thandav ram Remuneration: ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್ ಆದ ತಾಂಡವ್ ರಾಮ್ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13 ಈ ವಾರ ಎಮರ್ಜೆನ್ಸಿ ಎಕ್ಸಿಟ್ ನಡೆಯುತ್ತಿದೆ. ಎಮರ್ಜೆನ್ಸಿ ಎಕ್ಸಿಟ್ ನಲ್ಲಿ ಮೊದಲು ತಾಂಡವ್ ರಾಮ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ತಾಂಡವ್ ರಾಮ್ ಮನೆಯಲ್ಲಿ ಆಕ್ಟೀವ್ ಆಗಿದ್ದ ಸ್ಪರ್ಧಿ.
1/6
ತಾಂಡವ್ ರಾಮ್ ಸಂಭಾವನೆ
ತಾಂಡವ್ ರಾಮ್ ಎಲ್ಲರ ಜೊತೆ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಗಗನ್ ಚಿನ್ನಪ್ಪ ಅವರ ಜೊತೆಯೇ ಬಹುಕಾಲ ಕಳೆಯುತ್ತಿದ್ದರು. ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಸ್ನೇಹ ವೀಕ್ಷಕರ ಗಮನ ಸೆಳೆದಿತ್ತು. ಆದರೆ ಎಲ್ಲೋ ಒಂದು ಕಡೆ ಕಾಮನ್ ಮ್ಯಾನ್‌ಗಳ ಜೊತೆ ತಾಂಡವ್ ರಾಮ್ ಸದಾ ಕಿರಿಕ್ ಮಾಡಿಕೊಳ್ಳುತ್ತಲೇ ಬಂದರು. ಇದೇ ಅವರಿಗೆ ನೆಗೆಟಿವ್ ಆದಂತಿದೆ ಎಂಬುದು ಬಿಗ್‌ಬಾಸ್ ವೀಕ್ಷಕರ ಅಭಿಪ್ರಾಯ.
2/6
ತಾಂಡವ್ ರಾಮ್ ಸಂಭಾವನೆ
ತಾಂಡವ್ ರಾಮ್ ಅನೇಕ ಬಾರಿ ಮನೆಯಲ್ಲಿ ನಡೆದ ವಿವಾದಗಳಲ್ಲಿಯೂ ಭಾಗಿ ಆಗಿದ್ದರು. ಮನರಂಜನೆ ವಿಚಾರದಲ್ಲಯೂ ತಾಂಡವ್ ರಾಮ್ ಮುಂದಿದ್ದರು. ಆದರೆ ತಾಂಡವ್ ರಾಮ್ ಈ ವಾರ ಕಡಿಮೆ ವೋಟ್ ಪಡೆದ ಕಾರಣ ಮಿಡ್ ವೀಕ್ ಎಲಿಮಿನೇಷನ್ ಆಗಿ ಮನೆಯಿಂದ ಹೊರಬಂದಿದ್ದಾರೆ.
3/6
ತಾಂಡವ್ ರಾಮ್ ಸಂಭಾವನೆ
ಜೋಡಿ ಹಕ್ಕಿ, ಕೃಷ್ಣ ರುಕ್ಮಿಣಿ, ಬಾಲ ಅಪರೂಪ ನಮ್ಮ ಜೋಡಿ, ಭೂಮಿಗೆ ಬಂದ ಭಗವಂತ ಧಾರಾವಾಹಿಗಳಲ್ಲಿ ನಟಿಸಿರುವ ತಾಂಡವ್ ರಾಮ್ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದವರು. ಒಂದ್ ಕಥೆ ಹೇಳ್ಲಾ, ಅಬ್ಬಬ್ಬ, ನನ್ನ ಗುರಿ ವಾರಂಟ್ - ದಿ ಮಿಷನ್, ಮರೆಯಲಾರೆ, ದೇವನಾಂಪ್ರಿಯ ಸಿನಿಮಾಗಳಲ್ಲಿ ಸಹ ನಟ ತಾಂಡವ್ ರಾಮ್ ನಟಿಸಿದ್ದಾರೆ.
4/6
ತಾಂಡವ್ ರಾಮ್ ಸಂಭಾವನೆ
ತಾಂಡವ್ ರಾಮ್ ಬಿಗ್ ಬಾಸ್ ಕನ್ನಡ ಸೀಸನ್ 13 ರಲ್ಲಿ ಒಂದು ವಾರಕ್ಕೆ 1 ಲಕ್ಷ 50 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, ತಾಂಡವ್ ರಾಮ್ ಬಿಗ್ ಬಾಸ್ ಮನೆಯಲ್ಲಿ 3 ವಾರಗಳವರೆಗೆ ಇದ್ದರು. ಒಟ್ಟು 4,50,000 ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ.
5/6
ತಾಂಡವ್ ರಾಮ್ ಸಂಭಾವನೆ
ಇದರ ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುವವರಿಗೆ ಅವರಿಗೆ ಈ ಸಂಭಾವನೆ ಜೊತೆಗೆ ಶೋನ ಪ್ರಾಯೋಜಕರ (Sponsors) ಕಡೆಯಿಂದ 3 ಲಕ್ಷ ರೂಪಾಯಿಗಳ ನಗದು ಬಹುಮಾನ ಕೂಡ ಸಿಗಲಿದೆ.
6/6
ತಾಂಡವ್ ರಾಮ್ ಸಂಭಾವನೆ
ಈ ಎಲ್ಲ ಹಣ ಸೇರಿ ಒಟ್ಟು 7,50,000 ರೂಪಾಯಿ ಹಣವನ್ನು ತಾಂಡವ್ ರಾಮ್ ಬಿಗ್ ಬಾಸ್‌ನಿಂದ ಪಡೆದಂತಾಗುತ್ತದೆ. (ಇದು ವರದಿಗಳನ್ನು ಮತ್ತು ವೈರಲ್ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ. )