• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಕೇವಲ 30 ದಿನ ಸಕ್ಕರೆ ತಿನ್ನುವುದನ್ನ ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

ಕೇವಲ 30 ದಿನ ಸಕ್ಕರೆ ತಿನ್ನುವುದನ್ನ ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

30 ದಿನಗಳ ಕಾಲ ಹೆಚ್ಚುವರಿ ಸಕ್ಕರೆಯನ್ನ ಕಡಿಮೆ ಮಾಡುವುದರಿಂದ ತೂಕ ನಿಯಂತ್ರಣ, ಹಲ್ಲುಗಳ ಆರೋಗ್ಯ ಮತ್ತು ಒಟ್ಟಾರೆ ಆಹಾರ ಪದ್ಧತಿ ಸುಧಾರಿಸಲು ಸಹಾಯವಾಗಬಹುದು. ಸಿಹಿ ಪಾನೀಯಗಳು, ಸಿಹಿತಿಂಡಿ ಹಾಗೂ ಪ್ಯಾಕೇಜ್ಡ್ ಆಹಾರಗಳ ಬದಲು ನೈಸರ್ಗಿಕ ಮತ್ತು ಸಮತೋಲಿತ ಆಹಾರ ಸೇವಿಸುವುದು ಉತ್ತಮ.

Written ByPuttaraj K Alur
Published: Sep 19, 2026, 10:12 PM IST|Updated: Sep 19, 2026, 10:41 PM IST
joinshare
ಕೇವಲ 30 ದಿನ ಸಕ್ಕರೆ ತಿನ್ನುವುದನ್ನ ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?
Image Credit: Sugar Free Diet

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Sugar Free Diet: ಸಕ್ಕರೆ ನಮ್ಮ ದಿನನಿತ್ಯದ ಆಹಾರದ ಪ್ರಮುಖ ಭಾಗವಾಗಿದ್ದರೂ, ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಸೇವಿಸುವುದು ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಬಹುದು. ಚಹಾ, ಕಾಫಿ, ಸಿಹಿತಿಂಡಿ, ಬಿಸ್ಕತ್‌, ಕೇಕ್‌, ತಂಪು ಪಾನೀಯಗಳಷ್ಟೇ ಅಲ್ಲದೆ ಹಲವು ಪ್ಯಾಕೇಜ್ಡ್‌ ಆಹಾರಗಳಲ್ಲಿಯೂ ಹೆಚ್ಚುವರಿ ಸಕ್ಕರೆ ಅಡಗಿರಬಹುದು. ಹೀಗಾಗಿ ಆಹಾರದಲ್ಲಿ added sugar ಅಥವಾ free sugar ಪ್ರಮಾಣವನ್ನ ಕಡಿಮೆ ಮಾಡುವುದು ಆರೋಗ್ಯಕರ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯೂ free sugars ಸೇವನೆಯನ್ನ ಮಿತಿಗೊಳಿಸುವಂತೆ ಶಿಫಾರಸು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ‘30-Day Sugar-Free Challenge’ ಮೂಲಕ ಒಂದು ತಿಂಗಳ ಕಾಲ ಹೆಚ್ಚುವರಿ ಸಕ್ಕರೆಯನ್ನ ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾದರೆ 30 ದಿನಗಳ ಕಾಲ ಸಕ್ಕರೆ ಸೇವನೆಯನ್ನ ಕಡಿಮೆ ಮಾಡಿದರೆ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳನ್ನ ನಿರೀಕ್ಷಿಸಬಹುದು?

ಸಕ್ಕರೆ ಕಡಿಮೆ ಮಾಡಿದರೆ ಮೊದಲ ಬದಲಾವಣೆ ಆಹಾರ ಪದ್ಧತಿಯಲ್ಲಿ ಮೊದಲ ಕೆಲವು ದಿನಗಳಲ್ಲಿ ಸಿಹಿ ತಿನ್ನುವ ಬಯಕೆ ಹೆಚ್ಚಾಗಬಹುದು. ಪ್ರತಿದಿನ ಚಹಾ ಅಥವಾ ಕಾಫಿಗೆ ಸಕ್ಕರೆ ಹಾಕುವ ಅಭ್ಯಾಸವಿದ್ದರೆ, ಆರಂಭದಲ್ಲಿ ರುಚಿ ಬದಲಾಗಿರುವಂತೆ ಅನಿಸಬಹುದು. ಸಿಹಿತಿಂಡಿ ಅಥವಾ ಸಕ್ಕರೆ ಇರುವ ಪಾನೀಯಗಳ ಅಭ್ಯಾಸವಿದ್ದವರಿಗೂ ಇದೇ ಅನುಭವವಾಗಬಹುದು. ಆದರೆ ಕೆಲವು ದಿನಗಳ ನಂತರ ನಾಲಿಗೆ ಕಡಿಮೆ ಸಿಹಿಯ ರುಚಿಗೆ ಹೊಂದಿಕೊಳ್ಳಬಹುದು. ಇದರಿಂದ ಹೆಚ್ಚು ಸಕ್ಕರೆ ಇರುವ ಆಹಾರಗಳ ಬದಲು ಹಣ್ಣುಗಳು, ಬೀಜಗಳು ಅಥವಾ ಸಕ್ಕರೆ ಸೇರಿಸದ ಆರೋಗ್ಯಕರ ಆಹಾರವನ್ನ ಆಯ್ಕೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದು

ಸಕ್ಕರೆ ಹೆಚ್ಚಿರುವ ಆಹಾರ ಮತ್ತು ಪಾನೀಯಗಳು ಹೆಚ್ಚುವರಿ ಕ್ಯಾಲೊರಿಗಳನ್ನ ನೀಡಬಹುದು. ವಿಶೇಷವಾಗಿ ಸಾಫ್ಟ್‌ ಡ್ರಿಂಕ್ಸ್‌, ಸಿಹಿ ಪಾನೀಯಗಳು, ಕೇಕ್‌, ಪೇಸ್ಟ್ರಿ ಮತ್ತು ಸಿಹಿತಿಂಡಿಗಳ ಸೇವನೆಯನ್ನ ಕಡಿಮೆ ಮಾಡಿದರೆ ಒಟ್ಟು ಕ್ಯಾಲೊರಿ ಸೇವನೆಯೂ ಕಡಿಮೆಯಾಗಬಹುದು. ಇದರ ಪರಿಣಾಮ ಕೆಲವರಿಗೆ ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದು. ಆದರೆ ಕೇವಲ ಸಕ್ಕರೆ ಬಿಟ್ಟರೆ ತೂಕ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ ಎಂಬುದಿಲ್ಲ. ಒಟ್ಟಾರೆ ಆಹಾರ, ದೈಹಿಕ ಚಟುವಟಿಕೆ, ನಿದ್ರೆ ಮತ್ತು ದಿನದ ಒಟ್ಟು ಕ್ಯಾಲೊರಿ ಸೇವನೆಯೂ ಪ್ರಮುಖ ಪಾತ್ರ ವಹಿಸುತ್ತವೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣದ ದೃಷ್ಟಿಯಿಂದ ಉಪಯುಕ್ತ

