ಪ್ರತಿಷ್ಠಿತ ಆಶ್ರಮಕ್ಕೆ ಭೇಟಿಗೆ ಕೋಟಿ ಕೋಟಿ ಹಣ ಪಡೆದ್ರಾ ಕಿಂಗ್ ಕೊಹ್ಲಿ.. 5 ಕೋಟಿ ಕೊಟ್ಟಿದ್ದು ನಿಜನಾ?
ವೃಂದಾವನದಲ್ಲಿರುವ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜರ ಆಶ್ರಮದಿಂದ ಭಾರೀ ಮೊತ್ತದ ಹಣ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Virat Kohli visit Premanand Maharaj Ashram: ವೃಂದವನದ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ ಆಶ್ರಮಕ್ಕೆ ಭೇಟಿ ನೀಡಲು ವಿರಾಟ್ ಕೊಹ್ಲಿ ಮತ್ತು ಇವರ ಪತ್ನಿ ಅನುಷ್ಕಾ ಶರ್ಮಾ ಅವರು 5 ಕೋಟಿ ಹಣ ಪಡೆದಿದ್ದಾರೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ವೃಂದವನದ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ ಆಶ್ರಮಕ್ಕೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಭೇಟಿ ನೀಡಿದ್ದರು. ಈ ವೇಳೆ ವೃಂದಾವನದಲ್ಲಿರುವ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜರ ಆಶ್ರಮದಿಂದ ಭಾರೀ ಮೊತ್ತದ ಹಣ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಆರೋಪವನ್ನು ವಿರಾಟ್ ಕೊಹ್ಲಿ ಮತ್ತು ಅವರ ತಂಡದವರು ತಳ್ಳಿ ಹಾಕಿದ್ದು ಇದೊಂದು ವದಂತಿ ಮಾತ್ರ, ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ಹೇಳಿದೆ.
ವಿರಾಟ್ ಕೊಹ್ಲಿ ಅವರು ಯಾವಾಗಲೂ ಪ್ರೇಮಾನಂದ ಮಹಾರಾಜ ಆಶ್ರಮಕ್ಕೆ ಭೇಟಿ ನೀಡುತ್ತಿರುತ್ತಾರೆ. ಆಶ್ರಮದಿಂದಲೇ 5 ಕೋಟಿ ಹಣ ಪಡೆದಿರುವುದು ಎನ್ನುವುದು ಸಂಪೂರ್ಣವಾದ ಸುಳ್ಳು ಆಗಿದೆ. ಇದೊಂದು ಆಧಾರ ರಹಿತವಾದ, ವಾಸ್ತವಿಕತೆಯಿಂದ ದೂರ ಇದೆ. ವಿರಾಟ್ ಕೊಹ್ಲಿ ಅವರು ತಮ್ಮ ಸಂಪೂರ್ಣವಾದ ಭಕ್ತಿಯಿಂದ ಪ್ರತಿಷ್ಠಿತ ಆಶ್ರಮಕ್ಕೆ ಭೇಟಿ ನೀಡುತ್ತಾರೆ ಹೊರತು ಹಣ, ಬಹುಮಾನಗಳನ್ನು ಪಡೆದು ಯಾವುದೇ ದೇವಾಲಯ, ಆಶ್ರಮಗಳಿಗೆ ಭೇಟಿ ನೀಡುವುದಿಲ್ಲ ಎಂದು ಕೊಹ್ಲಿ ಅವರ ಸಿಬ್ಬಂದಿ ತಂಡದವರು ಹೇಳಿದ್ದಾರೆ ಎನ್ನಲಾಗಿದೆ.
ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ಅಧ್ಯಕ್ಷ ಫಲಹರಿ ಮಹಾರಾಜ್ ಅವರು ವಿರಾಟ್ ಕೊಹ್ಲಿ ಅವರ ವಿರುದ್ಧ ಈ ಗಂಭೀರವಾದ ಆರೋಪ ಮಾಡಿದ್ದಾರೆ. ವೃಂದವನದ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ್ ಆಶ್ರಮದ ಜನಪ್ರಿಯತೆಯನ್ನು ಹೆಚ್ಚಿಸಲು ವಿರಾಟ್ ಕೊಹ್ಲಿ ದಂಪತಿಗೆ 5 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿ ಕರೆತರಲಾಗಿತ್ತು ಎಂದು ಆರೋಪಿಸಿದ್ದಾರೆ. ಪ್ರೇಮಾನಂದ ಮಹಾರಾಜ್ ಅವರೇ ಹಣ ಸಂದಾಯ ಮಾಡಿ ಸ್ಟಾರ್ ದಂಪತಿನ ಕರೆಸಿದ್ದಾರೆ. ಜನಪ್ರಿಯತೆಗಾಗಿ ಹೀಗೆ ಮಾಡಲಾಗುತ್ತಿದೆ ಎಂದು ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್‌ನ ಅಧ್ಯಕ್ಷ ಫಲಹರಿ ಮಹಾರಾಜ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ವಿರಾಟ್ ಕೊಹ್ಲಿ ಅವರ ಹಿಂದೆ ಇರುವ ಸಿಬ್ಬಂದಿ, ಫಲಹರಿ ಮಹಾರಾಜ್ ದಿನೇಶ್ ಶರ್ಮಾ ಮಾಡಿದ ಹೇಳಿಕೆಗಳು ಸಂಪೂರ್ಣವಾಗಿ ಎಲ್ಲವೂ ಸುಳ್ಳು ಆಗಿವೆ. ಅವರು ಆಡಿರುವ ಮಾತುಗಳಿಗೆ ಯಾವುದೇ ಆಧಾರ ಇಲ್ಲ. ಅವು ಧಾರರಹಿತ, ವಾಸ್ತವಿಕರವಾಗಿ ತಪ್ಪಾಗಿ ಇವೆ. ವಿರಾಟ್ ಕೊಹ್ಲಿ ಅವರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿರುವುದು ಮಹಾರಾಜ್ ಅವರ ಮೇಲೆ ಇರುವ ಆಳವಾದ ನಂಬಿಕೆ ಮಾತ್ರ. ಮಹಾರಾಜ್ ಅವರ ಮೇಲೆ ಅಪಾರವಾದ ನಂಬಿಕೆ, ಭಕ್ತಿ ಇಟ್ಟುಕೊಂಡಿದ್ದಾರೆ. ಆರೋಪ ಮಾಡಿರುವುದರಲ್ಲಿ ಸತ್ಯವಿಲ್ಲ. ಏನನ್ನೇ ಹೇಳುವಾಗ ಜವಾಬ್ದಾರಿಯಿಂದ ಹೇಳಬೇಕು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಹಣ ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಅವರು ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿರುತ್ತಾರೆ. 2023 ಜನವರಿಯಿಂದಲೂ ವಿರಾಟ್ ಕೊಹ್ಲಿ ಅವರು ಭೇಟಿ ನೀಡುತ್ತಿದ್ದಾರೆ. ಹಲವು ಬಾರಿ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರು T20 ಕ್ರಿಕೆಟ್‌ಗೆ ವಿದಾಯ ಹೇಳಿದ ಮೇಲೂ ಇಲ್ಲಿಗೆ ಬರುವುದು ಮುಂದುವರೆಸಿದ್ದಾರೆ.
ಪ್ರೇಮಾನಂದ ಮಹಾರಾಜ್ ಅವರ ಶಿಷ್ಯರಲ್ಲಿ ಒಬ್ಬರಾದ ರಸಿಕ್ ದುಲಾರಿ ಸೆಪ್ಟೆಂಬರ್ 25 ರಂದು ಆಶ್ರಮದ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದನು. ಇದರ ನಂತರವೇ ಪ್ರೇಮಾನಂದ ಮಹಾರಾಜ್ ಆಶ್ರಮದ ವಿರುದ್ಧ ಇಂತಹ ಆರೋಪಗಳು ಕೇಳಿ ಬರುತ್ತಿವೆ. ಇನ್ನು ರಸಿಕ್ ದುಲಾರಿ ಸಾವಿಗೆ ಕಾರಣ ಏನು, ರಸಿಕ್ ದುಲಾರಿ ಯಾವುದೇ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದನೇ ಎಂದು ಮಥುರಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಶ್ರಮಕ್ಕೆ ಸೇರುವ ಮೊದಲು ರಸಿಕ್ ದುಲಾರಿ ಜೀವನ ಹೇಗಿತ್ತು. ಆಶ್ರಮಕ್ಕೆ ಬಂದ ಮೇಲೆ ಅವರ ನಡವಳಿಕೆಯಲ್ಲಿ ಏನೆಲ್ಲ ಬದಲಾವಣೆ ಆದವು ಎಂಬುದು ತನಿಖೆಯಲ್ಲಿ ಪ್ರಮುಖ ಅಂಶವಾಗಲಿದೆ. ರಸಿಕ್ ದುಲಾರಿ ಕೊನೆ ದಿನಗಳಲ್ಲಿ ಯಾರೊಂದಿಗೆ ಸಂಪರ್ಕ ಸಾಧಿಸಿದ್ದನು ಎಂಬುದರ ಬಗ್ಗೆ ತಿಳಿದುಕೊಳ್ಳಲು ಆತನ ಮೊಬೈಲ್ ಫೋನ್, ಸಿಮ್ ಕಾರ್ಡ್, ಕರೆ ವಿವರಗಳ ದಾಖಲೆ, ವಾಟ್ಸ್‌ಅಪ್ ಚಾಟ್‌ಗಳು, ವಿಡಿಯೋಗಳು ಸೇರಿತೆ ಇತರೆ ಡಿಜಿಟಲ್ ಪುರಾವೆಗಳನ್ನು ತನಿಖೆಯಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.