ಮಂಗಳನ ಈ ಸಂಚಾರದ ಅವಧಿಯಲ್ಲಿ ಐದು ರಾಶಿಯವರು ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರಗಳನ್ನ ತೆಗೆದುಕೊಳ್ಳದೆ, ತಾಳ್ಮೆ ಮತ್ತು ಎಚ್ಚರಿಕೆಯಿಂದ ಮುಂದುವರಿಯಬೇಕು ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.
Mars Transit 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನ ನವಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಧೈರ್ಯ, ಶೌರ್ಯ, ಶಕ್ತಿ ಮತ್ತು ಪರಾಕ್ರಮಗಳ ಕಾರಕನಾದ ಕುಜನು ಸಾಮಾನ್ಯವಾಗಿ ಒಂದು ರಾಶಿಯಲ್ಲಿ 45 ದಿನಗಳ ಕಾಲ ಇರುತ್ತಾನೆ. ಪ್ರಸ್ತುತ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿರುವ ಮಂಗಳನು, ಶೀಘ್ರದಲ್ಲೇ ತನ್ನ ಸ್ಥಾನವನ್ನ ಬದಲಾಯಿಸಲಿದ್ದು, ಇದು ಜ್ಯೋತಿಷ್ಯದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ನವೆಂಬರ್ 12ರಂದು ಮಂಗಳ ಗ್ರಹವು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದೆ. ಜೊತೆಗೆ ಕೇತುವಿನ ಅಧಿಪತ್ಯದ ಮಾಘ ನಕ್ಷತ್ರಕ್ಕೂ ಸಂಚರಿಸಲಿದೆ. ಮಂಗಳ ಮತ್ತು ಕೇತು ಸಂಯೋಜನೆಯಿಂದ ವೃಷಭ, ಸಿಂಹ, ತುಲಾ, ಮಕರ ಹಾಗೂ ಕುಂಭ ರಾಶಿಯವರಿಗೆ ಮುಂದಿನ 45 ದಿನಗಳು ಸವಾಲಿನ ಸಮಯವಾಗಿರಲಿವೆ.
1/5
ವೃಷಭ ರಾಶಿ
ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಹೂಡಿಕೆಯಿಂದ ನಷ್ಟವಾಗುವ ಸಾಧ್ಯತೆಯಿದ್ದು, ವೃತ್ತಿ ಕ್ಷೇತ್ರದಲ್ಲಿಯೂ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರಬಹುದು.
2/5
ಸಿಂಹ ರಾಶಿ
ಆತ್ಮವಿಶ್ವಾಸ ಕುಸಿತ, ಕೋಪ ಹಾಗೂ ಮಾತಿನಿಂದ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ. ಕೋರ್ಟ್ ವ್ಯಾಜ್ಯಗಳಿಂದ ದೂರವಿರುವುದು ಉತ್ತಮ.
3/5
ತುಲಾ ರಾಶಿ
ಉದ್ಯೋಗದಲ್ಲಿ ಅಡೆತಡೆಗಳು ಎದುರಾಗಬಹುದು. ಹೊಸ ಪಾಲುದಾರಿಕೆ ವ್ಯವಹಾರ ಆರಂಭಿಸುವುದನ್ನ ಮುಂದೂಡುವುದು ಹಾಗೂ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಕಾಯ್ದುಕೊಳ್ಳುವುದು ಅಗತ್ಯ.
4/5
ಮಕರ ರಾಶಿ
ಆರ್ಥಿಕ ಸಂಕಷ್ಟ, ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯ ಮತ್ತು ವ್ಯಾಪಾರದಲ್ಲಿ ಹೆಚ್ಚುವರಿ ಖರ್ಚು ಎದುರಾಗಬಹುದು. ಆರೋಗ್ಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.
5/5
ಕುಂಭ ರಾಶಿ
ಉಳಿತಾಯ ಕಡಿಮೆಯಾಗಿ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆಯಿದೆ. ಉದ್ಯೋಗದ ಒತ್ತಡ, ದಾಂಪತ್ಯದ ಭಿನ್ನಾಭಿಪ್ರಾಯ ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಬೇಕು.