ತುಲಾ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ.
1/6
ಶುಕ್ರ ಸಂಕ್ರಮಣ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ರ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಐಷಾರಾಮಿ ಜೀವನದ ಅಂಶ, ಧನಕಾರಕ, ಪ್ರೀತಿ, ಸೌಂದರ್ಯ, ಸುಖ-ಸಂಪತ್ತಿನಕಾರಕನಾದ ಶುಕ್ರ ಸ್ವ ಸ್ಥಾನದಲ್ಲಿ ಸಂಚರಿಸುತ್ತಾನೆ. ತುಲಾ ರಾಶಿಯಲ್ಲಿ ಶುಕ್ರ ಸಂಕ್ರಮಣದಿಂದ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದ್ದು ಶುಕ್ರ ಮಹಾದಶ ಪ್ರಭಾವದಿಂದ ಅವರಿಗೆ ಸಾಕ್ಷಾತ್ ಲಕ್ಷ್ಮಿಯ ಅನುಗ್ರಹವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
2/6
ಕನ್ಯಾ ರಾಶಿ
ಶುಕ್ರ ಸಂಕ್ರಮಣ ಪ್ರಭಾವದಿಂದ ಕನ್ಯಾ ರಾಶಿಯ ಜನರಿಗೆ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದ್ದು ಸಾಲಬಾಧೆಯಿಂದ ಪರಿಹಾರವನ್ನು ಪಡೆಯುವ ನಿರೀಕ್ಷೆ ಇದೆ. ದೀರ್ಘಾವಧಿಯಿಂದ ತಡೆಯಾಗಿದ್ದ ಕೆಲಸಗಳಲ್ಲಿ ಪ್ರಗತಿಯು ಹೆಚ್ಚಿನ ಲಾಭವನ್ನು ತಂದು ಕೊಡಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು.
3/6
ತುಲಾ ರಾಶಿ
ಸ್ವ ಸ್ಥಾನದಲ್ಲಿ ಶುಕ್ರ ಸಂಚಾರವು ತುಲಾ ರಾಶಿಯವರಿಗೆ ಶುಕ್ರ ಮಹಾದಶವನ್ನು ತರಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ನಿಮ್ಮ ಪರಿಶ್ರಮಕ್ಕೆ ಮನ್ನಣೆ ಸಿಗಲಿದ್ದು, ಎಲ್ಲಾ ಆಯಾಮಗಳಿಂದಲೂ ಏಳ್ಗೆಯನ್ನು ಕಾಣುವ ಸಮಯ ಇದಾಗಿರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕ್ಷಾತ್ ಲಕ್ಷ್ಮಿಯ ಅನುಗ್ರಹ ಇರಲಿದ್ದು ಧನ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ.
4/6
ಧನು ರಾಶಿ
ಸ್ವ ಸ್ಥಾನದಲ್ಲಿ ಶುಕ್ರ ಸಂಚಾರವು ಧನು ರಾಶಿಯ ಜನರಿಗೆ ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸಾಕಾರಾತ್ಮಕತೆಯನ್ನು ಹೆಚ್ಚಿಸಲಿದೆ. ಈ ಅವಧಿಯಲ್ಲಿ ತಾಯಿ ಲಕ್ಷ್ಮಿ ಆಶೀರ್ವಾದದಿಂದ ಆದಾಯದ ಮೂಲಗಳು ಹೆಚ್ಚಾಗಲಿವೆ. ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಹಣಕಾಸಿನ ಹರಿವು ಉತ್ತಮಗೊಳ್ಳುವುದರಿಂದ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆಯುವ ಸೂಚನೆಗಳಿವೆ.
5/6
ಮಕರ ರಾಶಿ
ಶುಕ್ರ ಮಹಾದಶ ಪ್ರಭಾವದಿಂದ ಮಕರ ರಾಶಿಯ ಜನರಿಗೆ ಹೊಸ ಪ್ರಯತ್ನಗಳು ಕೈಗೂಡುವ ಅವಕಾಶಗಳಿವೆ. ಸ್ವಂತ ವ್ಯವಹಾರ ಮಾಡುವವರಿಗೆ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಯೋಚಿಸುತ್ತಿರುವವರಿಗೆ ಅತ್ಯುತ್ತಮವಾದ ಸಮಯ ಇದಾಗಿರಲಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳುವ ಸೂಚನೆಗಳಿವೆ. ಕುಟುಂಬದಲ್ಲಿ ಸುಖ-ಶಾಂತಿ ಹೆಚ್ಚಾಗಲಿದೆ.
6/6
ಕುಂಭ ರಾಶಿ
ಧನಕಾರಕ ಶುಭ ಸ್ಥಾನದಲ್ಲಿ ಸಂಚರಿಸುವುದರಿಂದ ಶುಕ್ರ ಮಹಾದಶ ಪ್ರಭಾವದಿಂದ ಕುಂಭ ರಾಶಿಯ ಜನರಿಗೆ ವೃತ್ತಿ ಸಂಬಂಧಿತ ಸಮಸ್ಯೆಗಳು ಕಡಿಮೆ ಆಗಲಿವೆ. ವ್ಯವಹಾರದಲ್ಲಿ ಹಣಕಾಸಿನ ಮುಗ್ಗಟ್ಟುಗಳಿಂದ ಪರಿಹಾರ ಪಡೆಯುವಿರಿ. ಕುಟುಂಬ ಸದಸ್ಯರ ಬೆಂಬಲದಿಂದ ಯೋಜಿತ ಕೆಲಸಗಳಲ್ಲಿ ಭಾರೀ ಯಶಸ್ಸನ್ನು ಪಡೆಯುವಿರಿ. ಆದಾಯಕ್ಕೆ ಅನುಗುಣವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸಿ, ಭವಿಷ್ಯಕ್ಕಾಗಿ ಉತ್ತಮ ಮೊತ್ತವನ್ನು ಕಲೆಹಾಕುವ ಅವಕಾಶಗಳು ಸಿಗಬಹುದು.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.