ನವೆಂಬರ್ 06, 2026ರಂದು ದೇಶಾದ್ಯಂತ ಧನತ್ರಯೋದಶಿ ಎಂದರೆ ಧನ್ತೇರಸ್ ಆಚರಿಸಲಾಗುತ್ತಿದೆ.
1/6
ಧನ್ತೇರಸ್ ಶಾಪಿಂಗ್
ನವೆಂಬರ್ 06, 2026ರಂದು ಶುಕ್ರವಾರದ ದಿನ ಧನ್ತೇರಸ್ ಆಚರಿಸಲಾಗುತ್ತಿದೆ. ಧನ್ತೇರಸ್/ಧನತ್ರಯೋದಶಿಯ ಈ ಶುಭ ದಿನದಂದು ಕೆಲವು ವಸ್ತುಗಳನ್ನು ತರುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲಿದೆ ಎಂಬ ನಂಬಿಕೆ ಇದೆ. ಈ ವರ್ಷ ಧನ್ತೇರಸ್ ದಿನ ಮಧ್ಯಾಹ್ನ 12:30ರ ಬಳಿಕ ಈ ಐದು ವಸ್ತುಗಳನ್ನು ಮನೆಗೆ ತರುವುದರಿಂದ ಮನೆಯಲ್ಲಿ ಧನ-ಸಂಪತ್ತು ಹೆಚ್ಚಾಗುವುದರ ಜೊತೆಗೆ ಸುಖ ಶಾಂತಿ ನೆಲೆಸಲಿದೆ ಎಂದು ಹೇಳಲಾಗುತ್ತದೆ.
2/6
ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜವನ್ನು ಮನೆಯಲ್ಲಿ ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಧನ್ತೇರಸ್ ದಿನ ಮನೆಗೆ ತಪ್ಪದೇ ಕೊತ್ತಂಬರಿ ಬೀಜವನ್ನು ತನ್ನಿ.
3/6
ಕಲ್ಲು ಉಪ್ಪು
ಜ್ಯೋತಿಷ್ಯದ ಪ್ರಕಾರ, ಧನ್ತೇರಸ್ ದಿನ ಕಲ್ಲುಪ್ಪನ್ನು ಮನೆಗೆ ತರುವುದರಿಂದ ಅಂತಹ ಮನೆಯಲ್ಲಿ ವರ್ಷವಿಡೀ ಹಣಕ್ಕೆ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ.
4/6
ಪೊರಕೆ
ಧನ್ತೇರಸ್ ದಿನ ಸಂಜೆ ವೇಳೆ ಮನೆಗೆ ಹೊಸ ಪೊರಕೆಯನ್ನು ತರುವುದರಿಂದ ಸಾಕ್ಷಾತ್ ಲಕ್ಷ್ಮಿಯನ್ನೇ ಮನೆಗೆ ಆಹ್ವಾನಿಸಿದಂತೆ ಎನ್ನಲಾಗುತ್ತದೆ.
5/6
ಅರಿಶಿನ
ಧನ್ತೇರಸ್ ದಿನ ಅರಿಶಿನವನ್ನು ತರುವುದರಿಂದ ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೊತ್ತು ತರುತ್ತದೆ. ಜೀವನದಲ್ಲಿ ಹೊಸ ಹೊಸ ಅವಕಾಶಗಳನ್ನು ತರುತ್ತದೆ ಎಂದು ನಂಬಲಾಗುತ್ತದೆ.
6/6
6 ಕವಡೆಗಳು
ಸಾಮಾನ್ಯವಾಗಿ ಧನ್ತೇರಸ್ ದಿನ ಚಿನ್ನ ಅಥವಾ ಬೆಳ್ಳಿ ನಾಣ್ಯ ಖರೀದಿಸುವುದನ್ನು ಶುಭ ಎನ್ನಲಾಗುತ್ತದೆ. ಆದರೆ, ಎಲ್ಲರಿಗೂ ಚಿನ್ನ, ಬೆಳ್ಳಿ ಖರೀದಿಸಲು ಸಾಧ್ಯವಿಲ್ಲ. ಆದರೆ, ಇದರ ಬದಲಿಗೆ ಧನ್ತೇರಸ್ ದಿನ 6 ಕವಡೆಗಳನ್ನು ಮನೆಗೆ ತಂದು ತಿಜೋರಿಯಲ್ಲಿಡುವುದರಿಂದ ಖಜಾನೆ ತುಂಬಲಿದೆ ಎನ್ನಲಾಗುತ್ತದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.