವರಿಗೆ KSTDC ವಿಶೇಷ ಅವಕಾಶ ನೀಡಿದೆ. 4 ದಿನ 3 ರಾತ್ರಿಗಳ ಈ ಪ್ಯಾಕೇಜ್‌ನಲ್ಲಿ ಪಾಂಡಿಚೇರಿ ಹಾಗೂ ಮಹಾಬಲಿಪುರಂನ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. A/C Deluxe Coach, ಹೋಟೆಲ್ ವಸತಿ, ಉಪಾಹಾರ ಹಾಗೂ ಗೈಡ್‌ ಸೌಲಭ್ಯವಿದ್ದು, ಪ್ಯಾಕೇಜ್ ದರ ₹5,195ರಿಂದ ಆರಂಭವಾಗುತ್ತದೆ.

Reported By Puttaraj K Alur Written By Puttaraj K Alur
Published: Sep 13, 2026, 02:51 PM IST | Updated: Sep 17, 2026, 03:51 PM IST
Image Credit: KSTDC Tour Package
Join

KSTDC Tour Package: ವಾರಾಂತ್ಯದ ರಜೆ ಅಥವಾ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡುತ್ತಿರುವವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಉತ್ತಮ ಪ್ರವಾಸ ಪ್ಯಾಕೇಜ್‌ವೊಂದನ್ನು ನೀಡುತ್ತಿದೆ. ಬೆಂಗಳೂರಿನಿಂದ ಪಾಂಡಿಚೇರಿಗೆ ತೆರಳುವ ಈ ವಿಶೇಷ ಟೂರ್ ಪ್ಯಾಕೇಜ್ ಒಟ್ಟು 4 ದಿನ ಮತ್ತು 3 ರಾತ್ರಿಗಳ ಅವಧಿಯನ್ನು ಹೊಂದಿದೆ. ಬೀಚ್, ದೇವಾಲಯ, ಐತಿಹಾಸಿಕ ತಾಣಗಳು, ಫ್ರೆಂಚ್ ವಾಸ್ತುಶೈಲಿಯ ಪ್ರದೇಶಗಳು ಹಾಗೂ ಮಹಾಬಲಿಪುರಂನ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಒಂದೇ ಪ್ರವಾಸದಲ್ಲಿ ನೋಡಲು ಈ ಪ್ಯಾಕೇಜ್ ಅವಕಾಶ ಕಲ್ಪಿಸುತ್ತದೆ.

ಈ ಪ್ರವಾಸಕ್ಕೆ ಬೆಂಗಳೂರಿನ ಯಶವಂತಪುರದ ಬಿಎಂಟಿಸಿ ಬಸ್‌ಸ್ಟ್ಯಾಂಡ್‌ನಲ್ಲಿರುವ ಕೆಎಸ್‌ಟಿಡಿಸಿ ಬುಕ್ಕಿಂಗ್‌ ಕೌಂಟರ್‌ನಿಂದ ರಾತ್ರಿ 9.30ಕ್ಕೆ ಪ್ರಯಾಣ ಆರಂಭವಾಗುತ್ತದೆ. ಪ್ರವಾಸಕ್ಕಾಗಿ A/C Deluxe Coach ವ್ಯವಸ್ಥೆ ಮಾಡಲಾಗಿದ್ದು, ಪಾಂಡಿಚೇರಿಯಲ್ಲಿ ಹೋಟೆಲ್ ವಸತಿ ಮತ್ತು ಬೆಳಗಿನ ಉಪಾಹಾರದ ವ್ಯವಸ್ಥೆಯೂ ಈ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.

4 ದಿನಗಳ ಪ್ರವಾಸದಲ್ಲಿ ಏನೇನು ನೋಡಬಹುದು?

