• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಮಹಾಲಕ್ಷ್ಮಿ ರಾಜಯೋಗದಿಂದ 4 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಧನ ಸಮೃದ್ಧಿ

ಮಹಾಲಕ್ಷ್ಮಿ ರಾಜಯೋಗದಿಂದ 4 ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಧನ ಸಮೃದ್ಧಿ

Written ByYashaswini V
Published: Oct 03, 2026, 07:14 AM IST|Updated: Oct 03, 2026, 07:17 AM IST
joinshare
ಜ್ಯೋತಿಷ್ಯದ ಪ್ರಕಾರ, ನವೆಂಬರ್‌ ಆರಂಭದಲ್ಲಿ ಚಂದ್ರ ಮಂಗಳ ಯುತಿ ಏರ್ಪಡಲಿದ್ದು ಇದರಿಂದ ಮಹಾಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಹಾಲಕ್ಷ್ಮಿ ರಾಜಯೋಗ ಇದ್ದಾಗ ಆತ ವೃತ್ತಿಯಲ್ಲಿ ಯಶಸ್ಸಿನ ಜೊತೆಗೆ ಅಪಾರ ಧನ ಸಂಪತ್ತನ್ನು ಕರುಣಿಸಲಿದೆ ಎನ್ನಲಾಗುತ್ತದೆ. 

Mahalaxmi Raja Yoga impact1/6

ಮಹಾಲಕ್ಷ್ಮಿ ರಾಜಯೋಗ

ಜ್ಯೋತಿಷ್ಯದಲ್ಲಿ ಮಾನಸಿಕ ಪ್ರವೃತ್ತಿಯನ್ನು ಪ್ರತಿನಿಧಿಸುವ ಅಂಶನಾದ ಚಂದ್ರ ಹಾಗೂ ಧೈರ್ಯ, ಶಕ್ತಿಯ ಅಂಶ ಎನ್ನಲಾಗುವ ಮಂಗಳ ಹಿಂದೂ ಪಂಚಾಂಗದ ಪ್ರಕಾರ, 01 ನವೆಂಬರ್ 2026ರಂದು ಕರ್ಕಾಟಕ ರಾಶಿಯಲ್ಲಿ ಮೈತ್ರಿ ಆಗಲಿದ್ದಾರೆ. ಇದರಿಂದ ಅತ್ಯಂತ ಶುಭ ಯೋಗಗಳಲ್ಲಿ ಒಂದಾದ ಮಹಾಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ.
Mahalaxmi Raja Yoga impact2/6

ಮಹಾಲಕ್ಷ್ಮಿ ರಾಜಯೋಗ ಪ್ರಭಾವ

ಕರ್ಕಾಟಕ ರಾಶಿಯಲ್ಲಿ ರೂಪುಗೊಳ್ಳಲಿರುವ ಮಹಾಲಕ್ಷ್ಮಿ ರಾಜಯೋಗದ ಪ್ರಭಾವದಿಂದಾಗಿ ನಾಲಕು ರಾಶಿಯವರಿಗೆ ಅವರ ಕಠಿಣ ಪರಿಶ್ರಮದ ಸಂಪೂರ್ಣ ಫಲ ಸಿಗಲಿದ್ದು ಹಣಕಾಸಿನ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Mahalaxmi Raja Yoga impact3/6

ಮೇಷ ರಾಶಿ

ಮಹಾಲಕ್ಷ್ಮಿ ರಾಜಯೋಗದಿಂದ ಮೇಷ ರಾಶಿಯ ಜನರಿಗೆ ವೃತ್ತಿಯಲ್ಲಿ ಎದುರಾಗಿದ್ದ ಹಲವು ಸವಾಲಿನಿಂದ ಹೊರಬರುವ ಅವಕಾಶಗಳಿವೆ. ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚಿ ಹೊಸ ಜವಾಬ್ದಾರಿಯನ್ನು ವಹಿಸುವ ನಿರೀಕ್ಷೆ ಇದೆ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮ ಸಮಯ. ಹಣಕಾಸಿನ ಹರಿವು ಹೆಚ್ಚಾಗಲಿದೆ.
Mahalaxmi Raja Yoga impact4/6

