• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಕೆ.ಎಲ್.ರಾಹುಲ್‌ಗೆ ಒಂದೇ ಇನಿಂಗ್ಸ್‌ನಲ್ಲಿ ಎರಡು ಬಾರಿ ಜೀವದಾನ! ಅಂಪೈರ್ ಕುಮಾರ್ ಧರ್ಮಸೇನಾ ವಿರುದ್ಧ ಆಕ್ರೋಶ

ಕೆ.ಎಲ್.ರಾಹುಲ್‌ಗೆ ಒಂದೇ ಇನಿಂಗ್ಸ್‌ನಲ್ಲಿ ಎರಡು ಬಾರಿ ಜೀವದಾನ! ಅಂಪೈರ್ ಕುಮಾರ್ ಧರ್ಮಸೇನಾ ವಿರುದ್ಧ ಆಕ್ರೋಶ

ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿರುದ್ಧ ನ್ಯೂಜಿಲೆಂಡ್ ಬೌಲರ್‌ಗಳು ಸಲ್ಲಿಸಿದ ಎರಡು ಎಲ್‌ಬಿಡಬ್ಲ್ಯೂ ಮನವಿಗಳನ್ನ ಅಂಪೈರ್ ಕುಮಾರ್ ಧರ್ಮಸೇನಾ ತಿರಸ್ಕರಿಸಿದ್ದಾರೆ. ಮೊದಲ ಬಾರಿ ಡಿಆರ್‌ಎಸ್‌ನಲ್ಲಿ 'ಅಂಪೈರ್ಸ್ ಕಾಲ್' ಬಂದರೆ, ಎರಡನೇ ಬಾರಿ ಬಾಲ್‌ ಟ್ರ್ಯಾಕಿಂಗ್‌ನಲ್ಲಿ ಚೆಂಡು ಸ್ಟಂಪ್‌ಗೆ ಬಡಿಯುವ ದೃಶ್ಯ ಕಾಣಿಸಿಕೊಂಡಿದೆ. ಈ ತೀರ್ಪುಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರಿಂಗ್ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Written ByPuttaraj K Alur
Published: Nov 21, 2026, 13:01 IST|Updated: Nov 21, 2026, 13:30 IST
joinshare
ಕೆ.ಎಲ್.ರಾಹುಲ್‌ಗೆ ಒಂದೇ ಇನಿಂಗ್ಸ್‌ನಲ್ಲಿ ಎರಡು ಬಾರಿ ಜೀವದಾನ! ಅಂಪೈರ್ ಕುಮಾರ್ ಧರ್ಮಸೇನಾ ವಿರುದ್ಧ ಆಕ್ರೋಶ
Image Credit: KL Rahul LWB

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

2

₹1,000 ಇದ್ದರೆ ಸಾಕು! ಈ ವಾರ ಲಾಂಚ್ ಆಗಲಿವೆ 4 ಹೊಸ ಮ್ಯೂಚುವಲ್ ಫಂಡ್‌ಗಳು; ಹೂಡಿಕೆಗೆ ಸಿದ್ಧರಾಗಿ!

3

ʻಐಶಿರ್ʼ ಜೋಡಿಯ ನಿಶ್ಚಿತಾರ್ಥ ಸಂಭ್ರಮ: ಉಂಗುರ ಬದಲಾಯಿಸಿಕೊಂಡ ಶಿಶಿರ್ ಶಾಸ್ತ್ರಿ - ಐಶ್ವರ್ಯಾ

4

ಘೋರ ದುರಂತ: ಪ್ರೀತಿಸಿ ಮದುವೆಯಾದ ಕೇವಲ 45 ದಿನದಲ್ಲೇ ನವದಂಪತಿ ದುರ್ಮರಣ!

5

ಟೊಮೆಟೊ ಜ್ಯೂಸ್ vs ಕಿತ್ತಳೆ ಜ್ಯೂಸ್.. ಸಕ್ಕರೆ ನಿಯಂತ್ರಿಸಲು ಬೆಳಿಗ್ಗೆ ಯಾವುದು ಕುಡಿಯುವುದು ಉತ್ತಮ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Umpiring Controversy: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಕೆ.ಎಲ್.ರಾಹುಲ್ ಅವರ ವಿಕೆಟ್ ಪಡೆಯಲು ನ್ಯೂಜಿಲೆಂಡ್ ಬೌಲರ್‌ಗಳು ನಡೆಸಿದ ಪ್ರಯತ್ನಕ್ಕೆ ಅಂಪೈರ್‌ಗಳ ತೀರ್ಪುಗಳು ಅಡ್ಡಿಯಾದ ಘಟನೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಒಂದೇ ಇನಿಂಗ್ಸ್‌ನಲ್ಲಿ ರಾಹುಲ್ ಎರಡು ಬಾರಿ ಎಲ್‌ಬಿಡಬ್ಲ್ಯೂ ಬಲೆಗೆ ಸಿಲುಕಿದರೂ, ಎರಡೂ ಸಂದರ್ಭಗಳಲ್ಲಿ ಅಂಪೈರ್ ಕುಮಾರ್ ಧರ್ಮಸೇನಾ ನಾಟೌಟ್ ಎಂದು ತೀರ್ಪು ನೀಡಿದರು. ಈ ನಿರ್ಧಾರಗಳು ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆಯಾದರೆ, ರಾಹುಲ್‌ಗೆ ಎರಡು ಬಾರಿ ಜೀವದಾನ ಸಿಕ್ಕಂತಾಯಿತು.

ಐಸಿಸಿ ಎಲೈಟ್ ಪ್ಯಾನೆಲ್‌ನ ಅನುಭವಿ ಅಂಪೈರ್ ಆಗಿರುವ ಕುಮಾರ್ ಧರ್ಮಸೇನಾ ಅವರ ತೀರ್ಪುಗಳ ಕುರಿತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಎರಡನೇ ಎಲ್‌ಬಿಡಬ್ಲ್ಯೂ ಮನವಿಯ ಸಂದರ್ಭದಲ್ಲಿ ಚೆಂಡು ವಿಕೆಟ್‌ಗೆ ಬಡಿಯುತ್ತಿರುವ ದೃಶ್ಯ ಪ್ರಸಾರದ ವೇಳೆ ಕಾಣಿಸಿಕೊಂಡಿದ್ದು, ಅಂಪೈರಿಂಗ್ ನಿರ್ಧಾರದ ಬಗ್ಗೆ ಮತ್ತಷ್ಟು ಚರ್ಚೆ ಹುಟ್ಟುಹಾಕಿದೆ.

ಮೊದಲ ಬಾರಿ ಎಲ್‌ಬಿಡಬ್ಲ್ಯೂ ಮನವಿ ತಿರಸ್ಕಾರ

ಪಂದ್ಯದ ಆರಂಭಿಕ ಹಂತದಲ್ಲಿ ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಬೌಲಿಂಗ್ ಮಾಡುತ್ತಿದ್ದಾಗ ಕೆ.ಎಲ್.ರಾಹುಲ್ ಅವರ ಪ್ಯಾಡ್‌ಗೆ ಚೆಂಡು ಬಡಿಯಿತು. ಇದನ್ನ ಗಮನಿಸಿದ ನ್ಯೂಜಿಲೆಂಡ್ ಆಟಗಾರರು ಬಲವಾಗಿ ಎಲ್‌ಬಿಡಬ್ಲ್ಯೂ ಮನವಿ ಸಲ್ಲಿಸಿದರು. ಆದರೆ ಅಂಪೈರ್ ಕುಮಾರ್ ಧರ್ಮಸೇನಾ ನಾಟೌಟ್ ಎಂದು ತೀರ್ಪು ನೀಡಿದರು. ಅಂಪೈರ್ ನಿರ್ಧಾರದಿಂದ ತೃಪ್ತರಾಗದ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ತಕ್ಷಣವೇ ಡಿಆರ್‌ಎಸ್ ಮೊರೆ ಹೋದರು. ಮೂರನೇ ಅಂಪೈರ್ ಪರಿಶೀಲನೆ ವೇಳೆ ಬಾಲ್‌ ಟ್ರ್ಯಾಕಿಂಗ್‌ನಲ್ಲಿ 'ಅಂಪೈರ್ಸ್ ಕಾಲ್' ಫಲಿತಾಂಶ ಕಂಡುಬಂತು. ಹೀಗಾಗಿ ಮೈದಾನದ ಅಂಪೈರ್ ನೀಡಿದ್ದ ನಾಟೌಟ್ ತೀರ್ಪೇ ಅಂತಿಮವಾಯಿತು. ಪರಿಣಾಮ ರಾಹುಲ್ ವಿಕೆಟ್ ಪಡೆಯುವ ನ್ಯೂಜಿಲೆಂಡ್ ತಂಡದ ಪ್ರಯತ್ನ ಮೊದಲ ಬಾರಿಗೆ ವಿಫಲವಾಯಿತು.

ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲೂ ಮತ್ತೊಂದು ಜೀವದಾನ

ಮೊದಲ ಘಟನೆಯ ಬಳಿಕ ಕೆಲವೇ ಓವರ್‌ಗಳಲ್ಲಿ ರಾಹುಲ್ ಮತ್ತೊಮ್ಮೆ ಎಲ್‌ಬಿಡಬ್ಲ್ಯೂ ವಿವಾದಕ್ಕೆ ಸಿಲುಕಿದರು. ಈ ಬಾರಿ ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಚೆಂಡು ರಾಹುಲ್ ಅವರ ಪ್ಯಾಡ್‌ಗೆ ಬಡಿಯಿತು. ನ್ಯೂಜಿಲೆಂಡ್ ಆಟಗಾರರು ಮತ್ತೊಮ್ಮೆ ವಿಕೆಟ್‌ಗಾಗಿ ಮನವಿ ಸಲ್ಲಿಸಿದರು. ಆದರೆ ಕುಮಾರ್ ಧರ್ಮಸೇನಾ ಎರಡನೇ ಬಾರಿಯೂ ನಾಟೌಟ್ ಎಂದು ತೀರ್ಪು ನೀಡಿದರು. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಡಿಆರ್‌ಎಸ್ ಮೂಲಕ ತೀರ್ಪನ್ನ ಮರುಪರಿಶೀಲಿಸುವ ಅವಕಾಶ ಇರಲಿಲ್ಲ. ಹೀಗಾಗಿ ಮೈದಾನದ ಅಂಪೈರ್ ನಿರ್ಧಾರವನ್ನೇ ಒಪ್ಪಿಕೊಳ್ಳಬೇಕಾಯಿತು. ಇದರಿಂದ ರಾಹುಲ್ ಮತ್ತೊಂದು ಬಾರಿ ವಿಕೆಟ್ ಕಳೆದುಕೊಳ್ಳುವುದರಿಂದ ಪಾರಾದರು.

ಬಾಲ್ ಟ್ರ್ಯಾಕಿಂಗ್ ದೃಶ್ಯದಿಂದ ಹೆಚ್ಚಿದ ಚರ್ಚೆ

ಮ್ಯಾಟ್ ಹೆನ್ರಿ ಎಸೆದ ಚೆಂಡಿನ ಬಾಲ್‌ ಟ್ರ್ಯಾಕಿಂಗ್ ದೃಶ್ಯ ಪ್ರಸಾರದ ವೇಳೆ ತೋರಿಸಲಾಯಿತು. ಈ ದೃಶ್ಯದಲ್ಲಿ ಚೆಂಡು ನೇರವಾಗಿ ಮಧ್ಯದ ಸ್ಟಂಪ್‌ಗೆ ಬಡಿಯುವ ಸಾಧ್ಯತೆ ಕಂಡುಬಂದಿತ್ತು. ಹೀಗಾಗಿ ರಾಹುಲ್ ವಿರುದ್ಧದ ಎರಡನೇ ಎಲ್‌ಬಿಡಬ್ಲ್ಯೂ ಮನವಿಯನ್ನ ನಾಟೌಟ್ ಎಂದು ತಿರಸ್ಕರಿಸಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಲ್ಲಿ ಅಸಮಾಧಾನ ಹೆಚ್ಚಾಯಿತು. ಒಂದೇ ಇನಿಂಗ್ಸ್‌ನಲ್ಲಿ ಎರಡು ಬಾರಿ ಎಲ್‌ಬಿಡಬ್ಲ್ಯೂ ಮನವಿ ಎದುರಿಸಿದ ರಾಹುಲ್ ಎರಡೂ ಸಂದರ್ಭಗಳಲ್ಲಿ ಔಟಾಗದೆ ಉಳಿದಿದ್ದು, ನ್ಯೂಜಿಲೆಂಡ್ ತಂಡಕ್ಕೆ ನಿರಾಶೆ ಮೂಡಿಸಿತು. ವಿಶೇಷವಾಗಿ ಎರಡನೇ ಘಟನೆಯಲ್ಲಿ ಬಾಲ್‌ ಟ್ರ್ಯಾಕಿಂಗ್ ದೃಶ್ಯದಲ್ಲಿ ಕಂಡುಬಂದ ಅಂಶಗಳು ಅಂಪೈರ್ ತೀರ್ಪಿನ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರಿಂಗ್ ವಿರುದ್ಧ ಟೀಕೆ

ಈ ಎರಡು ಘಟನೆಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕುಮಾರ್ ಧರ್ಮಸೇನಾ ಅವರ ಅಂಪೈರಿಂಗ್ ನಿರ್ಧಾರಗಳ ಕುರಿತು ಚರ್ಚೆ ಆರಂಭಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹೊಂದಿರುವ ಅಂಪೈರ್‌ಗಳಿಂದ ಇಂತಹ ನಿರ್ಧಾರಗಳು ಬಂದಿರುವುದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ಅಂಪೈರ್‌ಗಳ ನಿರ್ಧಾರಗಳು ಎಷ್ಟು ಮಹತ್ವದ್ದಾಗಿರುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಒಂದೇ ಇನಿಂಗ್ಸ್‌ನಲ್ಲಿ ಎರಡು ಬಾರಿ ವಿಕೆಟ್ ಪಡೆಯುವ ಅವಕಾಶ ಕೈತಪ್ಪಿರುವುದು ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ಎರಡು ಜೀವದಾನಗಳನ್ನ ಪಡೆದ ಕೆ.ಎಲ್.ರಾಹುಲ್‌ 290 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 9 ಬೌಂಡರಿ ಇದ್ದ 136 ರನ್‌ ಗಳಿಸಿ ಭರ್ಜರಿ ಶಕತ ಸಿಡಿಸಿ ಮಿಂಚಿದರು. ರಾಹುಲ್‌ ಅದ್ಭುತ ಆಟದ ಪರಿಣಾಮ ಭಾರತ ತಂಡವು ನ್ಯೂಜಿಲೆಂಡ್‌ ವಿರುದ್ಧ ಇನ್ನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದೆ. ಒಟ್ನಲ್ಲಿ ರಾಹುಲ್ ಅವರ ವಿರುದ್ಧದ ಎರಡು ಎಲ್‌ಬಿಡಬ್ಲ್ಯೂ ಮನವಿಗಳು ತಿರಸ್ಕೃತವಾಗಿರುವುದು ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಅಂಪೈರ್ ಕುಮಾರ್ ಧರ್ಮಸೇನಾ ಅವರ ನಿರ್ಧಾರಗಳು ಮತ್ತು ಬಾಲ್‌ ಟ್ರ್ಯಾಕಿಂಗ್ ದೃಶ್ಯಗಳು ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ.

Add Zee News as a Preferred Source
TAGS:
Cricket
Sports
Kannada News