SOCIAL MEDIA

Newsletter

PARTNER SITES
Select Language Select State

ಲೋಟಸ್‌ ಟೆಂಪಲ್‌ ಎಲ್ಲಿದೆ, ವಿಗ್ರಹ ಕೂಡ ಇಲ್ಲ.. ಈ ಗುಡಿಯಲ್ಲಿ ಯಾವುದೇ ಆಚರಣೆ, ಧರ್ಮೋಪದೇಶ ಇರಲ್ಲ, ಏಕೆ?

ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಯಾವುದೇ ಧರ್ಮದ ಆಚರಣೆಗಳು, ಹಬ್ಬಗಳು ಸೇರಿದಂತೆ ಇತರೆ ಯಾವುದೇ ಪೂಜೆ-ಪುನಸ್ಕಾರಗಳನ್ನು ಮಾಡಲಾಗುವುದಿಲ್ಲ. ಇವುಗಳನ್ನು ಇಲ್ಲಿ ಅನುಸರಿಸುವುದಿಲ್ಲ. ಭಕ್ತರು ತುಂಬಾ ಶ್ರದ್ಧೆಯಿಂದ, ನಂಬಿಕೆಯಿಂದ ಈ ಗುಡಿಗೆ ಭೇಟಿ ನೀಡಬಹುದು.

Reported By Bhimappa Written By Bhimappa
Published: Sep 15, 2026, 05:08 PM IST | Updated: Sep 17, 2026, 02:34 PM IST
Image Credit: File Photo
Join

ಭಾರತದಲ್ಲಿ ಇರುವಂತಹ ಪ್ರತಿಯೊಂದು ದೇವಾಲಯಗಳಿಗೆ ಅದರದ್ದೇ ಆದ ಇತಿಹಾಸ, ಪುರಾಣದ ಕಥೆಗಳನ್ನು ಹೊಂದಿವೆ. ಅವುಗಳನ್ನು ತಿಳಿಯುತ್ತ ಹೋದರೆ ನಿಮಗೆ ಕೊನೆ ಎಂಬುದೇ ಸಿಗುವುದಿಲ್ಲ. ಏಕೆಂದರೆ ಭಾರತದ ದೈವತ್ವದ ಕಾಲ ಅಷ್ಟೊಂದು ಸುದೀರ್ಘವಾಗಿ, ಸತ್ಯವಾಗಿತ್ತು. ಭಾರತೀಯ ಸಂಪ್ರದಾಯದಲ್ಲಿ ದೈವವು ಪ್ರಮುಖವಾದ ಸ್ಥಾನ ಪಡೆದಿದೆ ಎನ್ನಬಹುದು. ಹಬ್ಬ-ಹರಿದಿನಗಳು, ಸಂಸ್ಕೃತಿ, ಆಚರಣೆಗಳು, ಉತ್ಸವಗಳು ಎಲ್ಲವೂ ದೈವದಿಂದಲೇ ದೇಶದಲ್ಲಿ ನೋಡಲಾಗುವುದು. ಈಗಿನ ಕಾಲದಲ್ಲೂ ಭಾರತದ ಮೂಲದ ಬಗ್ಗೆ ಕೆದಕುತ್ತ ಹೋದರೆ ದೈವದ ಕಥೆಗಳು, ಪುರಾಣಗಳ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಾಗುತ್ತವೆ. ಅದರಂತೆ ಇಡೀ ದೇಶದ ಮೂಲೆ ಮೂಲೆಗಳಲ್ಲೂ ದೇವಾಲಯಗಳು ಇವೆ. ರಾಜಮಹಾರಾಜರು ಕಲ್ಲಿನಿಂದ ನಿರ್ಮಾಣ ಮಾಡಿದ ಅದ್ಭುತವಾದ ಶೈಲಿಯ ಗುಡಿಗಳು ಈಗಿನ ಕಾಲದಲ್ಲೂ ನೀವು ನೋಡಬಹುದು. ಯಾವಾಗಲೂ ನರ್ಮಾಣ ಮಾಡಿದಂತಹ ದೇವಾಲಯಗಳು, ಮೂರ್ತಿಗಳು, ವಿಗ್ರಹಗಳು ದೇವಸ್ಥಾನಗಳಲ್ಲಿ ಈಗಲೂ ವೈಭವದಿಂದ ಪೂಜೆ, ಉತ್ಸವ, ಜಾತ್ರೆ ಸೇರಿದಂತೆ ವಿವಿಧ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಇಷ್ಟೊಂದು ವಿಜೃಂಭಣೆಯಿಂದ ಇರುವ ಭಾರತದಲ್ಲಿ ಕಮಲ ದೇವಾಲಯ ಅಥವಾ ಲೋಟಸ್‌ ಟೆಂಪಲ್‌ವೊಂದು ಇದೆ. ಇಲ್ಲಿ ಯಾವುದೇ ಧರ್ಮೋಪದೇಶ ಅಥವಾ ಯಾವುದೇ ಆಚರಣೆಯನ್ನು ಮಾಡುವುದಿಲ್ಲ. ಈ ದೇವಾಲಯದ ಕುರಿತು ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುವುದು ಬೇಕಿಲ್ಲ. 1980ಕ್ಕೆ ಹೋದರೆ ಸಾಕು ಇದರ ಮಾಹಿತಿ ಎಲ್ಲ ಗೊತ್ತಾಗುತ್ತದೆ. 1980ರ ಏಪ್ರಿಲ್‌ 21 ರಂದು ಈ ಕಮಲದ ದೇವಾಲಯದ ನಿರ್ಮಾಣ ಕೆಲಸವನ್ನು ಪ್ರಾರಂಭಿಸಿ 1986 ನವೆಂಬರ್‌ 13 ರಂದು ಎಲ್ಲ ಕೆಲಸಗಳು ಮುಗಿದು ದೇವಾಲಯ ನಿರ್ಮಾಣ ಪೂರ್ಣವಾಯಿತು. ಹಾಗಾದರೆ ಈ ದೇವಾಲಯ ಎಲ್ಲಿದೆ ಎಂದರೆ..

