• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ವಿದೇಶದಲ್ಲಿ ಮೋದಿ ಜೊತೆ ಕಾಣಿಸಿಕೊಂಡ ಐಶ್ವರ್ಯಾ ಶಿಯೋರನ್ ಯಾರು?

ವಿದೇಶದಲ್ಲಿ ಮೋದಿ ಜೊತೆ ಕಾಣಿಸಿಕೊಂಡ ಐಶ್ವರ್ಯಾ ಶಿಯೋರನ್ ಯಾರು?

Written ByRamya. R. Gowda
Published: Nov 23, 2026, 19:59 IST|Updated: Nov 23, 2026, 20:12 IST
joinshare
Who is Aishwarya Sheoranವಿದೇಶದಲ್ಲಿ ಮೋದಿ ಜೊತೆ ಕಾಣಿಸಿಕೊಂಡ ಐಶ್ವರ್ಯಾ ಶಿಯೋರನ್ ಯಾರು ಅಂತಾ ತಿಳಿಯಲು ಈ ಸ್ಟೋರಿ ಓದಿ

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ವೇಳೆ ಅವರೊಂದಿಗೆ ಕಾಣಿಸಿಕೊಂಡ ಯುವ ಮಹಿಳಾ ಅಧಿಕಾರಿಯೊಬ್ಬರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದಾರೆ. 

Who is Aishwarya Sheoran seen with Modi beside1/6

ವಿದೇಶಿ ಪ್ರವಾಸದಲ್ಲಿ ಐಶ್ವರ್ಯಾ ಶಿಯೋರನ್.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ವೇಳೆ ಅವರೊಂದಿಗೆ ಕಾಣಿಸಿಕೊಂಡ ಯುವ ಮಹಿಳಾ ಅಧಿಕಾರಿಯೊಬ್ಬರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದಾರೆ. ಅವರ ಹೆಸರು ಐಶ್ವರ್ಯಾ ಶಿಯೋರನ್. ಒಂದು ಕಾಲದಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಇವರು, ಇಂದು ಭಾರತೀಯ ವಿದೇಶಾಂಗ ಸೇವೆಯ (IFS) ಅಧಿಕಾರಿಯಾಗಿ ದೇಶದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Who is Aishwarya Sheoran seen with Modi beside2/6

ಮನಿಲಾದಲ್ಲಿ ಮೋದಿ ಜೊತೆ ಐಶ್ವರ್ಯಾ ಶಿಯೋರನ್

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫಿಲಿಪೈನ್ಸ್ ರಾಜಧಾನಿ ಮನಿಲಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಐಶ್ವರ್ಯಾ ಶಿಯೋರನ್ ಅವರೂ ಕಾಣಿಸಿಕೊಂಡಿದ್ದರು. ಪ್ರಧಾನಿಯವರೊಂದಿಗೆ ಅಧಿಕೃತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿವೆ.
Who is Aishwarya Sheoran seen with Modi beside3/6

ಮಾಡೆಲಿಂಗ್ ಲೋಕದಿಂದ ನಾಗರಿಕ ಸೇವೆಯತ್ತ ಪಯಣ

ಐಶ್ವರ್ಯಾ ಶಿಯೋರನ್ ಅವರ ಜೀವನ ಪಯಣ ಸಾಕಷ್ಟು ಆಸಕ್ತಿದಾಯಕವಾಗಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು, ಸೌಂದರ್ಯ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದರು. 2016ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿ ಗಮನ ಸೆಳೆದಿದ್ದರು.
Who is Aishwarya Sheoran seen with Modi beside4/6

ಮಾಡೆಲಿಂಗ್ ಕ್ಷೇತ್ರದಲ್ಲೇ ಹೆಸರು

ಆದರೆ, ಮಾಡೆಲಿಂಗ್ ಕ್ಷೇತ್ರದಲ್ಲೇ ಮುಂದುವರಿಯುವ ಬದಲು ದೇಶದ ಸೇವೆ ಮಾಡುವ ಗುರಿಯೊಂದಿಗೆ ನಾಗರಿಕ ಸೇವೆಯತ್ತ ಮುಖ ಮಾಡಿದರು. ಕಠಿಣ ಪರಿಶ್ರಮ ಮತ್ತು ಅಧ್ಯಯನದ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಭಾರತೀಯ ವಿದೇಶಾಂಗ ಸೇವೆಗೆ ಆಯ್ಕೆಯಾದರು.
Who is Aishwarya Sheoran seen with Modi beside5/6

ಯುವಜನರಿಗೆ ಸ್ಫೂರ್ತಿಯಾದ ಐಶ್ವರ್ಯಾ

ಗ್ಲಾಮರ್ ಲೋಕದಿಂದ ರಾಜತಾಂತ್ರಿಕ ಸೇವೆಯವರೆಗೆ ಸಾಗಿರುವ ಐಶ್ವರ್ಯಾ ಶಿಯೋರನ್ ಅವರ ಪಯಣ ಇದೀಗ ಯುವಜನರ ಗಮನ ಸೆಳೆಯುತ್ತಿದೆ. ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡನ್ನೂ ಸಮರ್ಥವಾಗಿ ಬಳಸಿಕೊಂಡು ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿರುವ ಅವರು, ಹಲವು ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.
Who is Aishwarya Sheoran 6/6

ಐಶ್ವರ್ಯಾ ಶಿಯೋರನ್

ಸದ್ಯಪ್ರಧಾನಿ ಮೋದಿ ಅವರೊಂದಿಗೆ ಕಾಣಿಸಿಕೊಂಡ ಬೆನ್ನಲ್ಲೇ ಐಶ್ವರ್ಯಾ ಶಿಯೋರನ್ ಅವರ ಹಿನ್ನೆಲೆ, ಶಿಕ್ಷಣ, ಮಾಡೆಲಿಂಗ್ ಬದುಕು ಹಾಗೂ ಐಎಫ್‌ಎಸ್ ಸಾಧನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ಹೆಚ್ಚಾಗಿದೆ.
TAGS:
India

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ನೀರಿಗೆ ಎಕ್ಸ್ ಪೈರಿ ಡೇಟ್ ಇದೆಯೇ? ಬಾಟಲಿಗಳ ಮೇಲೆ ಆ ಡೇಟ್ ಯಾಕೆ ಹಾಕುತ್ತಾರೆ ಇಲ್ಲಿದೆ ನಿಜವಾದ ಸತ್ಯ!

ನೀರಿಗೆ ಎಕ್ಸ್ ಪೈರಿ ಡೇಟ್ ಇದೆಯೇ? ಬಾಟಲಿಗಳ ಮೇಲೆ ಆ ಡೇಟ್ ಯಾಕೆ ಹಾಕುತ್ತಾರೆ ಇಲ್ಲಿದೆ ನಿಜವಾದ ಸತ್ಯ!

2

ಜಪಾನ್‌, ರಷ್ಯಾ ಹಿಂದಿಕ್ಕಿದ ಭಾರತ.. ಏಷ್ಯಾದಲ್ಲಿ ಈಗ 3ನೇ ಪವರ್‌ಫುಲ್ ದೇಶ!

3

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರದ ನಿರ್ಲಕ್ಷ್ಯ! ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಆಮ್ ಆದ್ಮಿ ಪಕ್ಷದ ಆಗ್ರಹ

4

ಬಲವಂತವಾಗಿ ಕಾಡು ಆನೆ ಸ್ಥಳಾಂತರ ವಿರೋಧಿಸಿ ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕಿ ನಯನ ಮೋಟಮ್ಮ

5

RCB ಪರ ಮೊದಲ ಸೆಂಚುರಿ ಸಿಡಿಸಿದ್ದು ಯಾರು ಗೊತ್ತಾ? ಈ ಕನ್ನಡಿಗನೇ ಆ ದಾಖಲೆ ವೀರ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.