ಅಕ್ಟೋಬರ್‌ನಲ್ಲಿ ತುಲಾ ರಾಶಿಯಲ್ಲಿ ಮೂರು ಶುಭ ಗ್ರಹಗಳ ಸಂಯೋಗ ರಚನೆಯಾಗಲಿದ್ದು, ಕೆಲವರ ಅದೃಷ್ಟ ಬದಲಾಗಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್‌ನಲ್ಲಿ ಶುಕ್ರ, ಬುಧ, ಸೂರ್ಯ ಗ್ರಹಗಳು ಒಟ್ಟಿಗೆ ಒಂದೇ ರಾಶಿಯಲ್ಲಿ ಸಂಯೋಗ ಹೊಂದಲಿದ್ದು ಲಕ್ಷ್ಮಿ ನಾರಾಯಣ ಹಾಗೂ ತ್ರಿಗ್ರಹಿಯಂತಹ ಎರಡು ಶುಭ ರಾಜಯೋಗಗಳು ನಿರ್ಮಾಣವಾಗಲಿವೆ.
1/6
ಅಕ್ಟೋಬರ್ ಗ್ರಹ ಗೋಚಾರ
ಅಕ್ಟೋಬರ್ ತಿಂಗಳಿನಲ್ಲಿ ಶುಕ್ರನ ರಾಶಿಚಕ್ರ ತುಲಾ ರಾಶಿಯಲ್ಲಿ ಶುಕ್ರ, ಬುಧ, ಸೂರ್ಯ ಗ್ರಹಗಳ ಸಂಯೋಜನೆ ರಚನೆ ಆಗಲಿದ್ದು, ಲಕ್ಷ್ಮಿ ನಾರಾಯಣ ಹಾಗೂ ತ್ರಿಗ್ರಹಿ ಯೋಗಗಳಂತಹ ಎರಡು ರಾಜಯೋಗಗಳು ನಿರ್ಮಾಣವಾಗಲಿವೆ.
2/6
ಅಕ್ಟೋಬರ್‌ನಲ್ಲಿ ರಾಜಯೋಗಗಳು
ಮೊದಲಿಗೆ ತುಲಾ ರಾಶಿಯಲ್ಲಿ ಬುಧ ಶುಕ್ರರ ಸಂಯೋಗದಿಂದ ಲಕ್ಷ್ಮಿ ನಾರಾಯಣ ರಾಜಯೋಗ ಸೃಷ್ಟಿಯಾಗಿದ್ದು, ಅಕ್ಟೋಬರ್ 17, 2026ರಂದು ಅದೇ ರಾಶಿಯಲ್ಲಿ ಸೂರ್ಯ ಪ್ರವೇಶದೊಂದಿಗೆ ಬುಧ, ಶುಕ್ರ, ಸೂರ್ಯರ ಮೈತ್ರಿಯಿಂದ ತ್ರಿಗ್ರಹಿ ಯೋಗ ನಿರ್ಮಾಣವಾಗಲಿದೆ.
3/6
ಅಕ್ಟೋಬರ್ ಅದೃಷ್ಟದ ರಾಶಿಗಳು
ಅಕ್ಟೋಬರ್‌ನಲ್ಲಿ ನಿರ್ಮಾಣವಾಗಲಿರುವ ಲಕ್ಷ್ಮಿ ನಾರಾಯಣ ರಾಜಯೋಗ ಹಾಗೂ ತ್ರಿಗ್ರಹಿ ಯೋಗಗಳ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ ಮೂರು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಆ ಲಕ್ಕಿ ರಾಶಿಗಳೆಂದರೆ..
4/6
ಸಿಂಹ ರಾಶಿ
ಅಕ್ಟೋಬರ್‌ನಲ್ಲಿ ನಿರ್ಮಾಣವಾಗಲಿರುವ ಲಕ್ಷ್ಮಿ ನಾರಾಯಣ ರಾಜಯೋಗ ಹಾಗೂ ತ್ರಿಗ್ರಹಿ ಯೋಗಗಳ ಪರಿಣಾಮವಾಗಿ ಸಿಂಹ ರಾಶಿಯ ಜನರು ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳದಂತಹ ಅವಕಾಶಗಳನ್ನು ಪಡೆಯುವ ನಿರೀಕ್ಷೆ ಇದೆ. ಉದ್ಯಮಿಗಳು ಹೊಸ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ಮದುವೆಯಂತಹ ಮಂಗಳ ಕಾರ್ಯಗಳು ನಡೆಯುವ ನಿರೀಕ್ಷೆ ಇದೆ.
5/6
ಕನ್ಯಾ ರಾಶಿ
ಲಕ್ಷ್ಮಿ ನಾರಾಯಣ ರಾಜಯೋಗ ಹಾಗೂ ತ್ರಿಗ್ರಹಿ ಯೋಗಗಳ ಪ್ರಭಾವದಿಂದ ಕನ್ಯಾ ರಾಶಿಯ ಜನರಗ ಬದುಕಿನಲ್ಲಿ ಈ ಅವಧಿಯಲ್ಲಿ ಸಂಪತ್ತಿನ ಸುರಿಮಳೆಯೇ ಸುರಿಯಲಿವೆ. ಈ ಅವಧಿಯಲ್ಲಿ ಕುಟುಂಬದಲ್ಲಿ ವೈಮನಸ್ಯಗಳು ದೂರವಾಗಲಿದ್ದು, ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ನ್ಯಾಯಾಲಯ ಪ್ರಕರಣಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರಲಿದೆ. ಕುಟುಂಬದಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ.
6/6
ಮಕರ ರಾಶಿ
ಲಕ್ಷ್ಮಿ ನಾರಾಯಣ ರಾಜಯೋಗ ಹಾಗೂ ತ್ರಿಗ್ರಹಿ ಯೋಗಗಳು ಮಕರ ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಭಾರೀ ಬದಲಾವಣೆಯನ್ನು ತರಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭಾಂಶವನ್ನು ನಿರೀಕ್ಷಿಸಬಹುದಾಗಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ. ವಿದೇಶ ವ್ಯವಹಾರಗಳಿಂದ ಹಣಕಾಸಿನ ಹರಿವು ಹೆಚ್ಚಾಗಲಿದ್ದು, ಅದೃಷ್ಟ ನಿಮ್ಮ ಕೈ ಹಿಡಿಯಲಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.