SOCIAL MEDIA

Newsletter

PARTNER SITES
Select Language Select State

ಡಿಜಿಟಲ್‌ ಕ್ರಾಂತಿಯಲ್ಲಿ ಈ ನೋವುಗಳು ಜಾಸ್ತಿ ಆಗ್ತಿರುವುದೇಕೆ.. ಯುವಕ, ಯುವತಿಯರಿಗೆ ಭಾರೀ ಕಂಠಕ

ಈ ವಿಷ್ಯ ಗೊತ್ತಾದರೆ ಯುವ ಸಮುದಾಯ ಸ್ಕ್ರೀನ್‌ ಮುಂದೆ ಕುಳಿತುಕೊಳ್ಳಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಬೇರೆ ಮಾರ್ಗಗಳನ್ನು ಅನುಸರಿಸಬಹುದು. ಲ್ಯಾಪ್‌ಟಾಪ್‌ನಲ್ಲಿ ಗಂಟೆಗಟ್ಟಲೆ ನಿರಂತರವಾಗಿ ಕೆಲಸ ಮಾಡುವುದು ಆರೋಗ್ಯಕ್ಕೆ ಕುತ್ತು ತರುತ್ತದೆ.

Reported By Bhimappa Written By Bhimappa
Published: Sep 15, 2026, 04:20 PM IST | Updated: Sep 17, 2026, 02:35 PM IST
Image Credit: File Photo
Join

ಕುತ್ತಿಗೆ ಮತ್ತು ಬೆನ್ನುಮೂಳೆಯ ನೋವು ಅಂತವು ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುತ್ತಿರುವ ದೂರುಗಳು ಆಗಿವೆ. ಇದಕ್ಕೆ ನೀವು ಕುಳಿತುಕೊಳ್ಳುವ ಭಂಗಿಯೇ ಮುಖ್ಯ ಕಾರಣ ಎಂದು ಸಬೂಬು ಹೇಳಲಾಗುತ್ತದೆ. ಆದರೆ ಬೆನ್ನುಮೂಳೆಯ ಆರೋಗ್ಯ ಕೆಡಲು ಕೇವಲ ಭಂಗಿಯೊಂದೇ ರೀಸನ್‌ ಆಗುವುದಿಲ್ಲ. ಈಗಿನ ಮೊಬೈಲ್‌ ಮತ್ತು ಕಂಪ್ಯೂಟರ್‌ಗಳನ್ನು ಹಿಡಿದುಕೊಂಡು ಓಡಾಡುವ ಲೈಫ್‌ ಸ್ಟೈಲ್‌, ಪ್ರಸ್ತುತ ದಿನಗಳಲ್ಲಿ ನಿಮ್ಮ ಜೀವನಶೈಲಿಯಲ್ಲಿ ಕಡಿಮೆಯಾದ ದೈಹಿಕ ಚಟುವಟಿಕೆ, ಕುಳಿತುಕೊಳ್ಳುವ ದುರ್ಬಲ ಭಂಗಿಗಳು ಅಸಮರ್ಪಕ ಕೆಲಸದ ಸ್ಥಳ, ಮತ್ತು ದೀರ್ಘ ಗಂಟೆಗಳ ಕಾಲ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಕುಳಿತುಕೊಂಡು ಕೆಲಸ ಮಾಡುವುದು ಕುತ್ತಿಗೆ ಮತ್ತು ಬೆನ್ನುನೋವಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಅದಕ್ಕೆ ಏನು ಮಾಡಬೇಕು?.

ಕುಳಿತಲ್ಲೇ ಕೆಲಸ ಮಾಡುವಾಗ ಸಣ್ಣ ಕುತ್ತಿಗೆ ನೋವು ಅಥವಾ ಬಿಗಿತ ಕಾಣಿಸುತ್ತದೆ. ಬೆನ್ನು ನೋವು ಕೂಡ ಸಣ್ಣದು ಎಂದು ನಾವು ಭಾವಿಸುತ್ತೇವೆ. ಆದರೆ, ಆರಂಭದಲ್ಲಿಯೇ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ದೀರ್ಘಕಾಲದವರೆಗೆ ಕಾಯಿಲೆಯಾಗಿ ರೂಪಾಂತರಗೊಳ್ಳುತ್ತದೆ. ಯುವ ಜನರಲ್ಲಿ ಬೆನ್ನುಮೂಳೆ ಸಮಸ್ಯೆಗಳು ಹೆಚ್ಚುತ್ತಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣ ಕೂಡ ಈ ರೀತಿಯಲ್ಲಿ ಇದೆ. ಬೆನ್ನುಮೂಳೆಗೆ ಸಂಬಂಧಿಸಿದ ದೂರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಬದಲಾವಣೆ ಕಂಡುಬರುತ್ತಿದೆ.

ಕುತ್ತಿಗೆ ನೋವು, ಬೆನ್ನಿನ ಮೇಲ್ಭಾಗದ ಬಿಗಿತ ಹಾಗೂ ಕೆಳ ಬೆನ್ನಿನ ಅಸ್ವಸ್ಥತೆಯಂತಹ ಸಮಸ್ಯೆಗಳು ಕೇವಲ ವಯಸ್ಸಾದವರಿಗೆ ಅಥವಾ ದೈಹಿಕವಾಗಿ ಕೆಲಸ ಮಾಡುವವರಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು, ಯುವತಿಯರಲ್ಲಿ, ಉದ್ಯೋಗಸ್ಥರು ಮತ್ತು ವಿದ್ಯಾರ್ಥಿಗಳು ಈ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಏನು ಎಂದು ಹೇಳುವುದಾದರೆ ಅವರ ನಿತ್ಯ ಸಾಕಷ್ಟು ಸಮಯ ಸ್ಕ್ರೀನ್‌ ಮುಂದೆಯೇ ಕಳೆಯುತ್ತಾರೆ. ಯುವ ಸಮುದಾಯ ದಿನದ ಮುಕ್ಕಾಲು ಭಾಗ ಸಂಪೂರ್ಣವಾಗಿ ಡಿಜಿಟಲ್ ಪರದೆಗಳ ಅಥವಾ ಸ್ಕ್ರೀನ್‌ ಮುಂದೆಯೇ ಇರುತ್ತಾರೆ.

ಲ್ಯಾಪ್‌ಟಾಪ್‌ ದೇಹಕ್ಕೆ ಹಾನಿನಾ?

ಈ ರೀತಿ ಸ್ಕ್ರೀನ್‌ ಮುಂದೆ ಇರುವಾಗ ಒಂದೇ ಭಂಗಿಯಲ್ಲಿ ಅಥವಾ ಒಂದೇ ಸ್ಥಾನದಲ್ಲಿ ಕುಳಿತುಕೊಂಡು ದಿನಕ್ಕೆ ಎಷ್ಟು ಸಮಯ ಕಳೆಯುತ್ತಾರೆ ಎನ್ನುವ ಐಡಿಯಾ ಕೂಡ ಅವರಿಗೆ ಇರುವುದಿಲ್ಲ. ಈ ವಿಷ್ಯ ಗೊತ್ತಾದರೆ ಯುವ ಸಮುದಾಯ ಸ್ಕ್ರೀನ್‌ ಮುಂದೆ ಕುಳಿತುಕೊಳ್ಳಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಬೇರೆ ಮಾರ್ಗಗಳನ್ನು ಅನುಸರಿಸಬಹುದು. ಲ್ಯಾಪ್‌ಟಾಪ್‌ನಲ್ಲಿ ಗಂಟೆಗಟ್ಟಲೆ ನಿರಂತರವಾಗಿ ಕೆಲಸ ಮಾಡುವುದು ಆರೋಗ್ಯಕ್ಕೆ ಕುತ್ತು ತರುತ್ತದೆ. ಲ್ಯಾಪ್‌ಟಾಪ್‌ ಎಲ್ಲಿಗಾದರೂ ತೆಗೆದುಕೊಂಡು ಹೋಗಬಹುದು. ಅಷ್ಟೇ ನಿಮ್ಮ ಆರೋಗ್ಯಕ್ಕೂ ಹಾನಿ ಮಾಡುತ್ತದೆ.  

ಕೆಲಸದ ನಡುವೆ ಕೊಂಚ ವಿರಾಮ ಸಿಕ್ಕರೇ ಸಾಕು ಮೊಬೈಲ್ ಫೋನ್ ಆನ್‌ ಮಾಡಿ ಸ್ಕ್ರಾಲ್ ಮಾಡಿಕೊಂಡು ಕುಳಿತುಕೊಳ್ಳುವುದು. ಕೆಲಸದ ದಿನ ಮುಗಿದ ನಂತರವೂ ಮತ್ತೊಂದು ಡಿಜಿಟಲ್ ಸಾಧನ ಅಂದರೆ ಟಿವಿ ಮತ್ತು ಟ್ಯಾಬ್ಲೆಟ್ ಬಳಸುವುದು. ಒಟ್ಟಿನಲ್ಲಿ ಯಂತ್ರದ ಜೊತೆ ನಿರಂತರವಾಗಿ ಸಾಗುವುದು ಆರೋಗ್ಯಕ್ಕೆ ಒಳ್ಳೆಯದು ಅಲ್ಲ. ಯಾರದ್ದೇ ಬೆನ್ನುಮೂಳೆ ಆಗಲಿ ನಿರಂತರ ಚಲನೆಗಾಗಿ ವಿನ್ಯಾಸಗೊಳಿಸಲ್ಪಟ್ಟಿದೆ. ಆದರೆ ಇವತ್ತಿನ ಕೆಲಸಗಳು ಬೆನ್ನುಮೂಳೆಯನ್ನು ಸಂಪೂರ್ಣವಾಗಿ ಚಲನರಹಿತ ಅಂದರೆ ಯಾವುದೇ ಮೂಮೆಂಟ್‌ ಇಲ್ಲದೇ ಇರುವುದು ಆಗಿದೆ.

ಡಿಜಿಟಲ್ ಜೀವನಶೈಲಿಯು ಮೂಳೆ ಚಿಕಿತ್ಸಾಲಯಗಳಿಗೆ ಬೆನ್ನುಮೂಳೆಯ ಅಸ್ವಸ್ಥತೆಗಳು ಬರುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕಂಪ್ಯೂಟರ್ ಮುಂದೆ ಅತಿಯಾದ ಸಮಯ ಕಳೆಯುವುದು, ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದು ಮತ್ತು ವ್ಯಾಯಾಮ ಮಾಡದಿರುವುದರಿಂದ ಯುವಕರಲ್ಲಿ ನಿರಂತರ ಕುತ್ತಿಗೆ ಬಿಗಿತ, ಭುಜದ ನೋವು ಮತ್ತು ಕೆಳ ಬೆನ್ನಿನ ಅಸ್ವಸ್ಥತೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯು ಮುಖ್ಯವಾಗಿ ಎರಡು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

Text Neck: ನೀವು ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಸುದೀರ್ಘವಾಗಿ ನೋಡುವುದರಿಂದ ನಿಮ್ಮ ತಲೆಯು ಮುಂದಕ್ಕೆ ಓರೆಯಾಗಿ ಭಾಗಿದಂತೆ ಇರುತ್ತದೆ. ತಲೆಯು ತನ್ನ ನೈಸರ್ಗಿಕ ಭಂಗಿಯಿಂದ ಎಷ್ಟು ಹೆಚ್ಚು ಮುಂದಕ್ಕೆ ವಾಲುತ್ತದೆಯೋ ಅಷ್ಟು ಹೆಚ್ಚಿನ ಒತ್ತಡವು ಸ್ನಾಯುಗಳು, ಕೀಲುಗಳು ಮತ್ತು ಗರ್ಭಕಂಠದ ಬೆನ್ನುಮೂಳೆಯ ಪೋಷಕ ಅಂಶಗಳ ಮೇಲೆ ಬೀಳುತ್ತದೆ. ಇದು ಅಂತಿಮವಾಗಿ ತೀವ್ರ ಕುತ್ತಿಗೆ ನೋವು, ಸ್ನಾಯು ಆಯಾಸ, ತಲೆನೋವು ಹಾಗೂ ಭುಜಗಳು ಅಥವಾ ಮೇಲಿನ ಬೆನ್ನಿಗೆ ಹರಡುವ ಅಸ್ವಸ್ಥತೆಗೆ ಕಾರಣವಾಗುತ್ತದೆ.

Tech Back: ಈ ಸಮಸ್ಯೆಯು ಮುಖ್ಯವಾಗಿ ಬೆನ್ನುಮೂಳೆಯ ಕೆಳಭಾಗದ ಮೇಲೆ ಪ್ರಭಾವ ಬೀರುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು, ವಿಶೇಷವಾಗಿ ಸೋಫಾದ ಮೇಲೆ ಜೋತು ಬಿದ್ದು ಕುಳಿತುಕೊಳ್ಳುವುದು, ಹಾಸಿಗೆಯಲ್ಲಿ ಪಲಂಗಿಸಿ ಕೆಲಸ ಮಾಡುವುದು ಅಥವಾ ಸರಿಯಾದ ವಿನ್ಯಾಸವಿಲ್ಲದ ಕೆಲಸದ ಸ್ಥಳದಲ್ಲಿ ಕೆಲಸ ಮಾಡುವುದು ಸೊಂಟದ ಪ್ರದೇಶದ ಮೇಲೆ ತೀವ್ರ ಒತ್ತಡ ಉಂಟು ಮಾಡುತ್ತದೆ. ಇದರೊಂದಿಗೆ ಕೋರ್ ಸ್ನಾಯುಗಳು ದುರ್ಬಲವಾಗಿದ್ದರೆ ಮತ್ತು ದೇಹದ ಚಲನೆ ಕಡಿಮೆಯಿದ್ದರೆ, ಬೆನ್ನಿನ ಬಿಗಿತ ಮತ್ತು ಪದೇ ಪದೇ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. 

ಕುತ್ತಿಗೆ ಮತ್ತು ಬೆನ್ನು ನೋವಿಗೆ ಪರಿಹಾರ ಏನು?

ಬೆನ್ನು ನೋವು ಬರಬಾರದು ಎಂದರೆ ಆರಂಭಿಕ ಹಂತದಲ್ಲೇ ಜಾಗರೂಕರಾದರೆ ಸಮಸ್ಯೆಗಳನ್ನು ತಪ್ಪಿಸಬಹುದು. ಇದಕ್ಕೆ ನಿಮ್ಮ ಜೀವನಶೈಲಿಯಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆ ಬೇಕಾಗಿಲ್ಲ. ಪ್ರತಿ ಗಂಟೆಗೊಮ್ಮೆ ಅಥವಾ ಪ್ರತಿ 30 ರಿಂದ 45 ನಿಮಿಷಗಳಿಗೊಮ್ಮೆ ಎದ್ದು ಸ್ವಲ್ಪ ದೂರ ನಡೆದಾಡಬೇಕು. ಕೆಲಸ ಮಾಡುವ ಸ್ಥಳವನ್ನು ಸರಿಯಾಗಿ ಮಾಡಿಕೊಳ್ಳಬೇಕು. ನೀವು ಕೆಲಸ ಮಾಡುವ ಟೇಬಲ್‌ ಮತ್ತು ಕುರ್ಚಿ ನಿಮಗೆ ಅನುಕೂಲವಾಗುವಂತೆ ಮಾಡಿಕೊಳ್ಳಬೇಕು.

ಕುತ್ತಿಗೆ, ಬೆನ್ನು ಮತ್ತು ದೇಹದ ಮಧ್ಯಭಾಗದ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳನ್ನು ಮಾಡಬೇಕು. ದಿನ ಈ ವರ್ಕೌಟ್‌ ಮಾಡುವುದರಿಂದ ದೇಹದಲ್ಲಿ ಇತರೆ ನೋವುಗಳು ಬಾರದಂತೆ ನೋಡಿಕೊಳ್ಳಬಹುದು. ಕುತ್ತಿಗೆ ಮತ್ತು ಬೆನ್ನಿನ ಸುತ್ತಲಿನ ಸ್ನಾಯುಗಳು ಬಲವಾಗಿದ್ದಾಗ, ಟೇಬಲ್‌ ಬಳಿ ಸುದೀರ್ಘ ಗಂಟೆಗಳ ಕಾಲ ಕೆಲಸ ಮಾಡುವಾಗ ಬೆನ್ನುಮೂಳೆಯು ಆ ಒತ್ತಡವನ್ನು ಸುಲಭವಾಗಿ ತಡೆದುಕೊಳ್ಳುತ್ತದೆ. ತಂತ್ರಜ್ಞಾನದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಇದಕ್ಕೆ ಪರಿಹಾರವಲ್ಲ. ನೀವು ಬಳಕೆ ಮಾಡುವ ವಿಧಾನ ಸರಿ ಇದ್ದರೇ ಇಂತಹ ನೋವುಗಳು ಬಾರದಂತೆ ನೋಡಿಕೊಳ್ಳಬಹುದು. 

ಯಾರೇ ಆಗಲಿ ಕೆಲಸ ಮಾಡುವಾಗ ಈ ನಿಯಮಗಳನ್ನು ಪಾಲನೆ ಮಾಡಿಕೊಂಡು ಹೋಗಬೇಕು. ಇದರಿಂದ ನಿಮ್ಮ ಆರೋಗ್ಯ ಸುಧಾರಣೆಯಲ್ಲಿ ಇರುತ್ತದೆ. ಬೆನ್ನಿನ ನೋವು, ಕುತ್ತಿಗೆ ನೋವು ತಡೆಯಬಹುದು. ಡಿಜಿಟಲ್ ಸಾಧನಗಳ ಸ್ಕ್ರೀನ್‌ ಸರಿಯಾಗಿ ನಿಮ್ಮ ಕಣ್ಣಿನ ಮಟ್ಟಕ್ಕೆ ಸರಿಹೊಂದುವಂತೆ ಜೋಡಿಸಬೇಕು. ಕುಳಿತುಕೊಳ್ಳುವಾಗ ಬೆನ್ನಿಗೆ ಸರಿಯಾದ ಆಧಾರ ಇರುವಂತೆ ಕುಳಿತುಕೊಳ್ಳಿ. ಕುಳಿತಾಗ ಎರಡೂ ಪಾದಗಳನ್ನು ನೆಲದ ಮೇಲೆ ಸಮನಾಗಿ ಇರಿಸಿ. ಒಂದೇ ಸ್ಥಾನದಲ್ಲಿ ಅಥವಾ ಒಂದೇ ಭಂಗಿಯಲ್ಲಿ ದೀರ್ಘಕಾಲ ಇರಬೇಡಿ. ನಿತ್ಯ ಮನೆಯಲ್ಲಿ ದೇಹವನ್ನು ಹಿಗ್ಗಿಸುವ ವ್ಯಾಯಾಮ ಮಾಡುವುದು ಉತ್ತಮ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES