• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಸಫಾರಿಗೆ ಬಂದ ಪ್ರವಾಸಿಗರನ್ನೇ ಹೆದರಿಸಲು ಬಂದ ಮರಿಯಾನೆ! ಪುಟಾಣಿಯ ತುಂಟಾಟದ ವಿಡಿಯೋ ವೈರಲ್

ಸಫಾರಿಗೆ ಬಂದ ಪ್ರವಾಸಿಗರನ್ನೇ ಹೆದರಿಸಲು ಬಂದ ಮರಿಯಾನೆ! ಪುಟಾಣಿಯ ತುಂಟಾಟದ ವಿಡಿಯೋ ವೈರಲ್

ಸಫಾರಿಗೆ ತೆರಳಿದ್ದ ಪ್ರವಾಸಿಗರ ವಾಹನದ ಮುಂದೆ ಬಂದ ಮರಿಯಾನೆಯೊಂದು ತಲೆ ಅಲ್ಲಾಡಿಸುತ್ತಾ ಅವರನ್ನ ಹೆದರಿಸಲು ಪ್ರಯತ್ನಿಸಿದೆ. ಮರಿಯಾನೆಯ ಈ ಮುದ್ದಾದ ತುಂಟಾಟ ಕಂಡು ಪ್ರವಾಸಿಗರು ಜೋರಾಗಿ ನಕ್ಕಿದ್ದಾರೆ. ಈ ದೃಶ್ಯವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Written ByPuttaraj K Alur
Published: Nov 18, 2026, 16:39 IST|Updated: Nov 18, 2026, 16:47 IST
joinshare
ಸಫಾರಿಗೆ ಬಂದ ಪ್ರವಾಸಿಗರನ್ನೇ ಹೆದರಿಸಲು ಬಂದ ಮರಿಯಾನೆ! ಪುಟಾಣಿಯ ತುಂಟಾಟದ ವಿಡಿಯೋ ವೈರಲ್
Image Credit: Baby Elephant

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Viral Elephant Video: ಕಾಡಿನಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರ ವಾಹನಗಳನ್ನ ಕಾಡಾನೆಗಳು ಬೆನ್ನಟ್ಟುವ ಅಥವಾ ಅಡ್ಡಗಟ್ಟುವ ಘಟನೆಗಳ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಕಾಡಾನೆಗಳ ಇಂತಹ ವರ್ತನೆ ಪ್ರವಾಸಿಗರಲ್ಲಿ ಆತಂಕ ಮೂಡಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಪುಟ್ಟ ಮರಿಯಾನೆ ಸಫಾರಿಗೆ ಬಂದ ಪ್ರವಾಸಿಗರನ್ನೇ ಹೆದರಿಸಲು ಪ್ರಯತ್ನಿಸಿರುವ ಘಟನೆ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಮರಿಯಾನೆಯ ಮುದ್ದಾದ ತುಂಟಾಟ ಮತ್ತು ಅದರ ವರ್ತನೆ ಕಂಡು ಪ್ರವಾಸಿಗರು ಜೋರಾಗಿ ನಕ್ಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮರಿಯಾನೆಗಳ ಆಟ, ತುಂಟಾಟ ಮತ್ತು ಮುದ್ದಾದ ವರ್ತನೆಗಳನ್ನ ನೋಡಲು ಎರಡು ಕಣ್ಣುಗಳೂ ಸಾಲದು. ಅವುಗಳ ಚಿಕ್ಕ ಚಿಕ್ಕ ಚಲನವಲನಗಳು ನೋಡುಗರ ಮುಖದಲ್ಲಿ ನಗು ಮೂಡಿಸುತ್ತವೆ. ಇಂತಹ ಹಲವು ಮರಿಯಾನೆಗಳ ವಿಡಿಯೋಗಳು ಈ ಹಿಂದೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ. ಇದೀಗ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನ ಹೆದರಿಸಲು ಪ್ರಯತ್ನಿಸಿರುವ ಪುಟ್ಟ ಮರಿಯಾನೆಯ ವಿಡಿಯೋ ಕೂಡ ಇದೇ ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸಫಾರಿ ವಾಹನ ಅಡ್ಡಗಟ್ಟಿ ನಿಲ್ಲಿಸಿದ ಮರಿಯಾನೆ!

ಈ ವಿಡಿಯೋದಲ್ಲಿ ಸಫಾರಿಗೆ ಬಂದ ಪ್ರವಾಸಿಗರ ವಾಹನದ ಮುಂದೆ ಮರಿಯಾನೆಯೊಂದು ಕಾಣಿಸಿಕೊಳ್ಳುತ್ತದೆ. ತನ್ನ ಹಿಂದೆ ತಾಯಾನೆ ಇರುವ ಧೈರ್ಯದಲ್ಲಿದ್ದಂತೆ ಕಾಣುವ ಈ ಪುಟ್ಟ ಆನೆ, ಪ್ರವಾಸಿಗರ ಕಡೆಗೆ ಓಡೋಡಿ ಬರುತ್ತದೆ. ಬಳಿಕ ತನ್ನ ತಲೆಯನ್ನ ಅಲ್ಲಾಡಿಸುತ್ತಾ ಅವರನ್ನ ಹೆದರಿಸಲು ಪ್ರಯತ್ನಿಸುತ್ತದೆ. ಮರಿಯಾನೆಯ ಈ ವರ್ತನೆ ನೋಡಿದರೆ ಪ್ರವಾಸಿಗರನ್ನ ಬೆದರಿಸುವ ಪ್ರಯತ್ನ ಮಾಡುತ್ತಿರುವಂತೆಯೇ ಭಾಸವಾಗುತ್ತದೆ.

ಸಾಮಾನ್ಯವಾಗಿ ಸಫಾರಿಗೆ ತೆರಳಿದ ಪ್ರವಾಸಿಗರು ಕಾಡಾನೆಗಳು ವಾಹನಗಳ ಕಡೆಗೆ ಬಂದಾಗ ಆತಂಕಗೊಳ್ಳುವ ದೃಶ್ಯಗಳನ್ನ ನೋಡಿರುತ್ತೇವೆ. ಆದರೆ ಈ ವಿಡಿಯೋದಲ್ಲಿ ಪರಿಸ್ಥಿತಿ ಕೊಂಚ ವಿಭಿನ್ನವಾಗಿದೆ. ದೊಡ್ಡ ಕಾಡಾನೆಗಳ ಬದಲಿಗೆ ಪುಟ್ಟ ಮರಿಯಾನೆಯೇ ಪ್ರವಾಸಿಗರನ್ನ ಹೆದರಿಸಲು ಮುಂದಾಗಿದೆ. ಅದರ ಚಿಕ್ಕ ಗಾತ್ರ ಮತ್ತು ಮುದ್ದಾದ ವರ್ತನೆಯಿಂದ ಈ ದೃಶ್ಯ ಪ್ರವಾಸಿಗರಿಗೆ ಭಯ ಹುಟ್ಟಿಸುವ ಬದಲು ನಗು ತರಿಸಿದೆ.

ಮರಿಯಾನೆಯ ಈ ತುಂಟಾಟವನ್ನ ಕಂಡು ಪ್ರವಾಸಿಗರು ಜೋರಾಗಿ ನಗುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದು. ಅದರ ಪ್ರತಿಯೊಂದು ಚಲನವಲನವನ್ನ ಆಸಕ್ತಿಯಿಂದ ಗಮನಿಸಿದ ಪ್ರವಾಸಿಗರು, ಈ ಮುದ್ದಾದ ಕ್ಷಣಗಳನ್ನ ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಮರಿಯಾನೆಯ ವರ್ತನೆಗೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿನ ವಿಶೇಷ ಆಕರ್ಷಣೆಯಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವಿಡಿಯೋ

 

 

 

 

 

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

 

 

 

 

 

 

 

 

 

 

 

COMFORT TOUR | Travel Designer (@comfort_tour_dnipro) ರಿಂದ ಹಂಚಲಾದ ಪೋಸ್ಟ್

 ಈ ಮುದ್ದಾದ ದೃಶ್ಯವನ್ನ 'ಕಂಫರ್ಟ್ ಟೂರ್' (Comfort Tour) ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸಫಾರಿಗೆ ಬಂದ ಪ್ರವಾಸಿಗರನ್ನ ಮರಿಯಾನೆಯೊಂದು ಹೆದರಿಸಲು ಪ್ರಯತ್ನಿಸುತ್ತಿರುವ ಈ ವಿಡಿಯೋ ಇದೀಗ ಹೆಚ್ಚಿನ ವೀಕ್ಷಣೆಗಳನ್ನ ಪಡೆದುಕೊಂಡಿದೆ. ಮರಿಯಾನೆಯ ತುಂಟಾಟದ ದೃಶ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆಯುತ್ತಿದ್ದು, ಹಲವರು ಅದರ ಮುದ್ದಾದ ವರ್ತನೆಯನ್ನ ಮೆಚ್ಚಿಕೊಂಡಿದ್ದಾರೆ.

 

ವಿಡಿಯೋಗೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರ, ಮರಿಯಾನೆ ತುಂಬಾ ಮುದ್ದಾಗಿದೆ ಮತ್ತು ಬುದ್ಧಿವಂತರಂತೆ ವರ್ತಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೇವಲ 'ಕ್ಯೂಟ್' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಮರಿಯಾನೆಗಳು ಏನೇ ಮಾಡಿದರೂ ಮುದ್ದಾಗಿಯೇ ಕಾಣಿಸುತ್ತವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ನಲ್ಲಿ ಸಫಾರಿಗೆ ಬಂದ ಪ್ರವಾಸಿಗರನ್ನ ಹೆದರಿಸಲು ಪ್ರಯತ್ನಿಸಿದ ಈ ಪುಟ್ಟ ಮರಿಯಾನೆಯ ಮುದ್ದಾದ ತುಂಟಾಟ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ತನ್ನ ಹಿಂದೆ ತಾಯಾನೆ ಇರುವ ಧೈರ್ಯದಲ್ಲಿ ಪ್ರವಾಸಿಗರ ಮುಂದೆ ಓಡೋಡಿ ಬಂದು ತಲೆ ಅಲ್ಲಾಡಿಸುತ್ತಾ ಹೆದರಿಸಲು ಪ್ರಯತ್ನಿಸಿರುವ ಮರಿಯಾನೆಯ ದೃಶ್ಯ ನೋಡುಗರ ಮುಖದಲ್ಲಿ ನಗು ಮೂಡಿಸಿದೆ.

Add Zee News as a Preferred Source
TAGS:
Viral
Kannada News