• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಟೀಮ್‌ ಇಂಡಿಯಾದಿಂದ ಕನ್ನಡಿಗ ಔಟ್.. ರೇಸ್‌ನಲ್ಲಿ ನಾಲ್ವರು ಆಟಗಾರರು, ಯಾರಿಗೆ ಸಿಗಲಿದೆ ಚಾನ್ಸ್‌?

ಟೀಮ್‌ ಇಂಡಿಯಾದಿಂದ ಕನ್ನಡಿಗ ಔಟ್.. ರೇಸ್‌ನಲ್ಲಿ ನಾಲ್ವರು ಆಟಗಾರರು, ಯಾರಿಗೆ ಸಿಗಲಿದೆ ಚಾನ್ಸ್‌?

ಈಗಾಗಲೇ ಟೀಮ್‌ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಇರುವುದರಿಂದ ಅವಕಾಶಗಳು ಕಡಿಮೆಯಾಗಿದ್ದರೂ, ಅವರು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗುವುದರಿಂದ ಆಯ್ಕೆ ಮಾಡುವುದು ಉತ್ತಮ ಎನ್ನಬಹುದು.

Reported ByBhimappaEdited ByBhimappa
Published: Sep 16, 2026, 01:20 PM IST|Updated: Sep 17, 2026, 02:30 PM IST
joinshare
ಟೀಮ್‌ ಇಂಡಿಯಾದಿಂದ ಕನ್ನಡಿಗ ಔಟ್.. ರೇಸ್‌ನಲ್ಲಿ ನಾಲ್ವರು ಆಟಗಾರರು, ಯಾರಿಗೆ ಸಿಗಲಿದೆ ಚಾನ್ಸ್‌?
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಟೀಮ್‌ ಇಂಡಿಯಾ ಕಳೆದ ಎರಡು ವರ್ಷಗಳಿಂದ ಐಸಿಸಿ ಟ್ರೋಫಿಗಳನ್ನು ಗೆಲ್ಲುತ್ತಿದ್ದು ಅತ್ಯಂತ ಪ್ರಭಾವಶಾಲಿ ತಂಡ ಎನಿಸಿಕೊಂಡಿದೆ. ಟೀಮ್‌ ಇಂಡಿಯಾ ಮೂರು ಸ್ವರೂಪಗಳಲ್ಲೂ ಅತ್ಯತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿಯೇ ಏಷ್ಯಾಕಪ್‌, T20 ವಿಶ್ವಕಪ್‌ ಟೂರ್ನಮೆಂಟ್‌ನಲ್ಲಿ ಟ್ರೋಫಿಗಳನ್ನು ಗೆಲ್ಲುತ್ತಿದೆ. ಇಷ್ಟೆಲ್ಲ ಯಶಸ್ಸಿನಿಂದ ಮುನ್ನುಗ್ಗುತ್ತಿರುವ ಟೀಮ್‌ ಇಂಡಿಯಾಗೆ ಬಿಗ್‌ ಶಾಕ್‌ಗಳು ಎದುರಾಗುತ್ತಿವೆ. ಅಂದರೆ ಐಪಿಎಲ್‌ ಮುಗಿದ ಮೇಲೆ ನಿರಂತರವಾದ ಕ್ರಿಕೆಟ್‌ ಪಂದ್ಯಗಳು ಇರುವುದರಿಂದ ಆಟಗಾರರು ಒಬ್ಬರ ಹಿಂದೆ ಒಬ್ಬರು ಎನ್ನುವಂತೆ ಗಾಯಕ್ಕೆ ತುತ್ತಾಗುತ್ತಿದ್ದಾರೆ. ವರುಣ್‌ ಚಕ್ರವರ್ತಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಭಾರತ ತಂಡದ ಕೆಲವು ಆಟಗಾರರು ಸೇರಿದಂತೆ ಪಂದ್ಯಗಳಿಗೆ ಬೇಕಾಗಿದ್ದಂತಹ ಪ್ರಮುಖ ಆಟಗಾರರೇ ಗಾಯಗಳಿಂದ ಬಳಲುತ್ತಿದ್ದಾರೆ. ಸದ್ಯ ಇವರು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ನಲ್ಲಿ ಆಶ್ರಯ ಪಡೆದಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ಳಲು ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಲ್ಲಿ ಆಟಗಾರರು ಇದ್ದಾರೆ. ಇವರು ಚೇತರಿಸಿಕೊಂಡು ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆದು ಆಡುವಷ್ಟರಲ್ಲಿ ಏಕದಿನ ವಿಶ್ವಕಪ್‌ ಬರಲಿದೆ. ಹೀಗಾಗಿ ಆದಷ್ಟು ಬೇಗ ಗಾಯದಿಂದ ಹೊರ ಬಂದು ಸರಣಿಗಳಲ್ಲಿ ಆಡಬೇಕಿದೆ.

