SOCIAL MEDIA

Newsletter

PARTNER SITES
Select Language Select State

ಇವರೇ ನೋಡಿ ವಿರಾಟ್ ಕೊಹ್ಲಿ ಅಪ್ಪ.. ದೇಶದ ಪ್ರಖ್ಯಾತ ಕ್ರಿಮಿನಲ್ ಲಾಯರ್

Who is Virat Kohli father : ವಿರಾಟ್ ಕೊಹ್ಲಿಯ ತಂದೆ ವೃತ್ತಿಯಲ್ಲಿ ಕ್ರಿಮಿನಲ್ ಲಾಯರ್ ಆಗಿದ್ದರು ಮತ್ತು ದೆಹಲಿಯಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದರು.

Reported By Chetana Devarmani Written By Chetana Devarmani
Published: Sep 13, 2026, 09:45 PM IST | Updated: Sep 17, 2026, 03:33 PM IST
Join

Virat Kohli father Prem Kohli: ಕ್ರಿಕೆಟ್‌ ಜಗತ್ತಿನಲ್ಲಿ ವಿರಾಟ್ ಕೊಹ್ಲಿ ಎಂದರೆ ಕೇವಲ ಒಬ್ಬ ಆಟಗಾರನಲ್ಲ ಅವರೊಂದು ಬ್ರ್ಯಾಂಡ್‌. ಆಕ್ರಮಣಕಾರಿ ಬ್ಯಾಟಿಂಗ್, ಫಿಟ್‌ನೆಸ್, ಶಿಸ್ತು ಮತ್ತು ಗೆಲ್ಲಲೇಬೇಕೆಂಬ ಛಲದಿಂದ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ಕ್ರಿಕೆಟಿಗ ಕಿಂಗ್‌ ಕೊಹ್ಲಿ. ಆದರೆ ಇಷ್ಟೊಂದು ದೊಡ್ಡ ಕ್ರಿಕೆಟ್ ತಾರೆಯಾಗಿ ಬೆಳೆದ ವಿರಾಟ್ ಕೊಹ್ಲಿ ಅವರ ಬಾಲ್ಯದ ಹಿಂದೆ ತಂದೆ ಪ್ರೇಮ್ ಕೊಹ್ಲಿ ಅವರ ಪಾತ್ರವೂ ಮಹತ್ವದ್ದಾಗಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ. ವಿರಾಟ್ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ವಿರಾಟ್ ಕೊಹ್ಲಿ 1988ರ ನವೆಂಬರ್ 5ರಂದು ದೆಹಲಿಯಲ್ಲಿ ಜನಿಸಿದರು. ವಿರಾಟ್ ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ ವೃತ್ತಿಯಲ್ಲಿ ವಕೀಲರಾಗಿದ್ದರು. ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅಪ್ಪ ಪ್ರೇಮ್ ಕೊಹ್ಲಿ ಕ್ರಿಮಿನಲ್ ಲಾಯರ್‌ ಆಗಿದ್ದರು. ವಿರಾಟ್‌ ಕೊಹ್ಲಿ ತಾಯಿ ಸರೋಜ್ ಕೊಹ್ಲಿ ಗೃಹಿಣಿ ಆಗಿದ್ದರು. ವಿರಾಟ್‌ ಕೊಹ್ಲಿಗೆ ವಿಕಾಸ್ ಎಂಬ ಹಿರಿಯ ಸಹೋದರ ಮತ್ತು ಭಾವನಾ ಎಂಬ ಸಹೋದರಿ ಇದ್ದಾರೆ.

ವಿರಾಟ್ ಕೊಹ್ಲಿ ಬಾಲ್ಯದಿಂದಲೇ ಕ್ರಿಕೆಟ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಚಿಕ್ಕ ವಯಸ್ಸಿನಲ್ಲೇ ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ಆರಂಭಿಸಿದ್ದರು. ಕ್ರಿಕೆಟ್ ಮೇಲೇ ವಿರಾಟ್ ಗಿದ್ದ ಆಸಕ್ತಿಯನ್ನು ಗಮನಿಸಿದ ತಂದೆ ಪ್ರೇಮ್ ಕೊಹ್ಲಿ, ಮಗನ ಪ್ರತಿಭೆಯನ್ನು ಬೆಳೆಸಲು ಪ್ರೋತ್ಸಾಹ ನೀಡಿದರು. ಇದೇ ಕಾರಣದಿಂದ ವಿರಾಟ್ ಅವರ ಕ್ರಿಕೆಟ್ ಪಯಣಕ್ಕೆ ಬಾಲ್ಯದಲ್ಲೇ ಗಟ್ಟಿಯಾದ ಅಡಿಪಾಯ ಸಿಕ್ಕಿತು.

ವಿರಾಟ್ ಕ್ರಿಕೆಟ್‌ನಲ್ಲಿ ಬಲವಾದ ಬೇರೂರಲು ಬುನಾದಿ ಹಾಕಬೇಕೆಂದು ದೆಹಲಿಯ ಪ್ರಸಿದ್ಧ ಕ್ರಿಕೆಟ್ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಾಲಕ ವಿರಾಟ್‌ ನಲ್ಲಿದ್ದ ಕ್ರಿಕೆಟ್ ಮೇಲಿನ ಆಸಕ್ತಿ ಅವರನ್ನು ಒಬ್ಬ ಪರಿಣಿತ ಆಟಗಾರನನ್ನಾಗಿ ಮಾಡಿತು. ಕುಟುಂಬದ ಬೆಂಬಲದೊಂದಿಗೆ ನಿರಂತರವಾಗಿ ಅಭ್ಯಾಸ ಮಾಡುತ್ತಾ ಬಂದರು. ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸು ಚಿಕ್ಕ ವಯಸ್ಸಿನಲ್ಲೇ ಬೆಳೆದಿತ್ತು. ಆದರೆ ವಿರಾಟ್ ಕೊಹ್ಲಿಯ ಜೀವನದಲ್ಲಿ ದೊಡ್ಡ ಆಘಾತವೊಂದು ಬಹಳ ಚಿಕ್ಕ ವಯಸ್ಸಿನಲ್ಲೇ ಎದುರಾಯಿತು. ಅದು ಅವರ ತಂದೆ ಪ್ರೇಮ್ ಕೊಹ್ಲಿ ಅನಾರೋಗ್ಯದಿಂದ ನಿಧನರಾದರು. ಆ ಸಮಯದಲ್ಲಿ ವಿರಾಟ್ ಇನ್ನೂ ಯುವ ಕ್ರಿಕೆಟಿಗರಾಗಿದ್ದರು. ತಂದೆಯನ್ನು ಕಳೆದುಕೊಂಡ ನೋವಿನ ನಡುವೆಯೂ ಕ್ರಿಕೆಟ್ ಮೇಲಿನ ತಮ್ಮ ಬದ್ಧತೆಯನ್ನು ಅವರು ಬಿಡಲಿಲ್ಲ.

ತಮ್ಮ ತಂದೆಯ ನಿಧನದ ಬಗ್ಗೆ ವಿರಾಟ್ ಹಲವು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ತಂದೆ ನಿಧನರಾದ ದಿನವೂ ತಾವು ಕ್ರಿಕೆಟ್ ಆಡಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ಹಿಂದಿನ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು. ತಂದೆಯ ಸಾವಿನಿಂದ ಕುಟುಂಬವೇ ದುಃಖದಲ್ಲಿದ್ದರೂ, ವಿರಾಟ್ ತಮ್ಮ ಕ್ರಿಕೆಟ್ ಆಟವನ್ನು ಮುಂದುವರಿಸಲು ನಿರ್ಧರಿಸಿದ್ದರು. ಈ ಘಟನೆ ಅವರ ಜೀವನದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದಾಗಿದೆ.

