ಜ್ಯೋತಿಷ್ಯದಲ್ಲಿ ಗಜಕೇಸರಿ ರಾಜಯೋಗವನ್ನು ಬಹಳ ಅದೃಷ್ಟದ ಯೋಗ ಎನ್ನಲಾಗುತ್ತದೆ.
1/6
ಪ್ರಬಲ ಗಜಕೇಸರಿ ರಾಜಯೋಗ
ವೈದಿಕ ಜ್ಯೋತಿಷ್ಯದ ಪ್ರಕಾರ, ನವೆಂಬರ್ 30, 2026ರಂದು ಗುರು ಚಂದ್ರರು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಲಿದ್ದು ಕಾರ್ತಿಕ ಮಾಸದಲ್ಲಿ ಪ್ರಬಲ ಗಜಕೇಸರಿ ರಾಜಯೋಗ ಸೃಷ್ಟಿ ಆಗಲಿದೆ.
2/6
ಪ್ರಬಲ ಗಜಕೇಸರಿ ರಾಜಯೋಗ ಪ್ರಭಾವ
ಕಾರ್ತಿಕ ಮಾಸದಲ್ಲಿ ಸೃಷ್ಟಿ ಆಗಲಿರುವ ಪ್ರಬಲ ಗಜಕೇಸರಿ ರಾಜಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ ನಾಲ್ಕು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದ್ದು ಅವರ ಜೀವನದ ದಿಕ್ಕೇ ಬದಲಾಗಲಿದೆ. ಸಂಪತ್ತಿನ ಸುರಿಮಳೆ ಸುರಿಯಲಿದ್ದು, ಶ್ರೀಮಂತರಾಗುವ ಸುಯೋಗವಿದೆ ಎನ್ನಲಾಗುತ್ತಿದೆ.
3/6
ಕನ್ಯಾ ರಾಶಿ
ಪ್ರಬಲ ಗಜಕೇಸರಿ ರಾಜಯೋಗದ ಪ್ರಭಾವದಿಂದ ಕನ್ಯಾ ರಾಶಿಯವರು ತಮ್ಮೆಲ್ಲಾ ಸಮಸ್ಯೆಗಳಿಂದ ಹೊರಬರಲಿದ್ದು, ಸಾಲದ ಸುಳಿಯಿಂದಲೂ ಪರಿಹಾರ ಪಡೆಯಲಿದ್ದಾರೆ. ಈ ಅವಧಿಯಲ್ಲಿ ನಿಮ್ಮ ಚಿಂತೆಗಳು ದೂರವಾಗಲಿದ್ದು ವಿದ್ಯಾರ್ಥಿಗಳು ಅದೃಷ್ಟದ ಬಲವನ್ನು ಪಡೆಯಲಿದ್ದಾರೆ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ವಾರ್ತೆಯನ್ನು ಸ್ವೀಕರಿಸುವ ಸೂಚನೆಗಳಿವೆ.
4/6
ತುಲಾ ರಾಶಿ
ಕಾರ್ತಿಕ ಮಾಸದಲ್ಲಿ ನಿರ್ಮಾಣವಾಗಲಿರುವ ಪ್ರಬಲ ಗಜಕೇಸರಿ ರಾಜಯೋಗವು ತುಲಾ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಅವಧಿಯಲ್ಲಿ ದೀರ್ಘ ಸಮಯದಿಂದ ತಡೆಯಾಗಿರುವ ನಿಮ್ಮ ಕೆಲಸದಲ್ಲಿ ಯಶಸ್ಸು ಕಂಡು ಬರಲಿದೆ. ಉದ್ಯಮಿಗಳು ದುಪ್ಪಟ್ಟು ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು, ಕುಟುಂಬದಲ್ಲೂ ಸುಖ-ಸಂತೋಷಗಳು ಹೆಚ್ಚಾಗಲಿವೆ.
5/6
ಮಕರ ರಾಶಿ
ಪ್ರಬಲ ಗಜಕೇಸರಿ ರಾಜಯೋಗವು ಮಕರ ರಾಶಿಯವರಿಗೆ ಅಕ್ಷರಶಃ ಸುವರ್ಣ ಸಮಯ ಎಂದು ಸಾಬೀತುಪಡಿಸಲಿದೆ. ಗುರು ಚಂದ್ರರ ಸಂಯೋಗದಿಂದ ರಾಜಯೋಗ ನಿರ್ಮಾಣವಾಗಲಿದೆ. ಬಹಳ ಸಮಯದಿಂದ ಬಾಕಿ ಉಳಿದಿರುವ ಹಣ ನಿಮ್ಮ ಖಾತೆ ಸೇರಲಿದೆ. ವ್ಯವಹಾರ ವಿಸ್ತರಣೆಗೆ ಇದು ಅನುಕೂಲಕರ ಸಮಯವಾಗಿದೆ. ಹಿರಿಯರ ಆಶೀರ್ವಾದದಿಂದ ನಿಮ್ಮ ಕನಸುಗಳು ನನಸಾಗುವ ಸುಸಮಯ ಇದಾಗಿರಲಿದೆ.
6/6
ಮೀನ ರಾಶಿ
ಪ್ರಬಲ ಗಜಕೇಸರಿ ರಾಜಯೋಗದಿಂದ ಮೀನ ರಾಶಿಯವರಿಗೆ ಜೀವನದ ದಿಕ್ಕೇ ಬದಲಾಗಲಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ನಿಮ್ಮ ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು. ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಅಪಾರ ಸಂಪತ್ತಿನ ಸುರಿಮಳೆಯೇ ಸುರಿಯಲಿದ್ದು ಶ್ರೀಮಂತರಾಗವ ಸುಯೋಗವೂ ಇದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.