ಏಷ್ಯನ್ ಗೇಮ್‌ನಲ್ಲಿ ವಿಶೇಷ ದಾಖಲೆ ಬರೆದ ವೈಭವ್ ಸೂರ್ಯವಂಶಿ.. ಚಿನ್ನ ಗೆದ್ದ ಬಾಲಕನ ರೆಕಾರ್ಡ್ ಏನು?
ಫೈನಲ್ ಪಂದ್ಯದಲ್ಲಿ ಓಪನರ್ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಇಬ್ಬರೂ ಅರ್ಧಶತಕ ಬಾರಿಸಿ ಬೃಹತ್ ಸ್ಕೋರ್‌ಗೆ ಕಾರಣವಾದರು. ಇದರಿಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್‌ಗಳ ಟಾರ್ಗೆಟ್ ನೀಡಿತ್ತು.
Vaibhav Suryavanshi becomes youngest player to win gold medal: ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕದ ಫೈನಲ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಮೂಲಕ ಎರಡನೇ ಬಾರಿಗೆ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಫೈನಲ್ ಪಂದ್ಯದಲ್ಲಿ ಹೊಡಿ ಬಡಿ ಬ್ಯಾಟಿಂಗ್‌ಗೆ ಇಳಿದ ಓಪನರ್ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಇಬ್ಬರೂ ಅರ್ಧಶತಕ ಬಾರಿಸಿ ಬೃಹತ್ ಸ್ಕೋರ್‌ಗೆ ಕಾರಣವಾದರು. ಇದರಿಂದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್‌ಗಳ ಟಾರ್ಗೆಟ್ ನೀಡಿತ್ತು. ಆದರೆ ಈ ಗುರಿ ಮುಟ್ಟಲಾಗದೇ ಪಾಕಿಸ್ತಾನ ಸೋಲೋಪ್ಪಿಕೊಂಡಿತು. ಈ ಎಲ್ಲದರ ನಡುವೆ ಏಷ್ಯನ್ ಕ್ರೀಡಾಕೂಟದಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಬ್ಯಾಟಿಂಗ್ ಪ್ರದರ್ಶನ ಮಾಡದಿದ್ದರೂ ವಿಶೇಷವಾದ ದಾಖಲೆ ಬರೆದಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಟೀಮ್ ಇಂಡಿಯಾದ ಯಂಗ್ ಗನ್ ವೈಭವ್ ಸೂರ್ಯವಂಸಿ ಅಬ್ಬರಿಸದಿದ್ದರೂ ಚಿನ್ನದ ಪದಕ ಪಡೆದ ಅತ್ಯಂತ ಕಿರಿಯ ಆಟಗಾರ ಎನ್ನುವ ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಆಡಿದಂತಹ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆಯೂ ಈಗ ವೈಭವ್ ಸೂರ್ಯವಂಶಿ ಅವರ ಪಾಲಾಗಿದೆ. ಸದ್ಯ ವೈಭವ್ ಸೂರ್ಯವಂಶಿಗೆ 15 ವರ್ಷಗಳು ತುಂಬಿವೆ. ಈ ಮೊದಲು ದಾಖಲೆ ಶೂಟರ್ ಸೌರಭ್ ಚೌಧರಿ ಹೆಸರಲ್ಲಿತ್ತು. ಶೂಟರ್ ಸೌರಭ್ ಚೌಧರಿ ಅವರು 2018 ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಗ ಕೇವಲ 16 ವರ್ಷಗಳು ಆಗಿತ್ತು. ಆದರೆ ಈಗ ವೈಭವ್‌ಗೆ ಈಗ 15 ವರ್ಷಗಳು ತುಂಬಿವೆ.
ಇದರಿಂದ ವೈಭವ್ ಸೂರ್ಯವಂಶಿ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಎರಡನೇ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಈ ದಾಖಲೆಯನ್ನು ಸ್ಪೀಡ್ ಸ್ಕೇಟರ್ ಸಂಜನಾ ಬತುಲಾ ಅವರು ಹೊಂದಿದ್ದರು. ಸಂಜನಾ ಬತುಲಾ ಅವರು 15 ವರ್ಷ 3 ತಿಂಗಳು ಮತ್ತು 11 ದಿನಗಳು ಆಗಿದ್ದವು. ಆಗ 2023 ರಲ್ಲಿ ಹ್ಯಾಗ್‌ಝೌನಲ್ಲಿ ನಡೆದ ಮಹಿಳೆಯರ ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದರು.
ಪಾಕಿಸ್ತಾನದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಗಮನ ಹರಿಸಿದ್ದರು. ವೈಭವ್ ಸೂರ್ಯವಂಶಿ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂದು ಸಹ ಆಟಗಾರರು ಸೇರಿದಂತೆ ಅಭಿಮಾನಿಗಳು ಭಾವಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸುಲಭವಾಗಿ ಔಟ್ ಆಗಿ ಎಲ್ಲರಿಗೂ ನಿರಾಸೆ ಮೂಡಿಸಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಕೇವಲ 15 ರನ್‌ಗೆ ಔಟಾದರು. ಪಂದ್ಯದ ಮೂರನೇ ಓವರ್‌ನಲ್ಲಿ ಪಾಕಿಸ್ತಾನದ ಆಲ್‌ರೌಂಡರ್ ಸ್ಯಾಮ್ ಅಯೂಬ್ ಹಾಕಿದ ಬಾಲ್ ಅನ್ನು ಕೀಪರ್ ಹಿಂದೆ ಹೊಡೆಯಲು ಹೋದರು. ಆದರೆ ಆ ಬಾಲ್ ಬ್ಯಾಟ್‌ಗೆ ಟಚ್ ಆಗಿ ಕೀಪರ್ ಕೈ ಸೇರಿತು.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಶ್ರೇಯಸ್ ಅಯ್ಯರ್ ಪಡೆ ಸಂತಸದಲ್ಲಿ ತೇಲಾಡುತ್ತಿದೆ. ಎಲ್ಲ ಆಟಗಾರರು ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಅದರಲ್ಲಿ ಫೈನಲ್ ಪಂದ್ಯದಲ್ಲಿ ಓಪನರ್ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರು ಸಿಡಿಲಬ್ಬರದ ಅರ್ಧಶತಕ ಬಾರಿಸಿ ವಿಜಯಕ್ಕೆ ಕಾರಣರಾದರು. ಚಿನ್ನದ ಪದಕದೊಂದಿಗೆ ಟೀಮ್ ಇಂಡಿಯಾ ಆಟಗಾರರು ಭಾರತಕ್ಕೆ ಮರಳುತ್ತಿದ್ದಾರೆ. ತವರಿಗೆ ಬಂದ ಮೇಲೆ ಅಕ್ಟೋಬರ್ 6 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಶ್ರೇಯಸ್ ಅಯ್ಯರ್ ಪಡೆ ಅಖಾಡಕ್ಕೆ ಇಳಿಯಲಿದೆ.
ಈಗಾಗಲೇ ವೆಸ್ಟ್ ಇಂಡೀಸ್ ತಂಡ ಏಕದಿನ ಸರಣಿಯನ್ನು ಕೈಚೆಲ್ಲಿದ್ದು ಸೇಡಿನ ತವಕದಲ್ಲಿದೆ. ಶುಭ್‌ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಸರಣಿಯನ್ನು 2-1 ರಿಂದ ಗೆದ್ದುಕೊಂಡಿದೆ. ಈ ಸರಣಿಯಲ್ಲಿ 406 ರನ್‌ಗಳನ್ನು ಚೇಸ್ ಮಾಡಿರುವ ಟೀಮ್ ಇಂಡಿಯಾ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಅಲ್ಲದೇ ಕ್ಯಾಪ್ಟನ್ ಶುಭ್‌ಮನ್ ಗಿಲ್ ಅವರು ಇದೇ ಪಂದ್ಯದಲ್ಲಿ 200 ರನ್‌ಗಳನ್ನು ಬಾರಿಸುವ ಮೂಲಕ ಮತ್ತೊಮ್ಮೆ ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲಿ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿರಲಿದೆ. ಏಕೆಂದರೆ ಈಗಾಗಲೇ ಅವರ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಅವಕಾಶ ಸಿಗುತ್ತಾ ಎಂದು ಕಾದು ನೋಡಬೇಕಿದೆ. ಜಿಂಬಾಬ್ವೆ ವಿರುದ್ಧ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಮತ್ತೆ ಬ್ಯಾಟಿಂಗ್‌ನಲ್ಲಿ ಸೈಲೆಂಟ್ ಆಗಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೈಭವ್‌ಗೆ ಅತ್ಯಂತ ಮುಖ್ಯವಾಗಿದೆ ಎನ್ನಬಹುದು.