• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರ: ಮುಂದಿನ 80 ದಿನಗಳವರೆಗೆ ಕಷ್ಟ ಕೊಡುವಾತನಿಂದಲೇ ಇವರ ಬಾಳು ಬಂಗಾರ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರ: ಮುಂದಿನ 80 ದಿನಗಳವರೆಗೆ ಕಷ್ಟ ಕೊಡುವಾತನಿಂದಲೇ ಇವರ ಬಾಳು ಬಂಗಾರ

Written ByYashaswini V
Published: Nov 18, 2026, 09:00 IST|Updated: Nov 18, 2026, 09:02 IST
joinshare

ಜ್ಯೋತಿಷ್ಯದಲ್ಲಿ ಕ್ರೂರ ಗ್ರಹ ಎನ್ನಲಾಗುವ ಶನಿ ಶುಭ ಸ್ಥಾನದಲ್ಲಿದ್ದಾಗ ಒಳ್ಳೆಯ ಫಲಗಳನ್ನೇ ನೀಡುತ್ತಾನೆ. 

Shani Gochar Phala1/6

ಶನಿ ಗೋಚಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನ್ಯಾಯದ ದೇವರು ಶನಿ ಅಕ್ಟೋಬರ್‌ ತಿಂಗಳಿನಲ್ಲಿ ತನ್ನದೇ ಆದ ಉತ್ತರಾಭಾದ್ರ ನಕ್ಷತ್ರಕ್ಕೆ ಪದಾರ್ಪಣೆ ಮಾಡಿದ್ದು, ಮುಂದಿನ ಫೆಬ್ರವರಿ 08, 2027ರವರೆಗೂ ಅದೇ ನಕ್ಷತ್ರದಲ್ಲಿ ವಿರಾಜಮಾನನಾಗಲಿದ್ದಾನೆ.
Shani Gochar Phala2/6

ಮುಂದಿನ 80 ದಿನಗಳವರೆಗೆ ಈ ರಾಶಿಯವರಿಗೆ ಗೋಲ್ಡನ್‌ ಟೈಮ್‌

ತನ್ನದೇ ಆದ ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರದಿಂದ ಮುಂದಿನ 80 ದಿನಗಳವರೆಗೆ ನಾಲ್ಕು ರಾಶಿಯವರಿಗೆ ಸುವರ್ಣ ಸಮಯ ಎಂದು ಸಾಬೀತುಪಡಿಸಲಿದ್ದು, ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯ ಜೊತೆ ಈ ಸಮಯದಲ್ಲಿ ಕರ್ಮಫಲದಾತನ ಆಶೀರ್ವಾದದಿಂದಲೇ ಅವರ ಬಾಳು ಬಂಗಾರವಾಗಲಿದೆ ಎನ್ನಲಾಗುತ್ತಿದೆ.
Shani Gochar Phala3/6

ವೃಷಭ ರಾಶಿ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರ ಪ್ರಭಾವದಿಂದ ವೃಷಭ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ದೀರ್ಘಾವಧಿಯಿಂದ ನೀವು ವ್ಯವಹಾರದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸುಸಮಯ ಇದಾಗಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ಬಾಕಿ ಇರುವ ಕೆಲಸಗಳೂ ಕೂಡ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ.
Shani Gochar Phala4/6

ತುಲಾ ರಾಶಿ

ಶನಿ ಸಂಕ್ರಮಣದಿಂದ ತುಲಾ ರಾಶಿಯ ಜನರಿಗೆ ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಸಾಬೀತಾಗಲಿದೆ. ವ್ಯವಹಾರ ವಿಸ್ತರಣೆಗೆ ಉತ್ತಮ ಅವಕಾಶಗಳು ಸಿಗಬಹುದು. ನಿರುದ್ಯೋಗಿಗಳಿಗೆ ನಿಮ್ಮ ಕನಸಿನ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸೂಚನೆಗಳಿವೆ. ಕೌಟುಂಬಿಕ ವಾತಾವರಣ ಸಂತಸದಿಂದ ಕೂಡಿರಲಿದೆ.
Shani Gochar Phala5/6

ಮಕರ ರಾಶಿ

ಶನಿ ಸಂಚಾರವು ಮಕರ ರಾಶಿಯ ಜನರಿಗೆ ವಿಶೇಷವಾಗಿ ಪ್ರಯೋಜನವನ್ನು ನೀಡಲಿದ್ದು, ದೀರ್ಘಾವಧಿಯಿಂದ ತಡೆಯಾಗಿರುವ ಕೆಲಸಗಳಲ್ಲಿ ಪ್ರಗತಿಯನ್ನು ಕಾಣುವ ಸೂಚನೆಗಳಿವೆ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವೃತ್ತಿ ಬದುಕಿನಲ್ಲಿ ಬಡ್ತಿ ಸಿಗಬಹುದು. ವ್ಯವಹಾರದಲ್ಲಿ ತಡೆಯಾಗಿದ್ದ ಹಣ ಕೈ ಸೇರಬಹುದು.
Shani Gochar Phala6/6

ಕುಂಭ ರಾಶಿ

ಉತ್ತರಾಭಾದ್ರ ನಕ್ಷತ್ರದಲ್ಲಿ ಶನಿ ಸಂಚಾರದಿಂದ ಕುಂಭ ರಾಶಿಯವರಿಗೆ ಭಾಗ್ಯೋದಯದ ಸಮಯ ಎನ್ನಲಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಜೀವನದ ಪ್ರತಿ ಆಯಾಮದಲ್ಲೂ ಸಕಾರಾತ್ಮಕತೆ ಹೆಚ್ಚಾಗಲಿದೆ. ಉದ್ಯಮಿಗಳಿಗೆ ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ. ಮಕ್ಕಳ ಮದುವೆ ಬಗ್ಗೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲಕರ ಸಮಯ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Grah Gochar

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.