• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ದೀಪಾವಳಿಗೂ ಮುನ್ನ ಚಂದ್ರನ ರಾಶಿ ಬದಲಾವಣೆ! ನವೆಂಬರ್ 7ರಿಂದ ಈ 4 ರಾಶಿಗಳಿಗೆ ಶುಭಫಲ

ದೀಪಾವಳಿಗೂ ಮುನ್ನ ಚಂದ್ರನ ರಾಶಿ ಬದಲಾವಣೆ! ನವೆಂಬರ್ 7ರಿಂದ ಈ 4 ರಾಶಿಗಳಿಗೆ ಶುಭಫಲ

Written ByPuttaraj K Alur
Published: Nov 06, 2026, 18:49 IST|Updated: Nov 06, 2026, 18:54 IST
joinshare
ನವೆಂಬರ್ 7ರಂದು ಸಂಜೆ 5:15ಕ್ಕೆ ಚಂದ್ರನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಸಾಗಲಿದ್ದು, ಮೇಷ, ಕರ್ಕಾಟಕ, ಕನ್ಯಾ ಮತ್ತು ಧನು ರಾಶಿಯವರಿಗೆ ವೃತ್ತಿ, ಹಣಕಾಸು, ಕುಟುಂಬ ಹಾಗೂ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರೆಯಬಹುದು ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.

Moon Transit on November 7: ದೀಪಾವಳಿ ಹಬ್ಬಕ್ಕೂ ಒಂದು ದಿನ ಮುನ್ನ ಜ್ಯೋತಿಷ್ಯ ದೃಷ್ಟಿಯಿಂದ ಮಹತ್ವದ ಗ್ರಹ ಸಂಚಾರವೊಂದು ನಡೆಯಲಿದೆ. ನವೆಂಬರ್ 7ರಂದು ಚಂದ್ರನು ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಸಂಜೆ 5:15ಕ್ಕೆ ನಡೆಯುವ ಈ ರಾಶಿ ಬದಲಾವಣೆಯು ಮೇಷ, ಕರ್ಕಾಟಕ, ಕನ್ಯಾ ಮತ್ತು ಧನು ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶಗಳನ್ನ ತರಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಈ ನಾಲ್ಕು ರಾಶಿಗಳ ವೃತ್ತಿ, ಹಣಕಾಸು, ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿ ಅನುಕೂಲಕರ ಬೆಳವಣಿಗೆಗಳು ಕಂಡುಬರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಚಂದ್ರನ ಈ ಸಂಚಾರವು ಕೆಲವು ರಾಶಿಯವರಿಗೆ ಹೊಸ ಅವಕಾಶಗಳನ್ನ ಒದಗಿಸಬಹುದು. ಉದ್ಯಮದಲ್ಲಿ ಲಾಭ, ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ, ಕುಟುಂಬದಲ್ಲಿ ಸಂತೋಷ ಹಾಗೂ ಬಹುಕಾಲದ ಆಸೆಗಳು ಈಡೇರುವಂತಹ ಫಲಗಳು ದೊರೆಯಬಹುದು ಎಂಬ ನಿರೀಕ್ಷೆಯಿದೆ. ಹಾಗಾದರೆ ನವೆಂಬರ್ 7ರಂದು ಚಂದ್ರನ ತುಲಾ ರಾಶಿ ಪ್ರವೇಶದಿಂದ ಯಾವ ನಾಲ್ಕು ರಾಶಿಯವರಿಗೆ ಶುಭಫಲ ಸಿಗಬಹುದು ಎಂಬುದರ ಬಗ್ಗೆ ತಿಳಿಯಿರಿ...

