ಈ ಖ್ಯಾತ ನಟನ ಜೊತೆ ಸಾರಾ ತೆಂಡೂಲ್ಕರ್ ಮದುವೆ ಫಿಕ್ಸ್!
ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪುತ್ರ ರಾಜ್‌ವೀರ್ ಡಿಯೋಲ್ ಜೊತೆ ಸಾರಾ ಅವರ ಹೆಸರು ತಳುಕು ಹಾಕಿಕೊಂಡಿದ್ದು, ಇಬ್ಬರೂ 2027ರಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Sara Tendulkar marriage: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಆಗಾಗ್ಗೆ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಮದುವೆ ಕುರಿತ ವದಂತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪುತ್ರ ರಾಜ್‌ವೀರ್ ಡಿಯೋಲ್ ಜೊತೆ ಸಾರಾ ಅವರ ಹೆಸರು ತಳುಕು ಹಾಕಿಕೊಂಡಿದ್ದು, ಇಬ್ಬರೂ 2027ರಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳ ಬೆನ್ನಲ್ಲೇ ಇದೀಗ ಸಾರಾ ಅವರ ಆಪ್ತ ಮೂಲಗಳು ಸ್ಪಷ್ಟನೆ ನೀಡಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ ಮದುವೆಯಾಗಲಿದ್ದಾರೆ ಎಂಬ ಪೋಸ್ಟ್‌ಗಳು ವೈರಲ್ ಆಗಿದ್ದವು. ಅಷ್ಟೇ ಅಲ್ಲದೆ, ರಾಜ್‌ವೀರ್ ಸಾರಾ ಅವರಿಗೆ ದುಬಾರಿ ಉಡುಗೊರೆಗಳನ್ನು ಕಳುಹಿಸುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದರಿಂದ ಇಬ್ಬರ ನಡುವೆ ಪ್ರೇಮ ಸಂಬಂಧವಿದೆಯೇ ಎಂಬ ಚರ್ಚೆ ಆರಂಭವಾಗಿತ್ತು.
ಆದರೆ ಈ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾರಾ ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ. ಸಾರಾ ಸದ್ಯ ಸಿಂಗಲ್ ಆಗಿದ್ದು, ತಮ್ಮ ವೃತ್ತಿ ಮತ್ತು ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಮದುವೆ ಕುರಿತ ವದಂತಿಗಳು ಅನಗತ್ಯ ಗೊಂದಲ ಸೃಷ್ಟಿಸುತ್ತಿವೆ ಎಂದು ಆಪ್ತರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಸಾರಾ ಮತ್ತು ರಾಜ್‌ವೀರ್ ಒಬ್ಬರನ್ನೊಬ್ಬರು ಭೇಟಿಯೂ ಆಗಿಲ್ಲ ಎಂದು ಹೇಳಲಾಗಿದೆ.
ಸಾರಾ ಮತ್ತು ರಾಜ್‌ವೀರ್ ಇಬ್ಬರೂ ದೇಶದ ಪ್ರಸಿದ್ಧ ಕುಟುಂಬಗಳಿಗೆ ಸೇರಿದವರಾಗಿರುವುದರಿಂದ ಈ ಸುದ್ದಿ ಹೆಚ್ಚು ಗಮನ ಸೆಳೆದಿದೆ. ಸಾರಾ ಅವರು ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ತೆಂಡೂಲ್ಕರ್ ದಂಪತಿಯ ಹಿರಿಯ ಪುತ್ರಿ. ಮತ್ತೊಂದೆಡೆ, ರಾಜ್‌ವೀರ್ ಡಿಯೋಲ್ ಅವರು ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಪುತ್ರ ಹಾಗೂ ಹಿರಿಯ ನಟ ಧರ್ಮೇಂದ್ರ ಅವರ ಮೊಮ್ಮಗ. ಎರಡೂ ಕುಟುಂಬಗಳು ಚಿತ್ರರಂಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿವೆ. ಹೀಗಾಗಿ ಇವರಿಬ್ಬರ ಮದುವೆ ಕುರಿತ ಸುದ್ದಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಆದರೆ ಈ ಸಂಬಂಧವಾಗಿ ಎರಡೂ ಕುಟುಂಬಗಳಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.
ಸಾರಾ ತೆಂಡೂಲ್ಕರ್ ಅವರ ವೈಯಕ್ತಿಕ ಜೀವನದ ಬಗ್ಗೆ ಇಂತಹ ಸುದ್ದಿಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಈ ಕುರಿತು ಸಾರಾ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿರಲಿಲ್ಲ. ವೈಯಕ್ತಿಕ ಜೀವನದ ವಿಚಾರಗಳನ್ನು ಖಾಸಗಿಯಾಗಿಯೇ ಇರಿಸಿಕೊಳ್ಳಲು ಅವರು ಇಷ್ಟಪಡುತ್ತಾರೆ.
ಒಟ್ಟಿನಲ್ಲಿ, ಸಾರಾ ತೆಂಡೂಲ್ಕರ್ ಮತ್ತು ರಾಜ್‌ವೀರ್ ಡಿಯೋಲ್ 2027ರಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಕೇವಲ ವದಂತಿಯಾಗಿದೆ. ಇಬ್ಬರ ನಡುವೆ ಪ್ರೇಮ ಸಂಬಂಧವಿದೆ ಅಥವಾ ಮದುವೆ ನಿಶ್ಚಯವಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಸತ್ಯವೆಂದು ನಂಬುವ ಮುನ್ನ ಅಧಿಕೃತ ಮಾಹಿತಿಗಾಗಿ ಕಾಯುವುದು ಉತ್ತಮ.