SOCIAL MEDIA

Newsletter

PARTNER SITES
Select Language Select State

WPL 2027 Auction: ₹1.10 ಕೋಟಿಗೆ ಸೋಫಿ ಮೊಲಿನ್ಯೂ ಖರೀದಿಸಿದ ಯುಪಿ ವಾರಿಯರ್ಸ್, ಆರ್‌ಸಿಬಿಗೆ ನಿರಾಸೆ!

ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿನಲ್ಲಿ ಆಟಗಾರ್ತಿಯರ ಖರೀದಿಗೆ ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ನಡೆದಿದೆ. ಅಂತಿಮವಾಗಿ 1 ಕೋಟಿ 10 ಲಕ್ಷ ರೂಪಾಯಿ ಬಿಡ್ ಮಾಡುವ ಮೂಲಕ ಯುಪಿ ವಾರಿಯರ್ಸ್ ಸೋಫಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

Written By Ramya. R. Gowda
Published: Oct 29, 2026, 08:36 AM IST | Updated: Oct 29, 2026, 08:42 AM IST
Join

ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜಿನಲ್ಲಿ ಆಟಗಾರ್ತಿಯರ ಖರೀದಿಗೆ ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ನಡೆದಿದೆ. ಅದರಲ್ಲೂ ಆಸ್ಟ್ರೇಲಿಯಾದ ಆಲ್‌ರೌಂಡರ್ ಸೋಫಿ ಮೊಲಿನ್ಯೂ ಅವರನ್ನು ಖರೀದಿಸಲು ಯುಪಿ ವಾರಿಯರ್ಸ್ ಮತ್ತು ಆರ್‌ಸಿಬಿ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ 1 ಕೋಟಿ 10 ಲಕ್ಷ ರೂಪಾಯಿ ಬಿಡ್ ಮಾಡುವ ಮೂಲಕ ಯುಪಿ ವಾರಿಯರ್ಸ್ ಸೋಫಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನು ಗ್ರೇಸ್ ಹ್ಯಾರಿಸ್ ಮತ್ತು ಭಾರತದ ಸ್ನೇಹ ರಾಣಾ ಕೂಡ ಯುಪಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅತ್ತ ಐರ್ಲೆಂಡ್‌ನ ಆಲ್‌ರೌಂಡರ್ ಓರ್ಲಾ ಪ್ರೆಂಡರ್‌ಗಾಸ್ಟ್ ಗುಜರಾತ್ ಜೈಂಟ್ಸ್ ಪಾಲಾಗಿದ್ದಾರೆ. ಹಾಗಾದ್ರೆ ಮಿನಿ ಹರಾಜಿನಲ್ಲಿ ಯಾವ ಆಟಗಾರ್ತಿಗೆ ಎಷ್ಟು ಮೊತ್ತ ಸಿಕ್ಕಿದೆ? ಈ ವರದಿ ನೋಡಿ.

 

ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಕೊಚ್ಚಿಯಲ್ಲಿ ನಡೆದಿದೆ. ಈ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಸೋಫಿ ಮೊಲಿನ್ಯೂ ಎಲ್ಲರ ಗಮನ ಸೆಳೆದಿದ್ದಾರೆ. 50 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಆರಂಭವಾದ ಬಿಡ್ಡಿಂಗ್‌ನಲ್ಲಿ ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಬಿಡ್ ಮೊತ್ತ ಹಂತ ಹಂತವಾಗಿ ಏರಿಕೆಯಾಗಿದ್ದು, ಅಂತಿಮವಾಗಿ 1 ಕೋಟಿ 10 ಲಕ್ಷ ರೂಪಾಯಿಗೆ ಯುಪಿ ವಾರಿಯರ್ಸ್ ಸೋಫಿ ಅವರನ್ನು ಖರೀದಿಸಿದೆ. 2024ರಲ್ಲಿ ಆರ್‌ಸಿಬಿ ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿ ಗೆದ್ದಾಗ ಸೋಫಿ ತಂಡದ ಪ್ರಮುಖ ಆಟಗಾರ್ತಿಯಾಗಿದ್ದರು. ಇದೀಗ ಇದೇ ಆಟಗಾರ್ತಿಯನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯುಪಿ ಯಶಸ್ವಿಯಾಗಿದೆ.

ಗ್ರೇಸ್ ಹ್ಯಾರಿಸ್‌ಗೆ ಮತ್ತೆ ಯುಪಿ ಮಣೆ!

ಇನ್ನು ಆಸ್ಟ್ರೇಲಿಯಾದ ಮತ್ತೊಬ್ಬ ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಅವರನ್ನು ಯುಪಿ ವಾರಿಯರ್ಸ್ 30 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿದೆ. ಈ ಹಿಂದೆ 2023, 2024 ಮತ್ತು 2025ರ ಆವೃತ್ತಿಗಳಲ್ಲಿ ಯುಪಿ ಪರ ಆಡಿದ್ದ ಹ್ಯಾರಿಸ್ ಮತ್ತೆ ಹಳೆಯ ತಂಡಕ್ಕೆ ಮರಳಿದ್ದಾರೆ. 2026ರಲ್ಲಿ ಆರ್‌ಸಿಬಿ ಪ್ರಶಸ್ತಿ ಗೆದ್ದ ತಂಡದಲ್ಲಿದ್ದ ಹ್ಯಾರಿಸ್ ಅವರನ್ನು ಈ ಬಾರಿ ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡಿತ್ತು. ಇದೀಗ ಯುಪಿ ವಾರಿಯರ್ಸ್ ಅವರನ್ನು ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಸ್ನೇಹ ರಾಣಾಗೂ ಯುಪಿ ವಾರಿಯರ್ಸ್ ಮಣೆ!
ಭಾರತದ ಆಲ್‌ರೌಂಡರ್ ಸ್ನೇಹ ರಾಣಾ ಕೂಡ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. 30 ಲಕ್ಷ ರೂಪಾಯಿ ಮೂಲ ಬೆಲೆಗೆ ಅವರನ್ನು ಖರೀದಿಸಲಾಗಿದೆ. ಈ ಹಿಂದೆ ಗುಜರಾತ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ತಂಡಗಳನ್ನು ಪ್ರತಿನಿಧಿಸಿದ್ದ ಸ್ನೇಹ ರಾಣಾ, ಇದೀಗ ಹೊಸ ಸವಾಲಿಗೆ ಸಜ್ಜಾಗಿದ್ದಾರೆ.

ಗುಜರಾತ್ ಜೈಂಟ್ಸ್‌ಗೆ ಐರ್ಲೆಂಡ್ ಆಟಗಾರ್ತಿ!
ಇತ್ತ ಐರ್ಲೆಂಡ್‌ನ ಆಲ್‌ರೌಂಡರ್ ಓರ್ಲಾ ಪ್ರೆಂಡರ್‌ಗಾಸ್ಟ್ ಅವರನ್ನು ಗುಜರಾತ್ ಜೈಂಟ್ಸ್ 30 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಾಮರ್ಥ್ಯ ಹೊಂದಿರುವ ಓರ್ಲಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಸೇರ್ಪಡೆಯೊಂದಿಗೆ ಗುಜರಾತ್ ತಂಡ ತನ್ನ ಆಟಗಾರರ ಬಳಗಕ್ಕೆ ಮತ್ತೊಬ್ಬ ಆಲ್‌ರೌಂಡರ್ ಅನ್ನು ಸೇರಿಸಿಕೊಂಡಿದೆ.

ಮಹಿಳಾ ಪ್ರೀಮಿಯರ್ ಲೀಗ್ 2027ರ ಮಿನಿ ಹರಾಜು ಕೊಚ್ಚಿಯಲ್ಲಿ ನಡೆದಿದೆ. ಈ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಸೋಫಿ ಮೊಲಿನ್ಯೂ ಎಲ್ಲರ ಗಮನ ಸೆಳೆದಿದ್ದಾರೆ. 50 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಆರಂಭವಾದ ಬಿಡ್ಡಿಂಗ್‌ನಲ್ಲಿ ಆರ್‌ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಬಿಡ್ ಮೊತ್ತ ಹಂತ ಹಂತವಾಗಿ ಏರಿಕೆಯಾಗಿದ್ದು, ಅಂತಿಮವಾಗಿ 1 ಕೋಟಿ 10 ಲಕ್ಷ ರೂಪಾಯಿಗೆ ಯುಪಿ ವಾರಿಯರ್ಸ್ ಸೋಫಿ ಅವರನ್ನು ಖರೀದಿಸಿದೆ. 2024ರಲ್ಲಿ ಆರ್‌ಸಿಬಿ ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿ ಗೆದ್ದಾಗ ಸೋಫಿ ತಂಡದ ಪ್ರಮುಖ ಆಟಗಾರ್ತಿಯಾಗಿದ್ದರು. ಇದೀಗ ಇದೇ ಆಟಗಾರ್ತಿಯನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯುಪಿ ಯಶಸ್ವಿಯಾಗಿದೆ.

ಒಟ್ಟಿನಲ್ಲಿ ಡಬ್ಲ್ಯುಪಿಎಲ್ 2027ರ ಮಿನಿ ಹರಾಜಿನಲ್ಲಿ ಸೋಫಿ ಮೊಲಿನ್ಯೂ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಯುಪಿ ವಾರಿಯರ್ಸ್, ಗ್ರೇಸ್ ಹ್ಯಾರಿಸ್ ಮತ್ತು ಸ್ನೇಹ ರಾಣಾ ಅವರನ್ನೂ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಗುಜರಾತ್ ಜೈಂಟ್ಸ್ ತಂಡ ಓರ್ಲಾ ಪ್ರೆಂಡರ್‌ಗಾಸ್ಟ್ ಅವರನ್ನು ಖರೀದಿಸಿದೆ. ಈ ಆಟಗಾರ್ತಿಯರು ಮುಂಬರುವ ಆವೃತ್ತಿಯಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES