SOCIAL MEDIA

Newsletter

PARTNER SITES
Select Language Select State

ವಿಷ್ಣು ದೇವರು ವರಾಹ ಅವತಾರ ತಾಳಿದ್ದು ಏಕೆ.. ಹಂದಿ ರೂಪದಲ್ಲಿ ಸಾಗರದ ಆಳಕ್ಕೆ ಹೋಗಿದ್ದಕ್ಕೆ ಕಾರಣ?

ದಂತಗಳಿಂದ ಭೂದೇವಿಯನ್ನು ಮೇಲಕ್ಕೆ ಎತ್ತುವ ಮೂಲಕ ಭ್ರಮೆಯ ನಾಶವನ್ನು ಮಾಡಿದ್ದಾನೆ ಎಂದು ಈಗಲೂ ನಂಬಲಾಗುತ್ತದೆ. ತಾಂತ್ರಿಕ ಸಂಪ್ರದಾಯಗಳಲ್ಲಿ ವರಾಹವ್ನು ಪುರುಷ ದೇವನಾಗಿ ಪೂಜಿಸಿದರೆ, ವರಾಹಿಯನ್ನು ಶಕ್ತಿ, ಮಹಾ ಶಕ್ತಿಯಾಗಿ ಪೂಜೆ ಮಾಡಲಾಗುತ್ತದೆ. ವರಾಹ ಹೆಣ್ಣು ಮತ್ತು ಪುರುಷ ಎರಡು ರೂಪದಲ್ಲಿಯೂ ಇದೆ ಎನ್ನುವುದೇ ದೈವದ ವಿಶೇಷವಾಗಿದೆ.

Reported By Bhimappa Written By Bhimappa
Published: Sep 14, 2026, 07:05 PM IST | Updated: Sep 17, 2026, 03:17 PM IST
Image Credit: File Photo
Join

ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಅಂದರೆ ಶಿವ ಈ ತ್ರಿಮೂತ್ರಿಗಳಲ್ಲಿ ವಿಷ್ಣುವು ವಿಶ್ವರಕ್ಷಕ ಅಥವಾ ಪಾಲಕ ಎಂದು ಕರೆಯಲಾಗುತ್ತದೆ. ಹಿಂದೂ ಸಂಪ್ರಾದಾಯಲ್ಲಿ ದೇವರಿಗೆ, ದೇವಾಲಯಗಳಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ. ಅದರಲ್ಲಿ ಬ್ರಹ್ಮ ದೇವರೇ ಇಡೀ ವಿಶ್ವವನ್ನು ಕಾಯುತ್ತಿದ್ದಾನೆ ಎನ್ನುವುದು ಭಾರತೀಯರ ನಂಬಿಕೆಯಾಗಿದೆ. ವಿಷ್ಣು ದೇವನು ಬ್ರಹ್ಮಾಂಡವನ್ನು ಅಂದರೆ ಜೀವ ಸಂಕುಲ ಇರುವ ಪ್ರತಿ ಅಣುವನ್ನು ರಕ್ಷಣೆ ಮಾಡಲು ನಾನಾ ಅವತಾರಗಳನ್ನು ತಾಳಿದನು. ಅದರಲ್ಲಿ ವರಾಹ ಅವತಾರವೂ ಕೂಡ ಒಂದಾಗಿದೆ.

ಇದೇ ಅವತಾರದಲ್ಲಿ ವಿಷ್ಣು ದೇವನನ್ನು ಪೂಜೆ ಕೂಡ ಮಾಡಲಾಗುತ್ತದೆ. ಭೂ ದೇವಿಯನ್ನು ರಕ್ಷಣೆ ಮಾಡುವುದಕ್ಕಾಗಿ ವಿಷ್ಣು ದೇವನು ವರಾಹ ಅವತಾರವನ್ನು ತಾಳಿದನು. ಭಾರತದ ಧಾರ್ಮಿಕ ಗ್ರಂಥಗಳ ಪ್ರಕಾರದಂತೆ ಭೂದೇವಿ ಕಾಸ್ಮಿಕ್‌ ಸಾಗದಲ್ಲಿ ಮುಳುಗಿದಾಗ ವಿಷ್ಣುವಿನ ವರಾಹ ಅವತಾರವು ಭೂದೇವಿಯನ್ನು ತನ್ನ ದಂತಗಳ ಮೂಲಕ ಎತ್ತಿ ತಾಯಿ ಭೂದೇವಿಯನ್ನು ಕಾಪಾಡುತ್ತಾನೆ. ಭೂ ದೇವಿಯನ್ನು ರಕ್ಷಣೆ ಮಾಡುವಾಗ ವಿಷ್ಣುವಿನ ವರಾಹ ರೂಪದ ನೋಟವು ಇಡೀ ಆಕಾಶವನ್ನೇ, ಇಡೀ ದೇವಲೋಕವನ್ನೇ ನಡುಗಿಸಿತ್ತು.

