• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಧರ್ಮ
  • /ದೇಶದಲ್ಲೇ ಅತಿ ದೊಡ್ಡ ಗಣಪತಿ ಪ್ರತಿಷ್ಠಾಪನೆ ಆಗಿದ್ದು ಎಲ್ಲಿ.. ಈ ಗಣೇಶನ ಎತ್ತರ, ಖರ್ಚು ಆಗೋ ಹಣ ಎಷ್ಟು?

ದೇಶದಲ್ಲೇ ಅತಿ ದೊಡ್ಡ ಗಣಪತಿ ಪ್ರತಿಷ್ಠಾಪನೆ ಆಗಿದ್ದು ಎಲ್ಲಿ.. ಈ ಗಣೇಶನ ಎತ್ತರ, ಖರ್ಚು ಆಗೋ ಹಣ ಎಷ್ಟು?

ಬಾಲಗಂಗಾಧರ ತಿಲಕ್‌ ಅವರ ಈ ಒಂದು ಕರೆಗೆ ಅಂದಿನ ದಿನಗಳಲ್ಲಿ ದೇಶದೆಲ್ಲೆಡೆ ಗಣೇಶ ಹಬ್ಬದ ಸಡಗರದಿಂದ ಭಾರೀ ಜೋರಾಗಿ ಆಚರಣೆ ಮಾಡಲಾಗಿತ್ತು. 1954ರಲ್ಲಿ ಆಗಿನ ಆಂಧ್ರ ಪ್ರದೇಶದ

Reported ByBhimappaEdited ByBhimappa
Published: Sep 14, 2026, 10:57 AM IST|Updated: Sep 17, 2026, 03:31 PM IST
joinshare
ದೇಶದಲ್ಲೇ ಅತಿ ದೊಡ್ಡ ಗಣಪತಿ ಪ್ರತಿಷ್ಠಾಪನೆ ಆಗಿದ್ದು ಎಲ್ಲಿ.. ಈ ಗಣೇಶನ ಎತ್ತರ, ಖರ್ಚು ಆಗೋ ಹಣ ಎಷ್ಟು?
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗೌರಿ ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಸಡಗರ ಸಂಭ್ರಮದಿಂದ ಕೂಡಿದ್ದು ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಹೊಸ ಹೊಸ ಬಟ್ಟೆಗಳನ್ನು ಧರಿಸಿ ಗಣಪತಿ ಪ್ರತಿಷ್ಠಾಪನೆಯಲ್ಲಿ ಮುಳುಗಿದ್ದಾರೆ. 2026ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್‌ 14 ಅಂದರೆ ಇವತ್ತು ಎಲ್ಲೆಡೆ ಆಚರಣೆ ಮಾಡಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆರಂಭವಾಗುವ ಈ ಹಬ್ಬವೂ ಅನಂತ ಚತುರ್ದಶಿಯ ದಿನದಂದು ಕೊನೆಗೊಳ್ಳುತ್ತದೆ. ದೇಶದೆಲ್ಲೆಡೆ ಗಣಪತಿ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿದೆ. ಇದರ ನಡುವೆ ಭಾರತದಲ್ಲಿ ಅತಿ ದೊಡ್ಡ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ನಗರ ಯಾವುದು ಎನ್ನುವುದು ನಿಮಗೆ ಗೊತ್ತಾ, ಈ ಗಣಪತಿ ಎಷ್ಟು ಅಡಿ ಎತ್ತರ ಇರುತ್ತದೆ, ಇದಕ್ಕೆ ಎಷ್ಟು ಹಣ ಖರ್ತು ಆಗುತ್ತದೆ, ಈ ದೊಡ್ಡ ಗಣಪತಿಯ ವಿಶೇಷತೆಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.    

ಗಣೇಶನನ್ನು ವಿಘ್ನಹರ್ತ ಅಂತ ಜ್ಞಾನ, ವಿದ್ಯಾಭ್ಯಾಸ, ಶಿಕ್ಷಣ, ಸಮೃದ್ಧಿ ಮತ್ತು ಶುಭ ಆರಂಭಗಳ ಸಂಕೇತವಾಗಿ ಭಕ್ತರು ಪೂಜೆ ಮಾಡುತ್ತಾರೆ. ಹೀಗಾಗಿ ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ, ಫ್ಯಾಮಿಲಿಗಳಿಗೆ, ಹೊಸದಾಗಿ ಕೆಲಸ ಕಾರ್ಯ ಆರಂಭಿಸುವವರಿಗೆ ಪ್ರತಿಯೊಬ್ಬರಿಗೂ ಈ ಹಬ್ಬ ವಿಶೇಷವಾಗಿರುತ್ತದೆ. ಗಣೇಶ ಚತುರ್ಥಿಯಂದು ಗಣಪತಿ ಮತ್ತು ಗಣಪತಿ ತಾಯಿ ಗೌರಿಯನ್ನು ಮನೆಗೆ ಆಹ್ವಾನ ಮಾಡುವುದು ಸಂಪ್ರದಾಯವಾಗಿದೆ. ಗಣೇಶನ ಕೃಪೆಯಿಂದ ಕುಟುಂಬದಲ್ಲಿ, ಉದ್ಯೋಗದಲ್ಲಿ, ಉದ್ಯಮದಲ್ಲಿ ಸದಾ ಶಾಂತಿ, ನೆಮ್ಮದಿ, ಸಿರಿವಂತಿಕೆ ತುಂಬಿರಲಿದೆ ಎಂದು ನಮ್ಮ ಸಂಪ್ರದಾಯಗಳು ಹೇಳುತ್ತ ಬಂದಿವೆ. ಸದ್ಯ ಇದೆಲ್ಲದರ ನಡುವೆ ಈಗ ದೇಶದ ಅತಿ ದೊಡ್ಡ ಗಣೇಶನ ಬಗ್ಗೆ ಮಾತನಾಡೋಣ.

ತೆಲಂಗಾಣದ ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಇಡೀ ದೇಶದಲ್ಲಿಯೇ ಅತಿ ದೊಡ್ಡ ಮತ್ತು ಅತಿ ಎತ್ತದ ಗಣೇಶ ವಿಗ್ರಹವನ್ನು ಪ್ರತಿವರ್ಷ ಚತುರ್ಥಿಯಂದು ಪ್ರತಿಷ್ಠಾಪನೆ ಮಾಡಲಾಗುತ್ತದೆ. 2026 ಈ ಬಾರಿಯೂ ಖೈರತಾಬಾದ್‌ನಲ್ಲಿ ಅತಿ ದೊಡ್ಡ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಗಣಪತಿಯನ್ನು ನೋಡಲೆಂದು ಲಕ್ಷಂತಾರ ಜನರು ಇಲ್ಲಿಗೆ ಬರುವುದುಂಟು. ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ಈ ಗಣಪತಿ. ನಿನ್ನೆ, ಮೊನ್ನೆಯಿಂದಲೂ ಈ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿಲ್ಲ. ಇದಕ್ಕೆ ಇತಿಹಾಸವೇ ಇದ್ದು ಭಾರತದ ಸ್ವಾತಂತ್ರ್ಯದ ಬಳಿಕ ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ ಆರಂಭವಾಯಿತು.

ಸ್ವಾತಂತ್ರ್ಯದ ಸಮಯದಲ್ಲಿ ಬಾಲಗಂಗಾಧರ ತಿಲಕ್‌ ಅವರು ದೇಶದ ಜನರನ್ನು ಒಟ್ಟುಗೂಡಿಸುವುದಕ್ಕಾಗಿ ಎಲ್ಲೆಡೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುವಂತೆ ಕರೆ ಕೊಟ್ಟರು. ಬಾಲಗಂಗಾಧರ ತಿಲಕ್‌ ಅವರ ಈ ಒಂದು ಕರೆಗೆ ಅಂದಿನ ದಿನಗಳಲ್ಲಿ ದೇಶದೆಲ್ಲೆಡೆ ಗಣೇಶ ಹಬ್ಬದ ಸಡಗರ ಭಾರೀ ಜೋರಾಗಿ ಆಚರಣೆ ಮಾಡಲಾಗಿತ್ತು. 1954ರಲ್ಲಿ ಆಗಿನ ಆಂಧ್ರ ಪ್ರದೇಶದ (ಆಂಧ್ರ ಮತ್ತು ತೆಲಂಗಾಣ) ಸ್ವಾತಂತ್ರ್ಯ ಹೋರಾಟಗಾರ ಸಿಂಗಾರಿ ಶಂಕರಯ್ಯ ಅವರು ಬಾಲಗಂಗಾಧರ ತಿಲಕ್‌ ಅವರಿಂದ ಪ್ರೇರಿತವಾದರು. ಏಕತೆ ಮತ್ತು ಸ್ವಾತಂತ್ರ್ಯ ಆದರ್ಶಗಳನ್ನು ಉತ್ತೇಜಿಸಲು ರಚಿಸಿದ ಮೊಟ್ಟ ಮೊದಲ ಬಾರಿಗೆ ಕೇವಲ 1 ಅಡಿ ಎತ್ತರದ ಸಾಧಾರಣ ಮಣ್ಣಿನ ವಿಗ್ರಹವನ್ನು ತಯಾರಿಸಿ ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿದರು.

ಹೀಗೆ ಪ್ರತಿಷ್ಠಾಪನೆ ಆದ ಗಣೇಶ ಅಲ್ಲಿನ ಜನರ ಮನದಲ್ಲಿ ಆಳವಾಗಿ ಉಳಿದುಕೊಂಡು ಬಿಟ್ಟ. ಜನರ ಮನದಲ್ಲಿ ಮಾತ್ರವಲ್ಲ ಪ್ರತಿವರ್ಷ ಹಬ್ಬದಂದು ಒಂದೊಂದೇ ಅಡಿ ಎತ್ತರ ಹೆಚ್ಚಳವಾಗುತ್ತ ಬಂದು. ಮೊದಲ ವರ್ಷದಲ್ಲಿ ಕೇವಲ 1 ಅಡಿ ಎತ್ತರದ ಗಣೇಶ ಈಗ ಭಾರೀ ದೊಡ್ಡ ಗಣಪತಿಯಾಗಿದ್ದಾನೆ. ಸದ್ಯ ಈಗ 2026ರಲ್ಲಿ ಬರೋಬ್ಬರಿ 69 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ಹಿಂದೆ ಒಮ್ಮೆ 72 ಅಡಿ ಅತಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಹಾಗಾದರೆ ಇಲ್ಲಿನ ಗಣಪತಿಯ ಹೆಸರು ಏನು ಗೊತ್ತಾ?.

ತೆಲಂಗಾಣದ ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಅತಿ ದೊಡ್ಡ ಗಣೇಶನ ಥೀಮ್‌ ಅನ್ನು ಅನಾವರಣ ಮಾಡಲಾಗಿದೆ. ಖೈರತಾಬಾದ್ ಗಣೇಶ ಉತ್ಸವ ಸಮಿತಿ ಅಡಿಯಲ್ಲಿ ಎಲ್ಲ ಕಾರ್ಯಗಳು ಸುಗಮವಾಗಿ ಪ್ರತಿವರ್ಷದಂತೆ ನಡೆಯುತ್ತಿವೆ. ಪಂಚಮುಖ ಸಂಕಷ್ಟಹರ ಮಹಾಗಣಪತಿ. ಈ ಗಣಪತಿಯನ್ನು ಖೈರತಾಬಾದ್‌ ಮಹಾ ಗಣ ಎಂತಲೂ ಕರೆಯುತ್ತಾರೆ. ಇದು ಪರಿಸರ ಸ್ನೇಹಿ ಗಣಪತಿಯಾಗಿದೆ. ಅಂದರೆ ಈ ಗಣೇಶನ ತಯಾರಿಕೆಯಲ್ಲಿ ಯಾವುದೇ ರೀತಿಯ ಕೆಮಿಕಲ್‌ ಅನ್ನು ಉಪಯೋಗ ಮಾಡಿರುವುದಿಲ್ಲ. ನೀರಿನಲ್ಲಿ ಹಾಕಿದರೂ ಸುಲಭವಾಗಿ ಕರಗಿ ಹೋಗುತ್ತದೆ.

ಸದ್ಯ ಈಗ ಪ್ರತಿಷ್ಠಾಪನೆ ಮಾಡಲಾಗಿರುವ ಪಂಚಮುಖ ಸಂಕಷ್ಟಹರ ಮಹಾಗಣಪತಿ ಪಕ್ಕದಲ್ಲಿ ಅಂದರೆ ಬಲ ಭಾಗದಲ್ಲಿ 15 ಅಡಿ ಎತ್ತರದ ಸೋಮನಾಥ ಜ್ಯೋತಿರ್ಲಿಂಗ ಮತ್ತು ಇನ್ನೊಂದು ಬದಿಯಲ್ಲಿ ಕಾಳಿಕಾ ಮಾತೆಯ ವಿಗ್ರಹ ಕೂಡ ಇರುವುದು ವಿಶೇಷ ಎನಿಸಿದೆ. ಗಣೇಶ ಹಬ್ಬಕ್ಕೂ 3 ತಿಂಗಳ ಮೊದಲೇ ಈ ಮಹಾ ಗಣಪತಿಯನ್ನು ತಯಾರು ಮಾಡುವ ಕೆಲಸ ಆರಂಭವಾಗಿತ್ತು.  

