Abhishek Sharma creates record: 2026 ಏಷ್ಯನ್ ಗೇಮ್ಸ್‌ನ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾದ ಬಿಗ್ ಹಿಟ್ಟರ್ ಅಭಿಷೇಕ್ ಶರ್ಮಾ ಬಿರುಸಿನ ಅರ್ಧಶತಕ ಬಾರಿಸಿದ್ದಾರೆ. ಕೇವಲ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಬಿಗ್ ಸಿಕ್ಸರ್‌ಗಳಿಂದ ಹಾಫ್ ಸೆಂಚುರಿ ಬಾರಿಸಿದರು. ಇನ್ನೊಂದು ವಿಷೇಶತೆ ಎಂದರೆ ಅಭಿಷೇಕ್ ಶರ್ಮಾ 46 ರನ್ ಗಳಿಸಿದ್ದಾಗ ಸಿಕ್ಸರ್ ಸಿಡಿಸುವ ಮೂಲಕ ಅರ್ಧಶತಕ ಗಳಿಸಿದರು. ಅಭಿಷೇಕ್ ಶರ್ಮಾ ಕ್ರಿಕೆಟ್‌ನಲ್ಲಿ ಸನ್ಷೆಷನಲ್ ಪ್ಲೇಯರ್. ಬ್ಯಾಟ್ ಹಿಡಿದು ಕ್ರೀಸ್‌ಗೆ ಬಂದರೆ ಎದುರಾಳಿ ಬೌಲರ್‌ಗಳಿಗೆ ಚಳಿ ಬಿಡಿಸಿಯೇ ಬಿಡುಸುತ್ತಾರೆ. ಸದ್ಯ ಏಷ್ಯನ್ ಗೇಮ್ಸ್‌ನ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಭಿಷೇಕ್ ಶರ್ಮಾ ಮಾಡಿರುವ ವಿಶೇಷ ದಾಖಲೆಗಳು ಇಲ್ಲಿವೆ. ಅಲ್ಲದೇ ತನ್ನ ಗುರು ಯುವರಾಜ್ ಸಿಂಗ್ ಅವರ ದಾಖಲೆಯೊಂದು ಅಭಿಷೇಕ್ ಶರ್ಮಾ ಸರಿಗಟ್ಟಿದ್ದಾರೆ.
ಜಪಾನ್‌ನಲ್ಲಿರುವ ನಿಸ್ಶಿನ್ ನಗರದ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯುತ್ತಿರುವ 2026 ಏಷ್ಯನ್ ಗೇಮ್ಸ್‌ನ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಟೀಮ್ ಇಂಡಿಯಾ ನಡುವೆ ಬಿಗ್ ಫೈಟ್ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದರು. ಅದರಂತೆ ಓಪನರ್ ಬ್ಯಾಟಿಂಗ್‌ಗೆ ಆಗಮಿಸಿದ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಒಳ್ಳೆಯ ಆರಂಭ ಏನು ಪಡೆಯಲಿಲ್ಲ. ವೈಭವ್ ಸೂರ್ಯವಂಶಿ ಎರಡು ಬಿಗ್ ಸಿಕ್ಸರ್ ಸಿಡಿಸಿ 15 ರನ್‌ಗಳಿಂದ ಆಡುವಾಗ ಔಟಾದರು.
ವೈಭವ್ ಸೂರ್ಯವಂಶಿ ಹೊರ ಹೋದ ಮೇಲೆ ತನ್ನ ಬ್ಯಾಟಿಂಗ್ ಆರ್ಭಟ ಮಾಡಿದ ಅಭಿಷೇಕ್ ಶರ್ಮಾ, ಪಾಕ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಅವರು ಬೌಲರ್‌ಗಳಿಗೆ ಮನಬಂದಂತೆ ಚಚ್ಚಿದರು. ಎಂದಿನಂತೆ ತಮ್ಮ ಹೊಡಿಬಡಿ ಬ್ಯಾಟಿಂಗ್ ಮಾಡಿದ ಬಿಗ್ ಹಿಟ್ಟರ್ ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 3 ಸೊಗಸಾದ ಬೌಂಡರಿಗಳು ಮತ್ತು 7 ಬಿಗ್ ಸಿಕ್ಸರ್‌ಗಳಿಂದ 61 ರನ್ ಗಳಿಸಿ ಆಡುವಾಗ ಔಟಾದರು.
T20 ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ ದಾಖಲೆ ಮಾಡಿದ್ದಾರೆ. ಕಳೆದ ಬಾರಿಯೂ ಅಭಿಷೇಕ್ ಶರ್ಮಾನೇ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದರು. ಈ ಬಾರಿಯೂ ಅಭಿಷೇಕ್ ಶರ್ಮಾ ನಂಬಲರ್ ಒನ್ ಸ್ಥಾನದಲ್ಲಿದ್ದಾರೆ. ಸತತ ಮೂರು ವರ್ಷಗಳಿಂದ ಸಿಕ್ಸರ್ ಸಿಡಿಸದವ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಅಭಿಷೇಕ್ ಶರ್ಮಾ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.
2025 ಅಭಿಷೇಕ್ ಶರ್ಮಾ 108 ಸಿಕ್ಸ್
2026 ಅಭಿಷೇಕ್ ಶರ್ಮಾ 104 ಸಿಕ್ಸ್‌ಗಳು
2026 ವೈಭವ್ ಸೂರ್ಯವಂಶಿ 90 ಸಿಕ್ಸರ್
2024 ಅಭಿಷೇಕ್ ಶರ್ಮಾ 87 ಸಿಕ್ಸ್
ಒಂದು ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟರ್‌ಗಳ ಪೈಕಿ ಟೀಮ್ ಇಂಡಿಯಾದ ಲೆಜೆಂಡ್ರಿ ಬ್ಯಾಟರ್ ಯುವರಾಜ್ ಸಿಂಗ್ ಅವರು ಮೊದಲಿಗರು ಆಗಿದ್ದಾರೆ. ಯುವರಾಜ್ ಸಿಂಗ್ ಅವರು 2012 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಅದರಂತೆ ಇದೀಗ ಅಭಿಷೇಕ್ ಶರ್ಮಾ ಅವರು ಪಾಕಿಸ್ತಾನದ ವಿರುದ್ಧ 7 ಸಿಕ್ಸರ್‌ಗಳನ್ನು ಸಿಡಿಸಿ ಗುರುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕೆಲವೇ ಬಾಲ್‌ಗಳಲ್ಲಿ ಒಂದೇ ಒಂದು ವರ್ಷದಲ್ಲಿ 100 T20 ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ವೆಸ್ಟ್ ಇಂಡೀಸ್‌ನ ಬಿಗ್ ಬ್ಯಾಟರ್ ಆಂಡ್ರೆ ರಸೆಲ್ ಅವರು ಮೊದಲ ಸ್ಥಾನದಲ್ಲಿದ್ದಾರೆ. ಆಂಡ್ರೆ ರಸೆಲ್ ಅವರು 2019 ರಲ್ಲಿ 589 ಎಸೆತಗಳಲ್ಲಿ 100 T20 ಸಿಕ್ಸರ್ ಸಿಡಿಸಿದ್ದರು. ಅದರಂತೆ ಈ ವರ್ಷ 2026 ರಲ್ಲಿ ಅಭಿಷೇಕ್ ಶರ್ಮಾ ಅವರು 651 ಎಸೆತಗಳಲ್ಲಿ 100 T20 ಸಿಕ್ಸ್‌ಗಳನ್ನು ಗಳಿಸಿ ದಾಖಲೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನಿ ಆಗಿದ್ದಾರೆ.
ಕಡಿಮೆ ಬಾಲ್‌ಗಳಲ್ಲಿ 400 T20 ಸಿಕ್ಸ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳು
3027 ಎಸೆತಗಳು ಆಂಡ್ರೆ ರಸೆಲ್
3513 ಎಸೆತ ಅಭಿಷೇಕ್ ಶರ್ಮಾ
3557 ಎಸೆತಗಳು ಕ್ರಿಸ್ ಗೇಲ್
3803 ಎಸೆತಗಳು ಟಿಮ್ ಡೇವಿಡ್
3944 ಎಸೆತಗಳು ಕಿರಾನ್ ಪೊಲಾರ್ಡ್
4045 ಎಸೆತಗಳು ಎನ್ ಪೂರಾನ್
4072 ಎಸೆತಗಳು ಇ ಲೆವಿಸ್