ಟೀಮ್‌ ಇಂಡಿಯಾದಲ್ಲಿ ಇಂಜುರಿಯಾದ ಆಟಗಾರರು
ಭಾರತ ತಂಡದ ಯಾರ್ಕರ್‌ ಸ್ಟೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ನಿರಂತರ ಸಮಸ್ಯೆ ಆಗಿದೆ. ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಕಾರಣದಿಂದಾಗಿ ಪ್ರಸ್ತುತ ವೈಟ್‌ ಬಾಲ್ ಕ್ರಿಕೆಟ್ ಅನ್ನು ಮಾತ್ರ ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಪಂದ್ಯಗಳನ್ನು ಆಡಿದ್ದ ಪಾಂಡ್ಯ ನಂತರ ಯಾವುದೇ ಪಂದ್ಯವನ್ನು ಆಡಿಲ್ಲ. ಟೀಮ್‌ ಇಂಡಿಯಾ ಪಾಂಡ್ಯಗಾಗಿ ಎದುರು ನೋಡುತ್ತಿದೆ ಎನ್ನಬಹುದು. ವಿಶ್ವಕಪ್‌ ಆಡುವ ಸಂಬಂಧ ಹಾರ್ದಿಲ್‌ ಪಾಂಡ್ಯ ಅವರ ಆಲ್‌ರೌಂಡರ್‌ ಪ್ರದರ್ಶನ ಭಾರತ ತಂಡಕ್ಕೆ ಅತ್ಯಂತ ಹೆಚ್ಚು ಉಪಯುಕ್ತವಾಗಲಿದೆ.  

ಭಾರತ ತಂಡದ ಯುವ ವೇಗಿ ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್ ಮತ್ತು ಇನ್ನು ಕೆಲ ಆಟಗಾರರು ಗಾಯಗಳಿಂದ ಬಳಲುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ನೆಸ್ ಪಡೆಯಲು ತರಬೇತಿ ಪಡೆಯುತ್ತಿದ್ದಾರೆ. ಸಾಯಿ ಸುದರ್ಶನ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಲ್ಲಿ ಸಾಯಿ ಸುದರ್ಶನ್ ಆಡಲು ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಗಾಯದಿಂದ ಚೇತರಿಸಿಕೊಂಡಿದ್ದು ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಈಗಾಗಲೇ ಅಖಾಡಕ್ಕೆ ಇಳಿದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಮತ್ತೆ ಇಂಜುರಿಗೆ ಒಳಗಾದ ವರುಣ್ ಚಕ್ರವರ್ತಿ 
ಭಾರತ ತಂಡದ ಯಂಗ್‌ ಟಾಲೆಂಟೆಡ್‌, ಮಾರಕವಾದ ಸ್ಪಿನ್‌ ಬೌಲಿಂಗ್‌ ಮಾಡುವ ವರುಣ್ ಚಕ್ರವರ್ತಿ ಅವರು ಮತ್ತೆ ಇಂಜುರಿಗೆ ಒಳಗಾಗಿದ್ದಾರೆ. ಕಳೆದ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ವರುಣ್ ಗಂಭೀರವಾಗಿ ಗಾಯಗೊಂಡಿದ್ದರು. ಅದರಿಂದ ಚೇತರಿಸಿಕೊಂಡ ನಂತರ, ಅವರು ಟಿಎನ್ಪಿಎಲ್ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಇದಾದ ಮೇಲೆ ಅಫ್ಘಾನಿಸ್ತಾನ ಸರಣಿಯಲ್ಲಿ ಆಡಿದ್ದರು. ಇದಾದ ಮೇಲೆ ಈಗ ಮತ್ತೆ ವರುಣ್ ಚಕ್ರವರ್ತಿ ಇಂಜುರಿಗೆ ತುತ್ತಾಗಿರುವುದು ಭಾರೀ ಬೇಸರ ತರಿಸಿದೆ.  

ಅಫ್ಘಾನಿಸ್ತಾನ ಸರಣಿಯ ಮೊದಲ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ 18 ರನ್ ನೀಡಿ 1 ವಿಕೆಟ್ ಪಡೆದಿದ್ದ ವರುಣ್ ಚಕ್ರವರ್ತಿ, ಪಾರ್ಶ್ವ ನೋವಿನಿಂದಾಗಿ ಹೊರ ನಡೆದಿದ್ದರು. ಈ ಹಿನ್ನೆಲೆಯಲ್ಲಿ ಇನ್ನೇನು ಆರಂಭವಾಗಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ವರುಣ್ ಚಕ್ರವರ್ತಿ ಅವರು ಭಾಗವಹಿಸುವ ಸಾಧ್ಯತೆಗಳು ತೀರ ಕಡಿಮೆ ಇದೆ. ವರುಣ್ ಚಕ್ರವರ್ತಿ ತಂಡದಲ್ಲಿ ಭಾಗಿಯಾಗುವುದು ಬಹುತೇಕ ಅವಕಾಶ ಕಡಿಮೆ ಇರುವ ಕಾರಣ ಅವರ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಏಷ್ಯನ್ ಗೇಮ್ಸ್‌ ಅಥವಾ ಏಷ್ಯನ್ ಕ್ರೀಡಾಕೂಟಕ್ಕೆ ವರುಣ್ ಚಕ್ರವರ್ತಿ ಬದಲಿಗೆ ಬಿಸಿಸಿಐ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಈಗಾಗಲೇ ಭಾರತೀಯ ತಂಡದಲ್ಲಿದ್ದಾರೆ. ಬಿಸಿಸಿಐ ಆಯ್ಕೆ ಮಾಡುವ ಸಾಧ್ಯತೆ ಇರುವ ನಾಲ್ವರು ಆಟಗಾರರು ಇಲ್ಲಿದ್ದಾರೆ.

ಕೃನಾಲ್ ಪಾಂಡ್ಯ; ಎಡಗೈ ಆಲ್‌ರೌಂಡರ್‌ ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಿದ್ದು 2021 ರಲ್ಲಿ. ಅಂದಿನಿಂದ ಅವರಿಗೆ ಭಾರತೀಯ ತಂಡದಲ್ಲಿ ಅವಕಾಶ ನೀಡಲಾಗಿಲ್ಲ. 2025 ಮತ್ತು 2026ರ ಐಪಿಎಲ್ ಸೀಸನ್‌ಗಳಲ್ಲಿ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. 2026ರಲ್ಲಿ ಕೃನಾಲ್‌ ಪಾಮಡ್ಯ ಅವರಯ 8.41 ಎಕನಾಮಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದರು.

ಅಕ್ಷರ್ ಪಟೇಲ್ ಈಗಾಗಲೇ ಟೀಮ್‌ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಇರುವುದರಿಂದ ಅವಕಾಶಗಳು ಕಡಿಮೆಯಾಗಿದ್ದರೂ, ಅವರು ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗುವುದರಿಂದ ಆಯ್ಕೆ ಮಾಡುವುದು ಉತ್ತಮ ಎನ್ನಬಹುದು. ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರು ಔಟ್‌ ಆಗಿದ್ದಾಗ ಅಕ್ಷರ್ ಪಟೇಲ್ ಅವರು ತಂಡಕ್ಕೆ ವಿಕೆಟ್‌ ಉಳಿಸುವುದು ಅಲ್ಲದೇ ರನ್‌ ತಂದು ಕೊಡುವ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈಗಾಗಲೇ ಇದನ್ನು ಅಕ್ಷರ್ ಪಟೇಲ್ ಅವರು ಸಾಬೀತು ಮಾಡಿದ್ದಾರೆ. ಬೌಲಿಂಗ್‌ನಲ್ಲಿ ನೆರವಾಗಿ ಇತರ ಬೌಲರ್‌ಗಳ ಹೊರೆಯನ್ನು ಕಡಿಮೆ ಮಾಡುತ್ತಾರೆ.

ಯಶ್ ರಾಜ್ ಪುಂಜಾ; ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡುವ ಯಶ್ ರಾಜ್ ಪುಂಜಾ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಆಡಿರುವ ಐಪಿಎಲ್‌ನಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಪ್ರಮುಖ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಬದಿಗಿಟ್ಟವರು ಏಂದರೆ ಅದು ಯಶ್ ರಾಜ್ ಪುಂಜಾ ಎನ್ನಬಹುದು. 6 ಅಡಿ ಎತ್ತರದ 20 ವರ್ಷದ ಈ ಯುವಕ ಕರ್ನಾಟಕದವರಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರ ಎತ್ತರವೇ ಅವರ ಬೌಲಿಂಗ್‌ಗೆ ಶಕ್ತಿಯಾಗಿದೆ. ಬಲಗೈ ಲೆಗ್ ಸ್ಪಿನ್ನರ್ ಆಗಿರುವ ಅವರು ಟೀಮ್‌ ಇಂಡಿಯಾದಲ್ಲಿ ಆಡುವುದಕ್ಕೆ ಸಮರ್ಥರು ಎಂದು ಹೇಳಬಹುದು. ಬಿಸಿಸಿಐ ಆಯ್ಕೆ ಮಾಡುತ್ತದೆಯೇ ಎಂದು ಕಾದು ನೋಡಬೇಕು ಎಷ್ಟೇ.

ವಿಬ್ರಾಜ್ ನಿಗಮ್; ಟೀಮ್‌ ಇಂಡಿಯಾದ ದೇಶೀಯ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ಆಟಗಾರ ವಿಬ್ರಾಜ್ ನಿಗಮ್ ಅವರು ಬೌಲಿಂಗ್‌ನಲ್ಲಿ ಪರಾಕ್ರಮಿ ಆಗಿದ್ದು ತಂಡದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಬಲ್ಲರು. ಹೀಗಾಗಿಯೇ ವರುಣ್‌ ಚಕ್ರವರ್ತಿ ಬದಲಿಗೆ ವಿಬ್ರಾಜ್‌ ನಿಗಮ್‌ ಹೆಸರು ಕೇಳಿ ಬರುತ್ತಿದೆ. ಬಲಗೈ ಲೆಗ್ ಸ್ಪಿನ್ನರ್ ಆಗಿರುವ ವಿಬ್ರಾಜ್‌ ನಿಗಮ್‌ 4 ಓವರ್ ಬೌಲಿಂಗ್ ಮಾಡಬಲ್ಲರು. ಇದರ ಜೊತೆಗೆ ಬ್ಯಾಕ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ ಮಾಡುವ ಮೂಲಕ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ 2 ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಮೂಲಕ ವಿಬ್ರಾಜ್‌ ನಿಗಮ್‌ ಅವರು ಗಮನ ಸೆಳೆದಿದ್ದಾರೆ. ಒತ್ತಡದಲ್ಲಿ ತಂಡವನ್ನು ಕಾಪಾಡುವ ಶಕ್ತಿ ಇದೆ.

ಕುಲದೀಪ್ ಯಾದವ್; ನಿಗೂಢ ಸ್ಪಿನ್ನರ್ ವರುಣ್ ಚಕ್ರವರ್ತಿ ಅನುಪಸ್ಥಿತಿಯಲ್ಲಿ, ಕುಲದೀಪ್ ಯಾದವ್ ಪ್ರಮುಖ ಸ್ಪಿನ್ನರ್ ಆಗುವ ಸಾಧ್ಯತೆಯಿದೆ. ಕುಲದೀಪ್ ಯಾದವ್ ಅವರು ಟಿ20ಐಗಳಲ್ಲಿ ಇದುವರೆಗೆ 95 ವಿಕೆಟ್‌ಗಳನ್ನು ಪಡೆದಿದ್ದಾರೆ. 6.95ರ ಎಕಾನಮಿ ದರವನ್ನು ಹೊಂದಿದ್ದಾರೆ. ಕುಲದೀಪ್ ಯಾದವ್ ಅವರ ಬೌಲಿಂಗ್ ಜಪಾನ್‌ನಲ್ಲಿ ಭಾರತ ತಂಡಕ್ಕೆ ದೊಡ್ಡ ಸಹಾಯವಾಗಲಿದೆ. ಆದ್ದರಿಂದ ಬಿಸಿಸಿಐ ಇತರ ಹೊಸಬರನ್ನು ಹುಡುಕುವ ಬದಲು ಕುಲದೀಪ್ ಯಾದವ್‌ಗೆ ಅವಕಾಶ ನೀಡುತ್ತದೆ ಎಂದು ಹೇಳಲಾಗುತ್ತಿದೆ. 
 

Add Zee News as a Preferred Source
TAGS:
Cricket
Team India