ತಂದೆಯ ನಿಧನದ ನಂತರವೂ ವಿರಾಟ್ ಕ್ರಿಕೆಟ್ ಅಭ್ಯಾಸವನ್ನು ಮುಂದುವರಿಸಿದರು. ಜೀವನದಲ್ಲಿ ಎದುರಾದ ವೈಯಕ್ತಿಕ ನೋವನ್ನು ತಮ್ಮ ಗುರಿಗೆ ಅಡ್ಡಿಯಾಗಲು ಬಿಡಲಿಲ್ಲ. ಮುಂದೆ ಇದೇ ಮನೋಭಾವ ಅವರ ಕ್ರಿಕೆಟ್ ವ್ಯಕ್ತಿತ್ವದ ಪ್ರಮುಖ ಭಾಗವಾಯಿತು. ಮೈದಾನದಲ್ಲಿ ಕೊನೆಯ ಕ್ಷಣದವರೆಗೂ ಹೋರಾಡುವ ಅವರ ಗುಣಕ್ಕೆ ಈ ಕಠಿಣ ಅನುಭವಗಳು ಒಂದು ರೀತಿಯಲ್ಲಿ ಬಲ ನೀಡಿದವು ಎಂದು ಹೇಳಬಹುದು.

ವಿರಾಟ್ ಕೊಹ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡುವಾಗ, ಅವರು ತಮ್ಮ ಜೀವನದಲ್ಲಿ ಎಷ್ಟು ಮಹತ್ವದ ವ್ಯಕ್ತಿಯಾಗಿದ್ದರು ಎಂಬುದನ್ನು ಹಲವು ಬಾರಿ ವಿವರಿಸಿದ್ದಾರೆ. ಕ್ರಿಕೆಟ್‌ನಲ್ಲಿ ಮುಂದೆ ಸಾಗಲು ಕುಟುಂಬದ ಬೆಂಬಲ ಬಹಳ ಮುಖ್ಯವಾಗಿತ್ತು. ತಂದೆ ಬದುಕಿದ್ದ ಅವಧಿಯಲ್ಲಿ ವಿರಾಟ್ ಅವರ ಕ್ರಿಕೆಟ್ ಆಸಕ್ತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಮಗನಿಗೆ ಉತ್ತಮ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಕ್ರಿಕೆಟ್ ತರಬೇತಿಗೆ ಪ್ರೋತ್ಸಾಹ ನೀಡಿದ್ದರು.

ವಿರಾಟ್ ಕೊಹ್ಲಿಯ ಯಶಸ್ಸಿನ ಹಿಂದೆ ಅವರ ತಾಯಿ ಸರೋಜ್ ಕೊಹ್ಲಿ ಮತ್ತು ಕುಟುಂಬದ ಸದಸ್ಯರ ಪಾತ್ರವೂ ಮಹತ್ವದ್ದಾಗಿದೆ. ತಂದೆಯನ್ನು ಕಳೆದುಕೊಂಡ ನಂತರ ಕುಟುಂಬವು ಎದುರಿಸಿದ ಕಷ್ಟದ ನಡುವೆಯೂ ವಿರಾಟ್ ಅವರ ಕ್ರಿಕೆಟ್ ಕನಸಿಗೆ ಬೆಂಬಲ ಮುಂದುವರಿಯಿತು. ಬಾಲಕನಾಗಿದ್ದಾಗಲೇ ಕ್ರಿಕೆಟ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಕುಟುಂಬ ನೀಡಿದ ಪ್ರೋತ್ಸಾಹ ಮುಂದಿನ ದಿನಗಳಲ್ಲಿ ಫಲ ನೀಡಿತು.

ವಿರಾಟ್ ಕೊಹ್ಲಿ ನಂತರ ದೆಹಲಿ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡು, ಕಿರಿಯರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದರು. 2008ರಲ್ಲಿ ಭಾರತ ಅಂಡರ್-19 ತಂಡದ ನಾಯಕನಾಗಿ ವಿಶ್ವಕಪ್ ಗೆದ್ದದ್ದು ಅವರ ವೃತ್ತಿಜೀವನದ ಪ್ರಮುಖ ತಿರುವು. ಅದಾದ ಬಳಿಕ ಭಾರತೀಯ ಹಿರಿಯ ತಂಡಕ್ಕೆ ಪ್ರವೇಶಿಸಿ, ಕ್ರಮೇಣ ವಿಶ್ವದ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಬೆಳೆದರು.

ಇಂದು ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರಸಿದ್ಧ ಹೆಸರುಗಳಲ್ಲಿ ಒಬ್ಬರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರಾರು ರನ್, ಅನೇಕ ಶತಕಗಳು ಮತ್ತು ಹಲವು ಮಹತ್ವದ ಗೆಲುವುಗಳು ಅವರ ಹೆಸರಿನಲ್ಲಿವೆ. ಭಾರತ ತಂಡದ ನಾಯಕನಾಗಿಯೂ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಆದರೆ ಈ ಯಶಸ್ಸಿನ ಹಿಂದೆ ಬಾಲ್ಯದಲ್ಲೇ ಕ್ರಿಕೆಟ್ ಕನಸಿಗೆ ಬೆಂಬಲ ನೀಡಿದ ತಂದೆ ಪ್ರೇಮ್ ಕೊಹ್ಲಿಯ ನೆನಪು ಸದಾ ಪ್ರಮುಖವಾಗಿರುತ್ತದೆ. ತಂದೆ ಪ್ರೇಮ್ ಕೊಹ್ಲಿ ಇಂದು ವಿರಾಟ್ ಅವರ ಯಶಸ್ಸನ್ನು ಕಣ್ಣಾರೆ ನೋಡಲು ಇಲ್ಲದಿದ್ದರೂ, ವಿರಾಟ್ ಅವರ ಜೀವನದಲ್ಲಿ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಬಾಲ್ಯದಲ್ಲಿ ಮಗನ ಕೈಯಲ್ಲಿ ಬ್ಯಾಟ್ ನೋಡಿದ ತಂದೆಯಿಂದ ಹಿಡಿದು, ದೇಶದ ಪರ ಆಡುವ ಕನಸು ಕಂಡ ಯುವ ಕ್ರಿಕೆಟಿಗನ ತನಕದ ಪಯಣದಲ್ಲಿ ಪ್ರೇಮ್ ಕೊಹ್ಲಿಯ ಪ್ರೋತ್ಸಾಹದ ಗುರುತು ಇದೆ.

ವಿರಾಟ್ ಕೊಹ್ಲಿಯ ಕಥೆ ಕೇವಲ ಕ್ರಿಕೆಟ್ ಯಶಸ್ಸಿನ ಕಥೆಯಲ್ಲ. ಅದು ಕುಟುಂಬದ ಬೆಂಬಲ, ತಂದೆಯ ಪ್ರೋತ್ಸಾಹ, ವೈಯಕ್ತಿಕ ನಷ್ಟ, ಕಠಿಣ ಪರಿಶ್ರಮ ಮತ್ತು ಗುರಿಯ ಮೇಲಿನ ಬದ್ಧತೆಯ ಕಥೆಯೂ ಹೌದು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರೂ ಆ ನೋವನ್ನು ಶಕ್ತಿಯನ್ನಾಗಿ ಮಾಡಿಕೊಂಡು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡಿರುವುದು ವಿರಾಟ್ ಕೊಹ್ಲಿಯ ಜೀವನದ ಅತ್ಯಂತ ಪ್ರೇರಣಾದಾಯಕ ಅಂಶಗಳಲ್ಲಿ ಒಂದಾಗಿದೆ.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES