ಟೀಮ್ ಇಂಡಿಯಾದ T20 ವಿಶ್ವಕಪ್ ಟೂರ್ನಮೆಂಟ್ ಆಡಲು ಇಂಗ್ಲೆಂಡ್ ಪ್ರವಾಸ ಮಾಡಿದಾಗ ನಾಯಕಿ ಆಗಿದ್ದ ಹರ್ಮನ್‌ಪ್ರೀತ್ ಕೌರ್ ಅವರ ಸ್ಥಾನದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು.
Smriti Mandhana and Harmanpreet Kaur: ಭಾರತದ ಮಹಿಳಾ ತಂಡದ ನಾಯಕಿಯಾಗಿ ಸ್ಮೃತಿ ಮಂಧಾನ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. ಟೀಮ್ ಇಂಡಿಯಾದ ODI, T20 ಮತ್ತು ಟೆಸ್ಟ್ ಈ ಮೂರು ಸ್ವರೂಪಗಳಿಗೂ ಸ್ಮೃತಿ ಮಂಧಾನ ಅವರೇ ಕ್ಯಾಪ್ಟನ್ ಆಗಿದ್ದಾರೆ. ಅನುಭವಿ ಹರ್ಮನ್‌ಪ್ರೀತ್ ಕೌರ್ ಅವರು ನಾಯಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸ್ಮೃತಿ ಮಂಧಾನ ಅವರಿಗೆ ಮಹತ್ವದ ಪಟ್ಟ ಕಟ್ಟಲಾಗಿದೆ. ಇದರ ಬೆನ್ನಲ್ಲೇ ಮಹಿಳಾ ತಂಡದಲ್ಲಿ ಬೇರೆಯದ್ದೇ ವಿಷ್ಯ ಕೇಳಿ ಬರುತ್ತಿದ್ದು ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಹೊಸ ಕ್ಯಾಪ್ಟನ್ ಸ್ಮೃತಿ ಮಂಧಾನ ಇಬ್ಬರೂ ಪರಸ್ಪರ ಒಬ್ಬರನೊಬ್ಬರು ಕಣ್ಣೆತ್ತಿ ಕೂಡ ನೋಡಿಕೊಂಡಿಲ್ಲ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
1/6
ಕ್ಯಾಪ್ಟನ್ ಸ್ಮೃತಿ ಮಂಧಾನ
ನಾಯಕತ್ವದ ವಿಷ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ನಡುವೆ ಮೊದಲಿನಿಂದಲೂ ಜಟಿಲವಾದ ಸಮಸ್ಯೆ ಇತ್ತು ಎನ್ನಲಾಗಿದೆ. ಇದರಿಂದ ಡ್ರೆಸ್ಸಿಂಗ್ ರೂಮ್‌ನಲ್ಲಿ ಒಬ್ಬರಿಗೊಬ್ಬರು ಪರಸ್ಪರ ನೋಡಿಕೊಳ್ಳುತ್ತಿದ್ದಿಲ್ಲವಂತೆ. ಅಲ್ಲದೇ ತಲೆಯೆತ್ತಿ ಒಬ್ಬರಿಗೊಬ್ಬರು ಮಾತು ಕೂಡ ಆಡುತ್ತಿರಲಿಲ್ಲ. ಇದರ ಇಬ್ಬರ ನಡುವೆ ಕೆಲವೊಂದು ದೂರಗಳನ್ನು ಉಂಟು ಮಾಡಿತ್ತು ಎನ್ನಲಾಗಿದೆ.
2/6
ಕ್ಯಾಪ್ಟನ್ ಸ್ಮೃತಿ ಮಂಧಾನ
ಮೈದಾನದಲ್ಲಿ ಅಥವಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಪರಸ್ಪರ ಮುಖಾಮುಖಿ ಆದಾಗಲೂ ಮಾತನಾಡಿಕೊಳ್ಳುತ್ತಿಲ್ಲ. ಆಗುವುದು ಯಾವಾಗಲೋ ಒಂದು ಸಾರಿ ಈ ರೀತಿ ಮುಖಾಮುಖಿ ಆಗುತ್ತಿದ್ದರು. ಇದೇ ಅಶಾಂತಿಗೆ ಕಾರಣವಾಗಿತ್ತು ಎಂದು ಮಹಿಳಾ ತಂಡದ ಮೂಲವೊಂದು ಮಾಹಿತಿ ನೀಡಿದೆ ಎನ್ನಲಾಗಿದೆ.
