• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಶ್ರೀಮಂತ ಸ್ಪರ್ಧಿ ಯಾರು ಗೊತ್ತಾ? ಇಲ್ಲಿದೆ ಪಕ್ಕಾ ಮಾಹಿತಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಶ್ರೀಮಂತ ಸ್ಪರ್ಧಿ ಯಾರು ಗೊತ್ತಾ? ಇಲ್ಲಿದೆ ಪಕ್ಕಾ ಮಾಹಿತಿ

Written ByRamya. R. Gowda
Published: Nov 17, 2026, 10:27 IST|Updated: Nov 17, 2026, 10:38 IST
joinshare
Who is richest contestant in Bigg Boss season 13: ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಶ್ರೀಮಂತ ಸ್ಫರ್ಧಿಯಾಗಿ ಯಾರು ಎಂದು ತಿಳಿಯಲು ಈ ಸ್ಟೋರಿ ಓದಿ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಗಳ ನಿಖರವಾದ ಆಸ್ತಿ ಮೌಲ್ಯ (Net Worth) ಕುರಿತು ವಾಹಿನಿಯಾಗಲಿ ಅಥವಾ ಸ್ಪರ್ಧಿಗಳಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಸಾರ್ವಜನಿಕವಾಗಿ ಲಭ್ಯವಿರುವ ವರದಿಗಳು, ವೃತ್ತಿಜೀವನ ಮತ್ತು ಉದ್ಯಮಗಳ ಆಧಾರದ ಮೇಲೆ ಈ ಸೀಸನ್‌ನ ಪ್ರಮುಖ ಶ್ರೀಮಂತ ಸ್ಪರ್ಧಿಗಳ ವಿವರ ಇಲ್ಲಿದೆ.
 

BBK richest contestant1/6

ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಶ್ರೀಮಂತ ಸ್ಫರ್ಧಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಸ್ಪರ್ಧಿಗಳ ಅಧಿಕೃತ ಆಸ್ತಿ ಮೌಲ್ಯದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಿಲ್ಲ. ಆದರೆ ಮಾಧ್ಯಮಗಳ ವರದಿಗಳ ಪ್ರಕಾರ, ವೈಲ್ಡ್‌ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಸೋನಿಕಾ ಗೌಡ ಅವರು ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರು ಎಂದು ಗುರುತಿಸಿಕೊಂಡಿದ್ದಾರೆ.
BBK richest contestant2/6

ಕಾವ್ಯ ಗೌಡ ಮತ್ತು ಸಂಗೀತಾ ಭಟ್

ಕಾವ್ಯ ಗೌಡ ಮತ್ತು ಸಂಗೀತಾ ಭಟ್. ಕನ್ನಡ ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ದೀರ್ಘಕಾಲದಿಂದ ಸಕ್ರಿಯವಾಗಿರುವ ಈ ನಟಿಯರು ಹೆಚ್ಚಿನ ಸಂಭಾವನೆ ಪಡೆಯುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದಾರೆ. ಸದ್ಯ ಇಬ್ಬರು ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ.
BBK richest contestant3/6

ಸೌಂದರ್ಯ ಶೆಟ್ಟಿ

ಸೌಂದರ್ಯ ಶೆಟ್ಟಿ (Soundarya Shetty). ಮಾಡೆಲಿಂಗ್, ಡಿಜಿಟಲ್ ಬ್ರ್ಯಾಂಡ್ ಪ್ರಚಾರ ಮತ್ತು ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದಿರುವ ಸೌಂದರ್ಯ ಶೆಟ್ಟಿ ಅವರ ಅಂದಾಜು ಆಸ್ತಿ ಮೌಲ್ಯ ಸುಮಾರು ₹1 ರಿಂದ ₹2 ಕೋಟಿ ಇದೆ ಎಂದು ಅಂದಾಜಿಸಲಾಗಿದೆ.
BBK richest contestant4/6

ಸೋನಿಕಾ ಗೌಡ

ಸೋನಿಕಾ ಗೌಡ (Sonika Gowda) ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿರುವ ನಟಿ ಸೋನಿಕಾ ಗೌಡ ಬೆಂಗಳೂರಿನಲ್ಲಿ ತಮ್ಮದೇ ಆದ ಸಲೂನ್ ಉದ್ಯಮವನ್ನು ಹೊಂದಿದ್ದು, ಉತ್ತಮ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದಿದ್ದಾರೆ. ನಟನೆ ಮಾತ್ರವಲ್ಲ, ಉದ್ಯಮ ಕ್ಷೇತ್ರದಲ್ಲೂ ಸೋನಿಕಾ ಸಕ್ರಿಯರಾಗಿದ್ದಾರೆ. ತಮ್ಮದೇ ಆದ ಸಲೂನ್ ಹೊಂದಿರುವ ಇವರು, ಕಳೆದೊಂದು ದಶಕದಿಂದ ದುಡಿಯುತ್ತಿದ್ದಾರೆ. ಇವರ ತಂದೆ ಎಕ್ಸ್‌ಪೋರ್ಟ್ ಉದ್ಯಮಿಯಾಗಿದ್ದು, ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.
BBK richest contestant5/6

ಓಂ ಪ್ರಕಾಶ್ ರಾವ್

ಓಂ ಪ್ರಕಾಶ್ ರಾವ್ (Om Prakash Rao). ಕನ್ನಡ ಚಿತ್ರರಂಗದಲ್ಲಿ ಸುಮಾರು 45ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಾಪಕರಾಗಿಯೂ ಕೆಲಸ ಮಾಡಿರುವ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಸೀಸನ್‌ನ ಅತ್ಯಂತ ಅನುಭವಿ ಮತ್ತು ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದಾರೆ.
richest-contestant-in-bigg-boss-season6/6

ಗಗನ್ ಚಿನ್ನಪ್ಪ

ಕನ್ನಡ ಕಿರುತೆರೆ ನಟ ಹಾಗೂ 'ಬಿಗ್ ಬಾಸ್ ಕನ್ನಡ 13' (Bigg Boss Kannada 13) ಸ್ಪರ್ಧಿ ಗಗನ್ ಚಿನ್ನಪ್ಪ (Gagan Chinnappa) ಅವರ ಅಂದಾಜು ನಿವ್ವಳ ಆಸ್ತಿ ಮೌಲ್ಯ ₹50 ಲಕ್ಷದಿಂದ ₹1 ಕೋಟಿಯವರೆಗೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.ನಿವ್ವಳ ಆಸ್ತಿ ಮೌಲ್ಯ (Net Worth). ವಿವಿಧ ಮನರಂಜನಾ ಪೋರ್ಟಲ್‌ಗಳ ಅಂದಾಜಿನ ಪ್ರಕಾರ ಗಗನ್ ಚಿನ್ನಪ್ಪ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ₹50 ಲಕ್ಷದಿಂದ ₹1 ಕೋಟಿಯಷ್ಟಿದೆ. ಪ್ರಮುಖ ಆದಾಯದ ಮೂಲಗಳು. 'ಸೀತಾ ರಾಮ' (Seetha Rama) ಮತ್ತು 'ಮಂಗಳ ಗೌರಿ ಮದುವೆ' (Mangala Gowri Maduve) ಧಾರಾವಾಹಿಗಳ ನಟನೆ, ಬಿಗ್ ಬಾಸ್ ಸಂಭಾವನೆ, ಬ್ರ್ಯಾಂಡ್ ಪ್ರಚಾರಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಇವರ ಮುಖ್ಯ ಆದಾಯದ ಮೂಲಗಳಾಗಿವೆ.
TAGS:
Bigg Boss Kannada Season 13

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.