• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ತ್ರಿಗ್ರಹಿ ಯೋಗ: 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಜಾಕ್‌ಪಾಟ್‌.. ರಾಜವೈಭೋಗದ ಜೀವನ

ತ್ರಿಗ್ರಹಿ ಯೋಗ: 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಜಾಕ್‌ಪಾಟ್‌.. ರಾಜವೈಭೋಗದ ಜೀವನ

Written ByYashaswini V
Published: Oct 22, 2026, 09:14 AM IST|Updated: Oct 22, 2026, 09:17 AM IST
joinshare
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿ, ನಕ್ಷತ್ರದಲ್ಲಿ 3 ಗ್ರಹಗಳು ಒಟ್ಟಿಗೆ ಕೂಡಿದಾಗ ತ್ರಿಗ್ರಹಿ ಯೋಗ ರೂಪುಗೊಳ್ಳುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಇತ್ತೀಚೆಗೆ ತುಲಾ ರಾಶಿಗೆ ಪದಾರ್ಪಣೆ ಮಾಡಿರುವ ಗ್ರಹಗಳ ಅಧಿಪತಿ ಸೂರ್ಯ ಅಲ್ಲಿ ಬುಧ ಹಾಗೂ ಶುಕ್ರನೊಂದಿಗೆ ಮೈತ್ರಿ ಹೊಂದಿದ್ದು ತ್ರಿಗ್ರಹಿ ಯೋಗ ನಿರ್ಮಾಣವಾಗಿದೆ. 

Trigrahi Yoga in Libra Effect1/6

ತ್ರಿಗ್ರಹಿ ಯೋಗ

ಹಿಂದೂ ಪಂಚಾಂಗದ ಪ್ರಕಾರ, ಅಕ್ಟೋಬರ್‌ 17, 2026ರ ಸಂಜೆ 07:15ಕ್ಕೆ ತುಲಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಈ ರಾಶಿಯಲ್ಲಿ ಶುಕ್ರ, ಬುಧನೊಂದಿಗೆ ಸೂರ್ಯ ಸಂಯೋಜನೆ ಹೊಂದಿದ್ದು ತ್ರಿಗ್ರಹಿ ಯೋಗ ರೂಪುಗೊಂಡಿದೆ. ತ್ರಿಗ್ರಹಿ ಯೋಗದ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರಲಿದೆ. ಆದರೂ, ಈ ಸಮಯದಲ್ಲಿ ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಏಳ್ಗೆ ಕಂಡು ಬರಲಿದೆ ಎನ್ನಲಾಗುತ್ತಿದೆ.
Trigrahi Yoga in Libra Effect2/6

ಮೇಷ ರಾಶಿ

ತುಲಾ ರಾಶಿಯಲ್ಲಿ ನಿರ್ಮಾಣವಾಗಿರುವ ತ್ರಿಗ್ರಹಿ ಯೋಗವು ಮೇಷ ರಾಶಿಯ ಜನರಿಗೆ ಉತ್ತಮ ಫಲಗಳನ್ನು ನೀಡಲಿದೆ. ಕೌಟುಂಬಿಕ ಜೀವನದಲ್ಲಿ ಅನುಕೂಲಕರ ವಾತಾವರಣ ಇರಲಿದ್ದು ಉದ್ಯೋಗಸ್ಥರಿಗೆ ಬಡ್ತಿಯ ಬಗ್ಗೆ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಹಣಕಾಸಿನ ಪರಿಸ್ಥಿತಿಯೂ ಉತ್ತಮವಾಗಲಿದೆ.
Trigrahi Yoga in Libra Effect3/6

ಮಿಥುನ ರಾಶಿ

ತ್ರಿಗ್ರಹಿ ಯೋಗದ ಪ್ರಭಾವದಿಂದ ಮಿಥುನ ರಾಶಿಯ ಜನರಿಗೆ ಅವರ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣಬಹುದು. ಉದ್ಯೋಗಸ್ಥರಿಗೆ ಕಚೇರಿಯಲ್ಲಿನ ವಾತಾವರಣ ಉತ್ತಮವಾಗಿರಲಿದ್ದು ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಉದ್ಯಮಿಗಳಿಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಇದೆ.
Trigrahi Yoga in Libra Effect4/6

ಕನ್ಯಾ ರಾಶಿ

ತ್ರಿಗ್ರಹಿ ಯೋಗವು ಕನ್ಯಾ ರಾಶಿಯ ಜನರಿಗೆ ಹಲವು ಆಯಾಮಗಳಲ್ಲಿ ಉತ್ತಮ ಫಲವನ್ನು ನೀಡಲಿದೆ. ಈ ಸಮಯದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿದ್ದು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವ ಅವಕಾಶಗಳಿವೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯಲು ಅವಕಾಶವಿದೆ. ಹಿಂದೆ ಮಾಡಿರುವ ಹೂಡಿಕೆಗಳು ಲಾಭದಾಯಕವಾಗಿದೆ.
Trigrahi Yoga in Libra Effect5/6

ತುಲಾ ರಾಶಿ

ತ್ರಿಗ್ರಹಿ ಯೋಗವು ತುಲಾ ರಾಶಿಯ ಜನರಿಗೆ ಹಲವು ರೀತಿಯಲ್ಲಿ ಪ್ರಯೋಜನವನ್ನು ಪಡೆಯಲಿದ್ದಾರೆ. ಕೆಲಸದಲ್ಲಿ ಸಕಾರಾತ್ಮಕ ಫಲಗಳು ಹೆಚ್ಚಾಗಲಿವೆ. ಉದ್ಯೋಗಿಗಳಿಗೆ ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ನಿಮ್ಮ ಜೀವನದಲ್ಲಿ ಶಕ್ತಿ, ಸಾಮರ್ಥ್ಯಗಳು ಹೆಚ್ಚಾಗಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
Trigrahi Yoga in Libra Effect6/6

ಧನು ರಾಶಿ

ತ್ರಿಗ್ರಹಿ ಯೋಗವು ಧನು ರಾಶಿಯ ಜನರಿಗೆ ಆರ್ಥಿಕ ಪ್ರಗತಿಯನ್ನು ನೀಡಲಿವೆ. ಉದ್ಯೋಗದಲ್ಲಿ ಪ್ರಮೋಷನ್‌ ಬಗ್ಗೆ ಶುಭ ಸುದ್ದಿಯನ್ನು ಕೇಳುವಿರಿ. ಹೊಸ ಯೋಜನೆಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ಸಮಯ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿದ್ದು, ಹಣದ ಸುರಿಮಳೆಯೇ ಸುರಿಯಲಿದೆ. ರಾಜವೈಭೋಗದ ಜೀವನವನ್ನು ಅನುಭವಿಸುವಿರಿ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar
Rajayoga

Trending

  • News
  • Photos
  • Videos
ಸಚಿವರು ಅನ್ನಬೇಕು ದಲಿತ ಸಚಿವರು ಅಂತ ಯಾಕೆ ಹೇಳಬೇಕು? : ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಸಚಿವರು ಅನ್ನಬೇಕು ದಲಿತ ಸಚಿವರು ಅಂತ ಯಾಕೆ ಹೇಳಬೇಕು? : ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

2

ಏಷ್ಯನ್ ಪ್ಯಾರಾ ಗೇಮ್ಸ್‌ 2026: ಕಿರುಕುಳ ಆರೋಪ, ಭಾರತಕ್ಕೆ ವಾಪಸಾದ ಪ್ಯಾರಾ ಸ್ವಿಮ್ಮರ್‌!?

3

ಹೆಬ್ಬಾಳ ಟನಲ್ ಯೋಜನೆಗೆ ಎನ್‌ಜಿಟಿ ತಡೆ: 1,128 ಮರಗಳ ಕಡಿತಕ್ಕೆ ಬ್ರೇಕ್, ಬಿಡಿಎ ವಿರುದ್ಧ 1,600ಕ್ಕೂ ಹೆಚ್ಚು ಆಕ್ಷೇಪಣೆ!

4

ಮಣಿಪಾಲದಲ್ಲಿ ಬೆಚ್ಚಿಬೀಳಿಸಿದ ಘಟನೆ! ಅನಂತನಗರದಲ್ಲಿ ಮಾನವ ತಲೆಬುರುಡೆ, ಮೂಳೆಗಳು ಪತ್ತೆ

5

Karnataka Voter List 2026: ಕರ್ನಾಟಕದಲ್ಲಿ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಡೇಟ್‌ ಫಿಕ್ಸ್! 1 ಕೋಟಿ ಹೆಸರುಗಳು ಡಿಲೀಟ್?‌

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.