Shukra Gochar in Swati Nakshatra Effects: ಶುಕ್ರ ಗ್ರಹ ಸಂಚಾರದಿಂದ ಈ ಕೆಳಗಿನ ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಶುಕ್ರ ಗೋಚಾರದಿಂದ ಸಂಪತ್ತು, ಸಮೃದ್ಧಿ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಲಭಿಸುವ ಸಾಧ್ಯತೆಯಿದೆ....
1/7
ಶುಕ್ರ ಗೋಚಾರ
Shukra Gochar in Swati Nakshatra Effects: ಶುಕ್ರ ಗ್ರಹ ಸಂಚಾರದಿಂದ ಈ ಕೆಳಗಿನ ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಶುಕ್ರ ಗೋಚಾರದಿಂದ ಸಂಪತ್ತು, ಸಮೃದ್ಧಿ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಲಭಿಸುವ ಸಾಧ್ಯತೆಯಿದೆ....
2/7
ಮೇಷ ರಾಶಿ
ಮೇಷ ರಾಶಿ : ಶುಕ್ರನ ಕೃಪೆಯಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದ್ದು, ದೀರ್ಘಕಾಲದ ವಿವಾದಗಳಿಂದ ಮುಕ್ತಿ ಸಿಗಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಕಾಲ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ.
3/7
ಮಿಥುನ ರಾಶಿ
ಮಿಥುನ ರಾಶಿ : ಶುಕ್ರಾದಿತ್ಯ ರಾಜಯೋಗದಿಂದಾಗಿ ಸಮಾಜದಲ್ಲಿ ನಿಮ್ಮ ಕೀರ್ತಿ ಖ್ಯಾತಿ ಹೆಚ್ಚಾಗುವುದು. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ ಮತ್ತು ಕುಟುಂಬದಲ್ಲಿ ಬಹಳ ದಿನಗಳಿಂದ ಮುಂದೂಡಲ್ಪಟ್ಟಿದ್ದ ಶುಭ ಕಾರ್ಯಗಳು ನೆರವೇರಲಿವೆ.
4/7
ತುಲಾ ರಾಶಿ
ತುಲಾ ರಾಶಿ: ಡಿಸೆಂಬರ್‌ನಲ್ಲಿ ಶುಕ್ರಾದಿತ್ಯ ರಾಜಯೋಗದಿಂದ ಅದೃಷ್ಟ ಕೂಡಿ ಬರಲಿದೆ. ಶುಕ್ರನು ನಿಮ್ಮ ರಾಶಿಯ ಅಧಿಪತಿಯಾಗಿದ್ದು, ಇದೇ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ, ನಿಮ್ಮ ಜೀವನದಲ್ಲಿ ಐಷಾರಾಮಿ ಸೌಕರ್ಯಗಳು ಹಾಗೂ ಸ್ಥಾನಮಾನ ಹೆಚ್ಚಾಗಲಿದೆ. ಅಲ್ಲದೆ ಹೊಸ ವ್ಯಾಪಾರ ಉದ್ಯಮಗಳಿಂದ ಗಮನಾರ್ಹ ಲಾಭವನ್ನು ನಿರೀಕ್ಷಿಸಬಹುದು.
5/7
ಧನು ರಾಶಿ
ಧನು ರಾಶಿ : ಶುಕ್ರನಿಂದ ಉಂಟಾಗುವ ಈ ರಾಜಯೋಗ ಗೌರವ, ಕೀರ್ತಿ ಮತ್ತು ಯಶಸ್ಸನ್ನು ತಂದುಕೊಡುವುದು. ಹೂಡಿಕೆಗಳು ಮತ್ತು ಷೇರು ಮಾರುಕಟ್ಟೆಯಿಂದ ಲಾಭ ಪಡೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಮಾನಸಿಕ ಒತ್ತಡ ಕಡಿಮೆಯಾಗಲಿದ್ದು, ಆದಾಯದಲ್ಲಿ ಏರಿಕೆಯಾಗಲಿದೆ.
6/7
ಮಕರ ರಾಶಿ
ಮಕರ ರಾಶಿ: ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುವ ಸಮಯ. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದ್ದು, ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದೀರಿ. ಅದೃಷ್ಟದ ಸಂಪೂರ್ಣ ಬೆಂಬಲವಿರುವುದರಿಂದ, ನಿಮ್ಮ ಬ್ಯಾಂಕ್ ಉಳಿತಾಯ ಅಥವಾ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.