ಇಷ್ಟೊಂದು ದೊಡ್ಡ ಗಣಪತಿ ಅದರಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಮಾಡುವುದು ಅಷ್ಟೊಂದು ಸುಲಭವಲ್ಲ. ವಿಗ್ರಹಕ್ಕೆ ಏನೇನು ಬಳಕೆ ಮಾಡಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಮಹಾ ಗಣಪತಿ ವಿಗ್ರಹದ ಒಳಭಾಗಕ್ಕೆ ಸ್ಕ್ಯಾಫೋಲಿಂಗ್‌ಗಾಗಿ ಜೇಡಿಮಣ್ಣು, ಉಕ್ಕು, ಒಣ ಹುಲ್ಲು, ಭತ್ತದ ಹೊಟ್ಟು ಮತ್ತು ಮರದಂತಹ ವಸ್ತುಗಳನ್ನು ಬೇರೆ ಬೇರೆ ರಾಜ್ಯಗಳಿಂದ ತರಲಾಗುತ್ತದೆ. ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್‌ ಮತ್ತು ತಮಿಳುನಾಡಿನಿಂದ ಈ ಸಲ ವಸ್ತುಗಳನ್ನು ರವಾನೆ ಮಾಡಿಕೊಳ್ಳಲಾಗಿತ್ತು. ಕಳೆದ ನಾಲ್ಕು ದಶಕಗಳಿಂದ ಶಿಲ್ಪಿ ಚಿನ್ನಸ್ವಾಮಿ ರಾಜೇಂದ್ರನ್‌ ಅವರು ಗಣಪತಿ ವಿಗ್ರಹ ತಯಾರಿಕೆ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಶಿಲ್ಪಿ ಚಿನ್ನಸ್ವಾಮಿ ರಾಜೇಂದ್ರನ್‌ ಅವರೇ ಇಲ್ಲಿ ವಿಗ್ರಹ ತಯಾರಿಕೆಯಲ್ಲಿ ಅತ್ಯಂತ ಪ್ರಮುಖರು ಆಗಿದ್ದಾರೆ.  

4 ರಾಜ್ಯಗಳ 150ಕ್ಕೂ ಹೆಚ್ಚು ಕುಶಲಕರ್ಮಿಗಳು ಖೈರತಾಬಾದ್‌ನಲ್ಲಿ 69 ಅಡಿ ಎತ್ತದ ಪರಿಸರ ಸ್ನೇಹಿ ಪಂಚಮುಖ ಸಂಕಟಹರ ಮಹಾ ಗಣಪತಿ ವಿಗ್ರಹವನ್ನು ತಯಾರಿಸಿದ್ದಾರೆ. ಸ್ಕ್ಯಾಫೋಲಿಂಗ್‌ಗಾಗಿ ಜೇಡಿಮಣ್ಣು, ಉಕ್ಕು, ಒಣ ಹುಲ್ಲು, ಭತ್ತದ ಹೊಟ್ಟು ಮತ್ತು ಮರದಂತಹ ವಸ್ತುಗಳನ್ನು ವಿಗ್ರಹ ತಯಾರಿಕೆಯಲ್ಲಿ ಉಪಯೋಗ ಮಾಡಲಾಗಿದೆ. ವಿಗ್ರಹ ತಯಾರು ಮಾಡುವಾಗ 30 ಟನ್‌ ನದಿಯ ಜೇಡಿ ಮಣ್ಣು ಅನ್ನು ಬಳಕೆ ಮಾಡಲಾಗಿದೆ. ಇದರ ಜೊತೆಗೆ 20 ಟನ್‌ ಮರಳು ಕೂಡ ಬಳಕೆ ಆಗಿದೆ. ಉಕ್ಕು ಮತ್ತು ಭತ್ತದ ಹುಲ್ಲು ಅನ್ನು ಬಳಕೆ ಮಾಡಲಾಗಿದೆ. ಇಡೀ ಈ ಗಣಪತಿ ನಿರ್ಮಿಸುವುದರಿಂದ ಪ್ರತಿಷ್ಠಾಪನೆ ಮಾಡಿ ನದಿಯಲ್ಲಿ ಬಿಡುವವರೆಗೆ ಸುಮಾರು 1 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಖರ್ಚು ಆಗುತ್ತದೆ ಎಂದು ಅಂದಾಜಿಸಲಾಗಿದೆ. 
 

Add Zee News as a Preferred Source
TAGS:
Spirituality