ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎನ್ನಲಾಗುವ ಬುಧ ಇಂದು ತುಲಾ ರಾಶಿಯಲ್ಲಿ ಹಿಮ್ಮುಖ ಸಂಚಾರ ಆರಂಭಿಸಲಿದ್ದಾನೆ.
1/6
ಬುಧ ವಕ್ರಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃತ್ತಿ, ವ್ಯವಹಾರ, ತರ್ಕದ ಅಂಶ ಎನ್ನಲಾಗುವ ಬುಧ ಗ್ರಹವು ಅಕ್ಟೋಬರ್ 24, 2026ರ ಮಧ್ಯಾಹ್ನ 12:14ರ ಸುಮಾರಿಗೆ ತುಲಾ ರಾಶಿಯಲ್ಲಿ ಹಿಮ್ಮುಖವಾಗಲಿದ್ದಾನೆ.
2/6
ಬುಧ ವಕ್ರಿ ಪ್ರಭಾವ
ತುಲಾ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ ಅಥವಾ ಬುಧನ ವಕ್ರಿ ಸಂಚಾರವು ನಾಲ್ಕು ರಾಶಿಯವರ ಜೀವನದಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸಿನ ಜೊತೆಗೆ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ.
3/6
ಮೇಷ ರಾಶಿ
ಬುಧ ವಕ್ರಿ ಪ್ರಭಾವದಿಂದ ಮೇಷ ರಾಶಿಯವರ ಬದುಕಿನಲ್ಲಿ ಸಕಾರಾತ್ಮಕ ಫಲಿತಾಂಶಗಳು ಹೆಚ್ಚಾಗಲಿವೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಎದುರಾಗಿದ್ದ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಮಕ್ಕಳಿಂದ ಶುಭ ಸಮಾಚಾರ ನಿರೀಕ್ಷಿಸಬಹುದು.
4/6
ಸಿಂಹ ರಾಶಿ
ಬುಧ ವಕ್ರಿ ಪ್ರಭಾವದಿಂದ ಸಿಂಹ ರಾಶಿಯ ಜನರಿಗೆ ಎಲ್ಲವೂ ಶುಭವಾಗಲಿದೆ. ವೃತ್ತಿಯಲ್ಲಿ ಬಡ್ತಿ ಸೂಚನೆಗಳಿದ್ದು, ವ್ಯವಹಾರ ವಿಸ್ತರಣೆಗೆ ಪ್ರಯತ್ನಿಸುತ್ತಿರವವರಿಗೆ ಅನುಕೂಲಕರ ಸಮಯ. ಹಣದ ಸುರಿಮಳೆಯೇ ಸುರಿಯಲಿದ್ದು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಉದ್ಯಮಿಗಳಿಗೆ ಇದು ತುಂಬಾ ಪ್ರಾಶಸ್ತ್ಯವಾದ ಸಮಯ.
5/6
ವೃಶ್ಚಿಕ ರಾಶಿ
ವಕ್ರೀ ಬುಧನು ವೃಶ್ಚಿಕ ರಾಶಿಯ ಜನರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಬಂಪರ್ ಆರ್ಥಿಕ ಲಾಭವನ್ನು ನೀಡಲಿದ್ದಾನೆ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ. ಕೆಲಸದಲ್ಲಿ ಅಡೆತಡೆಗಳು ನಿವಾರಣೆ ಆಗಲಿವೆ. ಉದ್ಯಮಿಗಳಿಗೆ ಅನುಕೂಲಕರ ಸಮಯ ಇದಾಗಿದ್ದು, ಬಂಪರ್ ಆರ್ಥಿಕ ಲಾಭವನ್ನು ಪಡೆಯುವ ಸೂಚನೆಗಳಿವೆ.
6/6
ಮಕರ ರಾಶಿ
ಬುಧನ ಹಿಮ್ಮುಖ ಸಂಚಾರವು ಮಕರ ರಾಶಿಯ ಜನರಿಗೆ ಅನುಕೂಲಕರ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ವಿದೇಶ ವ್ಯವಹಾರಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವ್ಯವಹಾರದಲ್ಲಿ ಭಾರೀ ಲಾಭಾಂಶವನ್ನು ಪಡೆಯುವಿರಿ. ವ್ಯವಹಾರ ವಿಸ್ತರಣೆಗೆ ಅನುಕೂಲಕರ ಸಮಯ. ಕೌಟುಂಬಿಕ ಜೀವನದಲ್ಲೂ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.