ವರಾಹವೂ ಪುರುಷ ದೇವನಾಗಿ ಪೂಜಿಸಿದರೆ, ವರಾಹಿಯನ್ನು ಶಕ್ತಿ, ಮಹಾ ಶಕ್ತಿಯಾಗಿ ಪೂಜೆ ಮಾಡಲಾಗುತ್ತದೆ.  ಅಗತ್ಯ ಇದ್ದಾಗ ಮಾತ್ರ ಆ ವರಾಹ ಎಲ್ಲ ಕಡೆ ಪ್ರಜ್ವಲಿಸುತ್ತದೆ. ವಿಶ್ವದ ಪ್ರತಿ ಹಂತದಲ್ಲೂ ವರಾಹ ಶಕ್ತಿ ಇರುತ್ತದೆ. ನಾವು ಏನು ಮಾಡಿದರೂ ದೇವನೊಬ್ಬ ಅದನ್ನು ನೋಡುತ್ತಿರುತ್ತಾನೆ ಎನ್ನುವುದು ಇದಕ್ಕೆ. ವಿಷ್ಣು ವರಾಹ ಅವತಾರ ಮೂಲಕ ಸಾಗರದ ಆಳಕ್ಕೆ ಇಳಿದಿರುವುದು ನೋಡಿ ದೇವಾನು ದೇವತೆಗಳು ಗಾಬರಿಯಾಗಿದ್ದವು. ವಿಷ್ಣುವಿನ ಕೋಪ, ಶಕ್ತಿಯನ್ನು ನೋಡಿ ಇನ್ನೇನು ಆಗುತ್ತದೆಯೋ ಎಂದು ಅವರೆಲ್ಲ ಆತಂಕದಲ್ಲಿದ್ದರು. ದೇವಲೋಕದಲ್ಲಿ ಎಲ್ಲ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು. ಸಮುದ್ರದ ಆಳಕ್ಕೆ ಹೋದಂತೆ ಒಳಗಿರುವ ದೊಡ್ಡ ವಸ್ತುಗಳನ್ನೆಲ್ಲ ಮೇಲೆಕ್ಕೆ ಎತ್ತಿ ಎತ್ತಿ ಬಿಸಾಗಿದ್ದನು. ಆಗ ಭೂಕಂಪದ ರೀತಿ ಭಾಸವಾಗಿತ್ತು.

ವರಾಹ ರೂಪವನ್ನು ಈಗಲೂ ಭಕ್ತರು ಅತ್ಯಂತ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಭೂದೇವಿಯನ್ನು ರಾಕ್ಷಸ ಹಿರಣ್ಯಾಕ್ಷನಿಂದ ರಕ್ಷಿಸಿ ತನ್ನ ದಂತಗಳ ಮೇಲೆ ಹೊತ್ತ ವಿಷ್ಣುವಿನ ವರಾಹ ಅವತಾರ ನೋಡಿದರೆ ತುಂಬಾ ಆಕಾರವಾಗಿ ಕಾಣುತ್ತದೆ. ಒಂದೇ ಒಂದು ಘರ್ಜನೆಯಿಂದ ವಿಷ್ಣು ಇಡೀ ನೀರನ್ನು ಸರಿಸಿ ಭೂಮಿಯನ್ನು ಮಾತ್ರ ಮೇಲೆಕ್ಕೆತ್ತಿ ಅದರ ಮೂಲ ಸ್ಥಾನದಲ್ಲಿ ಮತ್ತೆ ಪುನಹ ಸ್ತಾಪಿಸುತ್ತಾನೆ. ಧಾರ್ಮಿಕ ಗ್ರಂಥಗಳಲ್ಲಿ ವರಾಹ ಪಾತ್ರವೆಂದರೆ ರಕ್ಷಣೆ ಮಾಡುವುದು ಮತ್ತು ಯಾವುದೇ ಒಂದು ಕ್ರಮವನ್ನು ಪುನಹ ಸ್ಥಾಪಿಸುವುದು ಎಂದು ಅರ್ಥ ಕೊಡುತ್ತದೆ.

ವಿಷ್ಣು ದೇವರು ಎಷ್ಟೇ ಅವತಾರಗಳನ್ನು ತಾಳಿದರೂ ಅದರಲ್ಲಿ ವರಾಹ ರೂಪವೂ ಅತ್ಯಂತ ಬಲಿಷ್ಠವಾದ, ಶಕ್ತಿಶಾಲಿಯಾದ ವಿಶಿಷ್ಟವಾದ ರೂಪಗಳಲ್ಲಿ ಒಂದಾಗಿದೆ. ಸುಲಭವಾಗಿ ಮಣ್ಣುನ್ನು ಕೊರೆಯುವ ಪ್ರಾಣಿ ಎಂದರೆ ಅದು ಹಂದಿ. ಇದೇ ರೀತಿಯಲ್ಲಿ ಮಣ್ಣನ್ನು ಸುಲಭವಾಗಿ ತೆಗೆದು ಸಾಗದಲ್ಲಿರುವ ಭೂದೇವಿಯನ್ನು ಮಹಾ ವಿಷ್ಣು ವರಾಹ ರೂಪ ತಾಳಿ ರಕ್ಷಣೆ ಮಾಡಿದನು. ವಿಷ್ಣು ತನ್ನ ವರಾಹ ಅವತಾರ ಮೂಲಕ ಸಾಗರದ ಆಳಕ್ಕೆ ಇಳಿದು ಆಳಕ್ಕೆ ಹೋದಂತೆ ಅಲ್ಲಿರುವ ವಸ್ತುಗಳನ್ನು ಮೇಲೆಕ್ಕೆ ತೆಗೆದು ಹಾಕುತ್ತಾನೆ. ಎಲ್ಲ ವಸ್ತುಗಳನ್ನು ಮೇಲಕ್ಕೆ ತೆಗೆದು ಹಾಕಿದರು. ವರಾಹ ಅವತಾರಕ್ಕೆ ಕತ್ತಲೆ ಪದರಗಳನ್ನು ಭೇದಿಸಬಲಲ ಶಕ್ತಿ ಕೂಡ ಇದೆ. ವಿಷ್ಣು ದೇವರನ್ನು ಮೀರಿದ ದೇವರೇ ಇಲ್ಲ ಎನ್ನಬಹುದು.

ವಿಷ್ಣುವಿನ ವರಾಹ ರೂಪವನ್ನು ಪೂಜಿಸುವ ಮೂಲಕ ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳುವುದು ಒಂದೆಡೆಯಾದರೆ, ಮಂತ್ರಗಳ ಮೂಲಕ ವಿಷ್ಣು ದೇವರನ್ನು ಒಲಿಸಿಕೊಳ್ಳುವುದು ಇನ್ನೊಂದೆಡೆ ಆಗಿದೆ. ಓಂ ನಮಃ ಶ್ರೀ ವರಾಹಾಯ ಧರನುದ್ಧರಣಾಯ ಚ ಸ್ವಾಹಾ. ಎನ್ನುವ ವರಾಹ ಮಂತ್ರವನ್ನು ಪಠಣೆ ಮಾಡಬೇಕು. ಇದೊಂದು ಮಂತ್ರವನ್ನು ಧಾರ್ಮಿಕ ಯಜ್ಞಗಳಲ್ಲಿ ಉಳಿಸಿಕೊಳ್ಳುವ ಮತ್ತು ಮತ್ತೆ ಸ್ಥಾಪನೆ ಮಾಡುವ ದೈವಿಕ ಶಕ್ತಿಯನ್ನು ಆಹ್ವಾನಿಸಲು ಬಳಸಲಾಗುತ್ತದೆ ಅಂತೆ. ದೇವರ ಅನುಗ್ರಹ ಇದ್ದಾರೆ ಏನನ್ನಾದರೂ ಸಾಧಿಸುವ ಛಲ ಇರುತ್ತದೆ. ವಿಷ್ಣು ಮಹಾ ಸಾಗರವನ್ನು ಅಗೆದು ಭೂದೇವಿಯನ್ನು ರಕ್ಷಣೆ ಮಾಡುವುದು ಎಂದರೆ ಸಾಮಾನ್ಯವಾದ ವಿಷಯ ಅಲ್ಲವೇ ಅಲ್ಲ.  

