• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕೊಹ್ಲಿ‌, ರೋಹಿತ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. KL ರಾಹುಲ್‌ಗೆ ಮಹತ್ವದ ಪಟ್ಟ, ODI, T20ಗೆ ಯಾರಿಗೆಲ್ಲ ಚಾನ್ಸ್!

ಕೊಹ್ಲಿ‌, ರೋಹಿತ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. KL ರಾಹುಲ್‌ಗೆ ಮಹತ್ವದ ಪಟ್ಟ, ODI, T20ಗೆ ಯಾರಿಗೆಲ್ಲ ಚಾನ್ಸ್!

Reported ByBhimappaEdited ByBhimappa
Published: Sep 17, 2026, 12:33 PM IST|Updated: Sep 17, 2026, 02:18 PM IST
joinshare
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರು ಇದ್ದು ತಂಡಕ್ಕೆ ಕೊಡುಗೆ ನೀಡಲಿದ್ದಾರೆ. ಬ್ಯಾಟಿಂಗ್‌ ಅಗ್ರ ಕ್ರಮಾಂಕ ಬಲಪಡಿಸಲಾಗುತ್ತಿದ್ದು ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಮತ್ತು ಧ್ರುವ್ ಜುರೆಲ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ODI, T20 series against West Indies: ವೆಸ್ಟ್ ಇಂಡೀಸ್ ವಿರುದ್ಧದ ODI, T20 ಸರಣಿಗೆ ಭಾರತದ ಆಟಗಾರರ ಹೆಸರನ್ನು ಘೋಷಿಸಲಾಗಿದೆ. ಮೊದಲು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು 2026ರ ಸೆ.27 ರಿಂದ ಆರಂಭವಾಗುತ್ತೆ. ನಂತರ ಅಕ್ಟೋಬರ್ 6 ರಿಂದ ಐದು ಪಂದ್ಯಗಳ T20 ಅಂತರರಾಷ್ಟ್ರೀಯ ಸರಣಿ ನಡೆಯಲಿದೆ. ಏಕದಿನ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಸಮತೋಲ ಸಾಧಿಸಲು ಸಾಕಷ್ಟು ಪ್ರಯತ್ನ ಮಾಡಿದೆ. ಏಕೆಂದರೆ ಅಳೆದು ತೂಗಿ ಅನುಭವಿ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಯಿಂದ ಅತ್ಯಂತ ಕಿರಿಯ ಆಟಗಾರರಿಗೂ ಅವಕಾಶ ನೀಡಿದೆ. T20 ತಂಡಕ್ಕೆ ಆಕ್ರಮಣಕಾರಿ ಯುವ ಆಟಗಾರರ ಆಯ್ಕೆ ಮಾಡಿದೆ. 
 

Ind vs Wi ODI, T20 1/6

ಭಾರತ ಮತ್ತು ವೆಸ್ಟ್‌ ಇಂಡೀಸ್‌

ವೆಸ್ಟ್‌ ಇಂಡೀಸ್‌ ವಿರುದ್ಧದ ಐದು ಟಿ20 ಪಂದ್ಯಗಳು ಅಕ್ಟೋಬರ್ 6 ರಂದು ಆರಂಭವಾಗಿ 17 ರಂದು ಮುಕ್ತಾಯಗೊಳ್ಳಲಿವೆ. ಭಾರತದ ಟಿ20 ಟೀಮ್-‌ ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಪಿನ್ಸ್‌ ಯಾದವ್‌, ಮಯಾಂಕ್‌ ಯಾದವ್.
Ind vs Wi ODI, T20 2/6

ಭಾರತ ಮತ್ತು ವೆಸ್ಟ್‌ ಇಂಡೀಸ್‌

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯ ಸೆ.27 ರಂದು ಕೇರಳದ ತಿರುವನಂತಪುರದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಗುವಾಹಟಿಯಲ್ಲಿ ಸೆ.30 ರಂದು, ಮೂರನೇ ಪಂದ್ಯ ಅ.3 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಇನ್ನು ಏಕದಿನ ತಂಡ- ಶುಭಮನ್ ಗಿಲ್ (ನಾಯಕ), ರೋಹಿತ್, ಕೊಹ್ಲಿ, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ (ಉಪನಾಯಕ/ ವಿಕೆಟ್ ಕೀಪರ್), ಧ್ರುವ್ ಜುರೆಲ್, ನಿತೀಶ್ ಕುಮಾರ್, ಜಡೇಜಾ, ಕುಲದೀಪ್, ಪ್ರಸಿದ್ಧ್‌ ಕೃಷ್ಣ, ಗುರ್ನೂರ್ ಬ್ರಾರ್, ಸಿರಾಜ್, ಯಶಸ್ವಿ ಜೈಸ್ವಾಲ್‌, ನಮನ್‌ ಧೀರ್‌, ಅಕೀಬ್‌ ನಬಿ.
Ind vs Wi ODI, T20 3/6

