• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಧರ್ಮ
  • /"ಚಾಣಕ್ಯ ನೀತಿ" ನೆಂಟರ ಮನೆಗೆ ಹೋದಾಗ ಈ 5 ತಪ್ಪುಗಳನ್ನು ಮಾಡಬೇಡಿ

"ಚಾಣಕ್ಯ ನೀತಿ" ನೆಂಟರ ಮನೆಗೆ ಹೋದಾಗ ಈ 5 ತಪ್ಪುಗಳನ್ನು ಮಾಡಬೇಡಿ

ಚಾಣಕ್ಯ ನೀತಿಯ ಪ್ರಕಾರ ನೆಂಟರ ಮನೆಗೆ ಹೋದಾಗ ಮಾಡಬಾರದ 5 ಮುಖ್ಯ ತಪ್ಪುಗಳಿವೆ. ಇವುಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ತಿಳಿಸದೆ ಹೋಗುವುದು, ಖಾಲಿ ಕೈಯಲ್ಲಿ ಹೋಗುವುದು ಸೇರಿದಂತೆ ಹಲವಾರು ಪ್ರಮುಖ ವಿಚಾರಗಳನ್ನು ಅರಿತು ಮುಂದಿನ ಬಾರಿ ಸಂಬಂಧಿಕರ ಮನೆಗೆ ಹೋಗಿ..

Reported ByKrishna NKEdited ByKrishna NK
Published: Sep 15, 2026, 09:30 PM IST|Updated: Sep 17, 2026, 02:32 PM IST
joinshare
"ಚಾಣಕ್ಯ ನೀತಿ" ನೆಂಟರ ಮನೆಗೆ ಹೋದಾಗ ಈ 5 ತಪ್ಪುಗಳನ್ನು ಮಾಡಬೇಡಿ
Image Credit: Relationship advice for visiting guest home

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಚಾಣಕ್ಯ ನೀತಿಯ ಪ್ರಕಾರ, ಮಾನವ ಸಂಬಂಧಗಳು ಅತ್ಯಂತ ಸೂಕ್ಷ್ಮ ಹಾಗೂ ಪವಿತ್ರವಾದವುಗಳು. ಯಾವುದೇ ಸಂಬಂಧವು ದೀರ್ಘಕಾಲದವರೆಗೆ ಗಟ್ಟಿಯಾಗಿರಬೇಕು ಅಂದ್ರೆ, ಪರಸ್ಪರ ಗೌರವ, ನಿಷ್ಠೆ ಹಾಗೂ ಉತ್ತಮ ನಡವಳಿಕೆಗಳು ಅತ್ಯಗತ್ಯ. ಅದರಲ್ಲೂ ಬಂಧು-ಮಿತ್ರರ ಮನೆಗೆ ಭೇಟಿ ನೀಡಿದಾಗ ಬಹಳ ಜಾಗರೂಕರಾಗಿರಬೇಕು. ಸಂಬಂಧಿಗಳ ಯೋಗಕ್ಷೇಮ ವಿಚಾರಿಸಿ, ಕಷ್ಟ-ಸುಖ ಹಂಚಿಕೊಂಡು ಒಂದಿಷ್ಟು ಸಂತೋಷದ ಕ್ಷಣಗಳನ್ನು ಕಳೆಬೇಕು... ಹಾಗಿದ್ರೆ ನೆಂಟರ ಮನೆಗೆ ಹೋದಾಗ ಮಾಡಬಾರದ ಕೆಲವು ಕೆಲಸಗಳು ಯಾವುವು? ಬನ್ನಿ ನೋಡೋಣ..

ಸಂಬಂಧಿಗಳ ಮನೆಗೆ ಹೋದಾಗ ನಾವು ಸಾಮಾನ್ಯವೆಂದು ಭಾವಿಸುವ ಅನೇಕ ಸಂಗತಿಗಳು ಅವರ ಮನಸ್ಸಿಗೆ ನೋವುಂಟು ಮಾಡಬಹುದು. ಇದೇ ಕಾರಣಕ್ಕೆ ಆಚಾರ್ಯ ಚಾಣಕ್ಯರು ಸಂಬಂಧಿಕರ ಮನೆಗೆ ಭೇಟಿ ನೀಡಿದಾಗ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಕೆಲವು ಪ್ರಮುಖ ನೀತಿಗಳನ್ನು ಮತ್ತು ಮಾಡಬಾರದ ತಪ್ಪುಗಳನ್ನು ವಿವರವಾಗಿ ತಿಳಿಸಿದ್ದಾರೆ. ಆ ತಪ್ಪುಗಳು ಹಾಗೂ ನಾವು ವಹಿಸಬೇಕಾದ ಮುನ್ನೆಚ್ಚರಿಕೆಗಳ ವಿವರ ಇಲ್ಲಿದೆ.

ಮುನ್ಸೂಚನೆ ನೀಡದೆ ಅಥವಾ ತಿಳಿಸದೆ ಭೇಟಿ ನೀಡುವುದು
ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಜೀವನವೂ ತಮ್ಮದೇ ಆದ ರೀತಿಯಲ್ಲಿ ಬ್ಯುಸಿಯಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಯಾರಿಗೂ ತಿಳಿಸದೆ, ಇದ್ದಕ್ಕಿದ್ದಂತೆ ಅಥವಾ ಅನಿರೀಕ್ಷಿತವಾಗಿ ಸಂಬಂಧಿಕರ ಮನೆಗೆ ಹೋಗುವುದು ಒಳ್ಳೆಯ ಅಭ್ಯಾಸವಲ್ಲ. ನಾವು ಅನಿರೀಕ್ಷಿತವಾಗಿ ಹೋದಾಗ ಅವರು ಯಾವುದೋ ಪ್ರಮುಖ ಕೆಲಸದಲ್ಲಿ ನಿರತರಾಗಿರಬಹುದು, ಅಥವಾ ಹೊರಗೆ ಹೋಗಲು ಸಿದ್ಧರಾಗಿರಬಹುದು. ಅಷ್ಟೇ ಅಲ್ಲದೆ, ಅತಿಥಿಗಳನ್ನು ಸರಿಯಾಗಿ ಉಪಚರಿಸಲು ಅವರ ಬಳಿ ಸಮಯ ಅಥವಾ ಸಿದ್ಧತೆ ಇಲ್ಲದಿರಬಹುದು. ಇದರಿಂದ ಅವರಿಗೂ ಮುಜುಗರ ಉಂಟಾಗುತ್ತದೆ ಮತ್ತು ನಮಗೂ ಸೂಕ್ತ ಆದರ-ಸತ್ಕಾರ ಸಿಗದಿರಬಹುದು. ಆದ್ದರಿಂದ, ಯಾರದ್ದೇ ಮನೆಗೆ ಹೋಗುವ ಮುನ್ನ ದೂರವಾಣಿ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ, ಅವರ ಅನುಕೂಲವನ್ನು ಕೇಳಿ ಹೋಗುವುದು ಆಚಾರ್ಯ ಚಾಣಕ್ಯರ ಪ್ರಕಾರ ಅತ್ಯಂತ ಗೌರವಯುತವಾದ ನಡವಳಿಕೆಯಾಗಿದೆ.

ಖಾಲಿ ಕೈಯಲ್ಲಿ ನೆಂಟರ ಮನೆಗೆ ಹೋಗಬೇಡಿ
ಚಾಣಕ್ಯ ನೀತಿಯ ಪ್ರಕಾರ, ನಾವು ಅತಿಥಿಯಾಗಿ ಯಾರದ್ದೇ ಮನೆಗೆ ಹೋದರೂ ಬರಿಗೈಯಲ್ಲಿ ಕಾಲಿಡಬಾರದು. ನಾವು ಅವರಿಗೆ ಅತ್ಯಂತ ದುಬಾರಿ ಉಡುಗೊರೆಗಳನ್ನೇ ನೀಡಬೇಕೆಂದೇನೂ ಇಲ್ಲ. ನಮ್ಮ ಶಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಸಣ್ಣ ಪ್ರಮಾಣದ ಹಣ್ಣುಗಳು, ಸಿಹಿತಿಂಡಿಗಳು, ಮನೆಗೆ ಅಗತ್ಯವಿರುವ ಸಣ್ಣ ವಸ್ತುಗಳು ಅಥವಾ ಮನೆಯಲ್ಲಿರುವ ಮಕ್ಕಳಿಗೆ ಚಾಕೊಲೇಟ್‌ಗಳನ್ನು ತೆಗೆದುಕೊಂಡು ಹೋಗಬಹುದು. ಇಲ್ಲಿ ನಾವು ತೆಗೆದುಕೊಂಡು ಹೋಗುವ ವಸ್ತುವಿನ ಬೆಲೆ ಮುಖ್ಯವಲ್ಲ, ಬದಲಾಗಿ ಅದರ ಹಿಂದಿರುವ ಪ್ರೀತಿ, ಅಭಿಮಾನ ಮತ್ತು ಗೌರವ ಮುಖ್ಯವಾಗಿರುತ್ತದೆ. ಈ ಸಣ್ಣ ಸಂಪ್ರದಾಯವು ನಿಮ್ಮ ಭೇಟಿಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

ಇತರರ ಬಗ್ಗೆ ಚಾಡಿ ಹೇಳುವುದು ಅಥವಾ ಗಾಸಿಪ್ ಮಾಡಬೇಡಿ
ಸಂಬಂಧಿಕರ ಮನೆಗೆ ಹೋದಾಗ ಅಲ್ಲಿ ಇಲ್ಲದಿರುವ ಇತರ ಬಂಧುಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಅವರ ವೈಯಕ್ತಿಕ ವಿಷಯಗಳನ್ನು ಹಗುರವಾಗಿ ಚರ್ಚಿಸುವುದು ಅಥವಾ ಅವರ ಮೇಲೆ ಅನುಮಾನ ಸೃಷ್ಟಿಸುವ ಮಾತುಗಳನ್ನಾಡುವುದು ಅತ್ಯಂತ ದೊಡ್ಡ ತಪ್ಪಾಗಿದೆ. ಇಂದು ನೀವು ಆಡುವ ಚಾಡಿ ಮಾತುಗಳು ನಾಳೆ ಯಾವುದೋ ರೀತಿಯಲ್ಲಿ ಅವರಿಗೆ ತಲುಪಿ, ದೊಡ್ಡ ಮಟ್ಟದ ಜಗಳ ಅಥವಾ ಮನಸ್ತಾಪಕ್ಕೆ ಕಾರಣವಾಗಬಹುದು. ಇದರೊಂದಿಗೆ, ನಿಮ್ಮ ಆಸ್ತಿ-ಪಾಸ್ತಿ, ಸಂಪತ್ತು, ಆದಾಯ ಅಥವಾ ದುಬಾರಿ ವಸ್ತುಗಳ ಬಗ್ಗೆ ಅತಿಯಾಗಿ ಕೊಚ್ಚಿಕೊಳ್ಳುವುದು (ಅಹಂಕಾರ ಪ್ರದರ್ಶಿಸುವುದು) ಇತರರಲ್ಲಿ ಅಸೂಯೆ ಅಥವಾ ಕೀಳರಿಮೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಮಾತನಾಡುವಾಗ ಯಾವಾಗಲೂ ನಮ್ರತೆ ಇರಲಿ.

ಅವರ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕಬೇಡಿ
ನಾವು ಅವರ ಸಂಬಂಧಿಕರಾಗಿದ್ದೇವೆ ಎಂದಮಾತ್ರಕ್ಕೆ ಅವರ ಮನೆಯ ಪ್ರತಿಯೊಂದು ನಿರ್ಧಾರದಲ್ಲೂ ನಮ್ಮ ಅಭಿಪ್ರಾಯವನ್ನು ಹೇರಬಾರದು. ಅವರ ಮಕ್ಕಳ ಶಿಕ್ಷಣ, ಪತಿ-ಪತ್ನಿಯರ ನಡುವಿನ ಆಂತರಿಕ ವಿಷಯಗಳು, ಅವರ ಮನೆಯ ದಿನನಿತ್ಯದ ಖರ್ಚು-ವೆಚ್ಚಗಳು ಹಾಗೂ ಗೃಹ ವ್ಯವಸ್ಥೆಯ ಬಗ್ಗೆ ಅವರು ನಿಮ್ಮ ಸಲಹೆಯನ್ನು ಕೇಳದ ಹೊರತು ನಿಮ್ಮಷ್ಟಕ್ಕೆ ನೀವೇ ಅಭಿಪ್ರಾಯಗಳನ್ನು ನೀಡಲು ಹೋಗಬೇಡಿ. ಕೆಲವೊಮ್ಮೆ ನಿಮ್ಮ ಸಲಹೆ ಸರಿಯಾಗಿದ್ದರೂ, ಅದನ್ನು ಹೇಳುವ ಸಮಯ ಮತ್ತು ಸಂದರ್ಭ ತಪ್ಪಾಗಿದ್ದರೆ ಸಂಬಂಧಗಳು ಹದಗೆಡಬಹುದು. ಅವರು ಸ್ವತಃ ನಿಮ್ಮ ಬಳಿ ಬಂದು ಪ್ರೀತಿಯಿಂದ ಸಲಹೆ ಕೇಳಿದಾಗ ಮಾತ್ರ ಶಾಂತವಾಗಿ ಮತ್ತು ಹಿತವಾಗಿ ನಿಮ್ಮ ಅನಿಸಿಕೆಯನ್ನು ತಿಳಿಸುವುದು ಬುದ್ಧಿವಂತಿಕೆ.

ಹೆಚ್ಚಿನ ದಿನಿ ಉಳಿದುಕೊಳ್ಳುವುದು ಹಾಗೂ ಅವರ ದಿನಚರಿಗೆ ಅಡ್ಡಿಪಡಿಸಬೇಡಿ
ಸಂಬಂಧಿಕರ ಮನೆಗೆ ಹೋದಾಗ ಒಂದಷ್ಟು ಸಮಯ ಕುಳಿತು ಪ್ರೀತಿಯಿಂದ ಮಾತನಾಡುವುದು ಒಳ್ಳೆಯದೇ. ಆದರೆ ಅತಿಥಿಯಾಗಿ ಹೋದಾಗ ಅವರ ಮನೆ ನಿಯಮಗಳು ಮತ್ತು ದಿನಚರಿಯನ್ನು ಗೌರವಿಸುವುದು ಅತ್ಯಗತ್ಯ. ಪ್ರತಿಯೊಬ್ಬರಿಗೂ ತಮ್ಮದೇ ಆದ ಕೆಲಸಗಳು, ವಿಶ್ರಾಂತಿಯ ಸಮಯ ಹಾಗೂ ವೈಯಕ್ತಿಕ ಜೀವನವಿರುತ್ತದೆ. ನಾವು ಅವರ ಮನೆಯಲ್ಲೇ ಸುಮ್ಮನೆ ದೀರ್ಘಕಾಲ ಉಳಿದುಕೊಳ್ಳುವುದರಿಂದ ಅಥವಾ ಅವರ ದೈನಂದಿನ ಕೆಲಸಗಳಿಗೆ ಅಡ್ಡಿಪಡಿಸುವುದರಿಂದ ಅವರಿಗೆ ನಮ್ಮ ಉಪಸ್ಥಿತಿಯು ಹೊರೆಯಾಗಿ ಕಾಣಲು ಪ್ರಾರಂಭವಾಗುತ್ತದೆ. "ಅತಿ ಸರ್ವತ್ರ ವರ್ಜಯೇತ್" ಎಂಬಂತೆ, ಯಾವುದೇ ವಿಷಯ ಅತಿಯಾದರೆ ತೊಂದರೆ. ಆದ್ದರಿಂದ, ಸೂಕ್ತ ಸಮಯ ನೋಡಿಕೊಂಡು ಗೌರವಯುತವಾಗಿ ಬೀಳ್ಕೊಡುವುದು ಒಳ್ಳೆಯದು.

ಚಾಣಕ್ಯ ನೀತಿಯ ಪ್ರಕಾರ ಸಂಬಂಧಗಳು ಗಟ್ಟಿಯಾಗಿರಲು ಪರಸ್ಪರ ಗೌರವ, ನಿಷ್ಠೆ ಮತ್ತು ನಡವಳಿಕೆ ಅತ್ಯಗತ್ಯ. ನೆಂಟರ ಮನೆಗೆ ಭೇಟಿ ನೀಡಿದಾಗ ಈ ಎಲ್ಲಾ ನಿಯಮಗಳನ್ನು ಪಾಲಿಸುವುದು ಸೂಕ್ತ. ಮುಂದಿನ ಬಾರಿ ಹೋಗುವಾಗ ನೀವು ಹೋಗುತ್ತಿರುವ ವಿಚಾರ ತಿಳಿಸಿ ಅನುಮತಿ ಪಡೆದೇ ಭೇಟಿ ನೀಡಿ. ಬರಿಗೈಯಲ್ಲಿ ಹೋಗದೆ, ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣ್ಣು-ಸಿಹಿ ಅಥವಾ ಇತರೆ ವಸ್ತುಗಳನ್ನು ತೆರೆದುಕೊಂಡು ಹೋಗಿ. ಚಾಡಿ ಮಾತು, ಅಹಂಕಾರದ ಬಿಟ್ಟು ಸಂತೋಷದಿಂದ ಎರಡು ಮಾತನಾಡಿ. ಅಷ್ಟೇ ಅಲ್ಲದೆ, ಅವರ ಇತರೆ ಕೆಲಸಕ್ಕೆ ಧಕ್ಕೆಯಾಗದಂತೆ ಅಲ್ಲಿಂದ ಬೇಗನೇ ಹೊರ ಬರುವುದು ಉತ್ತಮ.

ಒಟ್ಟಾರೆಯಾಗಿ, ನಾವು ಸಂಬಂಧಿಗಳ ಭೇಟಿ ನೀಡುವಾಗ ನಾವು ವಹಿಸುವ ಸಣ ಕಾಳಜಿ ಮತ್ತು ಸಮಯಪ್ರಜ್ಞೆ ಹಾಗೂ ಪರಸ್ಪರ ಗೌರವವು ನಮ್ಮ ಸಂಬಂಧಗಳನ್ನು ಇನ್ನಷ್ಟು ಗಟ್ಟಿಮಾಡುತ್ತದೆ. ಚಾಣಕ್ಯರ ಈ ಸರಳ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಹೋದ ಕಡೆಯಲ್ಲೆಲ್ಲ ಗೌರವ ಮತ್ತು ಪ್ರೀತಿಯನ್ನು ಗಳಿಸಲು ಸಾಧ್ಯ.. ಮುಂದಿನ ಬಾರಿ ನೀವು ನಿಮ್ಮ ನೆಂಟರ ಮನೆಗೆ ಹೋಗುವಾಗ ಈ ಮೇಲೆ ನೀಡಿರುವ ಯಾವುದೇ ತಪ್ಪುಗಳನ್ನು ಮಾಡಬೇಡಿ..

Add Zee News as a Preferred Source
TAGS:
Spirituality