SOCIAL MEDIA

Newsletter

PARTNER SITES
Select Language Select State

ಕ್ಯಾಪ್ಟನ್ಸಿಗೆ ದಿಢೀರ್‌ ರಾಜೀನಾಮೆ.. ಟೀಮ್‌ ಇಂಡಿಯಾದ T20, ODI, ಟೆಸ್ಟ್‌ಗೆ ಮುಂದಿನ ನಾಯಕಿ?

ವುಮೆನ್ಸ್‌ ಟೀಮ್‌ ಇಂಡಿಯಾದ ಎಲ್ಲ ಸ್ವರೂಪದ ನಾಯಕಿ ಸ್ಥಾನಕ್ಕೆ ಹರ್ಮನ್‌ಪ್ರೀತ್ ಕೌರ್ ಅವರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತ ತಂಡದ ನಾಯಕಿ ಸ್ಥಾನಕ್ಕೆ ಸ್ಮೃತಿ ಮಂಧಾನ ಅವರ ಹೆಸರು..

Written By Bhimappa
Published: Oct 06, 2026, 01:25 PM IST | Updated: Oct 06, 2026, 01:34 PM IST
Image Credit: smriti_mandhana_india_captain
Join

indian women cricket team next captain: 2025 ರ ಮಹಿಳಾ ವಿಶ್ವಕಪ್ ಪ್ರಶಸ್ತಿ ಮತ್ತು 2026ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಸ್ವರೂಪಗಳ ಅಂದರೆ ಒಡಿಐ, T20 ಮತ್ತು ಟೆಸ್ಟ್‌ ನಾಯಕತ್ವಕ್ಕೆ ದಿಢೀರ್‌ ಎಂದು ರಾಕೀನಾಮೆ ನೀಡಿದ್ದಾರೆ. ಅಸ್ಸಾಂನ ಗುವಹಟಿಯಲ್ಲಿ ನಡೆದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ BCCI ಯ ಪರಿಶೀಲನಾ ಸಭೆಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಈ ಮೂಲಕ ಭಾರತದ ಮಹಿಳಾ ತಂಡದ ಎಲ್ಲ ಸ್ವರೂಪಗಳ ನಾಯಕಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಹಾಗಾದ್ರೆ ಮುಂದಿನ ಮಹಿಳಾ ತಂಡದ ನಾಯಕಿ ಯಾರು ಎಂಬುದು ಕುತೂಹಲ ಮೂಡಿಸಿದೆ. ರೇಸ್‌ನಲ್ಲಿ ಸ್ಮೃತಿ ಮಂಧಾನ ಅವರ ಹೆಸರು ಮಾತ್ರ ಕೇಳಿ ಬರುತ್ತಿದೆ.  

ವುಮೆನ್ಸ್‌ ಟೀಮ್‌ ಇಂಡಿಯಾದ ಎಲ್ಲ ಸ್ವರೂಪದ ನಾಯಕಿ ಸ್ಥಾನಕ್ಕೆ ಹರ್ಮನ್‌ಪ್ರೀತ್ ಕೌರ್ ಅವರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಭಾರತ ತಂಡದ ನಾಯಕಿ ಸ್ಥಾನಕ್ಕೆ ಸ್ಮೃತಿ ಮಂಧಾನ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಬಹುತೇಕವಾಗಿ ಸ್ಮೃತಿ ಮಂಧಾನ ಅವರೇ ನಾಯಕತ್ವ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಮಂಧಾನ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿಯಾಗಿದ್ದು, ಮೂರು ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಅವರು ಹಲವು ವರ್ಷಗಳ ಕಾಲ ಉಪನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ಕೇವಲ ನಾಯಕತ್ವ ಸ್ಥಾನದಿಂದ ಮಾತ್ರ ಕೆಳಗಿಳಿದಿದ್ದು ಕ್ರಿಕೆಟ್‌ನಲ್ಲಿ ಮುಂದುವರೆಯಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಅವರು ಆಟಗಾರ್ತಿಯಾಗಿ ಭಾರತೀಯ ತಂಡಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ. ಹರ್ಮನ್‌ಪ್ರೀತ್ ಕೌರ್ ಅವರು ಈಗಲೂ ಉತ್ತಮ ಫಾರ್ಮ್‌ನಲ್ಲಿದ್ದು ಸಂಕಷ್ಟದ ಸಂದರ್ಭದಲ್ಲಿ ಟೀಮ್‌ ಇಂಡಿಯಾಗೆ ನೆರವು ಆಗಿದ್ದಾರೆ. ಅಲ್ಲದೇ ಇಷ್ಟು ದಿನಗಳ ಕಾಲ ಸಮರ್ಥವಾಗಿ ಟೀಮ್‌ ಇಂಡಿಯಾದ ಜವಾಬ್ದಾರಿಯನ್ನು ನಿರ್ವಹಿಸಿದ್ದು ಈಗ ಕೇವಲ ಆಟಗಾರ್ತಿಯಾಗಿ ಮಾತ್ರ ತಂಡದಲ್ಲಿ ಮುಂದುವರೆಯಲಿದ್ದಾರೆ.

ಮೊನ್ನೆ ಮೊನ್ನೆ ಅಷ್ಟೇ ಜಪಾನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿತ್ತು. ಇದರ ಬೆನ್ನಲ್ಲೇ ಅಸ್ಸಾಂನ ಗುವಾಹಟಿಯಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಅವರ ನೇತೃತ್ವದಲ್ಲಿ ನಡೆದ ಬಿಸಿಸಿಐನ ಪರಿಶೀಲನಾ ಸಭೆ ನಡೆದಿದೆ. ಈ ಸಭೆಯಲ್ಲಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ, ಹೆಡ್‌ ಕೋಚ್ ಅಮೋಲ್ ಮುಜುಂದಾರ್‌ ಭಾಗಿಯಾಗಿದ್ದರು. ಇತ್ತೀಚೆಗೆ ಹರ್ಮನ್‌ಪ್ರೀತ್ ಕೌರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎನ್ನುವ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸಭೆಯನ್ನು ಮಾಡಲಾಗಿತ್ತು.

ಇನ್ನು ಸ್ಮೃತಿ ಮಂಧಾನ ಅವರು ಭಾರತದ ಮಹಿಳಾ ತಂಡದ ಸ್ಟಾರ್‌ ಕ್ರಿಕೆಟರ್‌ ಆಟಗಾರ್ತಿ ಆಗಿದ್ದಾರೆ. ಏಕದಿನ, T20 ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೇ ಕೆಲವು ವರ್ಷಗಳಿಂದ ಹರ್ಮನ್‌ಪ್ರೀತ್ ಕೌರ್ ಅವರಿಗೆ ಉತ್ತಮ ಸಾಥ್‌ ನೀಡುತ್ತ ಸ್ಮೃತಿ ಮಂಧಾನ ಅವರು ಉಪನಾಯಕಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಹಾಗಾಗಿ ಮಹಿಳಾ ತಂಡಕ್ಕೆ ಸ್ಮೃತಿ ಮಂಧಾನ ಅವರೇ ನಾಯಕಿ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಆದರೆ ಅಂತಿಮವಾಗಿ ಬಿಸಿಸಿಐ ತೆಗೆದುಕೊಳ್ಳುವ ನಿರ್ಣಯದ ಮೇಲೆ ಎಲ್ಲವೂ ನಿಂತಿರುತ್ತದೆ. ಬಿಸಿಸಿಐ ನಡೆಸಿದ ಸಭೆಯಲ್ಲಿ ಉಪನಾಯಕಿಯಾಗಿ ಸ್ಮೃತಿ ಮಂಧಾನ ಕೂಡ ಇದ್ದರು. ಸಭೆಯಲ್ಲಿ ಮುಂದಿನ ನಾಯಕಿ ಸ್ಥಾನದ ಬಗ್ಗೆ ಚರ್ಚೆ ಆಗಿದೆಯೇ ಎಂಬುವ ಮಾಹಿತಿ ಹೊರ ಬಿದ್ದಿಲ್ಲ. ಕೆಲವು ವರ್ಷಗಳಿಂದ ತಂಡದಲ್ಲಿ ನಂಬಿಕಸ್ಥೆ ಮತ್ತು ಪಂದ್ಯ ಸಂಕಷ್ಟದಲ್ಲಿರುವಾಗ ಬಲಿಷ್ಠ ಬ್ಯಾಟಿಂಗ್‌ ಪ್ರದರ್ಶನ ಮಾಡಿ ಗೆಲುವು ತಂದುಕೊಟ್ಟಿದ್ದಾರೆ. ಬ್ಯಾಟಿಂಗ್‌ ಮಾಡಲು ಆರಂಭಿಕರಾಗಿಯೇ ಕ್ರೀಸ್‌ಗೆ ಬರುವ ಸ್ಮೃತಿ ಮಂಧಾನ ಪಂದ್ಯದ ಗತಿಯನ್ನು ಬದಲಿಸಿ ಮ್ಯಾಚ್‌ ಅನ್ನು ಒಂದು ಸೈಡ್‌ ಮಾಡಿಬಿಡುತ್ತಾರೆ.

30 ವರ್ಷದ ಸ್ಮೃತಿ ಮಂಧಾನ 13 ವರ್ಷಗಳ ಹಿಂದೆ 2013 ರಲ್ಲಿ ಟೀಮ್‌ ಇಂಡಿಯಾ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸ್ಮೃತಿ ಮಂಧಾನ ಅವರು ಭಾರತ ಪರ 120 ಏಕದಿನ ಪಂದ್ಯಗಳನ್ನು ಆಡಿದ್ದಾರೆ, 47.88 ಸರಾಸರಿಯಲ್ಲಿ 5,411 ರನ್ ಗಳಿಸಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 14 ಶತಕಗಳು ಮತ್ತು 35 ಅರ್ಧಶತಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಈಗಲೂ ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಅವರು ಭಾರತ ಪರ 179 ಪಂದ್ಯಗಳಲ್ಲಿ 4,867 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳು ಮತ್ತು 37 ಅರ್ಧಶತಕಗಳು ಸೇರಿವೆ. ಹೆಚ್ಚುವರಿಯಾಗಿ, ಸ್ಮೃತಿ ಮಂಧಾನ ಅವರು ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದು 788 ರನ್ ಗಳಿಸಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ, ಅವರು ಎರಡು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಭಾರತದ ಮುಂದಿನ ನಾಯಕಿಯಾಗುವ ಸಾಧ್ಯತೆ ಇರುವವರಲ್ಲಿ ಹರ್ಮನ್ಪ್ರೀತ್ ಕೌರ್ ಮಾತ್ರ ಮುಂಚೂಣಿಯಲ್ಲಿದ್ದಾರೆ.  

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES