ಕಪ್ಪು ಎಮ್ಮೆಯ ಹೊಟ್ಟೇಲಿ ಬಿಳಿ ಬಣ್ಣದ ಹೋರಿ ಕರು ಜನನ.. ಗ್ರಾಮಸ್ಥರಿಗೇ ಶಾಕ್!
1/6
ಎಮ್ಮೆ ಹೊಟ್ಟೆಯಲ್ಲಿ ಹೋರಿ ಕರು
ಎಮ್ಮೆ ಹೊಟ್ಟೆಯಲ್ಲಿ ಹೋರಿ ಕರು ಜನಿಸಲು ಸಾಧ್ಯವೇ? ಅದರಲ್ಲೂ ಸ್ವಚ್ಚ ಬಿಳುಪಿನ ಹೋರಿ ಕರು ಜನಿಸಬಹುದೇ...? ಇದು ನೀವು ನಂಬಲಸಾಧ್ಯವಾದರೂ ಸತ್ಯದ ಘಟನೆ. ಹೌದು, ಕಪ್ಪು ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನವಾಗಿರುವ ಅಚ್ಚರಿಯ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
2/6
ಎಮ್ಮೆ ಹೊಟ್ಟೇಲಿ ಬಿಳಿ ಬಣ್ಣದ ಹೋರಿ ಕರು
ಇನ್ನು ಕಪ್ಪು ಎಮ್ಮೆಯ ಹೊಟ್ಟೆಯಲ್ಲಿ ಜನಿಸಿರುವ ಬಿಳಿ ಬಣ್ಣದ ಹೋರಿ ಕರು ಕಂಡು ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಗ್ರಾಮಸ್ಥರೇ ಅಚ್ಚರಿಗೊಂಡಿದ್ದಾರೆ.
3/6
ಪರಶುರಾಮ ಎಂಬುವವರ ಮನೆಯಲ್ಲಿ ಘಟನೆ
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ವಾಸವಿರುವ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯ ಹೊಟ್ಟೆಯ್ಲಲಿ ಬಿಳಿ ಬಣ್ಣದ ಹೋರಿ ಕರು ಜನಿಸಿದೆ.
4/6
10 ತಿಂಗಳು ಗರ್ಭಿಣಿಯಾಗಿದ್ದ ಎಮ್ಮೆ
ಕಳೆದ 10 ತಿಂಗಳಿನಿಂದ ಬಸುರಿ ಆಗಿದ್ದ ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರುವಿಗೆ ಜನ್ಮ ನೀಡಿದೆ. ಇದೀಗ ಈ ವಿಚಾರ ಎಲ್ಲೆಡೆ ಗುಲ್ ಎಬ್ಬಿಸಿದ್ದು ಎಲ್ಲರಲ್ಲೂ ಕುತೂಹಲವನ್ನೂ ಹೆಚ್ಚಿಸಿದೆ.
5/6
ಹೋರಿಯಿಂದಲೇ ಕರು ಜನನ
ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಲದಲ್ಲಿ ಎಮ್ಮೆ ಹಾಗೂ ಹೋರಿಯನ್ನು ಒಂದೇ ಕಡೆ ಕಟ್ಟುತ್ತಿದ್ದೆ, ಹೋರಿಯ ಸಂಪರ್ಕದಿಂದಲೇ ಕರು ಜನನವಾಗಿರಬಹುದು ಎಂದು ಮಾಲೀಕ ಶಂಕೆ ವ್ಯಕ್ತಪಡಿಸಿದ್ದಾರೆ.
6/6
ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನನದಿಂದ ಹೆಚ್ಚಾದ ಕುತೂಹಲ
ಸಾಮಾನ್ಯವಾಗಿ ಎಮ್ಮೆಯ ಬಣ್ಣ ಕಪ್ಪು, ಎಮ್ಮೇ ಕರು ಹುಟ್ಟುತ್ತದೆ. ಆದರೆ ಬಳಿ ಬಣ್ಣದ ಹೋರಿ ಕರು ಹುಟ್ಟಿದೆ. ಜಾನುವಾರುಗಳಲ್ಲಿ ಬಣ್ಣದ ವ್ಯತ್ಯಾಸದ ಕರು ಜನನವಾಗಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.