ವರಾಹ ಪಾತ್ರವೂ ರಕ್ಷಣೆ ಮಾಡುವುದು ಮಾತ್ರವಲ್ಲದೇ ಸೂಕ್ಷಣ ಕ್ಷೇತ್ರಗಳನ್ನು ಮರು ಜೋಡಣೆ ಮಾಡುವುದು ಕೆಲಸ ಕೂಡ ಮಾಡುತ್ತದೆ. ಅವನು ತನ್ನ ದಂತಗಳಿಂದ ಭೂದೇವಿಯನ್ನು ಮೇಲಕ್ಕೆ ಎತ್ತುವ ಮೂಲಕ ಭ್ರಮೆಯ ನಾಶವನ್ನು ಮಾಡಿದ್ದಾನೆ ಎಂದು ಈಗಲೂ ನಂಬಲಾಗುತ್ತದೆ. ತಾಂತ್ರಿಕ ಸಂಪ್ರದಾಯಗಳಲ್ಲಿ ವರಾಹವ್ನು ಪುರುಷ ದೇವನಾಗಿ ಪೂಜಿಸಿದರೆ, ವರಾಹಿಯನ್ನು ಶಕ್ತಿ, ಮಹಾ ಶಕ್ತಿಯಾಗಿ ಪೂಜೆ ಮಾಡಲಾಗುತ್ತದೆ. ವರಾಹ ಹೆಣ್ಣು ಮತ್ತು ಪುರುಷ ಎರಡು ರೂಪದಲ್ಲಿಯೂ ಇದೆ ಎನ್ನುವುದೇ ದೈವದ ವಿಶೇಷವಾಗಿದೆ. ವರಾಹಿ ಕೂಡ ಹಂದಿಯ ಮುಖವನ್ನು ಹೊಂದಿರುವಂತಹ ಮಹಾನ್‌ ದೇವತೆ ಆಗಿದ್ದಾಳೆ. ಸಪ್ತ ಮಾತೃಕೆಯರಲ್ಲಿ ಈಕೆಯನ್ನು ಹಂದಿ ತತ್ವದ ಸ್ತ್ರೀ ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ.

ಮಹಾನ್‌ ವಿಷ್ಣು ಅಥವಾ ವರಾಹನಿಗೆ ಜನನ ಅಥವಾ ಮರಣ ಎನ್ನುವುದು ಇಲ್ಲವೇ ಇಲ್ಲ. ವಿಶ್ವದಲ್ಲಿ ಶಾಶ್ವತವಾದ ಶಕ್ತಿಯನ್ನು ಸಾಕಾರಗೊಳಿಸುವುದೇ ವರಾಹ ಆಗಿದೆ. ಅಗತ್ಯ ಇದ್ದಾಗ ಮಾತ್ರ ಆ ವರಾಹ ಎಲ್ಲ ಕಡೆ ಪ್ರಜ್ವಲಿಸುತ್ತದೆ. ವಿಶ್ವದ ಪ್ರತಿ ಹಂತದಲ್ಲೂ ಅನ್ಯಾಯ, ಅವ್ಯವಸ್ಥೆ, ರಾಕ್ಷಸತನ ಮಹಾ ತಾಂಡವ ಆಡುವಾಗ ಧರ್ಮವನ್ನು ಮತ್ತೆ ಪ್ರತಿಷ್ಠಾಪನೆ ಮಾಡಲು ವರಾಹನು ಮಹಾ ಅವತಾರದಲ್ಲಿ ಉದ್ಭುವಿಸುತ್ತಾನೆ. ಭೂದೇವಿಯನ್ನು ಹೇಗೆ ಸಾಗರದ ಆಳಕ್ಕೆ ಇಳಿದು ರಕ್ಷಣೆ ಮಾಡಿದನೋ ಅಂತಹದ್ದೇ ಬಲವಾದ ಶಕ್ತಿಯ ಮೂಲಕ ಪುನರುತ್ಥಾನದ ಶಕ್ತಿಯನ್ನು ವರಾಹ ರೂಪ ತಾಳುತ್ತಾನೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES