Ajay Rao and Brinda Acharya starrer Partner movie: ಕೆಲ ಸಿನಿಮಾಗಳು ತನ್ನ ಕಂಟೆಂಟ್, ಸಾಂಗ್, ಮೇಕಿಂಗ್ ಮೂಲಕ ಸುದ್ದಿಯಾಗುತ್ತವೆ. ಇತ್ತೀಚೆಗೆ 'ಪಾರ್ಟ್ನರ್' ಸಿನಿಮಾವೂ ಕೂಡ ತನ್ನ ಮೆಲೋಡಿ ಹಾಡು, ಮೇಕಿಂಗ್‌ನಿಂದಲೇ ಸಿನಿರಸಿಕರ ಗಮನ ಸೆಳೆಯುತ್ತಿದೆ. ಮಳೆ, ಧೈರ್ಯಂ, ದಿಲ್ ಪಸಂದ್ ಖ್ಯಾತಿಯ ಶಿವತೇಜಸ್ ಅವರ ಸಾರಥ್ಯದ ಮತ್ತೊಂದು ಲವ್, ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು, ಸಿನಿಮಾದ ಅಮೋರಾ ಸಾಂಗ್ ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಸಾಂಗ್ ಲವಲವಿಕೆ ರಿಲೀಸಾಗಿದ್ದು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.
ಬೃಂದಾ ಆಚಾರ್ಯ, ಕೃಷ್ಣ ಅಜಯ್ ರಾವ್ ನಾಯಕ, ನಾಯಕಿಯಾಗಿ ನಟಿಸಿರುವ ಈಗಿನ ಜಂಝಿಗಳ ಲೈಫ್ ಸ್ಟೈಲ್, ಲವ್, ಬ್ರೇಕಪ್, ಲಿವಿಂಗ್ ರಿಲೇಶನ್ ಶಿಪ್ ಸುತ್ತ ಸಾಗುವ ಕಥೆಯನ್ನು ಸುಂದರ ಮೆಸೇಜ್‌ನೊಂದಿಗೆ ನಿರ್ದೇಶಕ ಶಿವತೇಜಸ್ ಹೇಳ ಹೊರಟಿದ್ದಾರೆ. ಕವಿರಾಜ್ ರಚನೆಯ ಲವಲವಿಕೆ ಹಾಡಿಗೆ ಮುರಳಿ ಮಾಸ್ಟರ್ ಕೊರಿಯಾಗ್ರಾಫ್ ಮಾಡಿದ್ದು, ಕಾರ್ತೀಕ್, ರಮ್ಯ ಅಭ್ಯಂಕರ್ ದನಿಯಾಗಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯಲ್ಲಿ, ಸುಜ್ಞಾನ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಹಾಡನ್ನು ನಿರ್ಮಾಪಕರ ಆಧ್ಯಾತ್ಮಿಕ ಗುರುಗಳಾದ ರಂಗನಾಥ್ ಹಾಗೂ ಮಂಜುನಾಥ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಿವತೇಜಸ್ ಸಿನಿಮಾ ಅಂದುಕೊಂಡದ್ದಕ್ಕಿಂತ ಚನ್ನಾಗಿ ಬಂದಿರುವುದು ನಮ್ಮ ಚಿತ್ರತಂಡದ ಖುಷಿ ಆಗಿದೆ. ಇದು ಚಿತ್ರದ ಎರಡನೇ ಸಾಂಗ್, ಕಲರ್ ಫುಲ್ ಆಗಿದೆ. ಕಲರ್ ಫುಲ್ ಅಷ್ಟೇ ಅಲ್ಲ, ಸಾಂಗ್ ಕೇಳಲು ಕೂಡ ಅದ್ಭುತವಾಗಿದೆ. ಇಂಪಾಗಿರುವುದರಿಂದ ಎಲ್ಲರಿಗೂ ಈ ಹಾಡು ಮುದ ನೀಡುತ್ತದೆ. ಪ್ರತಿ ಹಾಡನ್ನೂ ಒಂದೊಂದು ಕಲರ್ ಪ್ಯಾಟ್ರನ್‌ನಲ್ಲಿ ಮಾಡಲಾಗಿದೆ. ಲಕ್ಷ್ಮಿ ಕೃಷ್ಣ ಅವರು ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ. ಪಾಂಡಿಚೇರಿ, ಬೆಂಗಳೂರಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದ್ದು, ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟ ರಂಗಾಯಣ ರಘು, ಚಿತ್ಕಲಾ ಅಭಿನಯಿಸಿದ್ದಾರೆ. ಈಗಾಗಲೇ ಪ್ರೇಮದ ಊರಲಿ ಚಿತ್ರರಂಗಕ್ಕೆ ನವಚೇತನ ನೀಡಿದೆ. ನಮ್ಮದೂ ಫ್ಯಾಮಿಲಿ ಸಬ್ಜೆಕ್ಟ್. ಅದೇಥರ ಹಿಟ್ ಆಗುತ್ತೆ ಎಂಬ ನಂಬಿಕೆಯಿದೆ ಬಲವಾದ ಇದೆ ಎಂದು ಹೇಳಿದ್ದಾರೆ.
ನಿರ್ಮಾಪಕ ಹರೀಶ್ ದೇವಿತಂದ್ರೆ ಮಾತನಾಡಿ, ನಾನು ಸಿನಿಮಾ ವಿತರಣೆ, ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ, ಯಾವುದೇ ಮುಜುಗರ ಇಲ್ಲದೆ ಇಡೀ ಕುಟುಂಬ ಸಮೇತ ಕೂತು ನೋಡಬಹುದಾದ ಚಿತ್ರವಿದು. ಬ್ಯಸಿನೆಸ್ ದೃಷ್ಟಿ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇನೆ. ಅದನ್ನು ಯಾವ ರೀತಿ ಜನರಿಗೆ ತಲುಪಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಟ ಅಜಯ್ ರಾವ್ ಮಾತನಾಡುತ್ತ ನಿರ್ದೇಶಕರು ಹೇಳಿದ ಕಂಟೆಂಟ್ ನನಗೆ ತುಂಬಾ ಇಷ್ಟವಾಯಿತು. ನನ್ನ ಮನಸಿಗೆ ತುಂಬಾ ಹತ್ತಿರವಾದ ಚಿತ್ರವಿದು. ಈ ಮೊದಲು ಮಾಡಿದ ಸಿನಿಮಾಗಳ ಕಥೆಗಿಂತ ಈ ಕಥೆ ತುಂಬಾ ಅದ್ಭುತವಾಗಿದೆ. ಹಾಡುಗಳ ಹಾಗೇ ಸಿನಿಮಾದಲ್ಲಿನ ಪ್ರತಿಯೊಂದು ದೃಶ್ಯ ಕೂಡ ಮನಸಿಗೆ ನಾಟುವಂತೆ ಇವೆ. ಸಿನಿಮಾವನ್ನು ಥಿಯೇಟರ್‌ಗಳಲ್ಲಿ ನೋಡಿದ ಮೇಲೆಯೇ ನಮ್ಮ ಶ್ರಮ ಏನು ಎನ್ನುವುದು ನಿಮಗೆ ಗೊತ್ತಾಗುತ್ತದೆ. ಏಕೆಂದರೆ ಪ್ರತಿಯೊಂದು ದೃಶ್ಯ ಕೂಡ ಕಲರ್ ಫುಲ್ ಆಗಿವೆ ಮೂಡಿ ಬಂದಿವೆ. ಚಿತ್ರದಲ್ಲಿ ಹ್ಯೂಮನ್ ವ್ಯಾಲ್ಯೂಸ್, ಎಮೋಷನ್ಸ್ ತುಂಬಾ ಚೆನ್ನಾಗಿ ಹೇಳಲಾಗಿದೆ. ನಿರ್ದೇಶಕರ ಜತೆ ನನಗೆ 25 ವರ್ಷಗಳ ಸ್ನೇಹ ಇರುವುದು ಇನ್ನೊಂದು ವಿಶೇಷ. ಸಿನಿಮಾದ ಟೈಟಲ್ ಹಾಗೇ ಒಳ್ಳೆಯ ಪಾರ್ಟ್ನರ್ ನಿರ್ಮಾಪಕರು ಸಿಕ್ಕಿದ್ದಾರೆ. ಈ ಚಿತ್ರದ ಮೇಲೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆಯಿದೆ. ಅದ್ಭುತವಾದ ಕಥೆ ಇರುವುದನ್ನು ಯಾರು ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಸಿನಿಮಾದ ಹೀರೋಯಿನ್ ಬೃಂದಾ ಆಚಾರ್ಯ ಅವರು ಮಾತನಾಡಿ, ಈ ಸಿನಿಮಾ ಮಾಡಬೇಕಾದರೆ ನಮ್ಮೆಲ್ಲರಲ್ಲೂ ಒಳ್ಳೆ ಬಾಂಡಿಂಗ್ ಇತ್ತು. ಅದು ಬಹಳ ಮುಖ್ಯ. ಆರಂಭದಲ್ಲಿ ಅಜಯ್ ರಾವ್ ಅವರು ಯಾರನ್ನೂ ಮಾತನಾಡಿಸ್ತಿದ್ದಿಲ್ಲ. ಸಿಡುಕ್ಮೂತಿ ಸಿದ್ದಪ್ಪನ್ ಥರ ಇದ್ದರು. ಹೋಗ್ತಾ..ಹೋಗ್ತಾ ಸ್ವೀಟ್ ಸಿದ್ದಪ್ಪ ಆಗಿ ಹೋದರು. ಹಾಡುಗಳ ಟೈಮಲ್ಲಿ ನನಗೆ ತುಂಬಾ ಹೇಳಿಕೊಟ್ಟರು ಎಂದು ನಾಯಕನನ್ನು ಹೊಗಳಿದರು. ಹೆಚ್.ಪಿ.ಆರ್. ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಸಿನಿಮಾಕ್ಕಿದೆ.