ಕಮಲದ ದೇವಾಯಲ ಇರುವುದು ದೆಹಲಿಯಲ್ಲಿ. ಈ ದೇವಾಲಯ ಕಟ್ಟಡವು 27 ಸ್ವತಂತ್ರವಾಗಿ ಯಾವುದೇ ಆಧಾರವಿಲ್ಲದೇ ಅಮೃತಶಿಲೆಯ ಹೊದಿಕೆಗಳು ಕಮಲದ ದಳಗಳಂತೆ ನಿಂತಿವೆ. ಒಂಬತ್ತು ಬದಿಗಳನ್ನು ರೂಪಿಸಲು ಮೂರು ಗುಂಪುಗಳಾಗಿ ಜೋಡಿಸಲ್ಪಟ್ಟಿವೆ. ಒಂಬತ್ತು ಬಾಗಿಲುಗಳು ಇದ್ದು 34 ಮೀಟರ್‌ಗಳಿಗಿಂತ ಸ್ವಲ್ಪ ಹೆಚ್ಚು ಎತ್ತರ ಮತ್ತು 1300 ಭಕ್ತರು ಒಂದೇ ಬಾರಿಗೆ ಸೇರುವಂತಹ ಕೇಂದ್ರ ಸಭಾಂಗಣವಿದೆ. ಈ ದೇವಸ್ಥಾನವೂ ಹಲವಾರು ವಾಸ್ತುಶಿಲ್ಪ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಈ ಸುಂದರ ಕಮಲದ ದೇವಸ್ಥಾನವನ್ನು ನಿರ್ಮಾಣ ಮಾಡಲು ಒಟ್ಟು 10 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಈ ದೇವಾಲಯದ ವಿಶೇಷತೆ ಎಂದರೆ

