SOCIAL MEDIA

Newsletter

PARTNER SITES
Select Language Select State

IPL ಆರಂಭಕ್ಕೂ ಮುನ್ನ ಸ್ಟಾರ್‌ ಆಟಗಾರನಿಂದ RCB ಫ್ಯಾನ್ಸ್‌ಗೆ ಬಿಗ್ ಗುಡ್‌ನ್ಯೂಸ್!

ಐಪಿಎಲ್ 2027 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ.

Written By Ramya. R. Gowda
Published: Nov 22, 2026, 09:05 IST | Updated: Nov 22, 2026, 09:24 IST
Join

ಐಪಿಎಲ್ 2027 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಆಸ್ಟ್ರೇಲಿಯಾದ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯ ನಡುವೆಯೂ ಆರ್‌ಸಿಬಿ ತಂಡದ ಸ್ಟಾರ್ ವೇಗಿ ಜೋಶ್ ಹೇಝಲ್‌ವುಡ್ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಕನಸು ಕಾಣುತ್ತಿರುವ ಆರ್‌ಸಿಬಿಗೆ ಆನೆಬಲ ಬಂದಂತಾಗಿದೆ. ಹಾಗಾದ್ರೆ ಹೇಝಲ್‌ವುಡ್ ಲಭ್ಯತೆಯಿಂದ ಆರ್‌ಸಿಬಿ ಬೌಲಿಂಗ್ ಪಡೆಗೆ ಎಷ್ಟು ಬಲ ಬಂದಿದೆ? ನೋಡೋಣ ಈ ವರದಿ.


2027ರ ಐಪಿಎಲ್‌ಗೂ ಮುನ್ನವೇ ಆರ್‌ಸಿಬಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ತಂಡದ ಪ್ರಮುಖ ವೇಗಿ ಜೋಶ್ ಹೇಝಲ್‌ವುಡ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆಡಲು ಸಂಪೂರ್ಣ ಸಿದ್ಧರಿದ್ದಾರೆ. ತಮ್ಮ ಲಭ್ಯತೆಯನ್ನು ಫ್ರಾಂಚೈಸಿಗೆ ಖಚಿತಪಡಿಸುವ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.

ಅಂದಹಾಗೆ 2027ರಲ್ಲಿ ಆಸ್ಟ್ರೇಲಿಯಾ ತಂಡದ ವೇಳಾಪಟ್ಟಿ ಫುಲ್ ಬ್ಯುಸಿ. ಜನವರಿಯಿಂದ ಮಾರ್ಚ್‌ವರೆಗೆ ಭಾರತ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ, ಬಳಿಕ ಇಂಗ್ಲೆಂಡ್‌ನಲ್ಲಿ ಆ್ಯಶಸ್ ಸರಣಿ, ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಪ್ಯಾಟ್ ಕಮಿನ್ಸ್ ಲಭ್ಯತೆಯೂ ಅನುಮಾನದಲ್ಲಿದೆ. ಆದರೆ ಹೇಝಲ್‌ವುಡ್ ಮಾತ್ರ ಆರ್‌ಸಿಬಿಗೆ ಜೈ ಎಂದಿದ್ದಾರೆ.


ಇನ್ನು ಹೇಝಲ್‌ವುಡ್ ಅವರನ್ನು ಆರ್‌ಸಿಬಿ ₹12.50 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳಿಗೆ ಕಂಟಕವಾಗಿರುವ ಈ ವೇಗಿ ತಂಡದಲ್ಲಿರುವುದು ಆರ್‌ಸಿಬಿಯ ಬೌಲಿಂಗ್ ವಿಭಾಗಕ್ಕೆ ದೊಡ್ಡ ಶಕ್ತಿ. ಈಗಾಗಲೇ ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೇಕಬ್ ಡಫಿ, ನುವಾನ್ ತುಷಾರ ಹಾಗೂ ರಾಸಿಖ್ ದಾರ್ ತಂಡದಲ್ಲಿದ್ದಾರೆ. ಇವರ ಜೊತೆ ಹೇಝಲ್‌ವುಡ್ ಕೂಡ ಕಣಕ್ಕಿಳಿದರೆ ಆರ್‌ಸಿಬಿ ವೇಗದ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಲಿದೆ. 

ಇನ್ನು ಹರಾಜಿಗೂ ಮುನ್ನ ಆರ್‌ಸಿಬಿ ಬಳಿ ₹14.15 ಕೋಟಿ ಪರ್ಸ್ ಮೊತ್ತವಿದೆ. 20 ಆಟಗಾರರನ್ನು ಉಳಿಸಿಕೊಂಡಿರುವ ತಂಡದಲ್ಲಿ ಇನ್ನೂ ಐದು ಸ್ಥಾನಗಳು ಖಾಲಿ ಇವೆ. ಅದರಲ್ಲೂ ಕೇವಲ ಒಂದು ವಿದೇಶಿ ಆಟಗಾರನ ಸ್ಥಾನ ಮಾತ್ರ ಬಾಕಿಯಿದೆ. ಹೀಗಾಗಿ ಹೇಝಲ್‌ವುಡ್ ಲಭ್ಯತೆ ಖಚಿತವಾಗಿರುವುದು ಹರಾಜಿನ ಲೆಕ್ಕಾಚಾರಕ್ಕೂ ನೆರವಾಗಲಿದೆ

ಐಪಿಎಲ್ 2027ರಲ್ಲಿ ಜೋಶ್ ಹೇಜಲ್‌ವುಡ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಹೇಜಲ್‌ವುಡ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ತಮ್ಮ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದ ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿ ಆಟಗಾರರ ಲಭ್ಯತೆಯ ಬಗ್ಗೆ ಆತಂಕ ಮೂಡಿಸಿದೆ. ಜನವರಿಯಿಂದ ಮಾರ್ಚ್‌ವರೆಗೆ ಭಾರತ ವಿರುದ್ಧ ಟೆಸ್ಟ್ ಸರಣಿ, ಬಳಿಕ ಇಂಗ್ಲೆಂಡ್‌ನಲ್ಲಿ ಆ್ಯಷಸ್ ಸರಣಿ ಹಾಗೂ 2027ರ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಪೂರ್ಣ ಐಪಿಎಲ್ ಆಡಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. 

ಒಟ್ಟಿನಲ್ಲಿ, ಐಪಿಎಲ್ 2027ರಲ್ಲಿ ಹ್ಯಾಟ್ರಿಕ್ ಟ್ರೋಫಿ ಗೆಲ್ಲುವ ಕನಸಿನಲ್ಲಿರುವ ಆರ್‌ಸಿಬಿಗೆ ಹೇಝಲ್‌ವುಡ್ ರೂಪದಲ್ಲಿ ದೊಡ್ಡ ಬಲ ಸಿಕ್ಕಿದೆ. ಚಿನ್ನಸ್ವಾಮಿ ಅಂಗಳದಲ್ಲಿ ಮತ್ತೊಮ್ಮೆ ಹೇಝಲ್‌ವುಡ್ ವೇಗದ ಬೌಲಿಂಗ್ ಅಬ್ಬರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES