ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ಅಧಿಪತಿ ಎನ್ನಲಾಗುತ್ತದೆ. ಶನಿಯನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಮಹಾತ್ಮ ಸೂರ್ಯದೇವನ ಪುತ್ರ. ಆದರೆ, ಇವರಿಬ್ಬರ ನಡುವೆ ಶತ್ರುತ್ವ ಭಾವವಿದೆ ಎನ್ನಲಾಗುತ್ತದೆ.
1/6
ಶನಿ ನಕ್ಷತ್ರದಲ್ಲಿ ಸೂರ್ಯ ಸಂಚಾರ
ಜ್ಯೋತಿಷ್ಯದ ಪ್ರಕಾರ, ನವೆಂಬರ್ 20, 2026ರಂದು ಶನಿ ಅಧಿಪತ್ಯದ ಅನುರಾಧ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಲಿದ್ದಾನೆ. ಇದರೊಂದಿಗೆ, ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯದ ಬಾಗಿಲುಗಳು ತೆರೆದುಕೊಳ್ಳಲಿದ್ದು ಅವರು ಜೀವನದಲ್ಲಿ ಪ್ರಗತಿಯ ಹಾದಿಯನ್ನು ತುಳಿಯಲಿದ್ದಾರೆ. ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
2/6
ಮಿಥುನ ರಾಶಿ
ಸೂರ್ಯ ನಕ್ಷತ್ರ ಪರಿವರ್ತನೆಯು ಮಿಥುನ ರಾಶಿಯ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಪ್ರಗತಿಯ ಹಾದಿಯನ್ನು ಸುಗಮಗೊಳಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲಕರ ಸಮಯ ಇದಾಗಿರಲಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಲಿದೆ.
3/6
ಕರ್ಕಾಟಕ ರಾಶಿ
ಅನುರಾಧ ನಕ್ಷತ್ರದಲ್ಲಿ ಸೂರ್ಯ ಸಂಚಾರವು ಕರ್ಕಾಟಕ ರಾಶೀಯ ಜನರಿಗೆ ವೃತ್ತಿ ಜೀವನದಲ್ಲಿ ಅನುಕೂಲಕರ ಪರಿಸ್ಥಿತಿಯನ್ನು ತರಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕೆಲಸದಲ್ಲಿ ಮೇಲಧಿಕಾರಿಗಳ ಬೆಂಬಲವನ್ನು ಪಡೆಯುವಿರಿ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಯತ್ನ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.
4/6
ಕನ್ಯಾ ರಾಶಿ
ಶನಿಯ ಅನುರಾಧ ನಕ್ಷತ್ರದಲ್ಲಿ ಸೂರ್ಯ ಸಂಚಾರದ ಫಲವಾಗಿ ಕನ್ಯಾ ರಾಶಿಯವರು ಜೀವನದ ಪ್ರತಿ ಆಯಾಮದಲ್ಲೂ ಹೊಸತನವನ್ನು ಅನುಭವಿಸುವರು. ವ್ಯವಹಾರ ವಿಸ್ತರಣೆಗೆ ಇದು ತುಂಬಾ ಪ್ರಾಶಸ್ತ್ಯವಾದ ಸಮಯ. ಪಾಲುದಾರಿಕೆ ವ್ಯವಹಾರಗಳಲ್ಲಿ ಬಂಪರ್ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಸ್ಥರಿಗೆ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದೆ.
5/6
ಮಕರ ರಾಶಿ
ಸೂರ್ಯ ನಕ್ಷತ್ರ ಬದಲಾವಣೆಯಿಂದ ಮಕರ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ನಿಮ್ಮ ಕನಸು ನನಸಾಗುವ ಸುವರ್ಣ ಅವಧಿ ಎನ್ನಲಾಗುತ್ತಿದೆ. ಉದ್ಯೋಗದಲ್ಲಿ ಹೊಸ ಹೊಸ ಅವಕಾಶಗಳು ಸಿಗಬಹುದು. ವ್ಯವಹಾರದಲ್ಲಿ ದೊಡ್ಡ ಯೋಜನೆಯೊಂದು ಕೈ ಸೇರುವ ನಿರೀಕ್ಷೆ ಇದೆ. ಕೌಟುಂಬಿಕ ಬದುಕಿನಲ್ಲಿ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಹೊಸ ಮನೆ ಖರೀದಿಸಲು ಯೋಚಿಸುತ್ತಿದ್ದವರಿಗೆ ಸಮಯ ಅನುಕೂಲಕರವಾಗಿದೆ.
6/6
ಕುಂಭ ರಾಶಿ
ಶನಿ ನಕ್ಷತ್ರದಲ್ಲಿ ಸೂರ್ಯ ಸಂಚಾರವು ಕುಂಭ ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳನ್ನು ತರೆಬಹುದು. ಈ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಿದ್ದಾರೆ. ನಿಮ್ಮ ನಾಯಕತ್ವದ ಗುಣ ಮನ್ನಣೆಗೆ ಪಾತ್ರವಾಗಲಿದೆ. ವ್ಯವಹಾರದಲ್ಲೂ ಪ್ರಗತಿಯ ಅವಕಾಶಗಳಿದ್ದು, ಭರ್ಜರಿ ಧನಲಾಭವನ್ನು ನಿರೀಕ್ಷಿಸಬಹುದಾಗಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.