ಹೆಚ್ಚಿನ ಪ್ರಮಾಣದ free sugar ಸೇವನೆಯನ್ನ ಕಡಿಮೆ ಮಾಡುವುದು ಆರೋಗ್ಯಕರ ಆಹಾರದ ಭಾಗವಾಗಿದೆ. WHO ಪ್ರಕಾರ 2,000 ಕ್ಯಾಲೊರಿಗಳ ಆಹಾರ ಸೇವಿಸುವ ಆರೋಗ್ಯಕರ ವಯಸ್ಕರಲ್ಲಿ free sugars ದಿನದ ಒಟ್ಟು ಶಕ್ತಿಯ 10%ಕ್ಕಿಂತ ಕಡಿಮೆ ಇರಬೇಕು; ಸುಮಾರು 50 ಗ್ರಾಂ ಅಥವಾ 12 ಟೀ ಚಮಚಕ್ಕಿಂತ ಕಡಿಮೆ ಎನ್ನುವುದು ಸಾಮಾನ್ಯ ಮಾರ್ಗಸೂಚಿಯಾಗಿದೆ. ಇನ್ನೂ ಕಡಿಮೆ, ಅಂದರೆ 5% ಅಥವಾ ಅದಕ್ಕಿಂತ ಕಡಿಮೆ ಮಾಡಿದರೆ ಹೆಚ್ಚುವರಿ ಆರೋಗ್ಯ ಪ್ರಯೋಜನ ದೊರೆಯಬಹುದು ಎಂದು WHO ತಿಳಿಸಿದೆ. ಆದರೆ ಮಧುಮೇಹ ಅಥವಾ ಇತರ ಆರೋಗ್ಯ ಸಮಸ್ಯೆ ಇರುವವರು ಆಹಾರದಲ್ಲಿ ದೊಡ್ಡ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯುವುದು ಉತ್ತಮ.

ಹಲ್ಲುಗಳ ಆರೋಗ್ಯಕ್ಕೂ ಪ್ರಯೋಜನ

ಹೆಚ್ಚಿನ free sugar ಸೇವನೆಯು ಹಲ್ಲುಗಳ ಆರೋಗ್ಯಕ್ಕೂ ಸಮಸ್ಯೆ ಉಂಟುಮಾಡಬಹುದು. ಸಕ್ಕರೆ ಸೇವನೆಯನ್ನ ಕಡಿಮೆ ಮಾಡುವುದರಿಂದ ಹಲ್ಲುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಅಪಾಯವನ್ನ ಕಡಿಮೆ ಮಾಡಲು ಸಹಾಯವಾಗಬಹುದು. WHOಯ sugar guideline ಕೂಡ ಸಕ್ಕರೆ ಸೇವನೆಯನ್ನ ಕಡಿಮೆ ಮಾಡುವ ಪ್ರಮುಖ ಉದ್ದೇಶಗಳಲ್ಲಿ dental caries ಅಪಾಯವನ್ನ ಕಡಿಮೆ ಮಾಡುವುದನ್ನೂ ಒಳಗೊಂಡಿದೆ.  

ಪ್ಯಾಕೇಜ್ಡ್ ಆಹಾರದ ಲೇಬಲ್ ಓದುವ ಅಭ್ಯಾಸ ಬೆಳೆಸಿ

30 ದಿನಗಳ ಸಕ್ಕರೆ ಕಡಿಮೆ ಮಾಡುವ ಸವಾಲಿನ ಸಂದರ್ಭದಲ್ಲಿ ಕೇವಲ ಚಹಾ ಅಥವಾ ಕಾಫಿಗೆ ಸಕ್ಕರೆ ಹಾಕುವುದನ್ನ ನಿಲ್ಲಿಸುವುದಷ್ಟೇ ಸಾಕಾಗುವುದಿಲ್ಲ. ಪ್ಯಾಕೇಜ್ಡ್‌ ಆಹಾರಗಳ ಲೇಬಲ್‌ಗಳನ್ನ ಪರಿಶೀಲಿಸುವ ಅಭ್ಯಾಸವೂ ಮುಖ್ಯ. ಸಿಹಿ ಬಿಸ್ಕತ್‌, ಸೀರಿಯಲ್‌, ಫ್ಲೇವರ್ಡ್‌ ಯೋಗರ್ಟ್‌, ಸಾಸ್‌, ಸಿಹಿ ಪಾನೀಯಗಳು ಮತ್ತು ಇತರ ಸಂಸ್ಕರಿತ ಆಹಾರಗಳಲ್ಲಿ ಹೆಚ್ಚುವರಿ ಸಕ್ಕರೆ ಇರಬಹುದು. ಆದ್ದರಿಂದ ಆಹಾರ ಖರೀದಿಸುವಾಗ nutrition label ಪರಿಶೀಲಿಸಿ ಸಕ್ಕರೆ ಪ್ರಮಾಣವನ್ನ ಗಮನಿಸುವುದು ಉತ್ತಮ.

ಹಣ್ಣಿನ ಸಕ್ಕರೆ ಮತ್ತು added sugar ಒಂದೇ ಅಲ್ಲ

ಸಕ್ಕರೆ ಬಿಡುವ ಪ್ರಯತ್ನದಲ್ಲಿ ಹಣ್ಣುಗಳನ್ನೇ ಸಂಪೂರ್ಣವಾಗಿ ದೂರವಿಡುವ ಅಗತ್ಯವಿಲ್ಲ. WHO ಆರೋಗ್ಯಕರ ಆಹಾರದಲ್ಲಿ ಹಣ್ಣು, ತರಕಾರಿ, ಬೇಳೆಕಾಳು ಮತ್ತು whole grains ಮುಂತಾದ ವೈವಿಧ್ಯಮಯ ಆಹಾರಗಳನ್ನ ಸೇರಿಸುವಂತೆ ಸೂಚಿಸುತ್ತದೆ. ಆದರೆ ಹಣ್ಣಿನ ಜ್ಯೂಸ್‌ಗಳಲ್ಲಿ free sugar ಪ್ರಮಾಣ ಹೆಚ್ಚಿರಬಹುದಾದ್ದರಿಂದ ಅದರ ಸೇವನೆಯನ್ನೂ ಮಿತಿಗೊಳಿಸುವುದು ಸೂಕ್ತ.  

30 ದಿನಗಳ ಬಳಿಕ ಏನು ಮಾಡಬೇಕು?

ಒಂದು ತಿಂಗಳು ಸಕ್ಕರೆ ಕಡಿಮೆ ಮಾಡಿದ ನಂತರ ಮತ್ತೆ ಹಿಂದಿನ ಪ್ರಮಾಣದಲ್ಲಿ ಸಿಹಿ ಆಹಾರ ಸೇವಿಸುವ ಬದಲು, ದೀರ್ಘಕಾಲಕ್ಕೂ ಮಿತವಾದ ಆಹಾರ ಪದ್ಧತಿಯನ್ನ ಮುಂದುವರಿಸುವುದು ಮುಖ್ಯ. ಸಕ್ಕರೆಯನ್ನ ಸಂಪೂರ್ಣವಾಗಿ ಶಾಶ್ವತವಾಗಿ ನಿಲ್ಲಿಸುವುದಕ್ಕಿಂತ ಅಗತ್ಯಕ್ಕಿಂತ ಹೆಚ್ಚಿನ added/free sugar ಸೇವನೆಯನ್ನ ಕಡಿಮೆ ಮಾಡುವುದು ಹೆಚ್ಚು ಪ್ರಾಯೋಗಿಕ ವಿಧಾನವಾಗಬಹುದು.

ಒಟ್ನಲ್ಲಿ 30 ದಿನಗಳ sugar-free challenge ಅನ್ನ ತೂಕ ಇಳಿಸುವ ‘ಮ್ಯಾಜಿಕ್‌ ಪರಿಹಾರ’ ಎಂದು ಪರಿಗಣಿಸಬಾರದು. ಆದರೆ ಸಕ್ಕರೆ ಹೆಚ್ಚಿರುವ ಆಹಾರ ಮತ್ತು ಪಾನೀಯಗಳ ಸೇವನೆಯನ್ನ ಕಡಿಮೆ ಮಾಡಿ, ಸಮತೋಲಿತ ಆಹಾರ, ಸಾಕಷ್ಟು ದೈಹಿಕ ಚಟುವಟಿಕೆ ಮತ್ತು ಉತ್ತಮ ಜೀವನಶೈಲಿಯನ್ನ ಅಳವಡಿಸಿಕೊಳ್ಳಲು ಇದು ಒಂದು ಆರಂಭವಾಗಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

Add Zee News as a Preferred Source
TAGS:
Health Tips
Kannada News