• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಕೇವಲ ₹15,499ಕ್ಕೆ 43 ಇಂಚಿನ QLED Smart TV ಮನೆಗೆ ತನ್ನಿ; ಬಜೆಟ್‌ ಬೆಲೆಗೆ ಪ್ರೀಮಿಯಂ ಫೀಚರ್ಸ್‌!

ಕೇವಲ ₹15,499ಕ್ಕೆ 43 ಇಂಚಿನ QLED Smart TV ಮನೆಗೆ ತನ್ನಿ; ಬಜೆಟ್‌ ಬೆಲೆಗೆ ಪ್ರೀಮಿಯಂ ಫೀಚರ್ಸ್‌!

ಈ ಟಿವಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ Android TV ಪ್ಲಾಟ್‌ಫಾರ್ಮ್‌. ಇದರ ಮೂಲಕ ಸ್ಮಾರ್ಟ್‌ ಟಿವಿ ಅನುಭವ ಪಡೆಯಬಹುದು. ಉತ್ಪನ್ನ ಪಟ್ಟಿಯ ಪ್ರಕಾರ Prime Video, YouTube, Zee5, Plex, YuppTV, Eros Now ಮತ್ತು Al Jazeera ಸೇರಿದಂತೆ ಹಲವು ಅಪ್ಲಿಕೇಶನ್‌ಗಳಿಗೆ ಸಪೋರ್ಟ್‌ ಇದೆ.

Reported ByPuttaraj K AlurEdited ByPuttaraj K Alur
Published: Sep 20, 2026, 08:22 PM IST|Updated: Sep 20, 2026, 08:32 PM IST
joinshare
ಕೇವಲ ₹15,499ಕ್ಕೆ 43 ಇಂಚಿನ QLED Smart TV ಮನೆಗೆ ತನ್ನಿ; ಬಜೆಟ್‌ ಬೆಲೆಗೆ ಪ್ರೀಮಿಯಂ ಫೀಚರ್ಸ್‌!
Image Credit: VW 43 Inch QLED Smart TV

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

VW 43 Inch QLED Smart TV: ಮನೆಗೆ ಹೊಸ ಸ್ಮಾರ್ಟ್‌ ಟಿವಿ ಖರೀದಿಸಲು ಯೋಚಿಸುತ್ತಿರುವವರಿಗೆ ಕಡಿಮೆ ಬೆಲೆಯಲ್ಲಿ ದೊಡ್ಡ ಸ್ಕ್ರೀನ್‌ ಹೊಂದಿರುವ ಟಿವಿಗಳು ಸಾಕಷ್ಟು ಆಯ್ಕೆಗಳನ್ನ ನೀಡುತ್ತಿವೆ. ಇದೀಗ VW Spectra Series 43-inch Full HD Smart QLED Android TV (VW43AQ3) ಗಮನ ಸೆಳೆಯುತ್ತಿದೆ. 43 ಇಂಚಿನ ದೊಡ್ಡ ಡಿಸ್ಪ್ಲೇ, QLED ತಂತ್ರಜ್ಞಾನ, Android TV, HDR10 ಸಪೋರ್ಟ್‌ ಸೇರಿದಂತೆ ಹಲವು ಫೀಚರ್‌ಗಳನ್ನ ಹೊಂದಿರುವ ಈ ಟಿವಿಯ ಮೂಲ ಬೆಲೆ ₹29,999 ಆಗಿದ್ದರೂ, ಅಮೆಜಾನ್‌ನಲ್ಲಿ ನೀಡಿರುವ ಆಫರ್‌ ಬೆಲೆ ಕೇವಲ ₹15,499 ಇದೆ. ಅಂದರೆ MRPಗೆ ಹೋಲಿಸಿದರೆ ಸುಮಾರು 48% ರಿಯಾಯಿತಿಯಲ್ಲಿ ಸಿಗುತ್ತಿದೆ. ಕಡಿಮೆ ಬಜೆಟ್‌ನಲ್ಲಿ ದೊಡ್ಡ ಸ್ಕ್ರೀನ್‌ ಹೊಂದಿರುವ ಸ್ಮಾರ್ಟ್‌ ಟಿವಿ ಹುಡುಕುತ್ತಿರುವವರಿಗೆ ಈ ಮಾದರಿ ಗಮನಾರ್ಹ ಆಯ್ಕೆಯಾಗಬಹುದು.

43 ಇಂಚಿನ QLED ಡಿಸ್ಪ್ಲೇ

VW43AQ3 ಟಿವಿಯಲ್ಲಿ 43 ಇಂಚಿನ QLED ಡಿಸ್ಪ್ಲೇ ನೀಡಲಾಗಿದೆ. ಇದರ ರೆಸಲ್ಯೂಶನ್‌ Full HD ಅಂದರೆ 1920×1080 ಪಿಕ್ಸೆಲ್‌ಗಳು. 60Hz ರಿಫ್ರೆಶ್‌ ರೇಟ್‌ ಹೊಂದಿರುವುದರಿಂದ ಸಾಮಾನ್ಯ ಟಿವಿ ಕಾರ್ಯಕ್ರಮಗಳು, ಸಿನಿಮಾಗಳು, ವೆಬ್‌ ಸೀರಿಸ್‌ ಹಾಗೂ ವಿಡಿಯೋ ಸ್ಟ್ರೀಮಿಂಗ್‌ಗೆ ಬಳಸಬಹುದು. ಟಿವಿಯಲ್ಲಿ HDR10 ಸಪೋರ್ಟ್‌ ಕೂಡ ನೀಡಲಾಗಿದೆ. HDR ತಂತ್ರಜ್ಞಾನವು ಬೆಂಬಲಿತ ಕಂಟೆಂಟ್‌ನಲ್ಲಿ ಬೆಳಕು ಮತ್ತು ಕತ್ತಲೆಯ ಭಾಗಗಳ ನಡುವಿನ ವ್ಯತ್ಯಾಸವನ್ನ ಉತ್ತಮವಾಗಿ ತೋರಿಸಲು ಸಹಾಯ ಮಾಡುತ್ತದೆ. ಕಂಪನಿಯು ಈ ಮಾದರಿಯಲ್ಲಿ IPE Technology, True Display, Quantum Lucent ಮತ್ತು Cinema Zoom ಮುಂತಾದ ಡಿಸ್ಪ್ಲೇ ಫೀಚರ್‌ಗಳನ್ನ ನೀಡಿರುವುದಾಗಿ ತಿಳಿಸಿದೆ. ಅಲ್ಲದೆ 16.7 ಮಿಲಿಯನ್‌ ಬಣ್ಣಗಳನ್ನ ಪ್ರದರ್ಶಿಸುವ ಸಾಮರ್ಥ್ಯವನ್ನ ಹೊಂದಿದೆ ಎಂದು ಉತ್ಪನ್ನ ವಿವರದಲ್ಲಿ ಹೇಳಲಾಗಿದೆ.

Android TV ಮತ್ತು Smart Features

ಈ ಟಿವಿಯ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ Android TV ಪ್ಲಾಟ್‌ಫಾರ್ಮ್‌. ಇದರ ಮೂಲಕ ಸ್ಮಾರ್ಟ್‌ ಟಿವಿ ಅನುಭವ ಪಡೆಯಬಹುದು. ಉತ್ಪನ್ನ ಪಟ್ಟಿಯ ಪ್ರಕಾರ Prime Video, YouTube, Zee5, Plex, YuppTV, Eros Now ಮತ್ತು Al Jazeera ಸೇರಿದಂತೆ ಹಲವು ಅಪ್ಲಿಕೇಶನ್‌ಗಳಿಗೆ ಸಪೋರ್ಟ್‌ ಇದೆ. ಇದರೊಂದಿಗೆ Miracast ಮತ್ತು Screen Mirroring ಸೌಲಭ್ಯವೂ ಇದೆ. ಇದರಿಂದ ಮೊಬೈಲ್‌ ಫೋನ್‌ನಲ್ಲಿರುವ ಫೋಟೋ, ವಿಡಿಯೋ ಅಥವಾ ಇತರ ಕಂಟೆಂಟ್‌ಗಳನ್ನ ದೊಡ್ಡ ಟಿವಿ ಸ್ಕ್ರೀನ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ. ಟಿವಿಯಲ್ಲಿ Quad Core Processor ನೀಡಲಾಗಿದ್ದು, ಸ್ಮಾರ್ಟ್‌ ಟಿವಿಯ ಸಾಮಾನ್ಯ ಕಾರ್ಯಗಳನ್ನ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

2 HDMI ಮತ್ತು 2 USB ಪೋರ್ಟ್‌

ಕನೆಕ್ಟಿವಿಟಿ ವಿಚಾರದಲ್ಲೂ VW43AQ3 ಹಲವು ಆಯ್ಕೆಗಳನ್ನ ನೀಡುತ್ತದೆ. ಉತ್ಪನ್ನ ವಿವರದ ಪ್ರಕಾರ ಇದರಲ್ಲಿ 2 HDMI 2.0 ಮತ್ತು 1 HDMI 2.1 ಪೋರ್ಟ್‌ಗಳು ಇವೆ. ಇದರಿಂದ ಸೆಟ್‌ಟಾಪ್‌ ಬಾಕ್ಸ್‌, Blu-ray Player ಅಥವಾ ಗೇಮಿಂಗ್‌ ಕನ್ಸೋಲ್‌ಗಳನ್ನ ಸಂಪರ್ಕಿಸಬಹುದು. ಇದರೊಂದಿಗೆ 2 USB 2.0 ಪೋರ್ಟ್‌ಗಳು ಕೂಡ ಇವೆ. USB ಡ್ರೈವ್‌ ಅಥವಾ ಇತರ ಹೊಂದಾಣಿಕೆಯ ಸಾಧನಗಳನ್ನ ಸಂಪರ್ಕಿಸಲು ಇವುಗಳನ್ನ ಬಳಸಬಹುದು. Wi-Fi ಮತ್ತು Ethernet ಕನೆಕ್ಟಿವಿಟಿಯೂ ಲಭ್ಯವಿದೆ. ಹೀಗಾಗಿ ಮನೆಯಲ್ಲಿ ಇಂಟರ್‌ನೆಟ್‌ ಸಂಪರ್ಕದ ಮೂಲಕ ವಿವಿಧ ಸ್ಟ್ರೀಮಿಂಗ್‌ ಸೇವೆಗಳನ್ನ ಬಳಸಬಹುದು.

24W ಸೌಂಡ್‌ ಔಟ್‌ಪುಟ್‌

ಚಿತ್ರದ ಜೊತೆಗೆ ಧ್ವನಿ ಕೂಡ ಮುಖ್ಯ. ಈ ಟಿವಿಯಲ್ಲಿ 24W ಸೌಂಡ್‌ ಔಟ್‌ಪುಟ್‌ ನೀಡಲಾಗಿದೆ. Box Speakers ಮತ್ತು Stereo Surround Sound ಸೌಲಭ್ಯವಿದೆ ಎಂದು ಉತ್ಪನ್ನ ವಿವರದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ 5 Sound Modes ಲಭ್ಯವಿದ್ದು, ಬಳಕೆದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಧ್ವನಿ ಮೋಡ್‌ ಬದಲಾಯಿಸಬಹುದು. ಸಿನಿಮಾ, ಸುದ್ದಿ, ಸಂಗೀತ ಅಥವಾ ಸಾಮಾನ್ಯ ಟಿವಿ ವೀಕ್ಷಣೆಗೆ ವಿಭಿನ್ನ ರೀತಿಯ ಸೌಂಡ್‌ ಅನುಭವ ಪಡೆಯಲು ಈ ಆಯ್ಕೆಗಳು ಸಹಾಯ ಮಾಡಬಹುದು.

ಬೆಲೆ ಎಷ್ಟು?

ಈ VW 43-inch QLED Smart TVಯ ₹29,999 ಎಂದು ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ನೀಡಿರುವ ಆಫರ್‌ ಬೆಲೆ ₹15,499 ಆಗಿದೆ. ಅಂದರೆ MRPಗೆ ಹೋಲಿಸಿದರೆ ₹14,500ರಷ್ಟು ವ್ಯತ್ಯಾಸವಿದ್ದು, ಸುಮಾರು 48% ರಿಯಾಯಿತಿಯಲ್ಲಿ ಸಿಗಲಿದೆ. ಆದರೆ ಆನ್‌ಲೈನ್‌ ಶಾಪಿಂಗ್‌ನಲ್ಲಿ ಬೆಲೆ ಮತ್ತು ರಿಯಾಯಿತಿ ಆಫರ್‌ಗಳು ಸಮಯ, ಮಾರಾಟಗಾರ ಮತ್ತು ಲಭ್ಯತೆಯ ಆಧಾರದ ಮೇಲೆ ಬದಲಾಗಬಹುದು. ಆದ್ದರಿಂದ ಖರೀದಿಸುವ ಮೊದಲು ಅಂತಿಮ ಬೆಲೆ, ವಾರಂಟಿ, ರಿಟರ್ನ್‌ ಪಾಲಿಸಿ ಮತ್ತು ಡೆಲಿವರಿ ವಿವರಗಳನ್ನ ಪರಿಶೀಲಿಸುವುದು ಸೂಕ್ತ.

ಬಾಕ್ಸ್‌ನಲ್ಲಿ ಏನು ಸಿಗುತ್ತದೆ?

ಟಿವಿಯೊಂದಿಗೆ 1 TV Unit, 1 Remote Control, 1 Power Cord, 1 User Manual, 2 Stands ಮತ್ತು 4 Stand Screws ನೀಡಲಾಗುತ್ತದೆ ಎಂದು ಉತ್ಪನ್ನ ವಿವರದಲ್ಲಿ ತಿಳಿಸಲಾಗಿದೆ. 43 ಇಂಚಿನ ದೊಡ್ಡ ಸ್ಕ್ರೀನ್‌, QLED ಡಿಸ್ಪ್ಲೇ, Full HD ರೆಸಲ್ಯೂಶನ್‌, HDR10, Android TV, ಹಲವು ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು, Screen Mirroring, Wi-Fi, Ethernet, HDMI ಮತ್ತು USB ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್‌ಗಳು ಈ ಮಾದರಿಯಲ್ಲಿವೆ.

ಒಟ್ನಲ್ಲಿ ₹15,499ರ ಆಫರ್‌ ಬೆಲೆಯಲ್ಲಿ 43 ಇಂಚಿನ QLED Smart TV ಹುಡುಕುತ್ತಿರುವವರಿಗೆ VW43AQ3 ಒಂದು ಗಮನಾರ್ಹ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಖರೀದಿಗೂ ಮುನ್ನ ಪ್ರಸ್ತುತ ಬೆಲೆ, ನಿಜವಾದ ಡಿಸ್ಪ್ಲೇ ಸ್ಪೆಸಿಫಿಕೇಶನ್‌, ವಾರಂಟಿ ಮತ್ತು ಮಾರಾಟಗಾರರ ವಿವರಗಳನ್ನ ಖಚಿತಪಡಿಸಿಕೊಳ್ಳುವುದು ಉತ್ತಮ.

Add Zee News as a Preferred Source
TAGS:
Tech
Kannada News