ನಿಮ್ಮ ಮನೆಯಲ್ಲಿರುವ ಸರಳ ಪದಾರ್ಥಗಳಿಂದಲೇ ಬಿಳಿ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಬಹುದು.
1/6
ಬಿಳಿ ಕೂದಲಿಗೆ ಮನೆಮದ್ದು
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರ್ಕೆಟ್‌ನಲ್ಲಿ ಹಲವು ವಿಧದ ಪ್ರಾಡಕ್ಟ್‌ಗಳು ಲಭ್ಯವಿವೆ. ಆದರೆ, ಇವು ಆ ಕ್ಷಣದಲ್ಲಿ ಬಿಳಿ ಕೂದಲನ್ನು ಕಪ್ಪುಗೊಳಿಸಿದರೂ ಭವಿಷ್ಯದಲ್ಲಿ ಚರ್ಮ ಹಾಗೂ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ, ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದುಗಳನ್ನು ಬಳಸಿದರೆ ಇದು ಕೂದಲಿನ ಆರೋಗ್ಯಕ್ಕೂ ವರದಾನ ಎಂದು ಸಾಬೀತುಪಡಿಸಲಿದೆ.
2/6
ಬಿಳಿ ಕೂದಲಿಗೆ ರಾಮಬಾಣ
ಅಡುಗೆ ಮನೆಯಲ್ಲಿರುವ ಮೆಂತ್ಯ ಹಾಗೂ ಕರಿ ಜೀರಿಗೆಯನ್ನು ಸಾಸಿವೆ ಎಣ್ಣೆಯ ಜೊತೆ ಬಳಸುವುದರಿಂದ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
3/6
ಬಿಳಿ ಕೂದಲಿಗೆ ಸೀಡ್ಸ್
ಮೊದಲು ಒಂದು ಬಾಣಲೆಯನ್ನು ಸ್ವಲ್ಪ ಬಿಸಿ ಮಾಡಿ ಅದರಲ್ಲಿ ಒಂದೆರಡು ಸ್ಪೂನ್ ಮೆಂತ್ಯ ಬೀಜಗಳನ್ನು ಹಾಕಿ ಸಣ್ಣ ಉರಿಯಲ್ಲಿ ಅದು ಕಪ್ಪಾಗುವವರೆಗೂ ಹುರಿಯಿರಿ. ಬಳಿಕ, ಕಪ್ಪು ಜೀರಿಗೆಯನ್ನು ಅದರೊಂದಿಗೆ ಹಾಕಿ ಫ್ರೈ ಮಾಡಿ.
4/6
ಬಿಳಿ ಕೂದಲಿಗೆ ಮನೆಮದ್ದು
ಚೆನ್ನಾಗಿ ಹುರಿದುಕೊಂಡ ಮೆಂತ್ಯ ಮತ್ತು ಕಪ್ಪು ಜೀರಿಗೆಯನ್ನು ನೈಸ್ ಆಗಿ ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಒಂದು ಬಟ್ಟಲಿಗೆ ತೆಗೆದು ಅದರಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ.
5/6
ನ್ಯಾಚುರಲ್ ಹೇರ್ ಡೈ
ಸಾಸಿವೆ ಎಣ್ಣೆಯೊಂದಿಗೆ ಬೆರೆಸಿಟ್ಟ ಮೆಂತ್ಯ ಮತ್ತು ಕಪ್ಪು ಜೀರಿಗೆ ಪುಡಿಯನ್ನು ಹೇರ್ ಡೈ ರೀತಿ ಕೂದಲಿನ ಬುಡದಿಂದ ತುದಿಯವರೆಗೂ ಲೇಪಿಸಿ. ಅದು ಒಣಗಿದ ನಂತರ ಸೌಮ್ಯ ಶಾಂಪೂ ಹಾಗೂ ಉಗುರು ಬೆಚ್ಚಗಿನ ನೀರಿನೊಂದಿಗೆ ಹೇರ್ ವಾಶ್ ಮಾಡಿ.
6/6
ಬಿಳಿ ಕೂದಲಿಗೆ ನ್ಯಾಚುರಲ್ ಡೈ
ಈ ನ್ಯಾಚುರಲ್ ಹೇರ್ ಡೈ ಅನ್ನು ಬಳಸಿದರೆ ಮೊದಲ ಬಳಕೆಯಲ್ಲೇ ನಿಮಗೆ ಉತ್ತಮ ರಿಸಲ್ಟ್ ಗೋಚರಿಸುತ್ತದೆ. ಈ ನ್ಯಾಚುರಲ್ ಮನೆಮದ್ದಿನಿಂದ ಬಿಳಿ ಕೂದಲು ಕಪ್ಪಾಗುವುದರ ಜೊತೆಗೆ ಮಾರುದ್ದ ಬೆಳೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.