Moon Transit1/4

ಮೇಷ ರಾಶಿ: ಉದ್ಯಮದಲ್ಲಿ ಲಾಭ, ದಾಂಪತ್ಯದಲ್ಲಿ ಸಂತೋಷ

ಮೇಷ ರಾಶಿಯವರಿಗೆ ಚಂದ್ರನ ಸಂಚಾರವು ಏಳನೇ ಮನೆಯಲ್ಲಿ ನಡೆಯಲಿದೆ. ಜ್ಯೋತಿಷ್ಯದಲ್ಲಿ ಏಳನೇ ಮನೆಯನ್ನ ವಿವಾಹ ಮತ್ತು ಪಾಲುದಾರಿಕೆಗೆ ಸಂಬಂಧಿಸಿದ ಮನೆಯೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರಾಶಿಯ ಉದ್ಯಮಿಗಳಿಗೆ ಈ ಅವಧಿಯಲ್ಲಿ ಅನುಕೂಲಕರ ಫಲಿತಾಂಶಗಳು ದೊರೆಯುವ ಸಾಧ್ಯತೆಯಿದೆ. ವಿಶೇಷವಾಗಿ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುತ್ತಿರುವವರಿಗೆ ಲಾಭದ ಅವಕಾಶಗಳು ಎದುರಾಗಬಹುದು. ಹೊಸದಾಗಿ ಉದ್ಯಮ ಆರಂಭಿಸಲು ಬಯಸುತ್ತಿರುವ ಕೆಲವರಿಗೆ ಪಾಲುದಾರರೊಂದಿಗೆ ಹೊಸ ವ್ಯವಹಾರಕ್ಕೆ ಮುಂದಾಗುವ ಅವಕಾಶವೂ ಸಿಗಬಹುದು. ದಾಂಪತ್ಯ ಜೀವನದಲ್ಲಿಯೂ ಸೌಹಾರ್ದಯುತ ವಾತಾವರಣ ಇರಲಿದೆ ಎಂದು ಹೇಳಲಾಗಿದೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರಲಿದ್ದು, ಪರಸ್ಪರ ಹೊಂದಾಣಿಕೆ ಹೆಚ್ಚಾಗಬಹುದು. ಇನ್ನು ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಮೇಷ ರಾಶಿಯವರಿಗೆ ಚಂದ್ರನ ಈ ಸಂಚಾರದಿಂದ ಜನಪ್ರಿಯತೆ ಮತ್ತು ಖ್ಯಾತಿ ದೊರೆಯುವ ಸಾಧ್ಯತೆಯಿದೆ.
Moon Transit2/4

ಕರ್ಕಾಟಕ ರಾಶಿ: ಕುಟುಂಬದಲ್ಲಿ ನೆಮ್ಮದಿ, ವೃತ್ತಿಯಲ್ಲಿ ಪ್ರಗತಿ

ಕರ್ಕಾಟಕ ರಾಶಿಯ ಅಧಿಪತಿಯೇ ಚಂದ್ರನಾಗಿರುವುದರಿಂದ ಈ ರಾಶಿಯವರಿಗೆ ಚಂದ್ರನ ಸಂಚಾರ ವಿಶೇಷ ಮಹತ್ವ ಹೊಂದಿದೆ. ನವೆಂಬರ್ 7ರಂದು ಚಂದ್ರನು ತುಲಾ ರಾಶಿಗೆ ಪ್ರವೇಶಿಸಿದಾಗ ಕರ್ಕಾಟಕ ರಾಶಿಯ ನಾಲ್ಕನೇ ಮನೆಯಲ್ಲಿ ನೆಲೆಸಲಿದ್ದಾನೆ. ನಾಲ್ಕನೇ ಮನೆಯನ್ನ ಸುಖ, ಸಂತೋಷ ಮತ್ತು ಕುಟುಂಬ ಜೀವನಕ್ಕೆ ಸಂಬಂಧಿಸಿದ ಮನೆಯೆಂದು ಪರಿಗಣಿಸಲಾಗುತ್ತದೆ. ಈ ಸಂಚಾರದಿಂದ ಕರ್ಕಾಟಕ ರಾಶಿಯವರ ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗಬಹುದು. ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ದೊರೆಯಲಿದ್ದು, ಕುಟುಂಬದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಇರಬಹುದು. ಇತ್ತೀಚೆಗೆ ಮಾನಸಿಕ ಒತ್ತಡ ಅನುಭವಿಸುತ್ತಿರುವವರಿಗೆ ಅದರಿಂದ ಕೊಂಚ ನೆಮ್ಮದಿ ಸಿಗುವ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿಯೂ ಕರ್ಕಾಟಕ ರಾಶಿಯವರಿಗೆ ಅನುಕೂಲಕರ ಬೆಳವಣಿಗೆಗಳು ಕಂಡುಬರಬಹುದು. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವ ಅವಕಾಶಗಳು ಎದುರಾಗಬಹುದು ಎಂದು ಜ್ಯೋತಿಷ್ಯ ಫಲದಲ್ಲಿ ತಿಳಿಸಲಾಗಿದೆ.
Moon Transit3/4

ಕನ್ಯಾ ರಾಶಿ: ಆದಾಯದ ಹೊಸ ಮೂಲಗಳು ಸೃಷ್ಟಿ

ಕನ್ಯಾ ರಾಶಿಯವರಿಗೆ ಚಂದ್ರನ ಸಂಚಾರವು ಎರಡನೇ ಮನೆಯಲ್ಲಿ ನಡೆಯಲಿದೆ. ಜ್ಯೋತಿಷ್ಯದಲ್ಲಿ ಎರಡನೇ ಮನೆಯನ್ನ ಸಂಪತ್ತು, ಹಣಕಾಸು ಮತ್ತು ಮಾತಿಗೆ ಸಂಬಂಧಿಸಿದ ಮನೆಯೆಂದು ಪರಿಗಣಿಸಲಾಗುತ್ತದೆ. ಈ ಸಂಚಾರವು ಕನ್ಯಾ ರಾಶಿಯವರಿಗೆ ಹೊಸ ಆದಾಯದ ಮಾರ್ಗಗಳನ್ನ ತೆರೆದಿಡಬಹುದು. ವಿಶೇಷವಾಗಿ ಪೂರ್ವಜರಿಂದ ಬಂದಿರುವ ಕುಟುಂಬದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆಯಿದೆ. ಉದ್ಯೋಗದಲ್ಲಿರುವವರ ಕೆಲಸವನ್ನ ಮೇಲಧಿಕಾರಿಗಳು ಮೆಚ್ಚಿಕೊಳ್ಳಬಹುದು. ಇದರಿಂದ ವೃತ್ತಿ ಕ್ಷೇತ್ರದಲ್ಲಿ ಗೌರವ ಹೆಚ್ಚಾಗುವ ಅವಕಾಶವಿದೆ. ಎರಡನೇ ಮನೆಯಲ್ಲಿ ಚಂದ್ರನ ಸಂಚಾರದಿಂದ ಮಾತಿನ ಪ್ರಭಾವ ಹೆಚ್ಚಾಗಬಹುದು ಎಂದು ಹೇಳಲಾಗಿದೆ. ತಮ್ಮ ಮಾತು ಮತ್ತು ಸಂವಹನದ ಮೂಲಕ ಇತರರ ಗಮನ ಸೆಳೆಯುವ ಅವಕಾಶ ದೊರೆಯಲಿದ್ದು, ಸಾಮಾಜಿಕ ವಲಯದಲ್ಲಿ ಗೌರವವೂ ಹೆಚ್ಚಾಗಬಹುದು.
Moon Transit4/4

ಧನು ರಾಶಿ: ಬಹುಕಾಲದ ಆಸೆ ಈಡೇರುವ ಸಮಯ

ಧನು ರಾಶಿಯವರಿಗೆ ಚಂದ್ರನು ಹನ್ನೊಂದನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯದಲ್ಲಿ ಹನ್ನೊಂದನೇ ಮನೆಯನ್ನ ಲಾಭ ಮತ್ತು ಆಸೆಗಳ ಈಡೇರಿಕೆಗೆ ಸಂಬಂಧಿಸಿದ ಮನೆಯೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರಾಶಿಯವರಿಗೆ ಚಂದ್ರನ ಸಂಚಾರವು ಶುಭ ಫಲಗಳನ್ನ ತರಬಹುದು ಎಂದು ಹೇಳಲಾಗಿದೆ. ಬಹುಕಾಲದಿಂದ ಈಡೇರದಿರುವ ಕೆಲವು ಆಸೆಗಳು ಸಾಕಾರಗೊಳ್ಳುವ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರಿಗೆ ಬಡ್ತಿ ದೊರೆಯಬಹುದು. ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆ ಕಂಡುಬರುವ ನಿರೀಕ್ಷೆಯಿದೆ. ಸ್ವಂತ ಉದ್ಯಮ ಆರಂಭಿಸುವ ಕನಸು ಹೊಂದಿರುವ ಧನು ರಾಶಿಯವರಿಗೂ ಈ ಸಮಯ ಅನುಕೂಲಕರವಾಗಬಹುದು. ತಮ್ಮ ಯೋಜನೆಗಳನ್ನ ಕಾರ್ಯರೂಪಕ್ಕೆ ತರಲು ಅವಕಾಶಗಳು ದೊರೆಯಬಹುದು ಎಂದು ಜ್ಯೋತಿಷ್ಯ ಫಲದಲ್ಲಿ ಉಲ್ಲೇಖಿಸಲಾಗಿದೆ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)
TAGS:
Astro Tips
Kannada News

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.