ಕರ್ಕಾಟಕ ರಾಶಿ

ಮಂಗಳ ಚಂದ್ರ ಯುತಿಯಿಂದ ಸೃಷ್ಟಿಯಾಗಲಿರುವ ಮಹಾಲಕ್ಷ್ಮಿ ರಾಜಯೋಗವು ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ವಿಶೇಷವೆಂದು ಸಾಬೀತುಪಡಿಸಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ಪ್ರಮೋಷನ್‌ ಜೊತೆಗೆ ವೇತನದಲ್ಲೂ ಭಾರೀ ಏರಿಕೆಯನ್ನು ನಿರೀಕ್ಷಿಸಬಹುದು. ಉದ್ಯಮಿಗಳಿಗೆ ಹೊಸ ಪ್ರಾಜೆಕ್ಟ್‌ ಕೈ ಸೇರುವ ನಿರೀಕ್ಷೆ ಇದೆ. ದೀರ್ಘಾವಧಿಯಿಂದ ಬೇರೆಡೆ ಸಿಲುಕಿದ್ದ ಹಣ ಕೈ ಸೇರಲಿದೆ.
Mahalaxmi Raja Yoga impact5/6

ತುಲಾ ರಾಶಿ

ಮಹಾಲಕ್ಷ್ಮಿ ರಾಜಯೋಗದ ಪರಿಣಾಮವಾಗಿ ತುಲಾ ರಾಶಿಯ ಜನರು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವ ನಿರೀಕ್ಷೆ ಇದೆ. ಕೆಲಸದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗಬಹುದು. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವ ನಿರೀಕ್ಷೆ ಇದೆ. ಸ್ಥಗಿತಗೊಂಡಿದ್ದ ಕೆಲಸಗಳು ಪ್ರಗತಿಯ ಹಾದಿಯನ್ನು ಹಿಡಿಯಿಲದ್ದು, ಆದಾಯದ ಮೂಲಗಳು ಕೂಡ ಹೆಚ್ಚಾಗಲಿವೆ.
Mahalaxmi Raja Yoga impact6/6

ವೃಶ್ಚಿಕ ರಾಶಿ

ಮಹಾಲಕ್ಷ್ಮಿ ರಾಜಯೋಗವು ವೃಶ್ಚಿಕ ರಾಶಿಯ ಜನರ ಜೀವನದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲಿದ್ದಿ. ಕೆಲಸದಲ್ಲಿ ನಿಮ್ಮ ನಿರಂತರ ಪರಿಶ್ರಮದಿಂದಾಗಿ ನಿಮ್ಮ ಸ್ಥಾನಮಾನಗಳು ಬಲಗೊಳ್ಳಲಿವೆ. ಹೊಸ ಜವಾಬ್ದಾರಿಗಳೊಂದಿಗೆ ಕೆಲಸವನ್ನು ಮುನ್ನಡೆಸುವಿರಿ. ಯೋಜಿತ ಕೆಲಸಗಳು ಜಯ ಸಾಧಿಸಲಿದ್ದು ಹಣಕಾಸಿನ ಮುಂಭಾಗದಲ್ಲಿ ಮಹತ್ವದ್ದಾಗಿರುತ್ತದೆ. ಅನಿರೀಕ್ಷಿತ ಧನಲಾಭದಿಂದ ಭವಿಷ್ಯಕ್ಕಾಗಿ ಉತ್ತಮ ಹಣ ಕಲೆಹಾಕುವಿರಿ. ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
TAGS:
Rajayoga
Grah Gochar

Trending

  • News
  • Photos
  • Videos
ಕರ್ನಾಟಕದ ಕರಾವಳಿಯಲ್ಲಿ ಇಂದು-ನಾಳೆ ವ್ಯಾಪಕ ಮಳೆ, ಒಳನಾಡಿನ ಹಲವೆಡೆ ಸಾಧಾರಣ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿಯಲ್ಲಿ ಇಂದು-ನಾಳೆ ವ್ಯಾಪಕ ಮಳೆ, ಒಳನಾಡಿನ ಹಲವೆಡೆ ಸಾಧಾರಣ ಮಳೆ ಸಾಧ್ಯತೆ

2

ದಿನ ಭವಿಷ್ಯ 03-10-2026: ಶನಿವಾರದಂದು ವರಿಯಾನ್‌ ಯೋಗ.. ಈ ರಾಶಿಯವರಿಗೆ ಅಪಾರ ಲಾಭ

3

ವಯಸ್ಸು ಒಂದೇ ಆದರೂ ಕೆಲವರು ಯಂಗ್‌, ಕೆಲವರು ವಯಸ್ಸಾದಂತೆ ಕಾಣೋದ್ಯಾಕೆ? ವೈದ್ಯರ ಉತ್ತರ ಇಲ್ಲಿದೆ

4

ಬೇಲ್‌ಗೆ ಮೊದಲ ದಿನವೇ ಫುಲ್ ಮಾರ್ಕ್ಸ್.. ಶಿವಣ್ಣನ ಮೀಸೆ ಲುಕ್‌ಗೆ ಫ್ಯಾನ್ಸ್ ಫಿದಾ!..

5

44 ವರ್ಷಗಳ ಬಳಿಕ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆ! ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.