• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /CSK ಫ್ರಾಂಚೈಸಿಯಲ್ಲಿ MS ಧೋನಿ ಹೊಂದಿರೋ ಷೇರು ಎಷ್ಟು.. ಕೂಲ್‌ ಕ್ಯಾಪ್ಟನ್‌ ಹೊಂದಿರೋ ಭಾಗ ಇಷ್ಟೇನಾ?

CSK ಫ್ರಾಂಚೈಸಿಯಲ್ಲಿ MS ಧೋನಿ ಹೊಂದಿರೋ ಷೇರು ಎಷ್ಟು.. ಕೂಲ್‌ ಕ್ಯಾಪ್ಟನ್‌ ಹೊಂದಿರೋ ಭಾಗ ಇಷ್ಟೇನಾ?

Written ByBhimappa
Published: Sep 20, 2026, 11:17 AM IST|Updated: Sep 20, 2026, 11:24 AM IST
joinshare
ಎಂಎಸ್‌ ಧೋನಿ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಷೇರುಗಳಿವೆ ಎಂದು ಕೆಲವೊಂದು ಮೂಲಗಳು ಹೇಳುತ್ತಿವೆ. ಫ್ರಾಂಚೈಸಿ ಮೂಲಗಳು ಹೇಳುವಂತೆ ಧೋನಿ ತಂಡದಲ್ಲಿ ಕೆಲವು ಷೇರುಗಳನ್ನು ಮಾರಾಟಕ್ಕೆ ಇಟ್ಟಾಗ ಖರೀದಿಸಿದ್ದಾರೆ ಎನ್ನಲಾಗಿದೆ.

MS Dhoni owns 1 lakh shares in CSK franchise: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ಸಿಎಸ್‌ಕೆ ತಂಡವು ಒಂದಲ್ಲ ಒಂದು ವಿಚಾರಕ್ಕೆ ನಿರಂತರವಾಗಿ ಸುದ್ದಿಯಲ್ಲಿರುತ್ತದೆ. ಫ್ರಾಂಚೈಸಿಯ ಕೆಲವೊಂದು ಗುಪ್ತ ಮಾಹಿತಿಗಳು ಸೋರಿಕೆ ಆಗುತ್ತಿವೆ. ಇತ್ತೀಚೆಗೆ ಸಂಜು ಸ್ಯಾಮ್ಸನ್‌ ಅವರು ಕ್ಯಾಪ್ಟನ್‌ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಹ್ಯಾರಿ ಬ್ರೂಕ್‌ ಅವರನ್ನ ಖರೀದಿಗೆ ಸಿಎಸ್‌ಕೆ ಮುಂದಾಗಿರುವುದು ಸೇರಿದಂತೆ ಕೆಲವೊಂದು ಮಾಹಿತಿ ಲೀಕ್‌ ಆಗಿವೆ. ಇದರ ಜೊತೆಗೆ ಇದೀಗ ಮಾಜಿ ಕೂಲ್‌ ಕ್ಯಾಪ್ಟನ್ ಎಂಎಸ್‌ ಧೋನಿ ಅವರು, ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯಲ್ಲಿ ಎಷ್ಟು ಷೇರುಗಳನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ಬಹಿರಂಗೊಂಡಿದೆ.   
 

MS Dhoni 1 lakh shares 1/6

ಎಂಎಸ್‌ ಧೋನಿ 1 ಲಕ್ಷ ಷೇರು

ಎಂಎಸ್‌ ಧೋನಿ ಅವರು ಸಿಎಸ್‌ಕೆ ತಂಡದಲ್ಲಿ ಷೇರುಗಳು ಹೊಂದಿದ್ದಾರೋ, ಇಲ್ಲವೋ ಎನ್ನುವ ಕುರಿತು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದು ಅಲ್ಲದೇ ಎಂಎಸ್‌ ಧೋನಿ ಅವರು ನಮ್ಮ ಜೊತೆ ಸಮಾಲೋಚಿಸಿಲ್ಲ. ಈ ಬಗ್ಗೆ ಅವರು ಶ್ರೀನಿವಾಸನ್ ಜೊತೆ ಮಾತನಾಡಿದ್ದಾರೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸಿಎಸ್‌ಕೆ ತಂಡದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಹೇಳಿದ್ದಾರೆ.
MS Dhoni 1 lakh shares 2/6

ಎಂಎಸ್‌ ಧೋನಿ 1 ಲಕ್ಷ ಷೇರು

ಸಿಎಸ್‌ಕೆ ತಂಡದ ಹೊಸ ಮುಖ್ಯ ಕೋಚ್ ಯಾರು? ಮುಂದಿನ 2027ರ ಸೀಸನ್‌ನಲ್ಲಿ ಎಂಎಸ್ ಧೋನಿ ಆಡುತ್ತಾರಾ? ಸಂಜು ಸ್ಯಾಮ್ಸನ್ ನಾಯಕತ್ವ ವಹಿಸಿಕೊಳ್ಳುತ್ತಾರಾ ಎನ್ನುವ ಚರ್ಚೆಗಳು ತಂಡದ ಮಟ್ಟದಲ್ಲಿ ನಡೆಯುತ್ತಿವೆ ಎನ್ನಲಾಗಿದೆ. ಧೋನಿ ಸಿಎಸ್‌ಕೆ ತಂಡದ ಷೇರುಗಳನ್ನು ಖರೀದಿಸಲು ಬಯಸಿದ್ದಾರೆ ಎಂಬ ವರದಿ ಇದೆ. ಅಲ್ಲದೇ ಈಗಾಗಲೇ ಸಿಎಸ್‌ಕೆ ಅಲ್ಲಿ ಷೇರುಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
MS Dhoni 1 lakh shares 3/6

ಎಂಎಸ್‌ ಧೋನಿ 1 ಲಕ್ಷ ಷೇರು

ಧೋನಿ ಕಳೆದ 21 ವರ್ಷಗಳಿಂದ ವಿವಿಧ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ನಿವ್ವಳ ಮೌಲ್ಯ 1,200 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಸಿಎಸ್‌ಕೆಯಲ್ಲಿ ಎಂಎಸ್‌ ಧೋನಿ ಅವರು ಹೊಂದಿರುವ ಷೇರುಗಳು ಅವರಿಗೆ ದೊಡ್ಡ ವಿಷಯವಲ್ಲ ಎಂದು ಅರ್ಥಮಾಡಿಕೊಳ್ಳಬಹುದು. ಸಿಎಸ್‌ಕೆ ತಂಡದ ಮಾಲೀಕ ಶ್ರೀನಿವಾಸನ್ ಅವರ ಕುಟುಂಬವು ತಂಡದ ಶೇಕಡಾ 55 ರಷ್ಟು ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
MS Dhoni 1 lakh shares 4/6

ಎಂಎಸ್‌ ಧೋನಿ 1 ಲಕ್ಷ ಷೇರು

ಧೋನಿಯ ಪಾಲಿನ ಮೌಲ್ಯವನ್ನು ಲೆಕ್ಕಹಾಕಲು, ಐಪಿಎಲ್ ತಂಡದ ಒಟ್ಟು ಮೌಲ್ಯವನ್ನು ನಮಗೆ ಗೊತ್ತಿರಬೇಕು. ಇತ್ತೀಚೆಗೆ ಮಾರಾಟವಾದ ಆರ್‌ಸಿಬಿ ಮೌಲ್ಯ 16,600 ಕೋಟಿ ರೂಪಾಯಿಗಳು. ಇದರ ಆಧಾರದ ಮೇಲೆ, ಧೋನಿಯ ಸಿಎಸ್‌ಕೆ ಪಾಲಿನ ಮೌಲ್ಯ 2.6 ಕೋಟಿಯಿಂದ ರೂಪಾಯಿಗಳಿಂದ 3 ಕೋಟಿ ರೂಪಾಯಿವರೆಗೆ ಇರಬಹುದೆಂದು ಅಂದಾಜಿಸಲಾಗಿದೆ.
MS Dhoni 1 lakh shares 5/6

ಎಂಎಸ್‌ ಧೋನಿ 1 ಲಕ್ಷ ಷೇರು

ಆದರೆ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಬಹಳ ಕಡಿಮೆ ಸಂಖ್ಯೆಯ ಷೇರುಗಳು ಇವು ಆಗಿವೆಯಂತೆ. ಇಲ್ಲಿಯವರೆಗೆ 30 ಕೋಟಿಗೂ ಹೆಚ್ಚು ಷೇರುಗಳು ಸಾರ್ವಜನಿಕರ ಕೈಯಲ್ಲಿವೆ. ಇದು ತಂಡದ ಒಟ್ಟು ಷೇರು ಬಂಡವಾಳದ ಸುಮಾರು ಶೇಕಡಾ 40 ರಷ್ಟಿದೆ. ಆದಾಗ್ಯೂ, ಧೋನಿ ಸಾರ್ವಜನಿಕರ ಕೈಯಲ್ಲಿರುವ ಷೇರುಗಳ ಸಂಖ್ಯೆಯಲ್ಲಿ ಬಹಳ ಕಡಿಮೆ ಭಾಗವನ್ನು ಅಂದರೆ ಶೇ. 0.01- 0.02 ರಷ್ಟು ಮಾತ್ರ ಹೊಂದಿದ್ದಾರೆ.
MS Dhoni 1 lakh shares 6/6

ಎಂಎಸ್‌ ಧೋನಿ 1 ಲಕ್ಷ ಷೇರು

ಎಂಎಸ್‌ ಧೋನಿ ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಷೇರುಗಳಿವೆ ಎಂದು ಕೆಲವೊಂದು ಮೂಲಗಳು ಹೇಳುತ್ತಿವೆ. ಫ್ರಾಂಚೈಸಿ ಮೂಲಗಳು ಹೇಳುವಂತೆ ಧೋನಿ ತಂಡದಲ್ಲಿ ಕೆಲವು ಷೇರುಗಳನ್ನು ಮಾರಾಟಕ್ಕೆ ಇಟ್ಟಾಗ ಖರೀದಿಸಿದ್ದಾರೆ ಎನ್ನಲಾಗಿದೆ. ಖರೀದಿ ಮಾಡಿರುವ ಷೇರುಗಳನ್ನು ಇನ್ನೂ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿಲ್ಲ. ಅವುಗಳನ್ನು ನೇರವಾಗಿ ಓವರ್-ದಿ-ಕೌಂಟರ್ ವಹಿವಾಟುಗಳ ಮೂಲಕ ಖರೀದಿಸಬಹುದು. 1 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
TAGS:
T20

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.