• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /“ನನ್ನ ಪ್ರೀತಿಯ ಸ್ವಯಂಸೇವಕರೇ…” RSS ಪಥಸಂಚಲನಕ್ಕೆ ಖರ್ಗೆ ಖಡಕ್ ಸೂಚನೆ; ಅನುಮತಿ ಪಡೆಯಲು ತಾಕೀತು!

“ನನ್ನ ಪ್ರೀತಿಯ ಸ್ವಯಂಸೇವಕರೇ…” RSS ಪಥಸಂಚಲನಕ್ಕೆ ಖರ್ಗೆ ಖಡಕ್ ಸೂಚನೆ; ಅನುಮತಿ ಪಡೆಯಲು ತಾಕೀತು!

ವಿಜಯದಶಮಿಯಂದು ಆರ್‌ಎಸ್‌ಎಸ್‌ ನಡೆಸುವ ಪಥಸಂಚಲನಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ. ಕೇವಲ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಅನುಮತಿ ಸಿಕ್ಕಂತಾಗುವುದಿಲ್ಲ. ನಿಗದಿತ ಅರ್ಜಿ ಸಲ್ಲಿಸಿ, ಅಗತ್ಯ ವಿವರಗಳನ್ನ ಒದಗಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಅನುಮತಿ ಪಡೆಯಬೇಕೆಂದು ಅವರು ಹೇಳಿದ್ದಾರೆ. ಪೊಲೀಸ್ ಭದ್ರತೆ, ಸಂಚಾರ ನಿರ್ವಹಣೆ ಮತ್ತು ಸಿಬ್ಬಂದಿ ನಿಯೋಜನೆಗೆ ಮುಂಚಿತ ಯೋಜನೆ ಅಗತ್ಯವೆಂದು ಉಲ್ಲೇಖಿಸಿದ್ದಾರೆ. ಈ ಹೇಳಿಕೆ ಮತ್ತೆ ಪ್ರಿಯಾಂಕ್ ಖರ್ಗೆ v/s ಆರ್‌ಎಸ್‌ಎಸ್‌ ಚರ್ಚೆಗೆ ಕಾರಣವಾಗಿದೆ.

Written ByPuttaraj K Alur
Published: Oct 21, 2026, 10:19 AM IST|Updated: Oct 21, 2026, 10:29 AM IST
joinshare
“ನನ್ನ ಪ್ರೀತಿಯ ಸ್ವಯಂಸೇವಕರೇ…” RSS ಪಥಸಂಚಲನಕ್ಕೆ ಖರ್ಗೆ ಖಡಕ್ ಸೂಚನೆ; ಅನುಮತಿ ಪಡೆಯಲು ತಾಕೀತು!
Image Credit: Priyank Kharge

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಹುಬ್ಬಳ್ಳಿ–ಧಾರವಾಡದಲ್ಲಿ ಇನ್ಮುಂದೆ AI ಟ್ರಾಫಿಕ್‌ ಕಣ್ಗಾವಲು: ನಿಯಮ ಉಲ್ಲಂಘಿಸಿದ್ರೆ ದಂಡ ಕಟ್ಟಲೇಬೇಕು!

ಹುಬ್ಬಳ್ಳಿ–ಧಾರವಾಡದಲ್ಲಿ ಇನ್ಮುಂದೆ AI ಟ್ರಾಫಿಕ್‌ ಕಣ್ಗಾವಲು: ನಿಯಮ ಉಲ್ಲಂಘಿಸಿದ್ರೆ ದಂಡ ಕಟ್ಟಲೇಬೇಕು!

2

ಕೆಪಿಎಸ್‌ಸಿ ವಿವಾದದ ಬೆನ್ನಲ್ಲೇ ಕೆಎಇ ಬಿರುಸು: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ತಾತ್ಕಾಲಿಕ ಫಲಿತಾಂಶ ಪ್ರಕಟ!

3

ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಗೆ ವಿಶೇಷ ಮಜ್ಜನ, ಆರೈಕೆ

4

Viral Video: ಶೋ ರೂಮ್‌ನಿಂದ ಆಚೆ ಬರ್ತಿದ್ದಂತೆಯೇ ಅಪಘಾತ: ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!

5

“ನನ್ನ ಪ್ರೀತಿಯ ಸ್ವಯಂಸೇವಕರೇ…” RSS ಪಥಸಂಚಲನಕ್ಕೆ ಖರ್ಗೆ ಖಡಕ್ ಸೂಚನೆ; ಅನುಮತಿ ಪಡೆಯಲು ತಾಕೀತು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

RSS Vijayadashami Path Sanchalan: ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಡೆಸುವ ಪಥಸಂಚಲನಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದ್ದಾರೆ. ಪಥಸಂಚಲನ ನಡೆಸುವ ಮೊದಲು ನಿಗದಿತ ಅರ್ಜಿಯನ್ನ ಭರ್ತಿ ಮಾಡಿ, ಅಗತ್ಯ ವಿವರಗಳನ್ನ ಒದಗಿಸಿ, ಸಕ್ಷಮ ಪ್ರಾಧಿಕಾರಗಳಿಂದ ಅಧಿಕೃತ ಅನುಮತಿ ಪಡೆಯಬೇಕೆಂದು ಅವರು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಖರ್ಗೆ, ಕೇವಲ ಪೊಲೀಸರಿಗೆ ಮಾಹಿತಿ ನೀಡುವುದರಿಂದ ಅಥವಾ ಅಗತ್ಯ ವ್ಯವಸ್ಥೆಗಳನ್ನ ಮಾಡಿಕೊಳ್ಳುವಂತೆ ಕೇಳುವುದರಿಂದ ಅನುಮತಿ ದೊರೆತಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 21ರಂದು ವಿಜಯದಶಮಿ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತರು ಪಥಸಂಚಲನದ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ಪತ್ರವನ್ನು ಹಂಚಿಕೊಂಡಿರುವ ಅವರು, ನಿಗದಿತ ಕಾರ್ಯವಿಧಾನವನ್ನ ಪಾಲಿಸುವಂತೆ ಸಂಘಟನೆಯ ಸ್ವಯಂಸೇವಕರಿಗೆ ಸಲಹೆ ನೀಡಿದ್ದಾರೆ.

RSS ಸ್ವಯಂಸೇವಕರಿಗೆ ಖರ್ಗೆ ಸಂದೇಶ

ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ, “ನನ್ನ ಆತ್ಮೀಯ RSS ಸ್ವಯಂಸೇವಕರೇ” ಎಂದು ಸಂಬೋಧಿಸುವ ಮೂಲಕ ವಿಜಯದಶಮಿ ಹಬ್ಬದ ಸಂಭ್ರಮದ ನಡುವೆಯೇ ಕೆಲವು ವಿಚಾರಗಳನ್ನ ನೆನಪಿಸಿದ್ದಾರೆ. ಹಬ್ಬದ ಉತ್ಸಾಹಕ್ಕೆ ಅಡ್ಡಿಪಡಿಸುವ ಉದ್ದೇಶವಿಲ್ಲ ಎಂದು ಹೇಳಿರುವ ಅವರು, ಪಥಸಂಚಲನಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಕೇವಲ ‘ಮಾಹಿತಿ ನೀಡುವುದು’, ಗೃಹ ಇಲಾಖೆಗೆ ‘ಸಹಕರಿಸಿ’ ಎಂದು ತಿಳಿಸುವುದು ಅಥವಾ ಅಗತ್ಯ ವ್ಯವಸ್ಥೆಗಳನ್ನ ಮಾಡಿಕೊಳ್ಳುವಂತೆ ಮನವಿ ಮಾಡುವುದು ಅಧಿಕೃತ ಅನುಮತಿಗೆ ಸಮನಾಗುವುದಿಲ್ಲವೆಂದು ಅವರು ಹೇಳಿದ್ದಾರೆ. ಎಲ್ಲಾ ಸಂಘಟನೆಗಳಿಗೂ ಅನ್ವಯಿಸುವ ನಿಗದಿತ ಕಾರ್ಯವಿಧಾನದಂತೆ ಅರ್ಜಿ ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಂದ ಔಪಚಾರಿಕ ಅನುಮೋದನೆ ಪಡೆಯಬೇಕು ಎಂದು ಸೂಚಿಸಿದ್ದಾರೆ.

 

My dearest Swayamsevaks of the RSS, Hope the Dasara festivities are in full swing! Not to be a wet blanket, but a gentle reminder, merely “informing” or telling the Home Department to “cooperate” or “make necessary arrangements” is not the same as obtaining permission. Please submit your application in accordance with the prescribed procedure applicable to all organizations and await formal approval from the competent authorities. I am sure you have read your own Akhil Bharatiya Pratinidhi Sabha Annual Report 2025–26, which states that the RSS conducted 562 route marches across Karnataka, involving 2,21,963 uniformed participants. Now, when lakhs of you intend to march through Karnataka’s streets on single day at the same time, the Police Department has considerable preparations to make: deployment of personnel, transportation, food, traffic management, security arrangements and other logistics. All of this requires planning, manpower and public resources. So, please fill out the prescribed application form, provide the necessary details and await formal permission. Happy Dasara!

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 20, 2026

ಪೊಲೀಸ್ ಇಲಾಖೆಯ ಸಿದ್ಧತೆಗಳ ಬಗ್ಗೆ ಪ್ರಸ್ತಾಪ

 

ಪಥಸಂಚಲನದಂತಹ ಕಾರ್ಯಕ್ರಮಗಳನ್ನ ಆಯೋಜಿಸುವಾಗ ಪೊಲೀಸ್ ಇಲಾಖೆಯು ಹಲವು ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಸಿಬ್ಬಂದಿ ನಿಯೋಜನೆ, ಸಂಚಾರ ನಿರ್ವಹಣೆ, ಭದ್ರತಾ ವ್ಯವಸ್ಥೆ, ಸಾರಿಗೆ, ಆಹಾರ ಮತ್ತು ಇತರ ಅಗತ್ಯ ಸೌಲಭ್ಯಗಳನ್ನ ಯೋಜಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಒಂದೇ ದಿನ, ಒಂದೇ ಸಮಯದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನ ಕಾಪಾಡಲು ಪೊಲೀಸ್ ಇಲಾಖೆಗೆ ಸೂಕ್ತ ಯೋಜನೆ ಮತ್ತು ಸಾಕಷ್ಟು ಮಾನವ ಸಂಪನ್ಮೂಲಗಳ ಅಗತ್ಯವಿರುತ್ತದೆ ಎಂಬುದು ಅವರ ಸಂದೇಶದ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಪಥಸಂಚಲನಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ಅಗತ್ಯ ವಿವರಗಳನ್ನ ಒದಗಿಸಿ, ಅನುಮತಿ ಪಡೆಯುವ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೇಕೆಂದು ಅವರು ಒತ್ತಿಹೇಳಿದ್ದಾರೆ.

RSS ವಾರ್ಷಿಕ ವರದಿಯ ಅಂಕಿಅಂಶ ಉಲ್ಲೇಖ

ತಮ್ಮ ಪೋಸ್ಟ್‌ನಲ್ಲಿ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025-26ನೇ ಸಾಲಿನ ವಾರ್ಷಿಕ ವರದಿಯನ್ನೂ ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ. ಆ ವರದಿಯ ಪ್ರಕಾರ, ಕರ್ನಾಟಕದಾದ್ಯಂತ 2,21,963 ಸಮವಸ್ತ್ರಧಾರಿ ಕಾರ್ಯಕರ್ತರನ್ನ ಒಳಗೊಂಡ 562 ಪಥಸಂಚಲನಗಳನ್ನ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಂಕಿಅಂಶವನ್ನ ಉಲ್ಲೇಖಿಸಿರುವ ಖರ್ಗೆ, ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುವಾಗ ಪೊಲೀಸ್ ಇಲಾಖೆಯು ಭದ್ರತೆ ಮತ್ತು ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಸಂಪನ್ಮೂಲಗಳು ಮತ್ತು ಪೊಲೀಸ್ ಸಿಬ್ಬಂದಿಯ ಸಮರ್ಪಕ ಬಳಕೆಗೆ ಮುಂಚಿತ ಯೋಜನೆ ಅಗತ್ಯ ಎಂಬುದನ್ನೂ ಅವರು ತಮ್ಮ ಸಂದೇಶದಲ್ಲಿ ಪ್ರಸ್ತಾಪಿಸಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಖರ್ಗೆ ವರ್ಸಸ್ RSS ಚರ್ಚೆ

ಆರ್‌ಎಸ್‌ಎಸ್‌ ವಿರುದ್ಧ ಆಗಾಗ್ಗೆ ಟೀಕೆಗಳನ್ನ ವ್ಯಕ್ತಪಡಿಸುತ್ತಿರುವ ಪ್ರಿಯಾಂಕ್ ಖರ್ಗೆ, ಗೃಹ ಸಚಿವರಾದ ಬಳಿಕ ರಾಜ್ಯದಲ್ಲಿ ಪಥಸಂಚಲನ ನಡೆಸಲು ನಿಯಮಾನುಸಾರ ಅನುಮತಿ ಪಡೆಯುವುದು ಕಡ್ಡಾಯ ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು. ಇದೀಗ ವಿಜಯದಶಮಿಯ ಪಥಸಂಚಲನದ ಸಿದ್ಧತೆಯ ಸಂದರ್ಭದಲ್ಲಿ ಅವರು ನೀಡಿರುವ ಸೂಚನೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಒಟ್ನಲ್ಲಿ ವಿಜಯದಶಮಿಯಂದು ನಡೆಯಲಿರುವ ಆರ್‌ಎಸ್‌ಎಸ್‌ ಪಥಸಂಚಲನಕ್ಕೂ ಮುನ್ನ ಅನುಮತಿ ಪಡೆಯುವ ಪ್ರಕ್ರಿಯೆಯನ್ನ ಪಾಲಿಸುವಂತೆ ಪ್ರಿಯಾಂಕ್ ಖರ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರ ಈ ಪೋಸ್ಟ್‌ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ಪಥಸಂಚಲನಕ್ಕೆ ಸಂಬಂಧಿಸಿದ ಅನುಮತಿ ಮತ್ತು ಪೊಲೀಸ್ ಇಲಾಖೆಯ ಸಿದ್ಧತೆಗಳ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

Add Zee News as a Preferred Source
TAGS:
Karnataka Politics
Kannada News