ಭಾರತ ಮತ್ತು ವೆಸ್ಟ್‌ ಇಂಡೀಸ್‌

ಟಿ20 ಮಾದರಿಯ ಬೌಲಿಂಗ್ ದಾಳಿಯೂ ಕೂಡ ಆಕ್ರಮಣಕಾರಿ ಆಗಿದೆ. ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಮತ್ತು ರವಿ ಬಿಷ್ಣೋಯ್ ಅವರ ಮಾರಕ ದಾಳಿಯೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಮಣಿಸಲಿದ್ದಾರೆ. ಟಿ20 ಅಲ್ಲಿ ಅರ್ಶ್‌ದೀಪ್ ಸಿಂಗ್ ವೇಗದ ಬೌಲಿಂಗ್ ದಾಳಿಯ ನೇತೃತ್ವವನ್ನು ವಹಿಸಲಾಗಿದೆ. ಅರ್ಶ್‌ದೀಪ್ ಸಿಂಗ್‌ಗೆ ಮಾಯಾಂಕ್ ಯಾದವ್ ಮತ್ತು ಪ್ರಿನ್ಸ್ ಯಾದವ್‌ರಂತಹ ವೇಗದ ಬೌಲರ್‌ಗಳ ಸಾಥ್‌ ಕೂಡ ಇರಲಿದೆ.
Ind vs Wi ODI, T204/6

ಭಾರತ ಮತ್ತು ವೆಸ್ಟ್‌ ಇಂಡೀಸ್‌

ಇನ್ನು ತಂಡದಲ್ಲಿ ಬರಿ ಯುವ ಪ್ರತಿಭೆಗಳು ಇದ್ದು ಹೊಡಿಬಡಿ ಬ್ಯಾಟಿಂಗ್‌ ಮಾಡುವವರಿಗೆ ಅವಕಾಶ ನೀಡಲಾಗಿದೆ. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮತ್ತು‌ ವೈಶ್‌ ಕ್ಯಾಪ್ಟನ್ ತಿಲಕ್ ವರ್ಮಾ ಅವರಿಗೆ ಟಿ20 ಸರಣಿಯ ಜವಾಬ್ದಾರಿ ನೀಡಲಾಗಿದೆ. ಟಿ20 ತಂಡದಲ್ಲಿ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಶಿವಂ ದುಬೆ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಸ್ಫೋಟಕ ಆಲ್‌ರೌಂಡರ್‌ಗಳು ಮಧ್ಯಮ ಕ್ರಮಾಂಕ ಮತ್ತು ಬ್ಯಾಟಿಂಗ್‌ ಲೈನ್‌ ಅಪ್‌ನ ಕೊನೆಯಲ್ಲಿ ತಂಡಕ್ಕೆ ನೆರವಾಗಲಿದ್ದಾರೆ.
Ind vs Wi ODI, T20 5/6

ಭಾರತ ಮತ್ತು ವೆಸ್ಟ್‌ ಇಂಡೀಸ್‌

ಏಕದಿನ ತಂಡವು ಅನುಭವಿ ಆಟಗಾರರು ಮತ್ತು ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ನಮನ್ ಧೀರ್ ಅವರನ್ನು ಆಲ್‌ರೌಂಡರ್ ಆಯ್ಕೆಗಳಾಗಿ ಸೇರಿಸಲಾಗಿದೆ. ಕುಲದೀಪ್ ಯಾದವ್ ಸ್ಪಿನ್ ದಾಳಿಯನ್ನು ಮುನ್ನಡೆಸಿದರೆ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಇವರ ಜೊತೆಗೆ ಪ್ರಸಿದ್ಧ್‌ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಆಕಿಬ್ ನಬಿಯಂತಹ ವೇಗದ ಬೌಲರ್‌ಗಳು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಿದೆ.
Ind vs Wi ODI, T20 6/6

ಭಾರತ ಮತ್ತು ವೆಸ್ಟ್‌ ಇಂಡೀಸ್‌

ಏಕದಿನ ಸರಣಿಯಲ್ಲಿ ಟೀಮ್‌ ಇಂಡಿಯಾವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದು ಕೆಎಲ್ ರಾಹುಲ್ ಉಪನಾಯಕ ಮತ್ತು ವಿಕೆಟ್ ಕೀಪರ್ ಜವಾಬ್ದಾರಿಯನ್ನು ನೀಡಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರು ಇದ್ದು ತಂಡಕ್ಕೆ ಕೊಡುಗೆ ನೀಡಲಿದ್ದಾರೆ. ಬ್ಯಾಟಿಂಗ್‌ ಅಗ್ರ ಕ್ರಮಾಂಕ ಬಲಪಡಿಸಲಾಗುತ್ತಿದ್ದು ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಮತ್ತು ಧ್ರುವ್ ಜುರೆಲ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ತಂಡದಲ್ಲಿ ಬ್ಯಾಟಿಂಗ್ ಪಡೆ ಹೆಚ್ಚು ಬಲಿಷ್ಠವಾಗಿ ಇದೆ ಎಂದು ತಿಳಿಯುತ್ತದೆ.
TAGS:
Cricket
Team India
BCCI

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.