ಕೆಎಸ್‌ಟಿಡಿಸಿಯ ಈ ಪ್ಯಾಕೇಜ್‌ನಲ್ಲಿ ಪಾಂಡಿಚೇರಿ ಮತ್ತು ಮಹಾಬಲಿಪುರಂ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಪ್ರವಾಸದ ಮೊದಲ ರಾತ್ರಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ ಪಾಂಡಿಚೇರಿಗೆ ತಲುಪಲಾಗುತ್ತದೆ. ಬೆಳಗ್ಗೆ 5 ಗಂಟೆಯಿಂದ 7.30ರವರೆಗೆ ಪಾಂಡಿಚೇರಿಯ ಹೋಟೆಲ್‌ನಲ್ಲಿ ಫ್ರೆಶ್‌ಅಪ್ ಮತ್ತು Breakfast ವ್ಯವಸ್ಥೆ ಇರುತ್ತದೆ. ನಂತರ ಬೆಳಗ್ಗೆ 7.30ರಿಂದ ಸಂಜೆ 6.30ರವರೆಗೆ ಪಾಂಡಿಚೇರಿಯ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಗುತ್ತದೆ.
ಕೆಎಸ್‌ಟಿಡಿಸಿ

ಪ್ರವಾಸದ ವೇಳೆ ಮನಕುಲ ವಿನಾಯಕ ದೇವಸ್ಥಾನ, ಶ್ರೀ ಅರಬಿಂದೋ ಆಶ್ರಮ, ಪ್ರೊಮೆನೇಡ್ (Promenade Beach), ಭಾರತಿ ಪಾರ್ಕ್, ಆರೋವಿಲ್ಲೆ, ಪಾಂಡಿಚೇರಿ ಮ್ಯೂಸಿಯಂ ಮತ್ತು ಪ್ಯಾರಡೈಸ್‌ ಬೀಚ್ (Paradise Beach) ಸೇರಿದಂತೆ ಹಲವು ಸ್ಥಳಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ. ಪಾಂಡಿಚೇರಿಯ ಪ್ರಸಿದ್ಧ ಕಡಲತೀರಗಳಲ್ಲಿ ಸಮಯ ಕಳೆಯುವುದರ ಜೊತೆಗೆ, ನಗರದ ವಿಶಿಷ್ಟ ಫ್ರೆಂಚ್ ವಾತಾವರಣ ಮತ್ತು ಬೀದಿಗಳ ಸೌಂದರ್ಯವನ್ನು ಕೂಡ ಪ್ರವಾಸಿಗರು ಅನುಭವಿಸಬಹುದು. ವಿಶೇಷವಾಗಿ ಪ್ರೊಮೆನೇಡ್ ಬೀಚ್ ಮತ್ತು ಪ್ಯಾರಡೈಸ್ ಬೀಚ್ ಪ್ರವಾಸದ ಪ್ರಮುಖ ಆಕರ್ಷಣೆಗಳಾಗಿವೆ.

ಮಹಾಬಲಿಪುರಂ ಪ್ರವಾಸ

ಮೂರನೇ ದಿನ ಬೆಳಗ್ಗೆ 7.30ಕ್ಕೆ ಪಾಂಡಿಚೇರಿಯಿಂದ ಮಹಾಬಲಿಪುರಂ (Mahabalipuram) ಕಡೆಗೆ ಪ್ರಯಾಣ ಆರಂಭವಾಗುತ್ತದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಮಹಾಬಲಿಪುರಂನ ಐತಿಹಾಸಿಕ ಹಾಗೂ ಪಾರಂಪರಿಕ ತಾಣಗಳನ್ನು ವೀಕ್ಷಿಸಲಾಗುತ್ತದೆ. ಈ ಸಂದರ್ಭದಲ್ಲಿ ಪಂಚ ರಥಗಳು, ಮಹಿಷಾಸುರಮರ್ದಿನಿ ಗುಹೆ, ಮ್ಯೂಸಿಯಂ, ಕೃಷ್ಣ ಮಂಟಪ, ಕೃಷ್ಣನ ಬಟರ್‌ ಬಾಲ್ ಮತ್ತು ಅರ್ಜುನನ ತಪಸ್ಸು ಸೇರಿದಂತೆ ಪ್ರಮುಖ ತಾಣಗಳಿಗೆ ಭೇಟಿ ನೀಡಲಾಗುತ್ತದೆ. ಮಧ್ಯದಲ್ಲಿ ಮಧ್ಯಾಹ್ನದ ಊಟಕ್ಕೂ ಸಮಯ ನಿಗದಿಪಡಿಸಲಾಗಿದೆ. ಇದಾದ ಬಳಿಕ ಪ್ರಸಿದ್ಧ Shore Temple ವೀಕ್ಷಣೆಗೆ ಅವಕಾಶವಿದೆ. ಪಲ್ಲವ ಕಾಲದ ಶಿಲ್ಪಕಲೆ ಮತ್ತು ವಾಸ್ತುಶೈಲಿಗೆ ಹೆಸರುವಾಸಿಯಾದ ಮಹಾಬಲಿಪುರಂ ಪ್ರವಾಸವು ಈ ಪ್ಯಾಕೇಜ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ದೇವಾಲಯಗಳಿಗೂ ಭೇಟಿ

ಮಹಾಬಲಿಪುರಂ ಪ್ರವಾಸದ ನಂತರ ಸಂಜೆ 5 ಗಂಟೆಯಿಂದ ರಾತ್ರಿ 8.30ರವರೆಗೆ ಏಕಾಂಬರೇಶ್ವರ ದೇವಸ್ಥಾನ ಮತ್ತು ಕಾಮಾಕ್ಷಿ ಅಮ್ಮನ್ ದೇವಸ್ಥಾನ ಸೇರಿದಂತೆ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ನಂತರ ಬೆಂಗಳೂರಿನತ್ತ ವಾಪಸ್ ಪ್ರಯಾಣ ಆರಂಭವಾಗುತ್ತದೆ. ನಿಗದಿತ ವೇಳಾಪಟ್ಟಿಯಂತೆ ಮುಂದಿನ ದಿನ ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನಾಲ್ಕು ದಿನಗಳ ಅವಧಿಯಲ್ಲಿ ಪಾಂಡಿಚೇರಿ, ಮಹಾಬಲಿಪುರಂ ಮತ್ತು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡ ಪ್ರವಾಸವನ್ನು ಪೂರ್ಣಗೊಳಿಸಬಹುದು.

ಪ್ರತಿ ವ್ಯಕ್ತಿಗೆ ಎಷ್ಟು ಹಣ?

KSTDC ನೀಡಿರುವ ಮಾಹಿತಿಯ ಪ್ರಕಾರ, ಈ ಟೂರ್ ಪ್ಯಾಕೇಜ್‌ನಲ್ಲಿ ವಸತಿ ಆಯ್ಕೆಯ ಆಧಾರದ ಮೇಲೆ ದರ ಬದಲಾಗುತ್ತದೆ.

* Single Occupancy: ₹6,850 ಪ್ರತಿ ವ್ಯಕ್ತಿಗೆ
* Double Occupancy: ₹5,470 ಪ್ರತಿ ವ್ಯಕ್ತಿಗೆ
* Triple Occupancy: ₹5,195 ಪ್ರತಿ ವ್ಯಕ್ತಿಗೆ

ಅಂದರೆ ಮೂವರು ಒಟ್ಟಿಗೆ ಒಂದು ಕೊಠಡಿಯಲ್ಲಿ ಉಳಿಯುವ ಆಯ್ಕೆಯನ್ನು ತೆಗೆದುಕೊಂಡರೆ ಪ್ರತಿ ವ್ಯಕ್ತಿಗೆ ₹5,195 ದರದಲ್ಲಿ ಪ್ರವಾಸ ಕೈಗೊಳ್ಳಬಹುದಾಗಿದೆ.

ಪ್ಯಾಕೇಜ್‌ನಲ್ಲಿ ಏನೇನು ಸಿಗಲಿದೆ?

ಪ್ರವಾಸಕ್ಕಾಗಿ A/C Deluxe Coach ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಂಡಿಚೇರಿಯಲ್ಲಿ ಹೋಟೆಲ್ ಧನ ಟವರ್ (Hotel Dhana Tower) ಅಥವಾ ಅದೇ ರೀತಿಯ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಹೋಟೆಲ್‌ನಲ್ಲಿ ಬೆಳಗಿನ ಉಪಾಹಾರಕ್ಕೂ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳನ್ನು ಕ್ರಮಬದ್ಧವಾಗಿ ವೀಕ್ಷಿಸಲು ಅನುಕೂಲವಾಗುವ ರೀತಿಯಲ್ಲಿ ಐಟಿನರಿ (Itinerary) ಸಿದ್ಧಪಡಿಸಲಾಗಿದೆ. ಪ್ರವಾಸಿಗರಿಗೆ ಸ್ಥಳಗಳ ಕುರಿತು ಮಾಹಿತಿ ನೀಡಲು Professional Guide ವ್ಯವಸ್ಥೆಯೂ ಪ್ಯಾಕೇಜ್‌ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. KSTDC ಪ್ರಕಾರ, ರಾಜ್ಯ, ಕೇಂದ್ರ ಸರ್ಕಾರ ಹಾಗೂ PSU ಉದ್ಯೋಗಿಗಳಿಗೆ LTC facilities ಬಳಸಿಕೊಳ್ಳುವ ಅವಕಾಶವೂ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಲಭ್ಯವಿದೆ.

