ಜ್ಯೋತಿಷ್ಯದಲ್ಲಿ ಬುಧನನ್ನು ತರ್ಕ, ಬುದ್ಧಿ, ವೃತ್ತಿ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗುತ್ತದೆ.
ಗ್ರಹಗಳ ರಾಜಕುಮಾರನಾದ ಬುಧ ಇತ್ತೀಚೆಗೆ ತುಲಾ ರಾಶಿಗೆ ಪದಾರ್ಪಣೆ ಮಾಡಿದ್ದು, ಕೆಲವರ ಅದೃಷ್ಟವನ್ನೂ ಬದಲಾಯಿಸಿದ್ದಾನೆ.
1/6
ಬುಧ ಗೋಚಾರ
ವೈದಿಕ ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 26, 2026ರಂದು ಗ್ರಹಗಳ ರಾಜಕುಮಾರ ಬುಧ ಶುಕ್ರನ ಅಧಿಪತ್ಯದ ತುಲಾ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರೊಂದಿಗೆ ಕೆಲವರ ಜೀವನದಲ್ಲಿ ಭಾಗ್ಯೋದಯದ ಸಮಯ ಆರಂಭವಾಗಿದೆ ಎನ್ನಲಾಗುತ್ತಿದೆ.
2/6
ಬುಧ ಗೋಚಾರ ಫಲ
ಬುದ್ದಿವಂತಿಕೆ, ತರ್ಕ, ಮಾತು, ಸಂವಹನ, ವ್ಯವಹಾರದ ಅಂಶ ಎನ್ನಲಾಗುವ ಬುಧನ ರಾಶಿ ಪರಿವರ್ತನೆಯ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ ನಾಲ್ಕು ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸುವರ್ಣ ಯುಗ, ರಾಜಯೋಗ ಎಂದು ಹೇಳಲಾಗುತ್ತಿದೆ.
3/6
ಮೇಷ ರಾಶಿ
ಬುಧ ಸಂಚಾರವು ಮೇಷ ರಾಶಿಯ ಜನರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ನೀಡಲಿದೆ. ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಕೆಲಸಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರ ಸಿಗಬಹುದು. ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಮನೆಯಲ್ಲಿ ಮದುವೆ ಮಾತುಕತೆಗಳು ಸಕಾರಾತ್ಮಕವಾಗಿ ಮುಂದುವರೆಯಲಿವೆ.
4/6
ತುಲಾ ರಾಶಿ
ಸ್ವ ರಾಶಿಯಲ್ಲಿ ಬುಧ ಗೋಚಾರವು ತುಲಾ ರಾಶಿಯ ಜನರಿಗೆ ವ್ಯಾಪಾರ ವಿಸ್ತರಣೆಗೆ ಅತ್ಯುತ್ತಮವಾದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಹೆಗಲೇರುವ ಸೂಚನೆಗಳಿವೆ. ಕುಟುಂಬದಲ್ಲಿ ಸಹೋದರರ-ಸಹೋದರಿಯರ ಮಕ್ಕಳ ಮದುವೆ ವಿಚಾರವಾಗಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದ್ದು ಜೀವನದಲ್ಲಿ ರಾಜ ಯೋಗವನ್ನು ಅನುಭವಿಸುವ ಸೂಚನೆಗಳಿವೆ.
5/6
ಮಕರ ರಾಶಿ
ಶುಕ್ರನ ರಾಶಿಯಲ್ಲಿ ಬುಧ ಸಂಚಾರವು ಮಕರ ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಹೊಸ ದೃಷ್ಟಿಕೋನವನ್ನು ನೀಡಲಿದೆ. ಉದ್ಯೋಗದಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸದಾವಕಾಶ ಸಿಗಲಿದೆ. ವ್ಯವಹಾರ ವಿಸ್ತರಣೆಗೆ ಅನುಕೂಲಕರ ಸಮಯ ಇದಾಗಿದ್ದು, ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಜಯ ಸಾಧಿಸುವ ಲಕ್ಷಣಗಳಿವೆ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.
6/6
ಕುಂಭ ರಾಶಿ
ಬುಧ ಗೋಚಾರ ಫಲವಾಗಿ ಕುಂಭ ರಾಶಿಯ ಜನರು ಉದ್ಯೋಗ ರಂಗದಲ್ಲಿ ಹೊಸ ಹೊಸ ಅವಕಾಶಗಳನ್ನು ಪಡೆಯುವ ಸೂಚನೆಗಳಿವೆ. ಈ ಅವಧಿಯಲ್ಲಿ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸೂಚನೆಗಳಿವೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಯೋಜಿತ ಕೆಲಸಗಳಲ್ಲಿ ಜಯ ಸಾಧಿಸುವಿರಿ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.