ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ, ಸಂಪತ್ತು, ಐಷಾರಾಮಿ ಜೀವನವನ್ನು ಕರುಣಿಸುವ ಶುಭ ಗ್ರಹ ಎಂದು ಪರಿಗಣಿಸಲಾಗಿದೆ.
1/6
ಶುಕ್ರ ರಾಶಿ ಪರಿವರ್ತನೆ
ಹಿಂದೂ ಪಂಚಾಂಗದ ಪ್ರಕಾರ, ನವೆಂಬರ್ 06, 2026ರಂದು ಶುಕ್ರ ಕನ್ಯಾ ರಾಶಿಯಗೆ ಪ್ರವೇಶಿಸಿದ್ದಾನೆ. ದೀಪಾವಳಿ ಸಂದರ್ಭದಲ್ಲಿ ಶುಕ್ರ ಗೋಚಾರ ಫಲವಾಗಿ ಐದು ರಾಶಿಯವರಿಗೆ ಧನ ಯೋಗ ಆರಂಭವಾಗಿದ್ದು, ಈ ಸಮಯದಲ್ಲಿ ಅವರಿಗೆ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
Image Credit : AI
2/6
ವೃಷಭ ರಾಶಿ
ದೀಪಾವಳಿ ಹೊತ್ತಲ್ಲಿ ಶುಕ್ರ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ಪ್ರೀತಿ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯಗಳು ಸರಿಹೋಗಲಿವೆ. ಮಕ್ಕಳಿಂದ ಶುಭ ಸಮಾಚಾರವನ್ನು ಕೇಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದೆ.
3/6
ಮಿಥುನ ರಾಶಿ
ಶುಕ್ರ ರಾಶಿ ಪರಿವರ್ತನೆಯಿಂದ ಮಿಥುನ ರಾಶಿಯವರಿಗೆ ಹಣಕಾಸಿನ ಮೂಲಗಳು ಹೆಚ್ಚಾಗುವ ಸೂಚನೆಗಳಿದ್ದು ಸ್ವಂತ ಮನೆ, ಭೂಮಿ ಖರೀದಿ ಯೋಗವೂ ಇದೆ. ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸುವ ಲಕ್ಷಣಗಳಿವೆ.
4/6
ಕರ್ಕಾಟಕ ರಾಶಿ
ಶುಕ್ರ ಸಂಚಾರವು ಕರ್ಕಾಟಕ ರಾಶಿಯ ಜನರಿಗೆ ಫಲಪ್ರದವಾಗಿದ್ದು ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ವೇಗ ಪಡೆಯಲಿದ್ದು, ವ್ಯವಹಾರದಲ್ಲಿ ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ನಿರುದ್ಯೋಗಿಗಳಿಗೆ ಹೊಸ ಕೆಲಸದ ಅವಕಾಶಗಳಿವೆ.
5/6
ವೃಶ್ಚಿಕ ರಾಶಿ
ಶುಕ್ರ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯವರಿಗೆ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದ್ದು ಧನ ಯೋಗದಿಂದ ಹೊಸ ಆದಾಯದ ಮೂಲಗಳು ಸೃಷ್ಟಿ ಆಗಲಿವೆ. ನೀವು ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸೂಚನೆಗಳಿವೆ. ಉದ್ಯೋಗದಲ್ಲಿ ಪ್ರಗತಿ ಕಂಡು ಬರಲಿದ್ದು ಮಕ್ಕಳಿಂದಲೂ ಶುಭ ಸಮಾಚಾರವನ್ನು ನಿರೀಕ್ಷಿಸಬಹುದಾಗಿದೆ. ನಿಮ್ಮ ಕನಸಿನ ವಾಹನ ಖರೀದಿಸುವ ಸುಯೋಗವೂ ಇದೆ.
6/6
ಮಕರ ರಾಶಿ
ಶುಕ್ರ ರಾಶಿ ಬದಲಾವಣೆಯು ಮಕರ ರಾಶಿಯ ಜನರಿಗೆ ಸಕಾರಾತ್ಮಕ ಫಲಗಳನ್ನು ಹೆಚ್ಚಿಸಲಿದೆ. ವ್ಯವಹಾರಸ್ಥರು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು. ಕುಟುಂಬಸ್ಥರೊಂದಿಗೆ ಸಾಮರಸ್ಯ ಹೆಚ್ಚಾಗಲಿದ್ದು, ಗುಣಮಟ್ಟದ ಸಮಯ ಕಳೆಯುವಿರಿ. ಹಣದ ಹರಿವು ಉತ್ತಮವಾಗಿರಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.