ಕುಟುಂಬದೊಂದಿಗೆ ಪ್ರವಾಸಕ್ಕೆ ಸೂಕ್ತ ಆಯ್ಕೆ

ಪಾಂಡಿಚೇರಿ ಪ್ರವಾಸಕ್ಕೆ ಸ್ವಂತ ವಾಹನದಲ್ಲಿ ತೆರಳುವುದಕ್ಕಿಂತ ಸಾರಿಗೆ, ಹೋಟೆಲ್ ಮತ್ತು ಪ್ರವಾಸಿ ತಾಣಗಳ ವೇಳಾಪಟ್ಟಿಯನ್ನು ಒಳಗೊಂಡ ಪ್ಯಾಕೇಜ್ ಆಯ್ಕೆ ಮಾಡುವುದು ಕೆಲವು ಪ್ರವಾಸಿಗರಿಗೆ ಅನುಕೂಲಕರವಾಗಬಹುದು. ವಿಶೇಷವಾಗಿ ಕುಟುಂಬದೊಂದಿಗೆ ಪ್ರಯಾಣಿಸುವವರು ಅಥವಾ ಪ್ರವಾಸದ ಪ್ರತಿಯೊಂದು ಹಂತವನ್ನು ಸ್ವತಃ ಯೋಜಿಸಲು ಇಚ್ಛಿಸದವರಿಗೆ ಇಂತಹ ಸಂಘಟಿತ ಟೂರ್ ಪ್ಯಾಕೇಜ್ ಉಪಯುಕ್ತವಾಗಬಹುದು. ಆದರೆ ಪ್ರವಾಸ ಬುಕ್ ಮಾಡುವ ಮುನ್ನ ಪ್ರಯಾಣದ ದಿನಾಂಕ, ಸೀಟು ಲಭ್ಯತೆ, ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ಸೇವೆಗಳು, ಊಟದ ವ್ಯವಸ್ಥೆ, ಪ್ರವೇಶ ಶುಲ್ಕಗಳು ಮತ್ತು ಇತರ ಹೆಚ್ಚುವರಿ ಶುಲ್ಕಗಳು ಕುರಿತು KSTDCಯಿಂದ ಖಚಿತಪಡಿಸಿಕೊಳ್ಳುವುದು ಉತ್ತಮ.

ಒಟ್ನಲ್ಲಿ ಬೆಂಗಳೂರಿನಿಂದ ಹೊರಟು ಪಾಂಡಿಚೇರಿಯ ಬೀಚ್‌ಗಳು, ಆಧ್ಯಾತ್ಮಿಕ ಕೇಂದ್ರಗಳು, ಫ್ರೆಂಚ್ ವಾತಾವರಣ ಮತ್ತು ಮಹಾಬಲಿಪುರಂನ ಐತಿಹಾಸಿಕ ತಾಣಗಳನ್ನು ಒಂದೇ ಪ್ರವಾಸದಲ್ಲಿ ನೋಡಲು ಬಯಸುವವರಿಗೆ KSTDCಯ ಈ 4 ದಿನಗಳ ಟೂರ್ ಪ್ಯಾಕೇಜ್ ಗಮನಾರ್ಹ ಆಯ್ಕೆಯಾಗಿದೆ. ₹5,195ರಿಂದ ಆರಂಭವಾಗುವ ದರದಲ್ಲಿ ಪ್ರವಾಸದ ಪ್ರಮುಖ ವ್ಯವಸ್ಥೆಗಳನ್ನು ಒಂದೇ ಪ್ಯಾಕೇಜ್‌ನಲ್ಲಿ ಪಡೆಯಬಹುದಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES