• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /Viral News: ಕಾರ್ಪೊರೇಟ್ ಕೆಲಸ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ!

Viral News: ಕಾರ್ಪೊರೇಟ್ ಕೆಲಸ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ!

29 ವರ್ಷದ ಈ ಯುವಕನನ್ನ ಏಪ್ರಿಲ್ ತಿಂಗಳಲ್ಲಿ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು. ಆದರೆ ಕಂಪನಿಯಿಂದ ಒಂಬತ್ತು ತಿಂಗಳ ಸೆವರೆನ್ಸ್ ಪ್ಯಾಕೇಜ್ ದೊರೆತಿತ್ತು. ಜೊತೆಗೆ ಈಗಾಗಲೇ ಉಳಿತಾಯದ ಹಣವೂ ಇದ್ದುದರಿಂದ ತಕ್ಷಣದ ಆರ್ಥಿಕ ಸಂಕಷ್ಟ ಎದುರಾಗಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.

Written ByPuttaraj K Alur
Published: Nov 12, 2026, 18:33 IST|Updated: Nov 12, 2026, 18:58 IST
joinshare
Viral News: ಕಾರ್ಪೊರೇಟ್ ಕೆಲಸ ಕಳ್ಕೊಂಡು ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡ ಯುವಕ!
Image Credit: Corporate Job Loss

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Corporate Job Loss: ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಕಳೆದುಕೊಂಡರೆ ಮತ್ತೊಂದು ಉತ್ತಮ ಉದ್ಯೋಗ ಹುಡುಕುವುದು ಹಲವರ ಮುಂದಿರುವ ಸವಾಲು. ಹೊಸ ಕೆಲಸಕ್ಕಾಗಿ ಹಲವು ಕಂಪನಿಗಳಿಗೆ ಅರ್ಜಿ ಸಲ್ಲಿಸುವುದು, ಸಂದರ್ಶನಗಳನ್ನ ಎದುರಿಸುವುದು ಸಾಮಾನ್ಯ. ಆದರೆ ನಿರಂತರ ಪ್ರಯತ್ನದ ಬಳಿಕವೂ ಉದ್ಯೋಗ ಸಿಗದಿದ್ದಾಗ ಕೆಲವರು ವಿಭಿನ್ನ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ. ಇದಕ್ಕೆ ಉದಾಹರಣೆಯಾಗಿ 29 ವರ್ಷದ ಯುವಕನೊಬ್ಬನ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ ಈತ, ಹೊಸ ಕೆಲಸಕ್ಕಾಗಿ ನೂರಾರು ಅರ್ಜಿಗಳನ್ನ ಸಲ್ಲಿಸಿ, ಹಲವು ಸಂದರ್ಶನಗಳಲ್ಲಿ ಭಾಗವಹಿಸಿದರೂ ಕೆಲಸ ಸಿಗದ ಕಾರಣ ಕೊನೆಗೆ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಲು ನಿರ್ಧರಿಸಿದ್ದಾನೆ. ಈ ಯುವಕನ ಅನುಭವದ ಕುರಿತು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಕಾರ್ಪೊರೇಟ್ ಉದ್ಯೋಗದಿಂದ ವಜಾಗೊಂಡ ಬಳಿಕ ಎದುರಾದ ನಿರುದ್ಯೋಗದ ಅವಧಿ, ಉದ್ಯೋಗ ಹುಡುಕಾಟದ ಪ್ರಯತ್ನಗಳು ಹಾಗೂ ಮಾನಸಿಕ ಒತ್ತಡದ ಬಗ್ಗೆ ಆತ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದಾನೆ.

ಏಪ್ರಿಲ್‌ನಲ್ಲಿ ಕೆಲಸ ಕಳೆದುಕೊಂಡಿದ್ದ ಯುವಕ

29 ವರ್ಷದ ಈ ಯುವಕನನ್ನ ಏಪ್ರಿಲ್ ತಿಂಗಳಲ್ಲಿ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು. ಆದರೆ ಕಂಪನಿಯಿಂದ ಒಂಬತ್ತು ತಿಂಗಳ ಸೆವರೆನ್ಸ್ ಪ್ಯಾಕೇಜ್ ದೊರೆತಿತ್ತು. ಜೊತೆಗೆ ಈಗಾಗಲೇ ಉಳಿತಾಯದ ಹಣವೂ ಇದ್ದುದರಿಂದ ತಕ್ಷಣದ ಆರ್ಥಿಕ ಸಂಕಷ್ಟ ಎದುರಾಗಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ಆದರೆ ಕೆಲಸ ಕಳೆದುಕೊಂಡ ನಂತರದ ದಿನಗಳು ಆತನಿಗೆ ಸುಲಭವಾಗಿರಲಿಲ್ಲ. ಸುಮಾರು ನಾಲ್ಕು ತಿಂಗಳು ಉದ್ಯೋಗವಿಲ್ಲದೆ ಮನೆಯಲ್ಲಿಯೇ ಉಳಿಯಬೇಕಾಯಿತು. ಈ ಅವಧಿಯಲ್ಲಿ ಹೊಸ ಕೆಲಸಕ್ಕಾಗಿ ನಿರಂತರ ಪ್ರಯತ್ನ ನಡೆಸಿದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. 200ಕ್ಕೂ ಹೆಚ್ಚು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದ ಆತ, 15ಕ್ಕೂ ಅಧಿಕ ಸಂದರ್ಶನಗಳಲ್ಲಿಯೂ ಭಾಗವಹಿಸಿದ್ದ. ಆದರೂ ಯಾವುದೇ ಕಂಪನಿಯಿಂದ ಉದ್ಯೋಗದ ಅವಕಾಶ ದೊರೆಯಲಿಲ್ಲ.

ನಿರುದ್ಯೋಗದಿಂದ ಮಾನಸಿಕ ಒತ್ತಡ

ಕೆಲಸ ಇಲ್ಲದ ನಾಲ್ಕು ತಿಂಗಳ ಅವಧಿಯಲ್ಲಿ ತನ್ನ ದಿನಚರಿಯೇ ಬದಲಾಗಿತ್ತು ಎಂದು ಯುವಕ ವಿವರಿಸಿದ್ದಾನೆ. ಪ್ರತಿದಿನ ಕೆಲಸಕ್ಕೆ ಹೋಗುವುದು, ನಿಗದಿತ ಸಮಯದಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆತನ ಜೀವನದ ಭಾಗವಾಗಿತ್ತು. ಆದರೆ ಉದ್ಯೋಗ ಕಳೆದುಕೊಂಡ ಬಳಿಕ ದಿನವಿಡೀ ಮನೆಯಲ್ಲಿ ಇರುವ ಪರಿಸ್ಥಿತಿ ಎದುರಾಯಿತು. ಉದ್ಯೋಗ ಹುಡುಕಲು ನಿರಂತರ ಪ್ರಯತ್ನಿಸಿದರೂ ಫಲಿತಾಂಶ ಸಿಗದಿರುವುದು ಆತನ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿತು. ಕೆಲಸವಿಲ್ಲದೆ ಮನೆಯಲ್ಲಿ ಕಾಲ ಕಳೆಯುವುದು ಕಷ್ಟವಾಗತೊಡಗಿತು. ಈ ಸಂದರ್ಭದಲ್ಲಿ ಹಣಕ್ಕಿಂತಲೂ ಮತ್ತೆ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವೆಂದು ಆತ ಭಾವಿಸಿದ್ದಾನೆ.

ಗಂಟೆಗೆ 11 ಡಾಲರ್ ಸಂಬಳದ ಪಾತ್ರೆ ತೊಳೆಯುವ ಕೆಲಸ

ಇದೀಗ ಯುವಕ ಗಂಟೆಗೆ 11 ಡಾಲರ್ ವೇತನ ನೀಡುವ ಅರೆಕಾಲಿಕ ಕೆಲಸಕ್ಕೆ ಸೇರಲು ನಿರ್ಧರಿಸಿದ್ದಾನೆ. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು ಸುಮಾರು 1,031 ರೂಪಾಯಿಗಳಾಗುತ್ತದೆ. ವಿಶೇಷವೆಂದರೆ ಈ ಕೆಲಸ ಕಾರ್ಪೊರೇಟ್ ಹುದ್ದೆಯಲ್ಲ. ಬದಲಾಗಿ ಪಾತ್ರೆ ತೊಳೆಯುವ ಕೆಲಸವಾಗಿದೆ. ತನ್ನ ಬಳಿ ಉಳಿತಾಯದ ಹಣವಿದೆ, ತುರ್ತು ಸಂದರ್ಭಗಳಿಗಾಗಿ ಹಣವನ್ನ ಕೂಡಿಟ್ಟಿದ್ದೇನೆ. ಹೀಗಾಗಿ ಈ ನಿರ್ಧಾರವನ್ನ ಕೇವಲ ಹಣ ಗಳಿಸುವ ಉದ್ದೇಶದಿಂದ ತೆಗೆದುಕೊಂಡಿಲ್ಲವೆಂದು ಆತ ಪೋಸ್ಟ್‌ನಲ್ಲಿ ತಿಳಿಸಿದ್ದಾನೆ. ಮುಂದಿನ ವಾರದಿಂದ ಪಾತ್ರೆ ತೊಳೆಯುವ ಕೆಲಸ ಆರಂಭಿಸುವುದಾಗಿ ಹೇಳಿಕೊಂಡಿದ್ದಾನೆ. ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ ಬಳಿಕ ಮತ್ತೊಂದು ಕಾರ್ಪೊರೇಟ್ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಯಶಸ್ಸು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಬೇರೆ ರೀತಿಯ ಕೆಲಸವಾದರೂ ಸರಿ, ದಿನಚರಿಯಲ್ಲಿ ಮತ್ತೆ ಚಟುವಟಿಕೆ ಇರಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ವಿವರಿಸಿದ್ದಾನೆ.

ಯುವಕನ ನಿರ್ಧಾರಕ್ಕೆ ನೆಟ್ಟಿಗರ ಪ್ರತಿಕ್ರಿಯೆ

ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಹೆಚ್ಚಿನ ಗಮನ ಸೆಳೆದಿದೆ. ಯುವಕನ ನಿರ್ಧಾರಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ನಿರ್ಧಾರದಿಂದ ತೃಪ್ತಿ ಇದ್ದರೆ ಆ ಕೆಲಸವನ್ನ ಮುಂದುವರಿಸುವಂತೆ ಒಬ್ಬ ಬಳಕೆದಾರ ಸಲಹೆ ನೀಡಿದ್ದಾರೆ. ಮತ್ತೊಬ್ಬರು ಆತನ ಅನುಭವಕ್ಕೆ ತಕ್ಕ ಉತ್ತಮ ಉದ್ಯೋಗ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಧೈರ್ಯ ತುಂಬಿದ್ದಾರೆ. ಇನ್ನೂ ಕೆಲವರು ಯಾವ ಕೆಲಸ ಮಾಡಿದರೂ ಪ್ರಾಮಾಣಿಕವಾಗಿ ಮಾಡುವುದು ಮುಖ್ಯವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಕಾರ್ಪೊರೇಟ್ ಉದ್ಯೋಗ ಕಳೆದುಕೊಂಡ ಬಳಿಕ 200ಕ್ಕೂ ಹೆಚ್ಚು ಅರ್ಜಿಗಳನ್ನ ಸಲ್ಲಿಸಿ, 15ಕ್ಕೂ ಅಧಿಕ ಸಂದರ್ಶನಗಳನ್ನ ಎದುರಿಸಿದರೂ ಕೆಲಸ ಸಿಗದ ಯುವಕನ ಈ ನಿರ್ಧಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಗಂಟೆಗೆ 11 ಡಾಲರ್ ವೇತನದ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಲು ಮುಂದಾಗಿರುವ ಆತನ ಕಥೆ ಹಲವರ ಗಮನ ಸೆಳೆದಿದೆ.

Add Zee News as a Preferred Source
TAGS:
Viral
Kannada News