ಕಮಲದ ದೇವಾಲಯ ಅತ್ಯಂತ ಸುಂದರವಾಗಿದ್ದು ಇದರ ವಿಶೇಷ ಏನೆಂದರೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಯಾವುದೇ ಧರ್ಮದ ಆಚರಣೆಗಳು, ಹಬ್ಬಗಳು ಸೇರಿದಂತೆ ಇತರೆ ಯಾವುದೇ ಪೂಜೆ-ಪುನಸ್ಕಾರಗಳನ್ನು ಮಾಡಲಾಗುವುದಿಲ್ಲ. ಇವುಗಳನ್ನು ಇಲ್ಲಿ ಅನುಸರಿಸುವುದಿಲ್ಲ. ಭಕ್ತರು ತುಂಬಾ ಶ್ರದ್ಧೆಯಿಂದ, ನಂಬಿಕೆಯಿಂದ ಈ ಗುಡಿಗೆ ಭೇಟಿ ನೀಡಬಹುದು. ಇಲ್ಲಿ ಏಕತೆ, ಶಾಂತಿಯತೆ ಗುರಿಯನ್ನು ಕಮಲದ ದೇವಾಲಯ ಹೊಂದಿದೆ. ಆದ್ದರಿಂದ ಎಲ್ಲ ಧರ್ಮಗಳು ಒಂದೇ, ಶಾಂತಿ, ನೆಮ್ಮದಿ, ಪ್ರಶಾಂತತೆ ಬೇಕು ಎನ್ನುವವರು ಈ ಸುಂದರ ಗುಡಿಗೆ ಭೇಟಿ ನೀಡಿ ಸುಂದರವಾದ ಕ್ಷಣಗಳನ್ನು ಕಳೆಯುತ್ತಾರೆ.  

ಈ ದೇವಾಲಯಕ್ಕೆ ಇರುವಂತಹ ಬಿಳಿ ದಳಗಳು ಕೇವಲ ಬ್ಯೂಟಿಫುಲ್‌ ಆಗಿ ಮಾತ್ರ ಇಲ್.‌ ಅವುಗಳು ನೈಸರ್ಗಿಕವಾಗಿ ತಂಪಾಗಿ, ಕೂಲ್‌ ಆಗಿವೆ. ಯಾವುದೇ ದೇವಾಲಯವನ್ನು ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಲಾಗುತ್ತದೆ. ಅದೇ ರೀತಿ ಈ ದೇವಸ್ಥಾನ ಕೂಡ ಇದೆ. ಗ್ರೀಸ್‌ ದೇಶದಿಂದ ಅಮೃತಶಿಲೆಗಳನ್ನು ತಂದು ದೇವಾಲಯಕ್ಕೆ ಜೋಡಿಸಲಾಗಿದೆ. ಪೆಂಟೆಲಿಕ್‌ ಅಮೃತಶಿಲೆಯಿಂದ ಸೃಷ್ಟಿಸಲಾಗಿದೆ. ಇದೇ ರೀತಿ ನಿರ್ಮಾಣ ಮಾಡುವ ಶೈಲಿಯೂ ಈ ಹಿಂದೆ ಅಂದರೆ ಪ್ರಾಚೀನ ಯುರೋಪಿಯನ್‌ ಸ್ಮಾರಕಗಳಲ್ಲಿ ನೀವು ಕಾನಬಹುದು. ಈ ಅಮೃತಶಿಲೆಗಳು ಯಾವಾಗಲೂ ಸೌಂದರ್ಯದ ಜೊತೆಗೆ ತಂಪಾಗಿ ಇರುತ್ತದೆ.

ಎಲ್ಲ ದೇವಾಲಯಗಳನ್ನು ಆಚರಣೆ ಮಾಡುವುದಕ್ಕೆ ಮತ್ತು ಧರ್ಮೋಪದದೇಶ ಮಾಡುವುದಕ್ಕೆ ನಿರ್ಮಾಣ ಮಾಡಲಾಗುತ್ತದೆ. ಆದರೆ ದೆಹಲಿಯಲ್ಲಿರುವ ಕಮಲ ದೇವಾಲಯವನ್ನು ಕೇವಲ ಶಾಂತಿ ನೆಮ್ಮದಿಗಾಗಿ ನಿರ್ಮಾಣ ಮಾಡಲಾಗಿದೆ. ಈ ಕಮಲ ದೇವಸ್ಥಾನದಲ್ಲಿ ಯಾವುದೇ ಆಚರಣೆಗಳು ನಡೆಯುವುದಿಲ್ಲ. ಧರ್ಮೋಪದೇಶ ಇರುವುದಿಲ್ಲ. ನೀವು ಕಮಲ ದೇವಾಲಯದ ಒಳಗೆ ಹೋದರೆ ನಿಮಗೆ, ನಿಮ್ಮ ಮನಸಿಗೆ ವಿಭಿನ್ನವಾದ ಅನುಭವ ಆಗುತ್ತದೆ. ಏಕೆಂದರೆ ದೇವಾಲಯದ ಒಳಗೆ ಯಾವುದೇ ದೇವರ ವಿಗ್ರಹಗಳು ಇಲ್ಲ. ದೇವತೆಗಳ ಮೂರ್ತಿಗಳು ಕೂಡ ಇಲ್ಲ. ಧರ್ಮದ ಉಪನ್ಯಾಸಗಳು ಕೂಡ ಇಲ್ಲಿ ನಡೆಯುವುದಿಲ್ಲ. ಈ ದೇವಾಲಯವು ಅತ್ಯಂತ ಪ್ರಶಾಂತತೆಯಿಂದ ಕೂಡಿದ್ದು ನೆಮ್ಮದಿ, ಪ್ರಾರ್ಥನೆ ಅಥವಾ ಧ್ಯಾನಕ್ಕಾಗಿ ದೇವಾಲಯವನ್ನು ವಿನ್ಯಾಸ ಮಾಡಲಾಗಿದೆ.

ಇರಾನ್‌ನ ವಾಸ್ತುಶಿಲ್ಪ ಫರಿಬೋರ್ಜ್‌ ಸಹಾಬಾ ಅವರು ಕಮಲ ದೇವಸ್ಥಾನವನ್ನು ವಿನ್ಯಾಸ ಮಾಡಿದ್ದಾರೆ. ಇವರು ಕೆಲಸವನ್ನು 1976ರಲ್ಲಿ ಆರಂಭಿಸಿ ವಿನ್ಯಾಸ ಪೂರ್ಣಗೊಳಿಸಲು ಸುಮಾರು 10 ವರ್ಷಗಳ ಕಾಲಾವಕಾಶ ತೆಗೆದುಕೊಂಡರು. ಪರಿಸರವನ್ನು ಗಮನದಲ್ಲಿ ಇಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಬಿಳಿ ಅಮೃತಶಿಲೆಗಳಿಂದ ನಿರ್ಮಾಣ ಮಾಡಲಾಗಿದೆ. ನೈಸರ್ಗಿಕವಾಗಿ ತಂಪಾದ ಅನುಭವವನ್ನು ಹೊಂದಿದೆ. ಇದರ ಒಳಗೆ ಮತ್ತು ಸುತ್ತಮುತ್ತಲಿನ ಕೊಳಗಳ ತಾಪಮಾನವನು ನಿಯಂತ್ರಿಸುತ್ತವೆ. 

