• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಟೀಮ್‌ ಇಂಡಿಯಾಗೆ ವಿಶ್ವಕಪ್‌ನಲ್ಲಿ ಅದೃಷ್ಟ ತಂದು ಕೊಡುವ ಒಂದೇ ಒಂದು ತಂಡ ಅಂದ್ರೆ.. ಇದೇ

ಟೀಮ್‌ ಇಂಡಿಯಾಗೆ ವಿಶ್ವಕಪ್‌ನಲ್ಲಿ ಅದೃಷ್ಟ ತಂದು ಕೊಡುವ ಒಂದೇ ಒಂದು ತಂಡ ಅಂದ್ರೆ.. ಇದೇ

ಆಸ್ಟ್ರೇಲಿಯಾ ತಂಡದ ಪರ ಮ್ಯಾಟ್ ರೆನ್‌ಶಾ ಬಿರುಸಿನ ಹೋರಾಟ ಮಾಡಿದರೂ, ಜಿಂಬಾಬ್ವೆಯ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ಮುಂದೆ ಅವರು ಅಲುಗಾಡಿದರು. ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಜಿಂಬಾಬ್ವೆ ಆರಂಭದಲ್ಲೇ ಆಘಾತ ನೀಡಿತು.

Reported ByBhimappaEdited ByBhimappa
Published: Sep 12, 2026, 04:53 PM IST|Updated: Sep 17, 2026, 04:06 PM IST
joinshare
ಟೀಮ್‌ ಇಂಡಿಯಾಗೆ ವಿಶ್ವಕಪ್‌ನಲ್ಲಿ ಅದೃಷ್ಟ ತಂದು ಕೊಡುವ ಒಂದೇ ಒಂದು ತಂಡ ಅಂದ್ರೆ.. ಇದೇ
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕ್ರಿಕೆಟ್‌ ಎಂದರೆ ಇಂದು ವಿಶ್ವದಲ್ಲಿ ಭಾರೀ ಖ್ಯಾತಿ ಪಡೆದುಕೊಂಡಿದೆ. ಮೊದಲು ಕೇವಲ ಅಂತರಾಷ್ಟ್ರೀಯ ಕ್ರಿಕೆಟ್‌ ಅನ್ನು ಮಾತ್ರ ಆಡಿಸಲಾಗುತ್ತಿತ್ತು. ಆದರೆ ಈಗ ಐಪಿಎಲ್‌ನಂತಹ ಲೀಗ್‌ಗಳು ವಿಶ್ವದ ಎಲ್ಲೆಡೆ ಪ್ರಭಾವ ಬೀರಿದ್ದು ಕ್ರಿಕೆಟ್‌ನಲ್ಲಿ ಹೊಸತನವನ್ನು ಪರಿಚಯ ಮಾಡುತ್ತಿವೆ. ಇದು ಏನೇ ಇದ್ದರೂ ಕ್ರಿಕೆಟ್‌ನಲ್ಲಿ ಇದೊಂದು ಸಂಗತಿ ಹಲವು ವರ್ಷಗಳಿಂದ ಅಚ್ಚರಿಯನ್ನು ಮೂಡಿಸುತ್ತಿದೆ. ಇದು ಭಾರತ ತಂಡಕ್ಕೆ ಅದೃಷ್ಟ ಎಂದೇ ಭಾವಿಸಲಾಗುತ್ತಿದೆ. ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠ ಟೀಮ್‌ ಎಂದೇ ಆಸ್ಟ್ರೇಲಿಯಾ ತಂಡ ಖ್ಯಾತಿ ಪಡೆದುಕೊಂಡಿದೆ. ವಿಶ್ವಕಪ್‌ ಅಖಾಡಕ್ಕೆ ಇಳಿದರೆ ಆಸ್ಟ್ರೇಲಿಯಾ ತಂಡ ಟ್ರೋಫಿ ಗೆಲ್ಲುವವರೆಗೆ ವಾಪಸ್‌ ಆಗುತ್ತಿರಲಿಲ್ಲ. ಆದರೆ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ ಸೋತರೇ ಟೀಮ್‌ ಇಂಡಿಯಾಗೆ ಅದೃಷ್ಟವೋ..ಅದೃಷ್ಟವೋ..

2026ರ T20 ವಿಶ್ವಕಪ್‌ ಪಂದ್ಯದಲ್ಲೂ ಇದು ಸಾಬೀತು ಆಗಿದೆ. ಜಿಂಬಾಬ್ವೆ ತಂಡವೂ 2026ರ T20 ವಿಶ್ವಕಪ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಜಿಂಬಾಬ್ವೆ 23 ರನ್‌ಗಳಿಂದ ಸೋಲಿಸಿತು. ಇದರಿಂದ ಆಸ್ಟ್ರೇಲಿಯಾ ತಂಡ ಇಡೀ ಟೂರ್ನಿಯಿಂದ ಹೊರ ಬಿತ್ತು. ಇದು ಟೀಮ್‌ ಇಂಡಿಯಾಗೆ ಭಾರೀ ಅದೃಷ್ಟವನ್ನೇ ತಂದುಕೊಟ್ಟಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 169 ರನ್‌ಗಳ ಟಾರ್ಗೆಟ್‌ ನೀಡಿತ್ತು.

ಈ ಟಾರ್ಗೆಟ್‌ ಅನ್ನು ಚೇಸಿಂಗ್ ಮಾಡುವಾಗ ಆಸ್ಟ್ರೇಲಿಯಾ ತಂಡದ ಪರ ಮ್ಯಾಟ್ ರೆನ್‌ಶಾ ಬಿರುಸಿನ ಹೋರಾಟ ಮಾಡಿದರೂ, ಜಿಂಬಾಬ್ವೆಯ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ಮುಂದೆ ಅವರು ಅಲುಗಾಡಿದರು. ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ, ಜಿಂಬಾಬ್ವೆ ಆರಂಭದಲ್ಲೇ ಆಘಾತ ನೀಡಿತು. ಮೊದಲ 5 ಓವರ್‌ಗಳಲ್ಲಿ ಆಸ್ಟ್ರೇಲಿಯಾ ಕೇವಲ 29 ರನ್‌ಗಳಿಗೆ ಪ್ರಮುಖವಾದ 4 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಇದನ್ನೇ ಮುಂದುವರೆಸಿದ ಜಿಂಬಾಬ್ವೆ ಬೌಲರ್‌ಗಳು ಆಸ್ಟ್ರೇಲಿಯಾದ ಇಡೀ ಬ್ಯಾಟಿಂಗ್ ಲೈನ್‌ಅಪ್ ಅನ್ನು ಕೇವಲ 146 ರನ್‌ಗಳಿಗೆ ಆಲೌಟ್ ಮಾಡಿ ಭರ್ಜರಿ ಜಯಕ್ಕೆ ಕಾರಣವಾದರು.  

ಜಿಂಬಾಬ್ವೆ ತಂಡದ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಆರಂಭದಲ್ಲೇ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಕಮ್‌ ಬ್ಯಾಟರ್ ಜೋಶ್ ಇಂಗ್ಲಿಸ್ ಅವರನ್ನು ಔಟ್ ಮಾಡಿ ಪಂದ್ಯದ ಗತಿಯನ್ನು ಬದಲಿಸಿದರು. ಇದು ಪಂದ್ಯದಲ್ಲಿ ಟರ್ನಿಂಗ್‌ ಪಾಯಿಂಟ್‌ ಎನ್ನಬಹುದು. ನಂತರ ಆಸೀಸ್‌ ಭರವಸೆಯ ಆಟಗಾರ ಟಿಮ್ ಡೇವಿಡ್ ಕೂಡ ರನ್‌ ಗಳಿಸುವ ಮೊದಲೇ ಮುಜರಬಾನಿ ಬಲೆಗೆ ಕೆಡವಿದರು. ಮುಜರಬಾನಿ ತಮ್ಮ 4 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಆಸ್ಟ್ರೇಲಿಯಾದ ಬೆನ್ನೆಲುಬನ್ನೇ ಮುರಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಮುಗಿದ ಬಳಿಕ ಪ್ಲೇಯರ್‌ ಆಫ್‌ ದೀ ಪ್ರಶಸ್ತಿ ಪಡೆದುಕೊಂಡರು.

ಆಸ್ಟ್ರೇಲಿಯಾ ತಂಡದ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಾದ ಟ್ರಾವಿಸ್ ಹೆಡ್ ಮತ್ತು ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್‌ನಲ್ಲಿ ತೀವ್ರ ವೈಫಲ್ಯ ಅನುಭವಿಸಿದರು. ಜಿಂಬಾಬ್ವೆ ವಿರುದ್ಧ ರನ್‌ ಗಳಿಸಲು ಇಬ್ಬರು ಬ್ಯಾಟರ್‌ಗಳು ಪರದಾಡಿದರು. ಜಿಂಬಾಬ್ವೆ ತಂಡದ ಬ್ರಾಡ್ ಇವಾನ್ಸ್ ಅವರ ಅಪಾಯಕಾರಿ ಬೌಲಿಂಗ್‌ ಮುಂದೆ ಆಸೀಸ್‌ ತಂಡ ನೆಲಕಚ್ಚಿತು. ಆರಂಭಿಕ ಆಘಾತದಿಂದ ಆಸ್ಟ್ರೇಲಿಯಾ ತಂಡ ಮೇಲೆಳಲು ಆಗಲೇ ಇಲ್ಲ. ಮಧ್ಯಮ ಕ್ರಮಾಂಕದಲ್ಲೂ ಬ್ಯಾಟಿಂಗ್‌ ವೈಫಲ್ಯತೆಯಿಂದ ಕೊನೆವರೆಗೆ ಚೇತರಿಸಿಕೊಳ್ಳಲು ಆಗಲಿಲ್ಲ. ಈ ಸೋಲಿನಿಂದಾಗಿ ಆಸ್ಟ್ರೇಲಿಯಾ ತಂಡ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವಲ್ಲೂ ವಿಫಲವಾಯಿತು. ಗ್ರೂಪ್ ಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಟೀಮ್‌ ತೀರ ಕಳಪೆ ಪ್ರದರ್ಶನ ನೀಡಿತ್ತು.

ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವೂ ಜಿಂಬಾಬ್ವೆ ತಂಡವನ್ನು 19 ವರ್ಷಗಳ ನಂತರ ಸೋಲಿಸಿತು. ಇದಕ್ಕಿಂತ ಮೊದಲು ಹೆಚ್ಚು ಬಾರಿ ಆಸ್ಟ್ರೇಲಿಯಾವೇ ಗೆಲುವು ಸಾಧಿಸಿತ್ತಿತ್ತು. ಈ ಹಿಂದೆ ಅಂದರೆ 2007ರ ಚೊಚ್ಚಲ T20 ವಿಶ್ವಕಪ್‌ ಸಮಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಜಿಂಬಾಬ್ವೆ ಸೋಲಿಸಿ ಮನೆಗೆ ಕಳುಹಿಸಿತ್ತು. ಇದು ಭಾರೀ ಅವಮಾನಕ್ಕೆ ಕಾರಣವಾಗಿತ್ತು. ಏಕೆಂದರೆ ಸಣ್ಣ ತಂಡದೊಂದಿಗೆ ಆಸ್ಟ್ರೇಲಿಯಾದಂತಹ ದೊಡ್ಡ ಟೀಮ್‌ ಸೋಲುವುದು ಎಂದರೆ ಅಚ್ಚರಿ ಮೂಡಿಸುತ್ತದೆ. 2007ರ ಚೊಚ್ಚಲ T20 ವಿಶ್ವಕಪ್‌ ವಿಶೇಷ ಎಂದರೆ ಟೀಮ್‌ ಇಂಡಿಯಾವೂ ಚುಟುಕು ಕ್ರಿಕೆಟ್‌ನ ಮೊದಲ ಚಾಂಪಿಯನ್‌ ಆಗಿ ಹೊರ ಹೊಮ್ಮಿತ್ತು.    

ಐಸಿಸಿ ವಿಶ್ವಕಪ್ ಇತಿಹಾಸವನ್ನು ನೋಡುತ್ತ ಹೋದರೆ ಜಿಂಬಾಬ್ವೆ ತಂಡವೂ, ಆಸ್ಟ್ರೇಲಿಯಾವನ್ನು ಸೋಲಿಸಿದಾಗಲೆಲ್ಲಾ ಟೀಮ್‌ ಇಂಡಿಯಾ ವಿಶ್ವಕಪ್ ಎತ್ತಿಹಿಡಿದಿರುವ ಅಪರೂಪದ ಹಾಗೂ ಕುತೂಹಲಕಾರಿ ಕಾಕತಾಳೀಯ ಘಟನೆ ಎರಡು ಬಾರಿ ಸಂಭವಿಸಿದೆ. ಇದು ವಿಚಿತ್ರ ಎನಿಸಿದರೂ ನಂಬಲೇಬೇಕು. ಹೌದು ಆಸ್ಟ್ರೇಲಿಯಾ ಜಿಂಬಾಬ್ವೆ ಕೈಯಲ್ಲಿ ಸೋತರೇ ವಿಶ್ವಕಪ್‌ ಭಾರತದ್ದೇ ಎಂದು ಗ್ಯಾರಂಟಿಯಾಗಿ ಹೇಳಬಹುದು.

1983 ಏಕದಿನ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡವು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 6 ವಿಕೆಟ್‌ ನಷ್ಟಕ್ಕೆ 239 ರನ್ ಗಳಿಸಿತ್ತು. ಬಲಶಾಲಿ ಆಸ್ಟ್ರೇಲಿಯಾವನ್ನು 226 ರನ್‌ಗಳಿಗೆ ಕಟ್ಟಿ ಹಾಕಿ ಜಿಂಬಾಬ್ವೆ ತಂಡ ಕೇವಲ 13 ರನ್‌ಗಳಿಂದ ಐತಿಹಾಸಿಕವಾದ ವಿಜಯ ಸಾಧಿಸಿತ್ತು. ಟೂರ್ನಮೆಂಟ್‌ನಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ತನ್ನ ಚೊಚ್ಚಲ ಏಕದಿನ ವಿಶ್ವಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದು ಭಾರತಕ್ಕೆ ದೊಡ್ಡ ಕೀರ್ತಿ ತಂದಿತ್ತು.

2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಮೆಂಟ್‌ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿತು. ಇದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತ ನೀಡಿತು. ಅದೇ ಟೂರ್ನಮೆಂಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್‌ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಟೀಮ್‌ ಇಂಡಿಯಾ ಚಾಂಪಿಯನ್‌ ಆಗಿ ಬಹುಮಾನಗಳನ್ನು, ಪ್ರಶಸ್ತಿಗಳನ್ನು ಪಡೆದುಕೊಂಡಿತು.

2027ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗಾಗಿ ವಿಶ್ವದ ಎಲ್ಲ ಕ್ರಿಕೆಟ್‌ ತಂಡಗಳು ದೊಡ್ಡ ಮಟ್ಟದಲ್ಲೇ ತಯಾರಿ ನಡೆಸುತ್ತಿವೆ. ತಂಡದಲ್ಲಿ ಪ್ರಮುಖವಾದ ಬೆಳವಣಿಗೆಗಳು ಕೂಡ ನಡೆಯುತ್ತಿವೆ. ವಿಶ್ವಕಪ್‌ಗಳಲ್ಲಿ ಜಿಂಬಾಬ್ವೆ ತಂಡವೂ ಆಸ್ಟ್ರೇಲಿಯಾ ಟೀಮ್‌ ಅನ್ನು ಸೋಲಿಸಿದಾಗಲೆಲ್ಲ ಭಾರತವೂ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತದೆ. 2027ರಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.  

Add Zee News as a Preferred Source
TAGS:
Cricket
Team India