• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಟೀಮ್‌ ಇಂಡಿಯಾ, ವೆಸ್ಟ್‌ ಇಂಡೀಸ್‌ ತಂಡಗಳ ಮುಂದಿನ ಸರಣಿ ಯಾವುದು, ಯಾವಾಗಿನಿಂದ ಆರಂಭ?

ಟೀಮ್‌ ಇಂಡಿಯಾ, ವೆಸ್ಟ್‌ ಇಂಡೀಸ್‌ ತಂಡಗಳ ಮುಂದಿನ ಸರಣಿ ಯಾವುದು, ಯಾವಾಗಿನಿಂದ ಆರಂಭ?

Written ByBhimappa
Published: Oct 04, 2026, 02:31 PM IST|Updated: Oct 04, 2026, 02:38 PM IST
joinshare
ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ 5 ಪಂದ್ಯಗಳ T20 ಸರಣಿಯಲ್ಲಿ ಟೀಮ್‌ ಇಂಡಿಯಾದ ಯುವ ಪಡೆ ಅಖಾಡಕ್ಕೆ ಧುಮಕಲಿದೆ. ಎಲ್ಲರೂ ಅದ್ಭುತವಾದ ಫಾರ್ಮ್‌ನಲ್ಲಿದ್ದು ಬಲಿಷ್ಠ ವೆಸ್ಟ್‌ ಇಂಡೀಸ್‌ ಪಡೆಯನ್ನು ಮಣಿಸಬೇಕಿದೆ.

T20 series Team India, West Indies: ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ಭರ್ಜರಿ ಪೈಪೋಟಿಗೆ ಬಿದ್ದು ಏಕದಿನ ಸರಣಿಯಲ್ಲಿ ಭರ್ಜರಿ ರನ್‌ ಹೊಳೆ ಹರಿಸಿದವು. ಆದರೆ ಸರಣಿಯ ಕೊನೆಯ ಪಂದ್ಯಕ್ಕೂ ಮೊದಲೇ ಶುಭ್‌ಮನ್‌ ಗಿಲ್‌ ನೇತೃತ್ವದ ಟೀಮ್‌ ಇಂಡಿಯಾ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತು. ರೋಹಿತ್‌ ಶರ್ಮಾ, ಕ್ಯಾಪ್ಟನ್‌ ಶುಭ್‌ಮನ್‌ ಗಿಲ್‌ ಮತ್ತು ವಿಕೆಟ್‌ ಕೀಪರ್‌ ಕೆ.ಎಲ್ ರಾಹುಲ್‌ ಅವರ ಮಿಂಚಿನ ಬ್ಯಾಟಿಂಗ್‌ನಿಂದ ಸರಣಿ ಭಾರತಕ್ಕೆ ಒಲಿಯಿತು. ಎರಡು ತಂಡಗಳು ಸಮಬಲವಾಗಿ ಹೋರಾಡಿದರೂ ಗೆಲುವಿನ ಪತಾಕೆ ಹಾರಿಸಿದ್ದು ಟೀಮ್‌ ಇಂಡಿಯಾ. ಹಾಗಾದರೆ ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ಮುಂದಿನ ಸರಣಿ ಯಾವುದು, ಯಾವಾಗಿನಿಂದ ಆರಂಭ ಎನ್ನುವ ಸಂಪೂರ್ಣವಾದ ಮಾಹಿತಿ ಇಲ್ಲಿ ನೀಡಲಾಗಿದೆ. 
 

Rohit Sharma slips falls 1/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ಏಕದಿನ ಸರಣಿ ಮುಗಿಸಿರುವ ಟೀಮ್‌ ಇಂಡಿಯಾ ಈಗ ಏನಿದ್ದರೂ T20 ಸರಣಿಗೆ ಭರ್ಜರಿ ತಯಾರಿ ನಡೆಸಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿರುವ ಟೀಮ್‌ ಇಂಡಿಯಾ ತವರಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಹಣಾಹಣಿಗೆ ಬೀಳಲಿದೆ. ಏಕದಿನ ಸರಣಿ ಗೆದ್ದುಕೊಂಡಿರುವ ಭಾರತ ತಂಡ, T20 ಸರಣಿ ಮೇಲೆ ಕಣ್ಣಿಟ್ಟಿದೆ. ಇತ್ತ ಸೇಡು ತೀರಿಸಿಕೊಳ್ಳಲು ವೆಸ್ಟ್‌ ಇಂಡೀಸ್‌ ಕಾತುರದಿಂದಿದೆ.
vaibhav sooryavanshi 2/6

ವೈಭವ್‌ ಸೂರ್ಯವಂಶಿ

ಶುಭ್‌ಮನ್‌ ಗಿಲ್‌ ಪಡೆಯ ಹಲವು ಆಟಗಾರರು T20 ತಂಡದಲ್ಲಿ ಇಲ್ಲದ ಕಾರಣ ವಿಶ್ರಾಂತಿಯಲ್ಲಿ ಇರಲಿದ್ದಾರೆ. ಹೌದು ಭಾರತದ T20 ತಂಡದಲ್ಲಿ ಕೆ.ಎಲ್‌ ರಾಹುಲ್‌, ಒಡಿಐ ಕ್ಯಾಪ್ಟನ್‌ ಗಿಲ್, ರುತುರಾಜ್‌ ಗಾಯಕ್ವಾಡ್‌, ನಮನ್‌ ಧೀರ್‌, ಅನ್ಶುಲ್‌ ಕಾಂಬೋಜ್‌, ಗುರ್ನೂರ್‌ ಬ್ರಾರ್‌, ಸಿರಾಜ್‌ ಇಲ್ಲ. ರೋಹಿತ್‌, ಕೊಹ್ಲಿ ಈಗಾಗಲೇ T20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ.
vaibhav sooryavanshi 3/6

ವೈಭವ್‌ ಸೂರ್ಯವಂಶಿ

ಇದರಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ 5 ಪಂದ್ಯಗಳ T20 ಸರಣಿಯಲ್ಲಿ ಟೀಮ್‌ ಇಂಡಿಯಾದ ಯುವ ಪಡೆ ಅಖಾಡಕ್ಕೆ ಧುಮಕಲಿದೆ. ಎಲ್ಲರೂ ಅದ್ಭುತವಾದ ಫಾರ್ಮ್‌ನಲ್ಲಿದ್ದು ಬಲಿಷ್ಠ ವೆಸ್ಟ್‌ ಇಂಡೀಸ್‌ ಪಡೆಯನ್ನು ಮಣಿಸಬೇಕಿದೆ. ಅಲ್ಲದೇ ಈಗಾಗಲೇ ಭಾರತದ ವಾತಾವರಣಕ್ಕೆ ಹೊಂದಿಕೊಂಡಿರುವ ವೆಸ್ಟ್‌ ಇಂಡೀಸ್‌ ಪ್ಲೇಯರ್‌ಗಳ ಬಗ್ಗೆ ಭಾರತದ ಆಟಗಾರರು ಜಾಗೃತವಾಗಿ ಆಡಬೇಕು.
vaibhav sooryavanshi4/6

ವೈಭವ್‌ ಸೂರ್ಯವಂಶಿ

ಈಗಾಗಲೇ ಏಕದಿನ ಸರಣಿಯಲ್ಲಿ ಎಲ್ಲ ವೆಸ್ಟ್‌ ಇಂಡೀಸ್‌ ಪ್ಲೇಯರ್‌ಗಳು ಬೆಸ್ಟ್‌ ಪರ್ಫಾಮೆನ್ಸ್‌ ನೀಡಿದ್ದಾರೆ. ಅದರಲ್ಲಿ T20 ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಹ ಆಟಗಾರರು ಯಾವಾಗಲೂ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಇದ್ದೇ ಇರುತ್ತಾರೆ. ಯಾರು ಯಾವಾಗ ಸಿಡಿದೇಳುತ್ತಾರೆ ಎನ್ನುವುದನ್ನು ಹೇಳುವುದಕ್ಕೆ ಆಗಲಿಲ್ಲ.
Rohit Sharma 5/6

ರೋಹಿತ್‌ ಶರ್ಮಾ

ಮೊದಲ T20 ಪಂದ್ಯ ಲಕ್ನೋ ನಗರದಲ್ಲಿ ಅಕ್ಟೋಬರ್‌ 6 ರಂದು ಸಂಜೆ 7 ಗಂಟೆಗೆ ನಡೆಯಲಿದೆ 2ನೇ T20 ಪಂದ್ಯ ರಾಂಚಿ ನಗರದಲ್ಲಿ ಅಕ್ಟೋಬರ್‌ 9 ರಂದು ಸಂಜೆ 7 ಗಂಟೆಗೆ ನಡೆಯಲಿದೆ 3ನೇ T20 ಪಂದ್ಯ ಇಂದೋರ್‌ ನಗರದಲ್ಲಿ ಅಕ್ಟೋಬರ್‌ 11 ರಂದು ಸಂಜೆ 7 ಗಂಟೆಗೆ ನಡೆಯಲಿದೆ 4ನೇ T20 ಪಂದ್ಯ ಹೈದರಾಬಾದ್‌ನಲ್ಲಿ ಅಕ್ಟೋಬರ್‌ 14 ರಂದು ಸಂಜೆ 7 ಗಂಟೆಗೆ ನಡೆಯಲಿದೆ 5ನೇ T20 ಪಂದ್ಯ ಬೆಂಗಳೂರಲ್ಲಿ ಅಕ್ಟೋಬರ್‌ 17 ರಂದು ಸಂಜೆ 7 ಗಂಟೆಗೆ ನಡೆಯಲಿದೆ
KL Rahul Shai Hope6/6

ಕೆಎಲ್‌ ರಾಹುಲ್‌ ಸಾಯಿ ಹೋಪ್

T20 Team India Players; ಅಭಿಷೇಕ್‌ ಶರ್ಮಾ, ವೈಭವ್‌ ಸೂರ್ಯವಂಶಿ, ಶ್ರೇಯಸ್‌ ಅಯ್ಯರ್‌ (ಕ್ಯಾಪ್ಟನ್)‌, ಸಂಜು ಸ್ಯಾಮ್ಸನ್‌ (ವಿಕೆಟ್ ಕೀಪರ್)‌, ಇಶಾನ್‌ ಕಿಶನ್‌, ತಿಲಕ್‌ ವರ್ಮಾ, ಶಿವಂ ದುಬೆ, ಕುಲ್‌ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ನಿತೀಶ್‌ ಕುಮಾರ್‌, ಪ್ರಿನ್ಸ್‌ ಯಾದವ್‌, ಮಯಾಂಕ್‌ ಯಾದವ್‌ ಮತ್ತು ಅರ್ಷದೀಪ್‌ ಸಿಂಗ್‌,
TAGS:
T20

Trending

  • News
  • Photos
  • Videos
ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು, ಕೊಡಲಿಯಿಂದ ಹೊಡೆದಿದ್ದ ದುಷ್ಕರ್ಮಿ.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪೈಲಟ್ ಸ್ಮಿತ್‌ ಮಚ್ಚರ್

ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು, ಕೊಡಲಿಯಿಂದ ಹೊಡೆದಿದ್ದ ದುಷ್ಕರ್ಮಿ.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪೈಲಟ್ ಸ್ಮಿತ್‌ ಮಚ್ಚರ್

2

ಕನ್ನಡದ ಖ್ಯಾತ ಹಿರಿಯ ನಟಿ ಇನ್ನಿಲ್ಲ! 50ಕ್ಕೂ ಹೆಚ್ಚು ಧಾರಾವಾಹಿ, ಹಲವು ಸಿನಿಮಾಗಳಲ್ಲಿ ಮಿಂಚಿದ್ದ ಕಲಾವಿದೆ

3

ನಿಮ್ಮ ಆಯ್ಕೆಯ ಹುಡುಗ ಹೇಗಿರಬೇಕು.. ಪ್ರಿಯಕರನಾದರೂ ಈ ಕ್ವಾಲಿಟಿಗಳನ್ನ ಒಮ್ಮೆ ಚೆಕ್‌ ಮಾಡಿ

4

ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ, 150- 160 ಜೊತೆ ಕೋಣಗಳು.. ಹೇಗಿದೆ ಸಿದ್ಧತೆ?

5

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬೇಕಾ? ಊಟದ ಬಳಿಕ ಈ ಕೆಲಸ ಮಾಡಿದ್ರೆ ಸಾಕು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.