3/6
ಕ್ಯಾಪ್ಟನ್ ಸ್ಮೃತಿ ಮಂಧಾನ
ವುಮೆನ್ಸ್ ಟೀಮ್ ಇಂಡಿಯಾದ T20 ವಿಶ್ವಕಪ್ ಟೂರ್ನಮೆಂಟ್ ಆಡಲು ಇಂಗ್ಲೆಂಡ್ ಪ್ರವಾಸ ಮಾಡಿದಾಗ ನಾಯಕಿ ಆಗಿದ್ದ ಹರ್ಮನ್‌ಪ್ರೀತ್ ಕೌರ್ ಅವರ ಸ್ಥಾನದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಅಲ್ಲದೇ ಮಾಧ್ಯಮಗೋಷ್ಠಿಯಲ್ಲಿ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯುವುದು ಯಾವಾಗ ಎಂದು ಹರ್ಮನ್‌ಪ್ರೀತ್ ಕೌರ್‌ಗೆ ನೇರವಾಗಿ ಪ್ರಶ್ನೆ ಮಾಡಲಾಗಿತ್ತು. ಇದು ಹೆಚ್ಚು ವೈರಲ್ ಆಗಿತ್ತು.
4/6
ಕ್ಯಾಪ್ಟನ್ ಸ್ಮೃತಿ ಮಂಧಾನ
ಯುನಿಟೆಡ್ ಕಿಂಗ್‌ಡಮ್‌ನಲ್ಲಿ ನಡೆದ T20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾ ಸೋತ ಬಳಿಕ ಮಿಥಾಲಿ ರಾಜ್ ಹರ್ಮನ್‌ಪ್ರೀತ್ ಕೌರ್ ಸ್ಥಾನದ ಬಗ್ಗೆ ಮಾತನಾಡಿದ್ದರು. ಹರ್ಮನ್‌ಪ್ರೀತ್ ಬ್ಯಾಟಿಂಗ್ ಫಾರ್ಮ್ ಮತ್ತು ಅವರ ಫಿಟ್ನೆಸ್ ಬಗ್ಗೆ ಮೊದಲೇ ಪ್ರಶ್ನೆ ಮಾಡಬೇಕಿತ್ತು. ಆಯ್ಕೆದಾರರು 2- 3 ವರ್ಷಗಳ ಹಿಂದೆಯೇ ಸ್ಮೃತಿ ಮಂಧಾನಗೆ ಕ್ಯಾಪ್ಟನ್ ಪಟ್ಟ ಕೊಡಬೇಕಿತ್ತು. ಈಗಾಗಲೇ ಸಾಕಷ್ಟು ಸಮಯ ಆಗಿದೆ ಎಂದಿದ್ದರು.
5/6
ಕ್ಯಾಪ್ಟನ್ ಸ್ಮೃತಿ ಮಂಧಾನ
ಇನ್ನು ಮುಂದುವರೆದು ಮಾತನಾಡಿದ್ದ ಮಿಥಾಲಿ ರಾಜ್ ಅವರು, 2- 3 ವರ್ಷಗಳ ಹಿಂದೆಯೇ ಸ್ಮೃತಿ ಮಂಧಾನಗೆ ಏಕದಿನ ತಂಡಕ್ಕೆ ನಾಯಕಿಯಾಗಿ ನೇಮಕ ಮಾಡಬೇಕಿತ್ತು. ಈಗಾಗಲೇ ಟೆಸ್ಟ್ ಮತ್ತು ಒಡಿಐಗೆ ಕ್ಯಾಪ್ಟನ್ ಆಗಬೇಕಿತ್ತು. T20 ತಂಡಕ್ಕೆ ಶಫಾಲಿ ವರ್ಮಾ ಅವರಂತ ಕಿರಿಯ ಆಟಗಾರ್ತಿಗೆ ಜವಾಬ್ದಾರಿ ನೀಡಬಹುದಿತ್ತು ಎಂದು ಹೇಳಿದ್ದರು.
6/6
ಕ್ಯಾಪ್ಟನ್ ಸ್ಮೃತಿ ಮಂಧಾನ
ಪುರುಷರ ತಂಡದಂತೆ ಮಹಿಳಾ ತಂಡ ಕೂಡ ಪರಿಶೀಲನೆಗೆ ಒಳಗಾಗಬೇಕು. ಆಯ್ಕೆದಾರರು ಪದೇ ಪದೇ ಎಡವುತ್ತಿರುವುದು ಇಲ್ಲಿಯೇ. ಈ ಹಿಂದೆಯೂ ಮಿಥಾಲಿ ರಾಜ್‌ರಿಂದ ಹರ್ಮನ್‌ಪ್ರೀತ್ ನಾಯಕತ್ವವನ್ನು ಕಸಿದುಕೊಂಡಾಗಲೂ ಇಬ್ಬರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಅದರಂತೆ ಇದೀಗ ಹರ್ಮನ್‌ಪ್ರೀತ್‌ರಿಂದ ಕ್ಯಾಪ್ಟನ್ಸಿ ಪಟ್ಟ ಸ್ಮೃತಿ ಮಂಧಾನ ಕಸಿದುಕೊಂಡಿದ್ದಕ್ಕೆ ಇಬ್ಬರ ನಡುವಿನ ವಾತವರಣ ಬಿಸಿ ಆಗಿದೆ.