ಕಮಲದ ದೇವಾಲಯದಲ್ಲಿ ಬಹಾಯಿ ಆರಾಧನಾ ಇರುತ್ತದೆ. ಇದು ಬಹಾಯಿ ಧರ್ಮಕ್ಕೆ ಸೇರಿದ ಪ್ರಾರ್ಥನಾ ಮಂದಿರವಾಗಿದೆ. ಅಂದರೆ ಸರ್ವಧರ್ಮ ಸಮನ್ವಯತೆ ಇಲ್ಲಿ ಇರುತ್ತದೆ. ಈ ಕಮಲದ ದೇವಸ್ಥಾನದಲ್ಲಿ ಯಾವುದೇ ಮೂರ್ತಿ, ಫೋಟೋ ಅಥವಾ ಧಾರ್ಮಿಕದ ಆಚರಣೆಗಳು, ಉತ್ಸವಗಳು ಇರುವುದಿಲ್ಲ. ಈ ಗುಡಿಯ ಒಳಗೆ ಯಾವುದೇ ಜಾತಿ, ಧರ್ಮ, ಲಿಂಗ ಭೇದವಿಲ್ಲದೇ ಎಲ್ಲ ಧರ್ಮದ ಜನರು, ಭಕ್ತರು ಇಲ್ಲಿಗೆ ಭೇಟಿ ನೀಡಬಹುದು. ಶಾಂತಿಯುತವಾಗಿ ಪ್ರಾರ್ಥನೆ ಅಥವಾ ಧ್ಯಾನವನ್ನು ಕೂಡ ಮಾಡಬಹುದು.  

ಕಮಲದ ಹೂವು ಅರಳುವಂತೆ ಈ ಕಮಲ ದೇವಾಲಯವನ್ನು ವಿನ್ಯಾಸ ಮಾಡಲಾಗಿದ್ದು ವಿಶಾಲವಾಗಿ ಸುಮಾರು 26 ಎಕರೆಯಲ್ಲಿ ಅರಡಿಕೊಂಡಿದೆ. ಬೃಹತ್‌ ಪ್ರಾರ್ಥನಾ ಮಂದಿರ ಇದೆ. ಇದರಲ್ಲಿ ಏಕಕಾಲದಲ್ಲಿ ಐದುನೂರು ಅಲ್ಲ, ಸಾವಿರವಲ್ಲ ಬರೋಬ್ಬರಿ 2,500ಕ್ಕೂ ಹೆಚ್ಚು ಜನರು ಕುಳಿತುಕೊಂಡು ಧ್ಯಾನ ಮಾಡಬಹುದು. ದೆಹಲಿಯಲ್ಲಿ ಪ್ರಮುಖವಾದ ಪ್ರವಾಸಿ ತಾಣವಾಗಿದ್ದು ಸೌರಶಕ್ತಿಯನ್ನು ಬಳಸುವಂತಹ ಪ್ರಮುಖ ತಾಣಗಳಲ್ಲಿ ಇದು ಕೂಡ ಒಂದು.

ದೆಹಲಿಯಿಂದ ಹೇಗೆ ಹೋಗುವುದು ಎಂದರೆ ಕಮಲ ದೇವಾಲಯವು ದಕ್ಷಿಣ ದೆಹಲಿಯ ಕಲ್ಕಾಜಿ ಮತ್ತು ನೆಹರು ಪ್ಲೇಸ್‌ ಬಳಿ ಇದೆ. ಅತ್ಯಂತ ಹತ್ತಿರದ ಮೆಟ್ರೋ ನಿಲ್ದಾಣ ಕಲ್ಕಾಜಿ ಮಂದಿರ್‌ ಆಗಿದೆ. ದೇವಾಲಯದ ಪ್ರವೇಶವೂ ಸಂಪೂರ್ಣವಾಗಿ ಉಚಿತವಾಗಿದೆ. ಸೋಮವಾರ ಮಾತ್ರ ರಜೆ ಇರುತ್ತದೆ, ಮಂಗಳವಾರದಿಂದ ಭಾನುವಾರದವರೆಗೆ ಓಪನ್‌ ಇರುತ್ತದೆ. ಇನ್ನೊಂದು ಗಮನಿಸಬೇಕಾದ ವಿಶೇಷ ಸಂಗತಿ ಎಂದರೆ, ದೇವಾಲಯದ ಒಳಗೆ ಮತ್ತು ದೇವಾಲಯದ ಸುತ್ತ ಫೋಟೋ ತೆಗೆಯಲು, ಸೆಲ್ಫಿ ತೆಗೆಯಲು ಅನುಮತಿ ಇಲ್ಲ. ಒಟ್ಟಿನಲ್ಲಿ ಸಂಪೂರ್ಣವಾದ ಶಾಂತಂತೆ ಇರುತ್ತದೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES