• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಸೂರ್ಯಕುಮಾರ್‌ ಯಾದವ್‌ಗೆ ಶಾಕ್‌ ಮೇಲೆ ಶಾಕ್..‌ ಮುಂಬೈ ಟೀಮ್‌ನಲ್ಲಿ ಮತ್ತೊಂದು ದೊಡ್ಡ ಅವಮಾನ

ಸೂರ್ಯಕುಮಾರ್‌ ಯಾದವ್‌ಗೆ ಶಾಕ್‌ ಮೇಲೆ ಶಾಕ್..‌ ಮುಂಬೈ ಟೀಮ್‌ನಲ್ಲಿ ಮತ್ತೊಂದು ದೊಡ್ಡ ಅವಮಾನ

Written ByBhimappa
Published: Oct 06, 2026, 04:49 PM IST|Updated: Oct 06, 2026, 04:55 PM IST
joinshare
ಸಿದ್ಧೇಶ್‌ ಲಾಡ್‌ ನೇತೃತ್ವದಲ್ಲಿ ಮುಂಬೈ ರಣಜಿ ತಂಡ 16 ಆಟಗಾರರನ್ನು ಒಳಗೊಂಡಿದೆ. ಈ ಎಲ್ಲದರ ನಡುವೆ ಭಾರತದ ಮಾಜಿ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಅವರನ್ನು ಆಯ್ಕೆದಾರರು ಕೈಬಿಟ್ಟಿದ್ದಾರೆ.

Mumbai Ranji team drop Suryakumar Yadav name as vice-captain: ಟೀಮ್‌ ಇಂಡಿಯಾದ T20 ಕ್ಯಾಪ್ಟನ್‌ ಸ್ಥಾನದಿಂದ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈಬಿಟ್ಟ ಮೇಲೆ ಶಾಕ್‌ ಮೇಲೆ ಶಾಕ್‌ ಎದುರಾಗುತ್ತಿದೆ. ಇದೀಗ ಮತ್ತೊಂದು ಬರಸಿಡಿಲು ಬಡಿದಿದ್ದು ಇದು ಒಂಥಾರ ಅವಮಾನವೇ ಎನ್ನಬಹುದು. ಏಕೆಂದರೆ ಅನುಭವಿ ಸೂರ್ಯಕುಮಾರ್‌ ಯಾದವ್‌ ಅವರು ಲಭ್ಯ ಇದ್ದರೂ ಅವರಿಗಿಂತ ಕಿರಿಯ ಆಟಗಾರನಿಗೆ ಮುಂಬೈ ತಂಡದ ಉಪನಾಯಕನ ಪಟ್ಟ ನೀಡಲಾಗಿದೆ. ಮುಂಬೈನ ರಣಜಿ ಟ್ರೋಫಿ ತಂಡದಲ್ಲಿ ಮಹತ್ವದ ಸ್ಥಾನ ಸೂರ್ಯಕುಮಾರ್‌ ಅವರ ಕೈತಪ್ಪಿದೆ.    
 

Suryakumar Yadav 1/6

ಸೂರ್ಯಕುಮಾರ್‌ ಯಾದವ್

ಮುಂಬೈನ ರಣಜಿ ಟ್ರೋಫಿ ತಂಡದಲ್ಲಿ ಸೂರ್ಯಕುಮಾರ್‌ ಅವರು ಆಡುವುದಕ್ಕೆ ಲಭ್ಯ ಇದ್ದರೂ ಉಪನಾಯಕನ ಸ್ಥಾನವನ್ನು ಯುವ ಪ್ರತಿಭೆ ಆಯುಷ್‌ ಮ್ಹಾತ್ರೆಗೆ ನೀಡಲಾಗಿದೆ. ಮುಂಬೈನ ರಣಜಿ ಟ್ರೋಫಿ ತಂಡವೂ ತಮ್ಮ ಮೊದಲ ಪಂದ್ಯವನ್ನು ಚಂಢೀಗರ್‌ ವಿರುದ್ಧ ಆಡಲಿದೆ. ಅಕ್ಟೋಬರ್‌ 11 ರಿಂದ ತಮ್ಮ ರಣಜಿ ಟ್ರೋಫಿ ಅಭಿಯಾನವನ್ನು ಮುಂಬೈ ತಂಡ ಆರಂಭಿಸಲಿದೆ.
Suryakumar Yadav 2/6

ಸೂರ್ಯಕುಮಾರ್‌ ಯಾದವ್

ಆಯುಷ್‌ ಮ್ಹಾತ್ರೆ ಅದ್ಭುತವಾದ ಪ್ರತಿಭೆ ಆಗಿದ್ದು ಕೇವಲ ಎರಡು ವರ್ಷಗಳಲ್ಲಿ 13 ಪ್ರಥಮ ದರ್ಜೆ ಪಂದ್ಯಗಳ ಸೀಮಿತ ಅನುಭವ ಹೊಂದಿದ್ದಾರೆ. ಆಯುಷ್‌ ಮ್ಹಾತ್ರೆ ಸಾರಥ್ಯದಲ್ಲಿ ಟೀಮ್‌ ಇಂಡಿಯಾವನ್ನು ಅಂಡರ್‌ 19 ವಿಶ್ವಕಪ್‌ ಅನ್ನು ಗೆದ್ದುಕೊಂಡಿದೆ. ಹೀಗಾಗಿ ಆಯುಷ್‌ ಮ್ಹಾತ್ರೆ ಅವರನ್ನು ಭವಿಷ್ಯದ ಕ್ಯಾಪ್ಟನ್‌ ಅನ್ನು ಆಗಿ ರೂಪಿಸುವುದು ಆಯ್ಕೆದಾರರ ಟಾರ್ಗೆಟ್‌ ಆಗಿದೆ.
Suryakumar Yadav 3/6

ಸೂರ್ಯಕುಮಾರ್‌ ಯಾದವ್

ಟೀಮ್‌ ಇಂಡಿಯಾದ ಓಪನರ್‌ ಯಶಸ್ವಿ ಜೈಸ್ವಾಲ್‌ ಅವರು ಆರಂಭಿಕ ಪಂದ್ಯದಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ. ಸಿದ್ಧೇಶ್‌ ಲಾಡ್‌ ನೇತೃತ್ವದಲ್ಲಿ ಮುಂಬೈ ರಣಜಿ ತಂಡ 16 ಆಟಗಾರರನ್ನು ಒಳಗೊಂಡಿದೆ. ಈ ಎಲ್ಲದರ ನಡುವೆ ಭಾರತದ ಮಾಜಿ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಅವರನ್ನು ಆಯ್ಕೆದಾರರು ಕೈಬಿಟ್ಟಿದ್ದಾರೆ.
Suryakumar Yadav 4/6

ಸೂರ್ಯಕುಮಾರ್‌ ಯಾದವ್

ರಮೇಶ್‌ ಪವರ್‌ ನೇತೃತ್ವದ ಮುಂಬೈ ರಣಜಿ ತಂಡದ ಆಯ್ಕೆ ಸಮಿತಿಯೂ ಈ ಬಗ್ಗೆ ಅಧಿಕೃತವಾಗಿ ಸೂರ್ಯಕುಮಾರ್‌ ಯಾದವ್‌ ಅವರಿಗೆ ಮಾಹಿತಿ ರವಾನೆ ಮಾಡಿ ತಿಳಿಸಿದೆ. ಉಪನಾಯಕನಾಗಿ ನಿಮ್ಮನ್ನು ಪರಿಗಣಿಸಿಲ್ಲ. ನಿಮ್ಮ ಸ್ಥಾನಕ್ಕೆ ಆಯುಷ್‌ ಮ್ಹಾತ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೊದಲೇ ತಿಳಿಸಿದೆ. ಇದರಿಂದ ಯಾವುದೇ ಗೊಂದಲವಿಲ್ಲ ಎನ್ನಲಾಗಿದೆ.
Suryakumar Yadav 5/6

ಸೂರ್ಯಕುಮಾರ್‌ ಯಾದವ್

ಸೂರ್ಯಕುಮಾರ್‌ ಯಾದವ್‌ ಅವರು ಕೊನೆಯ ಬಾರಿಗೆ ಜೂನ್‌ ತಿಂಗಳಲ್ಲಿ ಮುಂಬೈ ತಂಡದ T20 ಲೀಗ್‌ನಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರು ತಮ್ಮ ಬ್ಯಾಟಿಂಗ್‌ ಫಾರ್ಮ್‌ ಅನ್ನು ಕಂಡುಕೊಳ್ಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೂರ್ಯಕುಮಾರ್‌ ಯಾದವ್‌ ಅವರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು ಸರಿಯಾದ ರನ್‌ಗಳು ಅವರ ಬ್ಯಾಟಿಂಗ್‌ನಿಂದ ಬರುತ್ತಿಲ್ಲ ಎನ್ನಲಾಗಿದೆ.
Suryakumar Yadav 6/6

ಸೂರ್ಯಕುಮಾರ್‌ ಯಾದವ್

ಮುಂಬೈ ರಣಜಿ ತಂಡ; ಸಿದೇಶ್‌ ಲಾಡ್‌ (ಕ್ಯಾಪ್ಟನ್)‌, ಯಶಸ್ವಿ ಜೈಸ್ವಾಲ್‌, ಆಯುಷ್‌ ಮ್ಹಾತ್ರೆ (ಉಪನಾಯಕ), ದಿವ್ಯಾಂನ್ಶ್‌ ಸಕ್ಸೆನಾ, ಮುಶೀರ್‌ ಖಾನ್‌, ಸರ್ಫರಾಜ್‌ ಖಾನ್‌, ಸುವೇದ್‌ ಪರ್ಕಾರ್‌, ಆಕಾಶ್‌ ಆನಂದ್‌ (ವಿಕೆಟ್‌ ಕೀಪರ್)‌, ಹಾರ್ದಿಕ್‌ ತಾಂಮರ್‌, ಶಮ್ಸ್‌ ಮುಲಾನಿ, ತನುಶ್‌ ಕೊಟಾಯನ್‌, ಅಥರ್ವ್‌ ಅಂಕೊಲ್ಕರ್‌, ತುಷಾರ್‌ ದೇಶಪಾಂಡೆ, ಮೊಹಿತ್‌ ಅವಸ್ಥೆ, ಸ್ಯಾವೆಸ್ಟರ್‌ ಡಿಸೊಜ್‌, ಓಂಕಾರ್‌ ತರ್ಮಾಲೆ,
TAGS:
Cricket

Trending

  • News
  • Photos
  • Videos
ಇತಿಹಾಸ ಪ್ರಸಿದ್ಧ ಕೊಳದಲ್ಲಿ ಗಣಪತಿ ಮೂರ್ತಿ ವಿಸರ್ಜನೆ.. SP ಗೆ ನೋಟಿಸ್ ಜಾರಿ, ಹೆಚ್.ಡಿ ರೇವಣ್ಣ ಕಿಡಿ!

ಇತಿಹಾಸ ಪ್ರಸಿದ್ಧ ಕೊಳದಲ್ಲಿ ಗಣಪತಿ ಮೂರ್ತಿ ವಿಸರ್ಜನೆ.. SP ಗೆ ನೋಟಿಸ್ ಜಾರಿ, ಹೆಚ್.ಡಿ ರೇವಣ್ಣ ಕಿಡಿ!

2

ಧ್ರುವ ಸರ್ಜಾ ಕೊಟ್ಟ ಸರ್ಪ್ರೈಸ್‌ನಿಂದ ಫ್ಯಾನ್ಸ್‌ ಫುಲ್ ಫಿದಾ.. ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇ ಸಂಭ್ರಮ ಹೇಗಿತ್ತು?

3

ಕಾಂಗ್ರೆಸ್‌ಗೆ ಕುಬೇರಪ್ಪ ಶಾಕ್! ಅಹಿಂದ ಬಂಡಾಯ ಅಭ್ಯರ್ಥಿಯಾಗಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧೆ

4

ಶಾಲೆಗೆ ರಜೆ, ಈಜಲು ಹೋದ ಮಕ್ಕಳು ಹೆ*ಣವಾದ್ರು! ಚಿಕ್ಕಮಗಳೂರಿನಲ್ಲಿ ಹೃದಯವಿದ್ರಾವಕ ಘಟನೆ

5

ಗಿಲ್ಲಿ ಬಗ್ಗೆ ಲಘು ಹೇಳಿಕೆ.. ಜಗ್ಗ ಮಮ್ಮಿ ವಿರುದ್ಧ ತೀವ್ರ ಆಕ್ರೋಶ..! ಅಷ್ಟಕ್ಕೂ ಆಗಿದ್ದೇನು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.